SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಪುಸ್ತಕಗಳ ಬಿಡುಗಡೆ ಹೀಗಾಯ್ತು ನೋಡಿ…

ಸಂಪೂರ್ಣ ಸ್ವರಾಜ್‌ ಫೌಂಡೇಷನ್ನಿನ ಸಂಸ್ಥಾಪಕ, ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರು ಬರೆದ ʼ21ನೇ ಶತಮಾನದ ಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಮತ್ತು ಅದರ ಆಂಗ್ಲ ಆವೃತ್ತಿ ʼರಿಬೂಟಿಂಗ್‌ ಡೆಮಾಕ್ರಸಿ ಇನ್‌ ಗ್ರಾಮ್‌ ಪಂಚಾಯತ್ಸ್‌ʼ (Rebooting Democracy in Gram Panchayats) ಪುಸ್ತಕಗಳನ್ನು ಮಾಜಿ ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್‌ ಅವರು 2023 ಡಿಸೆಂಬರ್‌ 9ರ ಶನಿವಾರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್‌ ಅಧ್ಯಕ್ಷ, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್.‌ ಶಂಕರ್‌, ಅಜೀಮ್‌ ಪ್ರೇಮ್‌ ಜಿ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಶಾಮ್‌ ಕಶ್ಯಪ್‌ ಹಾಜರಿದ್ದರು. ಚಾಣಕ್ಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪ್ರೊ.ಸದಾನಂದ ಜಾನೆಕೆರೆ ಅಧ್ಯಕ್ಷತೆ ವಹಿಸಿದ್ದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:

December 12, 2023 Posted by | Spardha | Leave a comment

ಬೆಂಗಳೂರಿನಲ್ಲಿ ಹೊಸ ಜಾಗಕ್ಕೆ ಉಕ್ಕಿನಡ್ಕಾಸ್‌ ಆಯುರ್ವೇದ

ಬೆಂಗಳೂರಿನಲ್ಲಿ ಈವರೆಗೆ ಶ್ರೀನಗರ ಸಮೀಪ ಇದ್ದ ಉಕ್ಕಿನಡ್ಕಾಸ್‌ ಆಯುರ್ವೇದ ಇದೀಗ ಸ್ವಂತ ಜಾಗಕ್ಕೆ ಸ್ಥಳಾಂತರಗೊಳ್ಳಲಿದೆ.

ಶ್ರೀನಗರಕ್ಕೆ ಸಮೀಪದಲ್ಲೇ ಇರುವ ಮುನೇಶ್ವರ ಬ್ಲಾಕಿನ ಶನೈಶ್ವರ ದೇವಸ್ಥಾನದ ಎದುರಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ.

ಚಿತ್ರನಟಿ ಸೋನುಗೌಡ ಅವರು 2023 ಸೆಪ್ಟೆಂಬರ್‌ 17ರಂದು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ.

ಉದ್ಘಾಟನೆಗೊಳ್ಳುತ್ತಿರುವ ಹೊಸ ಕಟ್ಟಡದಲ್ಲಿ ಚರ್ಮಕ್ಕೆ ಸಂಬಂಧಿಸಿದಂತೆ ಆಯುರ್ವೇದದ ಕಾಸ್ಮೆಟಿಕ್ಸ್‌ ಚಿಕಿತ್ಸಾ ಸೌಲಭ್ಯವನ್ನೂ ಆರಂಭಿಸಲಾಗುತ್ತದೆ. ಇದು ಆಸ್ಪತ್ರೆಯ ಹೊಸ ವೈಶಿಷ್ಟ್ಯವಾಗಲಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ. ಜಯಗೋವಿಂದ ಉಕ್ಕಿನಡ್ಕ ಹಾಗೂ ಡಾ. ಸಪ್ನಾ ಜಯಗೋವಿಂದ ಅವರು ತಿಳಿಸಿದ್ದಾರೆ.

September 11, 2023 Posted by | Spardha | Leave a comment

ವಾಹ್‌! ಜಿ 20 ಶೃಂಗದ ಸೊಬಗು!

ಭಾರತದಲ್ಲಿ  2023 ಸೆಪ್ಟೆಂಬರ್‌ 9 ಮತ್ತು 10ರಂದು ನಡೆಯಲಿರುವ ಜಿ ೨೦ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರಮುಖರು ಆಗಮಿಸುತ್ತಿದ್ದಾರೆ.

ಶೃಂಗಸಭೆಗಾಗಿ ಭರ್ಜರಿ ಸಿದ್ಧತೆಗಳು ನಡೆದಿವೆ.

ಅದರ ಜೊತೆಗೆ ಭಾರತದ ಸಾಧನೆಗಳನ್ನೂ ಬಿಂಬಿಸುವ ಸಕಲ ಸಿದ್ಧತೆಗಳು ದೆಹಲಿಯಲ್ಲಿ ನಡೆದಿವೆ.

ಭಾರತದ ಪ್ರಗತಿಯ ಚಿತ್ರವನ್ನು ಚಿತ್ರಗಳಲ್ಲಿ ನೋಡಬಹುದು.

September 8, 2023 Posted by | Spardha | , , , , | Leave a comment

ʼಅಬ್‌ ಆಯೇಗಾ ನ ಮಜಾ.. ಆವಾಜ್‌ ಸುನ್‌ ರಹೇ ಹೋ?ʼ

ಬೆಂಗಳೂರು:  ಭಾರತವು ನಡೆಸಿರುವ ಚಂದ್ರಯಾನ-3 ರ ಉಡಾವಣೆಯು ರಾಷ್ಟ್ರದಾದ್ಯಂತ ಹೆಮ್ಮೆ ಮತ್ತು ಸಂಭ್ರಮದ ಭಾವನೆಯನ್ನು ಹುಟ್ಟುಹಾಕಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ 2023 ಜುಲೈ 14ರ ಶುಕ್ರವಾರ ಈ ಚಾರಿತ್ರಿಕ ಘಟನೆ ಘಟಿಸಿದ್ದ, ಸಹಸ್ರಾರು ಉತ್ಸಾಹಿ ಪ್ರೇಕ್ಷಕರು ಕನಸಿನ ಬಾಹ್ಯಾಕಾಶ ಯಾತ್ರೆಗೆ ಸಾಕ್ಷಿಯಾದರು.

ಈ ಮಧ್ಯೆ, ಈ ಮಹತ್ವದ ಸಂದರ್ಭವನ್ನು ಸಂಭ್ರಮಿಸಲು ಹಲವಾರು ಮಂದಿ ಆನ್‌ಲೈನ್ ಬಳಕೆದಾರರು ಈ ಘಟನೆಯ ಸಂದೇಶಗಳು, ಚಿತ್ರಗಳು, ವಿಡಿಯೋಗಳನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡರು. ಇದೇ ಸಮಯದಲ್ಲಿ ಪಾಕಿಸ್ತಾನಿ ವ್ಯಕ್ತಿಯೊಬ್ಬರು ಪಾಕಿಸ್ತಾನದಿಂದ ತಮ್ಮ ಟ್ವೀಟ್‌ ಪ್ರಕಟಿಸಿದರು. ಇದು ಭಾರತೀಯನ ಟ್ವೀಟ್‌ ಗಿಂತ ಮೇಲ್ಭಾಗದಲ್ಲಿ ಇತ್ತು.

ʼಅಬ್‌ ಆಯೇಗಾ ನ ಮಜಾ.. ಆವಾಜ್‌ ಸುನ್‌ ರಹೇ ಹೋ? ಘೋರ್‌ ಸೇ ಸುನೋ… ಯೇ ಪೂರೀ ದುನಿಯಾ ಕೆ ಕಾಂಪನೇ ಕೀ ಆವಾಜ್‌ ಹೈʼ ಎಂಬುದಾಗಿ ಬರೆದಿದ್ದ ಈ ಟ್ವಿಟ್ಟರ್‌ ಸಂದೇಶ ಪಾಕಿಸ್ತಾನದ ತೋಳ್ಬಲವನ್ನು ಸಾರುವಂತಿತ್ತು. ಇದರ ಕೆಳಗಿದ್ದ ಭಾರತೀಯನ ಟ್ವೀಟಿನಲ್ಲಿ “ಇಂಡಿಯಾ ಇಂಡಿಯಾʼ ಬರಹದೊಂದಿಗೆ ಭಾರತದ ಚಂದ್ರಯಾನ -3 ಚಿತ್ರವಿತ್ತು.

ಪಾಕಿಸ್ತಾನ ಮತ್ತು ಭಾರತದ ʼಆದ್ಯತೆʼಗಳನ್ನು ಸಾರುವಂತೆ ಕಾಣುತ್ತಿದ್ದ ಈ ಟ್ವೀಟ್‌ ಸರಣಿಯ ಸ್ಕೀನ್‌ ಶಾಟ್‌ ತೆಗೆದುಕೊಂಡ ಇನ್ನೊಬ್ಬ ಪಾಕಿಸ್ತಾನಿ ಇದನ್ನು ತನ್ನ ಟ್ವಿಟ್ಟರ್‌ ಸಂದೇಶದಲ್ಲಿ ಪ್ರಕಟಿಸಿ ತನ್ನ ಪ್ರತಿಕ್ರಿಯೆಯಾಗಿ ʼನೋವಿನೊಂದಿಗೆ ನಗುತ್ತಿರುವ ʼಎಮೋಜಿʼಯನ್ನೂ ಹಾಕಿದರು. ಉಭಯ ದೇಶಗಳ ವ್ಯತಿರಿಕ್ತ ಆದ್ಯತೆಗಳನ್ನು ಇದು ಎತ್ತಿ ತೋರಿಸುತ್ತಿತ್ತು.

ಟ್ವಿಟರ್ ಬಳಕೆದಾರ ಅಲಿ ಶಾನ್ ಮೊಮಿನ್ ಹಂಚಿಕೊಂಡಿರುವ  ಈ ಸ್ಕ್ರೀನ್‌ಶಾಟ್, ಲಾಹೋರಿನಲ್ಲಿ 500 ಅಡಿ ಎತ್ತರದ ಧ್ವಜವನ್ನು ಹಾರಿಸುವ ಪಾಕಿಸ್ತಾನದ ಯೋಜನೆಯನ್ನು ಚರ್ಚಿಸುವ ಪಾಕಿಸ್ತಾನಿ ಬಳಕೆದಾರರ ಟ್ವೀಟನ್ನು ಪ್ರಮುಖವಾಗಿ ಪ್ರದರ್ಶಿಸುತ್ತದೆ. ಇದು ಈ ಪ್ರದೇಶದಲ್ಲಿ ಅತಿ ಎತ್ತರದ ಧ್ವಜ ಎನಿಸಿಕೊಳ್ಳಲು ಸಿದ್ಧವಾಗಿದೆ. 2023 ರಲ್ಲಿ ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ನಡೆಯಲಿರುವ ಈ ಧ್ವಜಾರೋಹಣ ಸಮಾರಂಭಕ್ಕೆ 400 ದಶಲಕ್ಷ ರೂಪಾಯಿ (400ಮಿಲಿಯನ್ ರೂ) ನಿಗದಿಪಡಿಸಲಾಗಿದೆ. ಈ ಧ್ವಜಕ್ಕೆ ಧ್ವನಿ ವರ್ಧಕ ವ್ಯವಸ್ಥೆ ಅಳವಡಿಸಲಾಗಿದ್ದು ಬಹುದೂರದವರೆಗೆ ಇದರ ಸದ್ದು ಕೇಳಲಿದೆಯಂತೆ.

ಇದಕ್ಕೆ ತದ್ವಿರುದ್ಧವಾಗಿ, ಈ ಟ್ವೀಟ್‌ನ ಕೆಳಗಿನ ಟ್ವೀಟ್‌  ಚಂದ್ರಯಾನ-3 ಸಾಧನೆಯೊಂದಿಗೆ ಭಾರತದ ವಿಜಯೋತ್ಸವ ಸಂದರ್ಭದ  ಭಾರತೀಯರ ಸಂಭ್ರಮವನ್ನು ಅಭಿವ್ಯಕ್ತಿಸಿದೆ..

ಭಾರತವು ಬಾಹ್ಯಾಕಾಶ ಪರಿಶೋಧನೆಯಲ್ಲಿ ತನ್ನ ಗಮನಾರ್ಹ ಸಾಧನೆಯನ್ನು ಆಚರಿಸಿದರೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತನ್ನ ಪ್ರಗತಿಯನ್ನು ಪ್ರದರ್ಶಿಸುತ್ತಿದೆ. ನೆರೆಯ ಪಾಕಿಸ್ತಾನಿಯನ ಟ್ವೀಟ್‌ ವಿಭಿನ್ನ ರಾಷ್ಟ್ರೀಯ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಇದು ಎತ್ತರದ ಧ್ವಜವನ್ನು ಸ್ಥಾಪಿಸುವ ಮೂಲಕ ಭಾರತವನ್ನು ಮೀರಿಸಲು ಬಯಸುತ್ತಿದೆ ಎಂಬುದನ್ನು ತೋರಿಸುತ್ತಿದೆ.

ಸ್ಕ್ರೀನ್‌ಶಾಟ್‌ನೊಂದಿಗೆ ಸರಳವಾದ ‘ನೋವಿನ ಮೂಲಕ ನಗುತ್ತಿರುವ’ ಎಮೋಜಿಯು ಎರಡು ದೇಶಗಳ ವಿಭಿನ್ನ ‘ಆದ್ಯತೆಗಳನ್ನು’ ಬಹಿರಂಗಪಡಿಸುವಾಗ ಪೋಸ್ಟ್‌ನ ಸಾರವನ್ನು ಸೆರೆಹಿಡಿಯುತ್ತದೆ.

July 16, 2023 Posted by | Spardha | , , | Leave a comment

ಅಂಕೆ ಮೀರಿದ ಮಾಲಿನ್ಯ: ದೆಹಲಿಯಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಣೆ

01 delhi air pollutionನವೆಂಬರ್ ೫ರವರೆಗೆ ಎಲ್ಲ ಶಾಲೆಗಳಿಗೂ ರಜೆ, ನಿರ್ಮಾಣ ಚಟುವಟಿಕೆ ನಿಷೇಧ

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯವು ಅಂಕೆ ಮೀರಿ ’ವಿಷಮ ಸ್ಥಿತಿ’ಗೆ (ಸಿವಿಯರ್ ಪ್ಲಸ್) ತಲುಪಿದ್ದನ್ನು ಅನುಸರಿಸಿ ಸುಪ್ರೀಂಕೋರ್ಟ್ ನೇಮಿಸಿದ ಪರಿಸರ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಪ್ರಾಧಿಕಾರವು (ಇಪಿಸಿಎ) ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಣೆ ಮಾಡಿದ್ದು 2019 ನವೆಂಬರ್ ೫ರವರೆಗೆ ಎಲ್ಲ ನಿರ್ಮಾಣ ಚಟುವಟಿಕೆಗಳನ್ನೂ 2019 ನವೆಂಬರ್ 01ರ ಶುಕ್ರವಾರ ನಿಷೇದಿಸಿತು. ಇದೇ ವೇಳೆಗೆ ದೆಹಲಿ ಸರ್ಕಾರವು ನವೆಂಬರ್ ೫ರವರೆಗೆ ಶಾಲೆಗಳಿಗೆ ರಜೆ ಘೋಷಿಸಿತು.

ವಾಯುಗುಣಮಟ್ಟ ವಿಪರೀತ ಎನಿಸುವಷ್ಟು ಕೆಳಕ್ಕೆ ಕುಸಿದಿದ್ದು, ದೆಹಲಿಗರು ಉಸಿರು ಎಳೆದುಕೊಳ್ಳಲು ಚಡಪಡಿಸಬೇಕಾದ ಸ್ಥಿತಿ ಉಂಟಾಗಿದೆ ಎಂದು ಹೇಳಿರುವ ಪ್ರಾಧಿಕಾರ ಚಳಗಾಲದ ಅವಧಿಯಲ್ಲಿ ಪಟಾಕಿ ಸಿಡಿಸುವುದನ್ನೂ ನಿಷೇಧಿಸಿತು.

ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಮುಖ್ಯಕಾರ್‍ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಾಧಿಕಾರದ ಅಧ್ಯಕ್ಷ ಭುರೇಲಾಲ್ ಅವರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯುಗುಣಮಟ್ಟ ಗುರುವಾರ ರಾತ್ರಿ ಇನ್ನಷ್ಟು ಕುಸಿದಿದ್ದು, ಪ್ರಸ್ತುತ ವಿಷಮ ಸ್ಥಿತಿಯ ಹಂತದಲ್ಲಿದೆ ಎಂದು ತಿಳಿಸಿದರು.

‘ವಾಯುಮಾಲಿನ್ಯವು ಎಲ್ಲರ ಮೇಲೆ, ನಿರ್ದಿಷ್ಟವಾಗಿ ನಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಾವು ಇದನ್ನು ಆರೋಗ್ಯ ತುರ್ತುಸ್ಥಿತಿ ಎಂಬುದಾಗಿ ಪರಿಗಣಿಸಬೇಕು’ ಎಂದು ಭುರೇಲಾಲ್ ಪತ್ರದಲ್ಲಿ ಬರೆದರು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿಯ ಎಲ್ಲ ಶಾಲೆಗಳಿಗೂ ನವೆಂಬರ್ 5ರ ಮಂಗಳವಾರದವರೆಗೆ ರಜೆ ಘೋಷಣೆ ಮಾಡಿದರು.

ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದ್ದಕ್ಕಾಗಿ ರಾಜ್ಯಗಳನ್ನು ದೂಷಿಸಿದ ಮುಖ್ಯಮಂತ್ರಿ ಕೇಜ್ರಿವಾಲ್, ಈದಿನ ಶಾಲಾ ಮಕ್ಕಳಿಗೆ ೫೦ ಲಕ್ಷ ಮುಖವಾಡಗಳನ್ನು (ಮಾಸ್ಕ್) ವಿತರಿಸಿದರು ಮತ್ತು ಅವುಗಳನ್ನು ಬಳಸುವಂತೆ ಇತರ ನಿವಾಸಿಗಳಿಗೂ ಮನವಿ ಮಾಡಿದರು.

‘ನೆರೆಯ ರಾಜ್ಯಗಳಲ್ಲಿ ಕೊಯ್ದ ಪೈರಿನ ಕೂಳೆ ಸುಡುವುದರಿಂದಾಗಿ ದೆಹಲಿ ಗ್ಯಾಸ್ ಚೇಂಬರ್ ಆಗಿ ಪರಿವರ್ತನೆಯಾಗಿದೆ. ಈ ಮಾಲಿನ್ಯಭರಿತ ಗಾಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದುದು ಈಗ ಅತ್ಯಂತ ಮಹತ್ವದ ಕೆಲಸವಾಗಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ೫೦ ಲಕ್ಷ ಮುಖವಾಡಗಳನ್ನು ನಾವು ಈದಿನ ವಿತರಿಸುತ್ತಿದ್ದೇವೆ. ಅಗತ್ಯ ಬಿದ್ದಲ್ಲಿ ಇವುಗಳನ್ನು ಬಳಸುವಂತೆ ನಾನು ಎಲ್ಲ ದೆಹಲಿ ನಿವಾಸಿಗಳಿಗೂ ಮನವಿ ಮಾಡುತ್ತೇನೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು.

ಪಂಜಾಬ್ ಮತ್ತು ಹರಿಯಾಣದಲ್ಲಿ ಕೊಯ್ದ ಪೈರಿನ ಕೂಳೆ ಸುಡುವುದರಿಂದ ಉಂಟಾಗುವ ಹೊಗೆ ದೆಹಲಿಯಲ್ಲಿ ಮಾಲಿನ್ಯ ಉಂಟು ಮಾಡುತ್ತಿದೆ. ದಯವಿಟ್ಟು ಕ್ಯಾಪ್ಟನ್ ಅಂಕಲ್ (ಪಂಜಾಬ್ ಮುಖ್ಯಮಂತ್ರಿ) ಮತ್ತು ಖಟ್ಟರ್ ಅಂಕಲ್ (ಹರಿಯಾಣ ಮುಖ್ಯಮಂತ್ರಿ) ಅವರಿಗೆ ಪತ್ರಗಳನ್ನು ಬರೆದು ’ನಮ್ಮ ಆರೋಗ್ಯದ ಬಗ್ಗೆ ಚಿಂತಿಸಿ’ ಎಂದು ಒತ್ತಾಯಿಸಿ ಎಂದು ಅರವಿಂದ ಕೇಜ್ರಿವಾಲ್ ಮಕ್ಕಳಿಗೆ ಸಲಹೆ ಮಾಡಿದರು.

ರಾಜಧಾನಿಯ ಮಾಲಿನ್ಯ ಮಟ್ಟ ಏರುತ್ತಿರುವುದರಿಂದಾಗಿ ದೆಹಲಿಯನ್ನು ಮುಸುಕಿರುವ ಮಬ್ಬು ರಾತ್ರಿ ವೇಳೆಯಲ್ಲಿ ೫೦ ಪಾಯಿಂಟ್‌ನಷ್ಟು ಹೆಚ್ಚುತ್ತಿದೆ. ಪರಿಣಾಮವಾಗಿ ಶುಕ್ರವಾರ ಬೆಳಗ್ಗೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ೪೫೯ಕ್ಕೆ ಏರಿತ್ತು.

ಗುರುವಾರ ರಾತ್ರಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ವಿಷಮ ಅಂದರೆ ’ಸಿವಿಯರ್ ಪ್ಲಸ್’ ಅಥವಾ ’ತುರ್ತು’ ಸ್ಥಿತಿಗೆ ಮುಟ್ಟಿತ್ತು. ಈ ವರ್ಷ ಜನವರಿಯಿಂದ ವಾಯು ಗುಣಮಟ್ಟ ಸೂಚ್ಯಂಕ ಈ ಮಟ್ಟಕ್ಕೆ ಮುಟ್ಟಿದ್ದು ಇದೇ ಮೊದಲು.

ವಾಯು ಗುಣಮಟ್ಟವು ವಿಷಮ ಸ್ಥಿತಿಯಲ್ಲಿಯೇ ೪೮ ಗಂಟೆಗಳಿಗಿಂತಲೂ ಹೆಚ್ಚು ಕಾಲ ಮುಂದುವರೆದರೆ, ಸಮ-ಬೆಸ ಯೋಜನೆಯ ಜಾರಿ, ಟ್ರಕ್ ಪ್ರವೇಶ ನಿಷೇಧ, ನಿರ್ಮಾಣ ಚಟುವಟಿಕೆಗಳ ನಿಷೇಧ ಹಾಗೂ ಶಾಲೆಗಳನ್ನು ಮುಚ್ಚುವುದೇ ಇತ್ಯಾದಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿ ನುಡಿದರು.

ದೆಹಲಿಯಲ್ಲಿ ಸೋಮವಾರದಿಂದ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ಉದ್ದೇಶಿಸಲಾಗಿದ್ದು, ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಎಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ವಾಯುಮಾಲಿನ್ಯವನ್ನು ಇಳಿಸಲು ನೆರವಾಗುವ ಸಮ-ಬೆಸ ವಾಹನ ಸಂಚಾರವು ನವೆಂಬರ್ ೧೫ರವರೆಗೂ ಮುಂದುವರೆಯಲಿದೆ ಎಂದು ಸರ್ಕಾರ ಹೇಳಿದೆ.

ದೆಹಲಿಯ ಎಲ್ಲ ೩೭ ವಾಯುಗುಣಮಟ್ಟ ನಿಗಾ ಕೇಂದ್ರಗಳೂ ಶುಕ್ರವಾರ ಬೆಳಗ್ಗೆ ವಾಯುಗುಣಮಟ್ಟ ವಿಷಮ ಸ್ಥಿತಿಗೆ ತಲುಪಿದ್ದನ್ನು ದಾಖಲಿಸಿವೆ.

ಬವಾನ ಪ್ರದೇಶವು ಅತ್ಯಂತ ಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶವಾಗಿದ್ದು ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ೪೯೭ಕ್ಕೆ ಮುಟ್ಟಿದ್ದರೆ, ದೆಹಲಿ ತಾಂತ್ರಿಕ ವಿಶ್ವವಿದ್ಯಾಯ ಪ್ರದೇಶದಲ್ಲಿ ೪೮೭ಕ್ಕೆ, ಆನಂದ ವಿಹಾರದಲ್ಲಿ ೪೮೪ಕ್ಕೆ ಮತ್ತು ವಿವೇಕ ವಿಹಾರದಲಿ ೪೮೨ಕ್ಕೆ ತಲುಪಿತ್ತು.

ನೆರೆಯ ಗಾಜಿಯಾಬಾದ್ ದೇಶದಲ್ಲೇ ಅತ್ಯಂತ ಹೆಚ್ಚು ಮಾಲಿನ್ಯಕ್ಕೆ ಒಳಗಾಗಿರುವ ನಗರವಾಗಿದ್ದು, ಇಲ್ಲಿ ಸೂಕ್ಷ್ಮ ಕಣಗಳ ಗಾತ್ರ ಪಿಎಂ೨.೫ರಷ್ಟಿದ್ದು ಇದು ೨.೫ ಮೈಕ್ರೋನ್ ಗಿಂತಲೂ ಕಡಿಮೆ. ಇದು ನೇರವಾಗಿ ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ನೋಯ್ಡಾ , ಗ್ರೇಟರ್ ನೋಯ್ಡಾ ಮತ್ತು ಫರೀದಾಬಾದ್ ಕೂಡಾ ಅತ್ಯಂತ ಮಾಲಿನ್ಯಭರಿತ ಪ್ರದೇಶಗಳಾಗಿವೆ.

ದೆಹಲಿ ವಾಯುಮಾಲಿನ್ಯ: ಗಾಳಿಯಲ್ಲಿ ಪತ್ತೆಯಾಗಿದೆಪಿಎಂ 2.5’ ಕಣ

 ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಗಂಭೀರ ಸ್ವರೂಪ ಪಡೆದುಕೊಂಡಿರುವ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿದೆ. ದೆಹಲಿಯ ಗಾಳಿಯಲ್ಲಿ ‘ಪಿಎಂ 2.5’ ಕಣಗಳು ಪತ್ತೆಯಾಗಿವೆ ಎಂದು ವರದಿಗಳು ಹೇಳಿವೆ.

ಏನಿದು ‘ಪಿಎಂ 2.5’?

‘ಪಿಎಂ’ ಎಂಬುದು ‘ಪರ್ಟಿಕ್ಯುಲೇಟ್ ಮ್ಯಾಟರ್‌’ ಎಂಬುದರ ಸಂಕ್ಷಿಪ್ತ ರೂಪ. ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳನ್ನು ಗುರುತಿಸಲು ‘ಪಿಎಂ’ ಎಂಬ ಹೆಸರನ್ನು ಬಳಸಲಾಗುತ್ತದೆ. ಗಾತ್ರಕ್ಕೆ ಅನುಗುಣವಾಗಿ ಇವನ್ನು ‘ಪಿಎಂ 2.5’ ಮತ್ತು ಪಿಎಂ 10’ ಎಂದು ವರ್ಗೀಕರಿಸಲಾಗಿದೆ. 2.5 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಕಣಗಳನ್ನು ಪಿಎಂ 2.5 ಎಂದು ಕರೆಯಲಾಗುತ್ತದೆ. ಇವು ಹೆಚ್ಚು ಅಪಾಯಕಾರಿಯಾದ ಕಣಗಳಾಗಿವೆ.

ಇಂಗಾಲದ ಡೈ ಆಕ್ಸೈಡ್‌, ಇಂಗಾಲದ ಮಾನಾಕ್ಸೈಡ್‌, ಸಾರಜನಕದ ಆಕ್ಸೈಡ್‌ನ ಕಣಗಳು ಈ ರೂಪದಲ್ಲಿ ಇರುತ್ತವೆ. ದೆಹಲಿಯ ಗಾಳಿಯಲ್ಲಿ ಕಂಡುಬಂದಿರುವುದು ಇದೇ ಕಣಗಳು.

ತೊಂದರೆಯೇನು?

ಇವು ತೀರಾ ಚಿಕ್ಕದಾಗಿರುವ ಕಾರಣ ಬರಿಗಣ್ಣಿಗೆ ಗೋಚರಿಸುವುದಿಲ್ಲ. 40 ‘ಪಿಎಂ 2.5’ ಕಣಗಳನ್ನು ಒಟ್ಟುಸೇರಿಸಿದರೆ ಮಾತ್ರ ಅವು ಬರಿಗಣ್ಣಿಗೆ ಗೋಚರಿಸುತ್ತವೆ. ಈ ಕಣಗಳ ಗಾತ್ರ ತೀರಾ ಸಣ್ಣದಾಗಿರುವ ಕಾರಣ ಮೂಗು ಮತ್ತು ಬಾಯಿಯ ಮೂಲಕ ಶ್ವಾಸಕೋಶವನ್ನು ಸುಲಭವಾಗಿ ಪ್ರವೇಶಿಸುತ್ತವೆ

ಪಿಎಂ 2.5’ ಮೂಲಗಳು

ಕೃಷಿತ್ಯಾಜ್ಯದ ದಹನ, ಕಾರ್ಖಾನೆಗಳು ಮತ್ತು ಉಷ್ಣವಿದ್ಯುತ್ ಸ್ಥಾವರ, ವಾಹನಗಳ ಹೊಗೆ, ಘನತ್ಯಾಜ್ಯ ದಹನ

ಪಿಎಂ 2.5’ ಕಣಗಳಿಂದ ಎದುರಾಗುವ ಸಮಸ್ಯೆಗಳು

ಕಣ್ಣಿನ ನವೆ, ಚರ್ಮದ ಅಲರ್ಜಿ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆ, ಹೃದಯಾಘಾತ, ಪಾರ್ಶ್ವವಾಯು.

ಯಾರಿಗೆಲ್ಲಾ ಅಪಾಯ?

ಶಿಶುಗಳು, ಮಕ್ಕಳು, ಗರ್ಭಿಣಿಯರು, ವೃದ್ಧರು

November 1, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, environment /endangered species, Flash News, General Knowledge, Health, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha | , , , , , , , | Leave a comment

೨೫,೦೦೦ ರೂ ಉಳಿಸಲು ಮೇಲ್ಮನವಿ, ಲಕ್ಷಾಂತರ ರೂ ವೆಚ್ಚ!

01 supreme courtಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್  ತಪರಾಕಿ

ನವದೆಹಲಿ: ೨೫,೦೦೦ ರೂಪಾಯಿಗಳ ಜುಜುಬಿ ದಂಡದ ಹಣವನ್ನು ಉಳಿಸುವ ಸಲುವಾಗಿ ಲಕ್ಷಾಂತರ ರೂಪಾಯಿಗಳನ್ನು ಖಟ್ಲೆಗಾಗಿ ವೆಚ್ಚ ಮಾಡಿದ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿತು.

ಕೇರಳ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ’ಇಂತಹ ಕ್ಷುಲ್ಲಕ ಮತ್ತು ಅನಗತ್ಯ ಪ್ರಕರಣ’ ದಾಖಲಿಸಿದ್ದಕ್ಕಾಗಿ ಅದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು. ಇಂತಹ ದುಸ್ಸಾಹಸಗಳನ್ನು ಮಾಡುವುದರ ವಿರುದ್ಧ ಕಠಿಣ ಎಚ್ಚರಿಕೆ ನೀಡಿತು.

‘ಭವಿಷ್ಯದಲ್ಲಿ ಕೇರಳ ಸರ್ಕಾರದಿಂದ ಇಂತಹ ಅರ್ಜಿ ಸಲ್ಲಿಕೆಯಾದರೆ ನಾವು ಭಾರೀ ದಂಡ ವಿಧಿಸಬೇಕಾಗುತ್ತದೆ ಎಂಬದಾಗಿ ನಾವು ಸ್ಪಷ್ಟ ಪಡಿಸಬಯಸುತ್ತೇವೆ’ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ತನ್ನ ಆದೇಶದಲ್ಲಿ ಎಚ್ಚರಿಸಿತು.

ಹೈಕೋರ್ಟ್ ತೀರ್ಪೊಂದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆಯಲ್ಲಿ ಸುಪ್ರೀಂಕೋರ್ಟ್ ಕೇರಳ ಸರ್ಕಾರವನ್ನು ಈ ರೀತಿ ಕಟುವಾಗಿ ತರಾಟೆಗೆ ತೆಗೆದುಕೊಂಡಿತು.

ಎರಡು ದಿನಾಂಕಗಳಲ್ಲಿ ಆರೋಪಿಯನ್ನು ಹಾಜರು ಪಡಿಸಲು ರಾಜ್ಯ ಸರ್ಕಾರ ವಿಫಲವಾದ ಬಳಿಕ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ದುಬೈಯಿಂದ ಸಾಕ್ಷ ನೀಡುವ ಸಲುವಾಗಿ ಬಂದಿದ್ದ ಸಾಕ್ಷಿದಾರನಿಗೆ ೨೫,೦೦೦ ರೂಪಾಯಿಗಳನ್ನು ಪಾವತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಜ್ಞಾಪಿಸಿದ್ದರು. ಆರೋಪಿ ಹಾಜರಿಲ್ಲದ ಕಾರಣ ಸಾಕ್ಷ್ಯ ನೀಡಿಕೆಯನ್ನು ಮುಂದೂಡಬೇಕಾಗಿ ಬಂದಿತ್ತು.

ವಿಚಾರಣಾ ನ್ಯಾಯಾಧೀಶರ ಈ ಆದೇಶದ ವಿರುದ್ಧ ಕೇರಳ ಸರ್ಕಾರವು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ವಿಚಾರಣಾ ನ್ಯಾಯಾಧೀಶರ ಆದೇಶವು ಸರಿಯಾಗಿಯೇ ಇದೆ ಎಂದು ಹೇಳಿ ಹೈಕೋರ್ಟ್ ಅದನ್ನು ಎತ್ತಿ ಹಿಡಿಯಿತು.

ವಿಚಾರಣಾ ನ್ಯಾಯಾಧೀಶರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ಮತ್ತು ತನ್ಮೂಲಕ, ೨೫,೦೦೦ ರೂಪಾಯಿಗಳನ್ನು ಉಳಿಸಲು ಖಟ್ಲೆಗಳಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಮಾರ್ಗವನ್ನು ಆರಿಸಿಕೊಂಡಿತು.

ಈ ಅರ್ಜಿಯು ಸುಪ್ರೀಂಕೋರ್ಟಿನ ಮುಂದೆ ವಿಚಾರಣೆಗೆ ಬಂದಾಗ, ಇಂತಹ ಖಟ್ಲೆಗಳಿಗಾಗಿ ಸರ್ಕಾರಿ ಬೊಕ್ಕಸದಿಂದ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವಂತೆ ಕೆಲವು ಅಧಿಕಾರಿಗಳು ಮತ್ತು ವಕೀಲರು ಮಾಡುವ ಸಲಹೆಯನ್ನು ನ್ಯಾಯಮೂರ್ತಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ರಾಜ್ಯ ಸರ್ಕಾರವು ಮೊದಲಿಗೆ ವಿಚಾರಣಾ ನ್ಯಾಯಾಧೀಶರ ಆದೇಶವನ್ನು ಹೈಕೋರ್ಟಿನ ಮುಂದೆ ಪ್ರಶ್ನಿಸಿತು. ಈಗ ನಮ್ಮ ಮುಂದೆ ಈ ಅರ್ಜಿ ಬಂದಿದೆ. ಇಂತಹ ಕ್ಷುಲ್ಲಕ ಅರ್ಜಿಗಾಗಿ ಲಕ್ಷಾಂತರ ರೂಪಾಯಿಗಳು ವೆಚ್ಚವಾಗಿರಬಹುದು. ಈ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ಸುಪ್ರೀಂಕೋರ್ಟ್ ಪೀಠವು ಹೇಳಿತು.

ಭವಿಷ್ಯದಲ್ಲಿ ಇಂತಹ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸದಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್ ಇಂತಹ ಮೇಲ್ಮನವಿಗಳಿಗೆ ಭಾರೀ ದಂಡ ವಿಧಿಸಲಾಗುವುದು ಎಂದು ಹೇಳಿತು.

November 1, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Finance, Flash News, General Knowledge, India, Nation, News, Spardha, supreme court | , , , , | Leave a comment

ಚಿದುಗೆ ಮಾಲಿನ್ಯ ಮುಖವಾಡ, ಮಿನರಲ್ ವಾಟರ್: ಹೈಕೋರ್ಟ್ ಆದೇಶ

01 chidambaramಕ್ರೋನ್ಸ್ ಕಾಯಿಲೆಯಿಂದ ಕಿಬ್ಬೊಟ್ಟೆ ನೋವು: ಆಸ್ಪತ್ರೆಗೆ ದಾಖಲಿಸಬೇಕಿಲ್ಲ ಎಂದ ಏಮ್ಸ್

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಸೆರೆಮನೆ ಸೇರಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅನಾರೋಗ್ಯ ನೆಲೆಯಲ್ಲಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು 2019 ನವೆಂಬರ್ 01ರ ಶುಕ್ರವಾರ ಇತ್ಯರ್ಥ ಪಡಿಸಿದ ದೆಹಲಿ ಹೈಕೋರ್ಟ್ ಮಾಜಿ ಸಚಿವರಿಗೆ ಸ್ವಚ್ಛ ಪರಿಸರ, ಮಾಲಿನ್ಯ ಮುಖವಾಡ  ಮತ್ತು ಪರಿಶುದ್ಧ ನೀರು (ಮಿನರಲ್ ವಾಟರ್) ಒದಗಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತು.

ಕ್ರೋನ್ಸ್ ಕಾಯಿಲೆಯಿಂದ ಬಳಲುತ್ತಿರುವ ಚಿದಂಬರಂ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಏಮ್ಸ್ ವೈದ್ಯಕೀಯ ಮಂಡಳಿಯು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಪೀಠವು ಈ ನಿರ್ದೇಶನ ನೀಡಿತು.

ಚಿದಂಬರಂ ಅವರ ಆರೋಗ್ಯದ ಬಗ್ಗೆ ಅಭಿಪ್ರಾಯ ನೀಡಲು ವೈದ್ಯಕೀಯ ಮಂಡಳಿಯೊಂದನ್ನು ರಚಿಸುವಂತೆ ಏಮ್ಸ್ ನಿರ್ದೇಶಕರಿಗೆ ಪೀಠವು 2019 ಅಕ್ಟೋಬರ್ 31ರ ಗುರುವಾರ ಆಜ್ಞಾಪಿಸಿತ್ತು.  ಕ್ರೋನ್ಸ್ ಕಾಯಿಲೆಯು ಜೀರ್ಣಾಂಗದಲ್ಲಿ ಉರಿಯೂತ ಉಂಟುಮಾಡುವ ಕಾಯಿಲೆಯಾಗಿದ್ದು ಕಿಬ್ಬೊಟ್ಟೆಯಲ್ಲಿ ನೋವು, ಅತಿಸಾರ ಅಥವಾ ಭೇದಿ ಮತ್ತು ತೂಕನಷ್ಟಕ್ಕೆ ಕಾರಣವಾಗುತ್ತದೆ.

ಹೈದರಾಬಾದ್ ಮೂಲದ ಜಠರತಜ್ಞ ನಾಗೇಶ್ವರ ರೆಡ್ಡಿ ಅವರನ್ನೂ ತಪಾಸಣೆ ನಡೆಸುವ ಏಮ್ಸ್  ವೈದ್ಯಕೀಯ ಮಂಡಳಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಹೈಕೋರ್ಟ್ ಹೇಳಿತ್ತು.

ಚಿದಂಬರಂ ಅವರು ವೈದ್ಯಕೀಯ ನೆಲೆಯಲ್ಲಿ ತಮಗೆ ಮಧ್ಯಂತರ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ತಮ್ಮ ದೇಹಸ್ಥಿತಿ ಹದಗೆಡುತ್ತಿರುವುದರಿಂದ ಸ್ವಚ್ಛ ಪರಿಸರದ ಅಗತ್ಯ ತಮಗಿದೆ. ಆದ್ದರಿಂದ ತಮ್ಮ ಕುಟುಂಬ ವೈದ್ಯರಾದ ನಾಗೇಶ್ವರ ರೆಡ್ಡಿ ಅವರಿಂದ ತಪಾಸಣೆ ಮಾಡಿಸಿಕೊಳ್ಳುವ ಸಲುವಾಗಿ ಮತ್ತು ಅವರ ಜೊತೆ ಸಮಾಲೋಚನೆಗಾಗಿ ತಮಗೆ ಆರು ದಿನಗಳ ಮಧ್ಯಂತರ ಜಾಮೀನು ನೀಡಬೇಕು ಎಂದು ಚಿದಂಬರಂ ಅರ್ಜಿ ಸಲ್ಲಿಸಿದ್ದರು. ರೆಡ್ಡಿಯವರು ಹೈದರಾಬಾದಿನ ಏಷ್ಯನ್ ಇನ್ ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟೆರಾಲಜಿಯ ಖ್ಯಾತ ಜಠರತಜ್ಞರಾಗಿದ್ದಾರೆ.

೨೦೧೭ರಲ್ಲಿ ತಮಗೆ ಕಂಡು ಬಂದಿದ್ದ ಕ್ರೋನ್ಸ್ ಕಾಯಿಲೆಯ ಪರಿಣಾಮವಾಗಿ ಅಕ್ಟೋಬರ್ ೫ರಿಂದ ತಮಗೆ ತೀವ್ರ ಸ್ವರೂಪದ ಸತತ ನೋವು ಕಿಬ್ಬೊಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದಕ್ಕೆ ತುರ್ತಾಗಿ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ಚಿದಂಬರಂ ಪ್ರತಿಪಾದಿಸಿದ್ದರು.

ಚಿದಂಬರಂ ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ ರಚಿಸಲಾಗಿದ್ದ ಏಮ್ಸ್ ವೈದ್ಯಕೀಯ ಮಂಡಳಿಯು ನೀಡಿದ ವರದಿಯನ್ನು ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಓದಿ ಹೇಳಿದರು ಮತ್ತು ಕಾಂಗ್ರೆಸ್ ನಾಯಕನಿಗೆ ಪರಿಶುದ್ಧ ಪರಿಸರದ ಅಗತ್ಯವಿಲ್ಲ ಎಂದು ಹೇಳಿದರು.

ಏಮ್ಸ್ ವೈದ್ಯಕೀಯ ಮಂಡಳಿ ಸಲ್ಲಿಸಿದ ವರದಿಯ ಬಳಿಕ, ನ್ಯಾಯಮೂರ್ತಿ ಸುರೇಶ್ ಕೈಟ್ ಅವರು ೭೪ರ ಹರೆಯದ ಕಾಂಗ್ರೆಸ್ ನಾಯಕನಿಗೆ  ಪರಿಶುದ್ಧ ಪರಿಸರ, ಮನೆಯಲ್ಲೇ ಮಾಡುದ ಅಡುಗೆ, ಮಿನರಲ್ ವಾಟರ್ ಮತ್ತು ಸೊಳ್ಳೆಪರದೆ ಹಾಗೂ ಸೊಳ್ಳೆ ನಿವಾರಣಾ ಔಷಧ ಒದಗಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ಆಜ್ಞಾಪಿಸಿದರು. ನಿಯಮಿತವಾಗಿ ಚಿದಂಬರಂ ಅವರ ಆರೋಗ್ಯ ತಪಾಸಣೆ ಮಾಡುವಂತೆಯೂ ಪೀಠ ನಿರ್ದೇಶಿಸಿತು.

ಚಿದಂಬರಂ ಅವರ ಕೊಠಡಿಯನ್ನು ಸ್ವಚ್ಛವಾಗಿ ಇರಿಸಬೇಕು, ಅವರಿಗೆ ಮಿನರಲ್ ವಾಟರ್ ಮತ್ತು ಸೊಳ್ಳೆಗಳ ವಿರುದ್ಧ ರಕ್ಷಣೆ ಹಾಗೂ ಮಾಲಿನ್ಯ ಮುಖವಾಡ ಒದಗಿಸಬೇಕು ಎಂದೂ ಪೀಠ ತಿಹಾರ್ ಜೈಲು ಸೂಪರಿಂಟೆಂಡೆಂಟ್ ಅವರಿಗೆ ನಿರ್ದೇಶನ ನೀಡಿತು. ಬೇರೆ ಯಾವುದೇ ನಿರ್ದೇಶನದ ಅಗತ್ಯವಿಲ್ಲ ಎಂಬುದಾಗಿ ಚಿದಂಬರಂ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಹೇಳಿದ ಬಳಿಕ ಪೀಠವು ಚಿದಂಬರಂ ಅವರ ಅರ್ಜಿಯನ್ನು ಇತ್ಯರ್ಥ ಪಡಿಸಿರುವುದಾಗಿ ಪ್ರಕಟಿಸಿತು.

ಬಂಧನದ ಬಳಿಕ ಚಿದಂಬರಂ ಅವರ ತೂಕ ೭೩ ಕಿಲೋಗ್ರಾಮಿನಿಂದ ೬೬ ಕಿಲೋ ಗ್ರಾಂಗಳಿಗೆ ಇಳಿದಿದೆ. ಇದು ಅವರ ದೇಹಸ್ಥಿತಿ ಹದಗೆಡುತ್ತಿರುವುದನ್ನು ಸೂಚಿಸಿದೆ ಎಂದು ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

November 1, 2019 Posted by | ಭಾರತ, ರಾಷ್ಟ್ರೀಯ, Flash News, Nation, News, Spardha | , , , | Leave a comment

ಜಾರ್ಖಂಡ್​ ವಿಧಾನಸಭೆಗೆ ನ.30ರಿಂದ 5 ಹಂತದ ಚುನಾವಣೆ, ಡಿ. 23ಕ್ಕೆ ಫಲಿತಾಂಶ

01 Sunil-Arora CEC
ನವದೆಹಲಿ
ಜಾರ್ಖಂಡ್ ವಿಧಾನಸಭೆ ಚುನಾವಣೆಯ ದಿನಾಂಕವನ್ನು 2019 ನವೆಂಬರ್ 1ರ ಶುಕ್ರವಾರ ಚುನಾವಣಾ ಆಯೋಗ ಘೋಷಣೆ ಮಾಡಿತು.  ನವೆಂಬರ್​ 30ರಿಂದ5 ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 23ಕ್ಕೆ ಫಲಿತಾಂಶ ಹೊರ ಬೀಳಲಿದೆ.

ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರಾ ಜಾರ್ಖಂಡ್​ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಜಾರ್ಖಂಡ್​ ವಿಧಾನಸಭೆ ಚುನಾವಣೆ ನವೆಂಬರ್​ 30ರಿಂದ 5 ಹಂತಗಳಲ್ಲಿ ನಡೆಯಲಿದೆ. ಡಿಸೆಂಬರ್ 23ಕ್ಕೆ ಫಲಿತಾಂಶ ಬರಲಿದೆ ಎಂದು ಅವರು ಪ್ರಕಟಿಸಿದರು.

ನ.30ಕ್ಕೆ ಮೊದಲ ಹಂತದ ಮತದಾನ, ಡಿ.7ರಂದು 2ನೇ ಹಂತದ ಮತದಾನ, ಡಿ.12ರಂದು 3ನೇ ಹಂತದ ಮತದಾನ, ಡಿ.16ರಂದು 4ನೇ ಹಂತದ ಮತದಾನ, ಡಿ.20ರಂದು 5ನೇ ಹಂತದ ಮತದಾನ ನಡೆಯಲಿದೆ.

ರಾಜ್ಯದಲ್ಲಿ ಈದಿನದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ರಾಜ್ಯ ವಿಧಾನಸಭೆಯ ಐದು ವರ್ಷಗಳ ಅವಧಿ ಜನವರಿ 5, 2020 ಕ್ಕೆ ಮುಕ್ತಾಯಗೊಳ್ಳಲಿದೆ. ಚುನಾವಣಾ ಖರ್ಚಿನ ಮೇಲೆ ಹಿಡಿತ ಸಾಧಿಸಲು ಪ್ರತಿ ಜಿಲ್ಲೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಅರೋರಾ ಹೇಳಿದರು.

ಜಾರ್ಖಂಡ್​ನ 81 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 81 ಸ್ಥಾನಗಳ ಶಾಸಕರ ಅಧಿಕಾರಾವಧಿ ಜನವರಿ 5ರಂದು ಅಂತ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ 3ನೇ ರಾಜ್ಯದ ಚುನಾವಣೆ ಇದಾಗಿದೆ. ಈ ರಾಜ್ಯದಲ್ಲಿ ಕೂಡ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ, ಜಾರ್ಖಂಡ್ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ.

November 1, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , | Leave a comment

ಬಿಜೆಪಿ-ಶಿವಸೇನೆ ಜಗಳಕ್ಕೆ ‘ಮಹಾ’ ರೈತನ ವಿಶಿಷ್ಟ ಪರಿಹಾರ

01 farmer srikant gadale‘ಅವರ ಜಗಳ ಮುಗಿವವರೆಗೆ ನಾನೇ ಮುಖ್ಯಮಂತ್ರಿ ಆಗುತ್ತೇನೆ..!’

ಔರಂಗಾಬಾದ್: ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಅಧಿಕಾರ ಹಂಚಿಕೆ ಮತ್ತು ಮುಂದಿನ ಸರ್ಕಾರ ರಚನೆಯ ಬಗೆಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವವರೆಗೆ  ‘ನಾನೇ ಮುಖ್ಯಮಂತ್ರಿಯಾಗುತ್ತೇನೆ, ಅವಕಾಶ ಕೊಡಿ’ ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ರೈತರೊಬ್ಬರು ಆಡಳಿತಾರೂಢ ಮೈತ್ರಿಕೂಟದ ‘ಜಗಳ’ಕ್ಕೆ ವಿಶಿಷ್ಟ ಪರಿಹಾರ ಸೂಚಿಸಿದರು.

ಕೇಜ್‌ತಾಲ್ಲೂಕಿನ ವಡ್ಮೌಲಿ ನಿವಾಸಿ ಶ್ರೀಕಾಂತ್ ವಿಷ್ಣು ಗಡಲೆ ಎಂಬ ರೈತ 2019ರ ಅಕ್ಟೋಬರ್ 31ರ ಗುರುವಾರ ಬೀಡ್ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ ಪತ್ರದಲ್ಲಿ ಈ ಪರಿಹಾರವನ್ನು ಸಲಹೆ ಮಾಡಿದರು.

ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಭುಗಿಲೆದ್ದಿರುವ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದ ತಮ್ಮ ಸಮಸ್ಯೆಯನ್ನು ಶಿವಸೇನೆ ಮತ್ತು ಬಿಜೆಪಿ ಇನ್ನೂ ಬಗೆಹರಿಸಿಕೊಂಡಿಲ್ಲ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.

“ನೈಸರ್ಗಿಕ ವಿಪತ್ತುಗಳು (ಅಕಾಲಿಕ ಮಳೆ) ರಾಜ್ಯದಲ್ಲಿ ಕೊಯ್ಲು ಮಾಡಲು ಸಿದ್ಧವಾದ ಬೆಳೆಗಳಿಗೆ ಅಡ್ಡಿಯಾಗಿದೆ. ಈ ವಿಪತ್ತುಗಳ ಬಗ್ಗೆ ರೈತರು ಉದ್ವಿಗ್ನರಾಗಿದ್ದಾರೆ. ರೈತರು ಬಳಲುತ್ತಿರುವ ಈ ಸಮಯದಲ್ಲಿ, ಶಿವಸೇನೆ ಮತ್ತು ಬಿಜೆಪಿ ಮುಖ್ಯಸ್ಥರಿಗೆ ತಮ್ಮ ‘ಅಧಿಕಾರದ ಸಮಸ್ಯೆಯನ್ನು’  ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು.

“ಆದ್ದರಿಂದ, ಇವರ ಸಮಸ್ಯೆ ಬಗೆಹರಿಯುವವರೆಗೆ, ರಾಜ್ಯಪಾಲರು ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ನನಗೆ ಹಸ್ತಾಂತರಿಸಬೇಕು” ಎಂದು ಗಡಾಲೆ ಹೇಳಿದ್ದಾರೆ. ‘ನಾನು ರೈತರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ನೀಡುತ್ತೇನೆ’ ಎಂದು ಗಡಾಲೆ ತಿಳಿಸಿದರು.

‘ಆಡಳಿತವು ನನ್ನ ಪತ್ರವನ್ನು ಗಮನಿಸದಿದ್ದರೆ, ಪ್ರಜಾತಾಂತ್ರಿಕ ವಿಧಾನಗಳ ಮೂಲಕ ಪ್ರತಿಭಟನೆ ಮಾಡುವೆ’ ಎಂದೂ ರೈv ತಮ್ಮ ಪತ್ರದಲ್ಲಿ ದರು.

ಮುಖ್ಯಮಂತ್ರಿ ಹುದ್ದೆಯನ್ನು  ತಲಾಎರಡೂವರೆ  ವರ್ಷ ಹಂಚಿಕೊಳ್ಳಬೇಕು ಮತ್ತು ಅಧಿಕಾರವನ್ನು ೫೦:೫೦ ಸೂತ್ರದಂತೆ ಹಂಚಿಕೆ ಮಾಡಬೇಕು ಎಂದು ಶಿವಸೇನೆ ಆಗ್ರಹಿಸುತ್ತಿದೆ.  ಈ ಎರಡೂ ಬೇಡಿಕೆಗಳನ್ನು ಬಿಜೆಪಿ ತಿರಸ್ಕರಿಸಿದೆ. ಮುಂದಿನ ಐದು ವರ್ಷಗಳವರೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಅವರು ಈ ಹುದ್ದೆಯಲ್ಲಿ ಮುಂದುವರಿಯುವುದಾಗಿಯೂ ಬಿಜೆಪಿ ಹೇಳಿದೆ.

ಶಿವಸೇನೆಯು ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಜೊತೆಗೂ ಮಾತುಕತೆ ನಡೆಸುತ್ತಿದ್ದು, ಗುರುವಾರ ರಾತ್ರಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್‌ಅವರನ್ನೂ ಶಿವಸೇನಾ ನಾಯಕ ಸಂಜಯ್ ರಾವತ್ ಭೇಟಿ ಮಾಡಿ  ಮಾತುಕತೆ ನಡೆಸಿದ್ದು, ಬಿಜೆಪಿ ಒಪ್ಪಂದ ಪಾಲಿಸದೇ ಇದ್ದಲ್ಲಿ ‘ಇತರ ರಾಜಕೀಯ ಮಾರ್ಗಗಳು ನಮ್ಮ ಮುಂದಿವೆ’ ಎಂದು ಹೇಳಿದ್ದಾರೆ.

ಶುಕ್ರವಾರ ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡಿದ ಶರದ್ ಪವಾರ್‌ಅವರು ರಾವತ್ ಅವರು ತಮ್ಮನ್ನು ಭೇಟಿ ಮಾಡಿದ್ದನ್ನು ದೃಢ ಪಡಿಸಿದರು.  ಆದರೆ ರಾಜಕೀಯದ ವಿಷಯ ಚರ್ಚಿಸಿಲ್ಲ, ರಾವತ್ ಆಗಾಗ ತಮ್ಮನ್ನು ಭೇಟಿ ಮಾಡುತ್ತಿರುತ್ತಾರೆ’ ಎಂದು ಹೇಳಿದರು.  ಬಿಜೆಪಿ ಮಾತಿಗೆ ಬದ್ಧವಾಗಿರಬೇಕು ಎಂಬ ಮಾತನ್ನೂ ಪವಾರ್ ಹೇಳಿದರು.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮೊಂದಿಗೆ ಮಾತನಾಡಿದ್ದಾರೆ ಎಂಬ ವರದಿಗಳನ್ನು ಕೂಡಾ 2019 ನವೆಂಬರ್ 1ರ ಶುಕ್ರವಾರ ರಾತ್ರಿ ತಳ್ಳಿಹಾಕಿದ ಶರದ್ ಪವಾರ್ ಶಿವಸೇನೆಯಿಂದ ಯಾವ ಪ್ರಸ್ತಾವೂ ಬಂದಿಲ್ಲ ಎಂದು ಹೇಳಿದರು.

November 1, 2019 Posted by | Agriculture, ಆರ್ಥಿಕ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Spardha | , , , , , | Leave a comment

ಜಮ್ಮು – ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ

31 J&K and Ladakh union territariesಇತಿಹಾಸದ ಗರ್ಭ ಸೇರಿದ ಜಮ್ಮು ಮತ್ತು ಕಾಶ್ಮೀರ ರಾಜ್ಯ

ನವದೆಹಲಿ: ಇದುವರೆಗೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರವು, ರಾಷ್ಟ್ರೀಯ ಏಕತಾ ದಿನವಾಗಿ ಆಚರಣೆಗೊಳ್ಳುತ್ತಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್‌ಅವರ ೧೪೪ನೇ ಜನ್ಮದಿನವಾದ 2019 ಅಕ್ಟೋಬರ್ 31ರ ಗುರುವಾರ ಇತಿಹಾಸದ ಗರ್ಭವನ್ನು ಸೇರಿದ್ದು, ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಜನ್ಮ ತಳೆದವು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ಸಂಸತ್ತು 2019 ಆಗಸ್ಟ್ ೫ರಂದು ರದ್ದು ಪಡಿಸಿದ ೮೬ ದಿನಗಳ ಬಳಿಕ, 2019 ಅಕ್ಟೋಬರ್ ೩೦ರ ಬುಧವಾರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಅಸ್ತಿತ್ವವನ್ನು ಕಳೆದುಕೊಂಡು, ನೂತನ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದವು.

ಆರ್.ಕೆ. ಮಾಥುರ್ ಅವರು ಲಡಾಖ್ ಕೇಂದ್ರಾಡಳಿತ ಪ್ರದೇಶದ  ಮೊದಲ ಲೆಫ್ಟಿನೆಂಟ್‌ಗವರ್ನರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.

ಗೃಹ ಸಚಿವಾಲಯವು ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು “ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ’  ಹಾಗೂ ‘ಲಡಾಖ್ ಕೇಂದ್ರಾಡಳಿತ ಪ್ರದೇಶ’ ಎಂಬುದಾಗಿ ಬದಲಾಯಿಸಲಾಗಿದೆ ಮತ್ತು ‘ಶಾಶ್ವತ ನಿವಾಸಿಗಳು ಅಥವಾ ಆನುವಂಶಿಕ ರಾಜ್ಯ’ ವಿಷಯಗಳನ್ನು ಕೈಬಿಡಲಾಗಿದೆ’ ಎಂದು ಘೋಷಿಸಲಾಯಿತು.

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಪುದುಚೆರಿಯಂತಹ ಶಾಸಕಾಂಗ, ಚುನಾಯಿತ ಶಾಸನಸಭೆ ಮತ್ತು ಮುಖ್ಯಮಂತ್ರಿಯನ್ನು ಹೊಂದಿರುತ್ತದೆ. ಇನ್ನೊಂದೆಡೆಯಲ್ಲಿ  ಲಡಾಖ್ ಕೇಂದ್ರಾಡಳಿತ ಪ್ರದೇಶವು ಶಾಸನಸಭೆರಹಿತವಾದ ಚಂಡೀಗಢ ಮಾದರಿಯ ಕೇಂದ್ರಾಡಳಿತ ಪ್ರದೇಶವಾಗಿರುತ್ತದೆ. ಇದು ಎರಡು ಗುಡ್ಡಗಾಡು ಅಭಿವೃದ್ಧಿ ಮಂಡಳಿಗಳನ್ನು ಹೊಂದಿರುತ್ತದೆ.

ಜಮ್ಮು ಮತ್ತು ಕಾಶ್ಮೀರ ಮರುಸಂಘಟನಾ ಕಾಯ್ದೆ, ೨೦೧೯ರ ಅಡಿಯಲ್ಲಿ ಎರಡೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಾಗಿ ಆಡಳಿತವನ್ನು ಲೆಫ್ಟಿನೆಂಟ್ ಗವರ್ನರುಗಳು (ಎಲ್-ಜಿ) ವಹಿಸಿಕೊಂಡರು.

ಗಿರೀಶ್‌ಚಂದ್ರ ಮುರ್ಮು (ಜಿಸಿ ಮುರ್ಮು) ಅವರು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿ  ಶ್ರೀನಗರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೀತಾ ಮಿತ್ತಲ್‌ ಅವರಿಂದ ಮಧ್ಯಾಹ್ನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಗೃಹ ಸಚಿವಾಲಯದ ಅಧಿಸೂಚನೆಯ ಬಳಿಕ, ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಮತ್ತು ರಣಬೀರ್ ದಂಡ ಸಂಹಿತೆ ಅಸ್ತಿತ್ವ ಕಳೆದುಕೊಂಡಿತು. ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವಿದ್ದ ಪ್ರದೇಶದಲ್ಲಿ ಕೇಂದ್ರ ಕಾನೂನುಗಳನ್ನು ಅನ್ವಯಿಸುವುದು ಸೇರಿದಂತೆ ಹಲವಾರು ಕ್ರಮಗಳನ್ನು ಅಧಿಸೂಚನೆಯು ಪ್ರಕಟಿಸಿತು.

‘ ರಾಜ್ಯ ಕಾನೂನುಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಕ್ಕೆ ಮತ್ತು ಕೇಂದ್ರ ಪ್ರಾಂತ್ಯದ ಲಡಾಖ್‌ಗೆ ’ಶಾಶ್ವತ ನಿವಾಸಿಗಳು’ ಅಥವಾ ’ಆನುವಂಶಿಕ ರಾಜ್ಯ ವಿಷಯಗಳು’ …, ಎಲ್ಲೆಲ್ಲಿ ಅನ್ವಯಿಸಲ್ಪಡುತ್ತದೆಯೋ ಅಲ್ಲೆಲ್ಲ ಇವುಗಳನ್ನು ಬಿಟ್ಟು ಬಿಡಲಾಗಿದೆ’ ಎಂದು ಗೃಹ ಸಚಿವಾಲಯದ ಅಧಿಸೂಚನೆ ಹೇಳಿತು.

“ಜಮ್ಮು ಮತ್ತು ಕಾಶ್ಮೀರ ರಾಜ್ಯ” ಅಥವಾ “ಜಮ್ಮು ಮತ್ತು ಕಾಶ್ಮೀರ” ಅಥವಾ “ರಾಜ್ಯ” ದ ಬಗ್ಗೆ ಯಾವುದೇ ರೀತಿಯ ಪದಗಳ ಉಲ್ಲೇಖಗಳನ್ನು ಅಕ್ಟೋಬರ್ ೩೧ ರಿಂದ “ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ” ಅಥವಾ “ಲಡಾಖ್ ಕೇಂದ್ರಾಡಳಿತ  ಪ್ರದೇಶ” ಎಂಬುದಾಗಿ (ಯಾವುದು ಅನ್ವಯವಾಗುತ್ತದೆಯೋ ಅದು) ಬದಲಾಯಿಸಲಾಗಿದೆ ಎಂದು ಅಧಿಸೂಚನೆ ಹೇಳಿತು.

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶಾಸನಸಭೆ ಅಥವಾ ಶಾಸಕಾಂಗವನ್ನು  ಕೇಂದ್ರಾಡಳಿತ ಪ್ರದೇಶದ ಶಾಸನಸಭೆ ಅಥವಾ ಶಾಸಕಾಂಗ ಎಂಬುದಾಗಿ ಉಲ್ಲೇಖಿಸಲಾಗುತ್ತದೆ ಎಂದು ಅಧಿಸೂಚನೆ ತಿಳಿಸಿತು.

ಆಗಸ್ಟ್ ೫ ಮತ್ತು ಅಕ್ಟೋಬರ್ ೩೧ ರ ನಡುವಣ ಅವಧಿಯಲ್ಲಿ ಹೊರಡಿಸಲಾದ  ಯಾವುದೇ ಅಧಿಸೂಚನೆ ಅಥವಾ ಆದೇಶ, ನಿಯಮ ಅಥವಾ ನೇಮಕಾತಿ ಸೇರಿದಂತೆ ಯಾವುದೇ ಕ್ರಮಗಳ  ವಿರುದ್ಧ ಯಾವುದೇ ಮೊಕದ್ದಮೆ ಹೂಡಲಾಗದು ಅಥವಾ ಅವುಗಳನ್ನು  ನಿರ್ವಹಿಸಲಾಗದು,  ಏಕೆಂದರೆ ಇವುಗಳನ್ನು ಅಧಿಸೂಚನೆಯ ಅಡಿಯಲ್ಲಿ ಕೈಗೊಳ್ಳಲಾದ ಕಾನೂನುಬದ್ಧವಾದ  ಕ್ರಮಗಳು ಎಂದು ಪರಿಗಣಿಸಲಾಗುವುದು ಎಂದು ಅಧಿಸೂಚನೆ ಹೇಳಿತು..

ಅಕ್ಟೋಬರ್ ೩೧ರವರೆಗೆ, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸಂವಿಧಾನ ಆಥವಾ ಆಗ ಜಾರಿಯಲ್ಲಿದ್ದ ಇತರ ಕಾನೂನುಗಳ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ವ್ಯಕ್ತಿಗಳನ್ನು ಭಾರತೀಯ ಸಂವಿಧಾನ ಮತ್ತು ಕಾನೂನುಗಳ ಅಡಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ ವ್ಯಕ್ತಿಗಳೆಂದು ಪರಿಗಣಿಸಲಾಗುವುದು ಎಂದೂ ಅಧಿಸೂಚನೆ ಹೇಳಿತು.

October 31, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha | , , , | Leave a comment

೩೭೦ನೇ ವಿಧಿ ರದ್ದು ಮೂಲಕ ಸರ್ದಾರ್ ಪಟೇಲ್ ಕನಸು ನನಸು: ಪ್ರಧಾನಿ ಮೋದಿ

31 pm modi at kevadiaಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುತ್ತಿದ್ದ ‘ಕೃತಕ’ ಗೋಡೆ ಇದೀಗ ನಾಶ

ನವದೆಹಲಿ/ ಕೇವಡಿಯಾ: ಸಂವಿಧಾನದ ೩೭೦ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರದ ಇತರ ಭಾಗಳಿಂದ ಪ್ರತ್ಯೇಕಿಸುವ ’ಕೃತಕಗೋಡೆಯನ್ನು’ ಸೃಷ್ಟಿಸಿತ್ತು; ಆಗಸ್ಟ್ ೫ರಂದು ಅದನ್ನು ರದ್ದು ಪಡಿಸುವ ಮೂಲಕ ಸರ್ದಾರ್ ಪಟೇಲ್‌ಅವರು ಕಂಡಿದ್ದ ಭಾರತವನ್ನು ಏಕೀಕರಣ ಮಾಡುವ ಕನಸಿನ ಯೋಜನೆಯನ್ನು ಈಡೇರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಅಕ್ಟೋಬರ್ 31ರ ಗುರುವಾರ ಹೇಳಿದರು.

ಪ್ರಧಾನಿಯವರು ಗುಜರಾತಿನ ಕೇವಡಿಯಾದಲ್ಲಿ ಭಾರತದ ಮೊದಲ ಗೃಹ ಸಚಿವರ ೧೪೪ನೇ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸುವ ಸಲುವಾಗಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಸರ್ದಾರ್ ಪಟೇಲರ ೧೪೪ನೇ ಜನ್ಮದಿನದಂದು ಪ್ರಧಾನಿ ಮೋದಿಯವರು ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು.

ಏಕತಾ ಪ್ರತಿಮೆಯನ್ನು ಕಳೆದ ವರ್ಷ ಸರ್ದಾರ್ ಪಟೇಲ್ ಅವರ ಗೌರವಾರ್ಥವಾಗಿ ನಿರ್ಮಿಸಿ ಉದ್ಘಾಟಿಸಲಾಗಿತ್ತು.  ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರವು ೨೦೧೪ರಿಂದೀಚೆಗೆ ಸರ್ದಾರ್ ಪಟೇಲ್‌ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸುತ್ತಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ‘ರಾಜಕೀಯ ಸ್ಥಿರತೆಯ ಮತ್ತು ಅಭಿವೃದ್ಧಿಯ ಹೊಸ ಯುಗ’ ಉದಯಿಸಿದ್ದು, ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಲಾಕ್ ಮತು ಅಭಿವೃದ್ಧಿ ಮಂಡಳಿ (ಬಿಡಿಸಿ) ಚುನಾವಣೆಗಳು ಇತ್ತೀಚೆಗೆ ನಡೆದವು ಎಂದು ಮೋದಿ ಹೇಳಿದರು.

‘ಹೊಸ ಹೆದ್ದಾರಿಗಳು, ರೈಲ್ವೇ ಮಾರ್ಗಗಳು, ಹೊಸ ಆಸ್ಪತ್ರೆಗಳು, ಹೊಸ ಕಾಲೇಜುಗಳು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶಗಳ ಜನರನ್ನು ಹೊಸ ಎತ್ತರಕ್ಕೆ ಒಯ್ಯಲಿವೆ’ ಎಂದು ಪ್ರಧಾನಿ, ಒಂದೇ ಏಟಿಗೆ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಅಧಿಕೃತವಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕ್ರಮವು ಬುಧವಾರ ಮಧ್ಯರಾತ್ರಿ ಅನುಷ್ಠಾನಗೊಂಡ ಕೆಲವೇ ಗಂಟೆಗಳ ಬಳಿಕ ಹೇಳಿದರು.

೩೭೦ನೇ ವಿಧಿ ಇದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಮೂರು ದಶಕಗಳಲ್ಲಿ ೪೦,೦೦೦ಕ್ಕೂ ಹೆಚ್ಚು ಜನರು ಭಯೋತ್ಪಾದನೆಗೆ ಬಲಿಯಾಗಿ ಪ್ರಾಣತೆತ್ತಿದ್ದಾರೆ. ಮುಗ್ಧ ಜನರ ಇಂತಹ ಸಾವನ್ನು ರಾಷ್ಟ್ರ ಎಷ್ಟು ಸಮಯದವರೆಗೆ ನೋಡಬೇಕು? ಈಗ ಗೋಡೆಯನ್ನು ಕೆಡವಿ ಹಾಕಲಾಗಿದೆ ಮತ್ತು ಸರ್ದಾರ್ ಪಟೇಲರ ಕನಸು ನನಸಾಗಿದೆ’ ಎಂದು ೧೮೨ ಮೀಟರ್‌ಎತ್ತರದ ಏಕತಾ ಪ್ರತಿಮೆಯ ಬುಡದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನುಡಿದರು.

ಭಯೋತ್ಪಾದನೆಯ ಮಹಾದ್ವಾರ ಬಂದ್: ಅಮಿತ್ ಶಾ

ಸಂವಿಧಾನದ ೩೭೦ ಮತ್ತು ೩೫ಎ ವಿಧಿಗಳನ್ನು ರದ್ದು ಪಡಿಸುವ ಮೂಲಕ ದೇಶದಲ್ಲಿದ್ದ ಭಯೋತ್ಪಾದನೆಯ ಮಹಾದ್ವಾರಗಳನ್ನು ಪ್ರಧಾನಿ ಮೋದಿ ಮುಚ್ಚಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನವದೆಹಲಿಯಲ್ಲಿ ಹೇಳಿದರು.

ಭಾರತದ ಮೊತ್ತ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಅಮಿತ್ ಶಾ ಅವರು ಮಾತನಾಡಿದರು.

ಜಮ್ಮು ಮತ್ತು ಕಾಶ್ಮೀರ ರಾಜ್ಯವು ಹಿಂದಿನ ದಿನ ನಡುರಾತ್ರಿ ರದ್ದಾಗಿ, ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದ ಕೆಲವೇ ಗಂಟೆಗಳ ಬಳಿಕ  ಈ ಮಾತುಗಳನ್ನು ಹೇಳಿದ ಅಮಿತ್ ಶಾ ಅವರು ‘ಸ್ವಾತಂತ್ರ್ಯ ಲಭಿಸಿದ ಬಳಿಕ  ೫೫೦ ರಾಜಪ್ರಭುತ್ವದ ಪ್ರಾಂತ್ಯಗಳಾಗಿ ಹಂಚಿಹೋಗಿದ್ದ ದೇಶವನ್ನು ಒಗ್ಗೂಡಿಸಿ ನಾವು ಇಂದು ನಕ್ಷೆಯಲ್ಲಿ ನೋಡುತ್ತಿರುವ ಸಂಯುಕ್ತ ಭಾರತ ಸೃಷ್ಟಿಯಾದದ್ದು ಕೇವಲ ಸರ್ದಾರ್ ಪಟೇಲರ ಪ್ರಯತ್ನಗಳ ಫಲವಾಗಿ’  ಎಂದು ಗೃಹ ಸಚಿವರು ಹೇಳಿದರು.

‘ಸರ್ದಾರ್ ಪಟೇಲ್ ಅವರು ೫೫೦ ಪ್ರಾಂತ್ಯಗಳನ್ನು ಒಗ್ಗೂಡಿಸಿ ಭಾರತದ ಏಕತೆಯನ್ನು ಸಾಧಿಸಿದರು. ಆದರೆ ಜಮ್ಮು ಮತ್ತು ಕಾಶ್ಮೀರವನ್ನು ದೇಶದಲ್ಲಿ ಸೇರ್ಪಡೆ ಮಾಡಲಾಗಲಿಲ್ಲ ಎಂಬ ವಿಷಾದ ಅವರದಾಗಿತ್ತು. ಜಮ್ಮು ಮತ್ತು ಕಾಶ್ಮೀರ ಭಾರತದಲ್ಲಿ ವಿಲೀನಗೊಂಡಿತು, ಆದರೆ ೩೭೦ ಮತ್ತು ೩೫ಎ ವಿಧಿಗಳಿಂದಾಗಿ ಅದು ನಮಗೆ ಸಮಸ್ಯೆಯಾಗಿ ಉಳಿಯಿತು’ ಎಂದು ಶಾ ಹೇಳಿದರು.

೭೦ ವರ್ಷಗಳ ಕಾಲ ಯಾರೊಬ್ಬರೂ ಈ ವಿಧಿಗಳ ಬಗ್ಗೆ ಯೋಚಿಸಲಿಲ್ಲ. ಆದರೆ ೨೦೧೯ರಲ್ಲಿ, ಜನರು ಅಧಿಕಾರದ ಸೂತ್ರವನ್ನು ಪ್ರಧಾನಿ ಮೋದಿಯವರಿಗೆ ಕೊಟ್ಟರು ಮತ್ತು ಆಗಸ್ಟ್ ೫ರಂದು ಸಂಸತ್ತು ೩೭೦ ಮತ್ತು ೩೫ಎ ವಿಧಿಗಳನ್ನು ರದ್ದು ಪಡಿಸಿ ಸರ್ದಾರ್ ಪಟೇಲ್ (ವಲ್ಲಭಭಾಯಿ ಪಟೇಲ್) ಅವರ ಕನಸನ್ನು ನನಸು ಮಾಡಿತು ಎಂದು ಗೃಹ ಸಚಿವರು ನುಡಿದರು.

ಮೋದಿ ಸರ್ಕಾರವು ೨೦೧೪ರಿಂದ ಅಕ್ಟೋಬರ್ ೩೧ನ್ನು ರಾಷ್ಟ್ರೀಯಏಕತಾ ದಿನವಾಗಿ ಆಚರಿಸುತ್ತಿದೆ. ಏಕತಾ ದಿನದ ಅಂಗವಾಗಿ ನವದೆಹಲಿಯಲ್ಲಿ ನಡೆಸಲಾದ ಬೃಹತ್ ಮೆರವಣಿಗೆಯಲ್ಲಿ ಶಾಲಾ ಮಕ್ಕಳು, ಮಾಜಿಯೋಧರು, ಹಿರಿಯ ನಾಗರಿಕರು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡರು. ಮೆರವಣಿಗೆಯು ಇಂಡಿಯಾಗೇಟಿನಲ್ಲಿರುವ ಅಮರ ಜವಾನ್ ಜ್ಯೋತಿಯಲ್ಲಿ ಸಮಾಪ್ತಿಗೊಂಡಿತು.

October 31, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Prime Minister, Spardha, World | | Leave a comment

ಮುಗಿಯದ ಹಗ್ಗ-ಜಗ್ಗಾಟ, ಕಾಂಗ್ರೆಸ್, ಎನ್‌ಸಿಪಿ ಜೊತೆಗೂ ಶಿವಸೇನೆ ಮಾತುಕತೆ

31 shivsena legislature parte meetಶಾಸಕರ ನಾಯಕರಾಗಿ ಏಕನಾಥ ಶಿಂಧೆ ಆಯ್ಕೆ, ಸರ್ಕಾರ ರಚನೆಗೆ ಫಡ್ನವಿಸ್ ಸಿದ್ಧತೆ

ನವದೆಹಲಿ/ ಮುಂಬೈ: ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಕೇಸರಿ ಮೈತ್ರಿಕೂಟದ ಬಿಕ್ಕಟ್ಟು ಬಗೆಹರಿಯದೇ ಇದ್ದರೂ, ನವೆಂಬರ್ ೪-೫ರ ವೇಳೆಗೆ ವಾಂಖೇಡೆ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಬಿಜೆಪಿ ಸಿದ್ಧತೆ ಆರಂಭಿಸಿತು. ಆದರೆ ಶಿವಸೇನೆ- ಬಿಜೆಪಿ ಮಧ್ಯೆ ಹಗ್ಗ ಜಗ್ಗಾಟ ಮುಂದುವರೆದಿದ್ದು, ಸೇನೆಯು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೂ ಮಾತುಕತೆ ನಡೆಸಿತು.ಶಿವಸೇನೆಯ ಸಂಜಯ ರಾವತ್ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು.

ಶಿವಸೇನೆಯು ೫೦:೫೦ ಅಧಿಕಾರ ಹಂಚಿಕೆ ಸೂತ್ರದ ಕುರಿತ ತನ್ನ ಪಟ್ಟನ್ನು ಸಡಿಲಿಸಿದೆ ಎಂಬ ವರದಿಗಳ ಮಧ್ಯೆಯೇ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ’ಶಿವ ಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಶಾಸಕರ ಸಭೆಯಲ್ಲಿ ಘೋಷಿಸುವ ಮೂಲಕ ತಾನಿನ್ನೂ ಪಟ್ಟು ಸಡಿಲಿಸಿಲ್ಲ ಎಂದು ಸುಳಿವು ನೀಡಿದರು.

ಪಕ್ಷವು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಇನ್ನೂ ಮಾತುಕತೆ ನಡೆಸುತ್ತಿದೆ ಮತ್ತು ಶಿವಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲು ಬಯಸಿದೆ. ನಾವು ಯಾವುದಕ್ಕೆ ಬದ್ಧರಾಗಿದ್ದೇವೋ ಅದನ್ನೇ ಕೇಳುತ್ತಿದ್ದೇವೆ’ ಎಂದು ಠಾಕ್ರೆ ಹೇಳಿದರು.

೫೦:೫೦ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಬಿಜೆಪಿ ಭರವಸೆ ಕೊಟ್ಟಿಲ್ಲ ಎಂಬುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿರುವುದಕ್ಕೆ ಭ್ರಮನಿರಸನ ವ್ಯಕ್ತ ಪಡಿಸಿದ ಉದ್ಧವ್ ’ಅಮಿತ್ ಶಾ ಮತ್ತು ತಮ್ಮ ಮಧ್ಯೆ ಯಾವುದಕ್ಕೆ ಬದ್ಧತೆ ವ್ಯಕ್ತ ಪಡಿಸಲಾಗಿತ್ತು ಎಂದು ಫಡ್ನವಿಸ್ ಅವರು ಮೊದಲು ಸ್ಪಷ್ಟ ಪಡಿಸಿಕೊಳ್ಳಲಿ’ ಎಂದು ಹೇಳಿದರು.

ಅಧಿಕಾರದ ಹಗ್ಗ ಜಗ್ಗಾಟದ ನಡುವೆಯೇ ಫಡ್ನವಿಸ್ ಅವರು ಈದಿನ ಹಲವಾರು ಪಕ್ಷಗಳ ಶಾಸಕರು ಮತ್ತು ಪಕ್ಷೇತರ ಶಾಸಕರ ಜೊತೆ ಸಭೆ ನಡೆಸಿ ವಿವಿಧ ವಿಷಯಗಳನ್ನು ಚರ್ಚಿಸಿದರು. ಎಲ್ಲ ಶಾಸಕರೂ ಫಡ್ನವಿಸ್ ನಾಯಕತ್ವಕ್ಕೆ ದೃಢ ಬೆಂಬಲ ವ್ಯಕ್ತ ಪಡಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿದವು.

ಈ ಮಧ್ಯೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಈದಿನ ನಡೆದ ಮೊದಲ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿವಸೇನಾ ಶಾಸಕರು ರಾಜ್ಯ ಸಚಿವ ಏಕನಾಥ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದರು.

ಬಿಜೆಪಿ-ಶಿವಸೇನಾ ಮೈತ್ರಿ ಸರ್ಕಾರದಿಂದ ಸಧ್ಯಕ್ಕೆ ೨೯ರ ಹರೆಯದ ಠಾಕ್ರೆ ಕುಡಿ ಹೊರಗುಳಿಯಬೇಕು ಎಂಬ ಸೂತ್ರಕ್ಕೆ ಆದಿತ್ಯ ಠಾಕ್ರೆ ಮತ್ತು ಅವರ ತಂದೆ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತೀರ್‍ಮಾನಿಸಿದ ಬಳಿಕ ಸೇನಾ ಶಾಸಕರು ಶಿಂಧೆ ಅವರನ್ನು ತಮ್ಮ ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಿದರು.

ಠಾಕ್ರೆ ಕುಟುಂಬದಿಂದ ಮೊತ್ತ ಮೊದಲಿಗರಾಗಿ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸುತ್ತಿರುವ ಆದಿತ್ಯ ಠಾಕ್ರೆ ಅವರು ತಾವು ಸಧ್ಯಕ್ಕೆ ಸರ್ಕಾರದ ಭಾಗವಾಗಿ ಇರಲು ಬಯಸುವುದಿಲ್ಲ ಎಂಬುದಾಗಿ ಪಕ್ಷ ನಾಯಕರಿಗೆ ಹೇಳಿದ್ದು ಅದಕ್ಕೆ  ಉದ್ಧವ್ ಠಾಕ್ರೆ ಒಪ್ಪಿದ್ದಾರೆ ಎಂದು ಹಿರಿಯ ಸೇನಾ ನಾಯಕರು ಹೇಳಿದರು.

’ಆದಿತ್ಯ ಅವರು ಸರ್ಕಾರಕ್ಕೆ ಸೇರ್ಪಡೆಯಾಗುವ ಮುನ್ನ ಒಂದು ಅಥವಾ ಎರಡು ವರ್ಷಗಳ ಕಾಲ ಶಾಸಕಾಂಗ ಕಲಾಪಗಳನ್ನು  ಮತ್ತು ಆಡಳಿತದ ಪ್ರಕ್ರಿಯೆಯನ್ನು ಕಲಿತುಕೊಳ್ಳಬೇಕು ಎಂಬುದು ಉದ್ಧವ್ ಜಿ ಅವರ ಅಭಿಪ್ರಾಯವಾಗಿದೆ’ ಎಂದು ಹಿರಿಯ ಸೇನಾ ನಾಯಕ ನುಡಿದರು.

ಆದಿತ್ಯ ಠಾಕ್ರೆ ಅವರು ಸರ್ಕಾರ ಸೇರ್ಪಡೆಯಿಂದ ಹಿಂದೆ ಸರಿದಿರುವ ಕಾರಣ ಪಕ್ಷದ ಇಬ್ಬರು ಹಿರಿಯರು ಹಾಗೂ ಹಾಲಿ ಸರ್ಕಾರದಲ್ಲಿ ಸಚಿವರಾಗಿರುವ ಏಕನಾಥ ಶಿಂಧೆ ಅಥವಾ ಸುಭಾಶ್ ದೇಸಾಯಿ ಅವರಲ್ಲಿ ಯಾರಾದರೂ ಒಬ್ಬರು ಸರ್ಕಾರವನ್ನು ಸೇರಬಹುದು ಎಂದು ಉದ್ಧವ್ ಅವರು ನಿರೀಕ್ಷಿಸಿದರು.

ಆದಿತ್ಯ ಠಾಕ್ರೆ ಅವರ ನಿರ್ಧಾರವು ಮಿತ್ರ ಪಕ್ಷವಾದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಜೊತೆಗಿನ ನೂತನ ಸರ್ಕಾರದಲ್ಲಿ ಸಚಿವ ಸ್ಥಾನಗಳಿಗಾಗಿ ನಡಸುವ ಸೇನಾ ಮಾತುಕತೆಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಪುತ್ರ ಆದಿತ್ಯ ಬಿಜೆಪಿ-ಶಿವಸೇನಾ ಸರ್ಕಾರದಲ್ಲಿ ಸಧ್ಯಕ್ಕೆ ಪಾಲ್ಗೊಳ್ಳದ ಕಾರಣ ಉಪಮುಖ್ಯಮಂತ್ರಿ ಸ್ಥಾನವನ್ನು ಉದ್ಧವ್ ಅವರು ಈಗ ಬಯಸದೇ ಇರಬಹುದು ಎಂದು ಹಿರಿಯ ಸೇನಾ ನಾಯಕ ನುಡಿದರು.

ಎರಡು ಮಿತ್ರ ಪಕ್ಷಗಳ  ಮಧ್ಯೆ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಮಾತುಕತೆ ನಡೆದಿದ್ದು, ಬಿಜೆಪಿಯು ಶಿವಸೇನೆಗೆ ೨೦೧೪ರ ಸರ್ಕಾರದಲ್ಲಿ ನೀಡಲಾಗಿದ್ದ ೧೩ ಸ್ಥಾನಗಳಲ್ಲದೆ ಎರಡು ಅಥವಾ ಮೂರು ಸ್ಥಾನಗಳನ್ನು ಮಂತ್ರಿಮಂಡಲದಲ್ಲಿ ನೀಡುವ ಇಂಗಿತ ವ್ಯಕ್ತ ಪಡಿಸಿದೆ. ಶಿವಸೇನೆಯು ಉಪಮುಖ್ಯಮಂತ್ರಿ ಸ್ಥಾನವನ್ನು ಬಯಸದೇ ಇದ್ದರೆ ಇನ್ನೂ ಒಂದು ಸಂಪುಟ ಸ್ಥಾನವನ್ನು ನೀಡಬಹುದು. ಆದರೆ ಸೇನೆಯು ಇನ್ನೂ ಹೆಚ್ಚಿನ ಸ್ಥಾನಗಳನ್ನು ಬಯಸುತ್ತಿದೆ.

ಹೊರಹೋಗುತ್ತಿರುವ ಸರ್ಕಾರದಲ್ಲಿ ಬಿಜೆಪಿಯ ೨೭ ಸಚಿವರನ್ನು ಹೊಂದಿದರೆ, ಶಿವಸೇನೆಯು ೧೩ ಮತ್ತು ಇತರ ಸಣ್ಣ ಮಿತ್ರ ಪಕ್ಷಗಳು ೩ ಮಂತ್ರಿಗಳನ್ನು ಹೊಂದಿದ್ದವು.

ಮುಖ್ಯಮಂತ್ರಿ ಸ್ಥಾನವು ಮಾತುಕತೆಯ ವಿಷಯವೇಅಲ್ಲ ಎಂಬುದಾಗಿ ಬಿಜೆಪಿ ಸ್ಪಷ್ಟ ಪಡಿಸಿದೆ. ಅದೇ ರೀತಿ ಗೃಹ, ಹಣಕಾಸು, ಕಂದಾಯ ಮತ್ತು ನಗರಾಭಿವೃದ್ಧಿ ಖಾತೆಗಳಂತಹ ಮಹತ್ವದ ಖಾತೆಗಳೂ ಮಾತುಕತೆಯ ವಿಷಯವಲ್ಲ ಎಂದು ಬಿಜೆಪಿ ಸ್ಪಷ್ಟ ಪಡಿಸಿದೆ.

ವಸತಿ, ಕೃಷಿ ಇಲಾಖೆಗಳು ಸೇರಿದಂತೆ ಇತರ ಖಾತೆಗಳನ್ನು ಸೇನೆಗೆ ಕೊಡಲು ಬಿಜೆಪಿ ಮುಂದೆ ಬಂದಿದೆ.

ಮಾತುಕತೆಗಳು ಸಂಪುಟದ ರೂಪವನ್ನು ಸ್ಪಷ್ಟಗೊಳಿಸಬಹುದು ಮತ್ತು ಮುಂದಿನ ವಾರದ ಆದಿಯಲ್ಲಿ ನೂತನ ಸರ್ಕಾರ ರಚನೆಯಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ ೨೪ರಂದು ಮತಗಳ ಎಣಿಕೆಯ ಬಳಿಕ ಕೇಸರಿ ಮೈತ್ರಿಕೂಟ ಪುನರಾಯ್ಕೆಗೊಂಡ ಬಳಿಕ ಉಭಯ ಪಕ್ಷಗಳು ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ತೀವ್ರ ತಿಕ್ಕಾಟ ನಡೆಸಿವೆ.

೨೮೮ ಸದಸ್ಯ ಬಲದ ವಿಧಾನಸಭೆಯಲಿ ಬಿಜೆಪಿಯು ೧೦೫ ಸ್ಥಾನಗಳನ್ನು ಗೆದ್ದಿದ್ದರೆ, ಶಿವಸೇನೆಯು ೫೬ ಸ್ಥಾನಗಳನ್ನು ಗೆದ್ದಿದೆ. ವಿರೋಧಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು ೫೪ ಸ್ಥಾನಗಳನ್ನು ಗೆದ್ದಿದ್ದರೆ ಅದರ ಮಿತ್ರ ಪಕ್ಷ ಕಾಂಗ್ರೆಸ್ ೪೪ ಸ್ಥಾನಗಳನ್ನು ಗೆದ್ದಿದೆ. ಉಭಯ ಮೈತ್ರಿಕೂಟಗಳಲ್ಲೂ ಇರುವ ಪಕ್ಷೇತರರು ಮತ್ತು ಸಣ್ಣಪಕ್ಷಗಳು ಒಟ್ಠಾಗಿ ೨೯ ಸ್ಥಾನಬಲ ಹೊಂದಿವೆ.

ಲೋಕಸಭಾ ಚುನಾವಣೆಗೆ ಮುನ್ನ ಫೆಬ್ರುವರಿಯಲ್ಲಿ ನಿರ್ಧರಿಸಲಾಗಿದ್ದ ೫೦:೫೦ ಅಧಿಕಾರ ಹಂಚಿಕೆ ಸೂತ್ರದ ಆಧಾರದಲ್ಲಿ ಮಾತುಕತೆ ನಡೆಯಬೇಕು ಎಂದು ಸೇನೆಯು ಪಟ್ಟು ಹಿಡಿಯಲು ಆರಂಭಿಸುವುದರೊಂದಿಗೆ ಸರ್ಕಾರ ರಚನೆ ಪ್ರಕ್ರಿಯೆ ನಿಧಾನಗೊಂಡಿದೆ.

ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ದೇವೇಂದ್ರ ಫಡ್ನವಿಸ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವ ಯಾವುದೇ ನಿರ್ಧರವೂ ಆಗಿಲ್ಲ ಎಂಬುದಾಗಿ ಹೇಳಿ, ಅದನ್ನು ಹಂಚಿಕೊಳ್ಳುವ ಪ್ರಸ್ತಾಪವನ್ನು ತಳ್ಳಿಹಾಕಿದ್ದಾರೆ.

ನಿರೀಕ್ಷೆಯಿಂತೆಯೇ, ಶಿವಸೇನೆಯು ತನ್ನ ಪಟ್ಟನ್ನು ಸಡಿಲಿಸುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಷಕ ಪ್ರಕಾಶ್ ಬಲ್ ಹೇಳಿದ್ದಾರೆ. ’ಶಿವಸೇನೆಯ ತನ್ನ ಸದಸ್ಯರ ಸ್ಥೈರ್‍ಯವನ್ನು ಬಲಪಡಿಸುವ ಸಲುವಾಗಿ ಬಿಗಿಭಾಷೆಯನ್ನು ಪ್ರಯೋಗಿಸುತ್ತಿದೆ. ಆದರೆ ಬಿಜೆಪಿ ತನ್ನ ನಿಲುವನ್ನು ಬಿಗಿಗೊಳಿಸಿದ ಬಳಿಕ ಅಂತಿಮವಾಗಿ ತನ್ನ ನಿಲುವನ್ನು ಮೆದುಗೊಳಿಸುವ ಸಾಧ್ಯತೆ ಕಂಡು ಬರುತ್ತಿದೆ. ಪಕ್ಷವು ಕಳೆದ ಐದು ವರ್ಷಗಳಿಂದ ಹೀಗೆಯೇ ಮಾಡುತ್ತಾ ಬಂದಿದೆ’ ಎಂದು ಪ್ರಕಾಶ್ ಬಲ್ ಹೇಳಿದರು.

October 31, 2019 Posted by | ರಾಷ್ಟ್ರೀಯ, ವಿಶ್ವ/ ಜಗತ್ತು, Flash News, India, Nation, News, Politics, Spardha | , , | Leave a comment

ಪಾಕ್ ಪ್ಯಾಸೆಂಜರ್ ರೈಲಿನಲ್ಲಿ ಗ್ಯಾಸ್ ಸ್ಟವ್ ಸ್ಫೋಟ: ಕನಿಷ್ಠ ೭೩ ಸಾವು

31 pak train fire tragedyಪ್ರಯಾಣಿಕರು ಅಡುಗೆ ಮಾಡುತ್ತಿದ್ದಾಗ ಸಂಭವಿಸಿದ ಭೀಕರ ದುರಂತ

ಇಸ್ಲಾಮಾಬಾದ್: ಕೇಂದ್ರ ಪಾಕಿಸ್ತಾನದ ಪ್ಯಾಸೆಂಜರ್ ರೈಲುಗಾಡಿಯೊಂದಕ್ಕೆ 2019 ಅಕ್ಟೋಬರ್  31ರ ಗುರುವಾರ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಕನಿಷ್ಠ ೭೩ ಮಂದಿ ಸುಟ್ಟು ಕರಕಲಾಗಿದ್ದು, ಇತರ ೪೦ಕ್ಕೂ ಹೆಚ್ಚು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಪ್ರಾಂತೀಯ ಸಚಿವರು ತಿಳಿಸಿದರು.

ಬೋಗಿಗಳಲ್ಲಿ ಧಗಧಗಿಸುತ್ತಿದ್ದ ಬೆಂಕಿಯ ಕೆನ್ನಾಲಗೆ ಹಾಗೂ ರೈಲುಬೋಗಿಗಳ ಒಳಗಿನಿಂದ ಪ್ರಯಾಣಕರ ಹಾಹಾಕಾರ, ಕಿರಿಚಾಟ ಕೇಳುತ್ತಿದ್ದ ಭೀಕರ ದೃಶ್ಯಗಳನ್ನು ಟೆಲಿವಿಷನ್‌ಗಳು ಪ್ರಸಾರ ಮಾಡಿದವು. ಪಂಜಾಬ್ ಪ್ರಾಂತದ ರಹೀಮ್ ಯಾರ್ ಖಾನ್ ಜಿಲ್ಲೆಯ ಸಮೀಪ ಈ ದುರಂತ ಸಂಭವಿಸಿತು.

’ನಮಗೆ ಬಂದಿರುವ ವರದಿಗಳ ಪ್ರಕಾರ ೬೫ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ’ ಎಂದು ಪ್ರಾಂತೀಯ ಆರೋಗ್ಯ ಸಚಿವೆ ಡಾ. ಯಾಸ್ಮೀನ್ ರಶೀದ್ ಹೇಳಿದರು.

ಗಾಯಾಳುಗಳನ್ನು ಸಮೀಪದ ಬಹವಾಲ್ಪುರ ಮತ್ತು ಆಸುಪಾಸಿನ ಆಸ್ಪತ್ರೆಗಳಿಗೆ ಒಯ್ಯಲಾಗಿದೆ ಎಂದು ಆಕೆ ನುಡಿದರು. ಕೇವಲ ೧೮ ಶವಗಳು ಗುರುತಿಸುವ ಸ್ಥಿತಿಯಲ್ಲಿದ್ದು, ಉಳಿದ ಶವಗಳು ಗುರುತಿಸಲೂ ಸಾಧ್ಯವಾಗದಷ್ಟು ಕರಟಿಹೋಗಿವೆ ಎಂದು ಅವರು ಹೇಳಿದರು.

’ಭಯಾನಕ.. ಪ್ರಯಾಣಿಕರು ಒಯ್ದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ್ದರಿಂದ ಸಂಭವಿಸಿದ ಈ ದುರಂತ ಭಯಾನಕ’ ಎಂದು ಮಾನವ ಹಕ್ಕುಗಳ ಸಚಿವೆ ಶಿರೀನ್ ಮಝಾರಿ ಟ್ವೀಟ್ ಮಾಡಿದರು.

ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಾಗ ಕೆಲವು ಪ್ರಯಾಣಿಕರು ಬೆಳಗಿನ ಉಪಾಹಾರ ಸಿದ್ಧ ಪಡಿಸುವುದರಲ್ಲಿ ತಲ್ಲೀನರಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು.

ದುರಂತಕ್ಕೆ ಈಡಾಗಿರುವ ರೈಲು ಪಾಕಿಸ್ತಾನದ ಅತ್ಯಂತ ಹಳೆಯ ಹಾಗೂ ಜನಪ್ರಿಯ ಸೇವೆ ಒದಗಿಸುತ್ತಿದ್ದ ’ತೇಝಗಮ್’. ಇದು ಇಸ್ಲಾಮಾಬಾದ್ ಸಮೀಪದ ರಾವಲ್ಪಿಂಡಿ ಮತ್ತು ದಕ್ಷಿಣದ ಬಂದರು ನಗರ ಕರಾಚಿ ಮಧ್ಯೆ ಸಂಚರಿಸುತ್ತದೆ.

ರೈಲುಗಾಡಿಯಿಂದ ಬೇರ್ಪಡಿಸಲಾದ ಮೂರು ಬೋಗಿಗಳು ಧಗಧಗನೆ ಉರಿಯುತ್ತಿದ್ದುದನ್ನು ನೂರಾರು ಮಂದಿ ಗುಂಪುಗೂಡಿ ವೀಕ್ಷಿಸುತ್ತಿದ್ದ ದೃಶಗಳನ್ನೂ ಟಿವಿಗಳು ಪ್ರಸಾರ ಮಾಡಿದವು.

ಪಾಕಿಸ್ತಾನದಲ್ಲಿ ದಶಕಗಳ ಕಾಲದ ಭ್ರಷ್ಟಾಚಾರ, ಅಸಮರ್ಪಕ ನಿರ್ವಹಣೆ ಮತ್ತು ಹೂಡಿಕೆ ಕೊರತೆಯ ಪರಿಣಾಮವಾಗಿ ರೈಲು ಅಪಘಾತಗಳು ಸಂಭವಿಸುವುದು ಮಾಮೂಲಾಗಿದೆ.

ಜುಲೈ ತಿಂಗಳಲ್ಲಿ ಇದೇ ಜಿಲ್ಲೆಯಲ್ಲಿ ಪೂರ್ವದ ಲಾಹೋರ್ ನಗರದಿಂದ ಬರುತ್ತಿದ್ದ ಪ್ಯಾಸೆಂಜರ್ ರೈಲುಗಾಡಿಯು ಕ್ರಾಸಿಂಗ್ ಸಲುವಾಗಿ ನಿಂತಿದ್ದ ಗೂಡ್ಸ್ ಗಾಡಿಗೆ ಅಪ್ಪಳಿಸಿದ ಪರಿಣಾಮವಾಗಿ ೨೩ ಪ್ರಯಾಣಿಕರು ಸಾವನ್ನಪ್ಪಿದ್ದರು.

ಕಾವಲುರಹಿತ ಕ್ರಾಸಿಂಗ್ ಗಳಲ್ಲಂತೂ ದುರಂತಗಳು ಅತೀ ಸಾಮಾನ್ಯವಾಗಿವೆ.

ಕಳೆದ ವರ್ಷ ಇಸ್ಲಾಮಿಕ್ ಕಲ್ಯಾಣ ರಾಷ್ಟ್ರ ನಿರ್ಮಾಣದ ಭರವಸೆ ಮೇರೆಗೆ ಚುನಾಯಿತರಾದ ಪ್ರಧಾನಿ ಇಮ್ರಾನ್ ಖಾನ್ ಅವರು ಆರ್ಥಿಕ ಹಿಂಜರಿಕೆ ಪರಿಣಾಮವಾಗಿ ಮಿತವ್ಯಯಕ್ಕೆ ಮೊರೆಹೊಕ್ಕಿದ್ದು ಮೂಲಸವಲತ್ತು ಮತ್ತು ಸಾಮಾಜಿಕ ಕಾರ್‍ಯಕ್ರಮಗಳಲ್ಲಿ ಹೂಡಿಕೆ ಯತ್ನಗಳಿಗೆ ಅಡ್ಡಿಯಾಗಿದೆ.

ಗ್ರಾಮೀಣ ಪಂಜಾಬ್ ಕಳೆದ ಹಲವಾರು ವರ್ಷಗಳಿಂದ ಭೀಕರ ಅಪಘಾತಗಳಿಗೆ ಸಾಕ್ಷಿಯಾಗಿದೆ. ಇವುಗಳಲ್ಲಿ ೨೦೧೭ರಲ್ಲಿ ಸಂಭವಿಸಿದ ತೈಲ ಟ್ಯಾಂಕರ್ ಸ್ಫೋಟವೂ ಸೇರಿದೆ. ಈ ದುರಂತದಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಕರಾಚಿಯಿಂದ ಲಾಹೋರಿಗೆ ಸುಮಾರು ೫೦,೦೦೦ ಲೀಟರ್ ಇಂಧನವನ್ನು ಒಯ್ಯುತ್ತಿದ್ದ ಟ್ಯಾಂಕರ್ ಕೇಂದ್ರ ಪಂಜಾಬ್ ಪ್ರಾಂತದ ಮುಖ್ಯ ಹೆದ್ದಾರಿಯಲ್ಲಿ ಸ್ಫೋಟಗೊಂಡ ಪರಿಣಾಮವಾಗಿ ಈ ದುರಂತ ಸಂಭವಿಸಿತ್ತು.

ಚಾಲಕ ಮತ್ತು ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ಟಾಂಕರಿನಿಂದ ಸೋರಿಕೆಯಾಗುತ್ತಿದ್ದ ತೈಲವನ್ನು ಸಂಗ್ರಹಿಸಲು ಸಮೀಪದ ಹಳ್ಳಿಯೊಂದರ ಜನರು ಗುಂಪುಗೂಡಿದ್ದಾಗ ಟ್ಯಾಂಕರ್ ಸ್ಫೋಟಿಸಿ ಬೆಂಕಿಯ ಜ್ವಾಲೆಗಳ ಮಧ್ಯೆ ಅವರು ಸಿಕ್ಕಿಹಾಕಿಕೊಂಡಿದ್ದರು.

October 31, 2019 Posted by | Accidents, ಪಾಕಿಸ್ತಾನ, ವಿಶ್ವ/ ಜಗತ್ತು, Flash News, General Knowledge, News, Pakistan, Spardha, World | | Leave a comment

ಮುಂಬೈಯ ಬಹುತೇಕ ಭಾಗ ೨೦೫೦ ರ ವೇಳೆಗೆ ಸಮುದ್ರಕ್ಕೆ ಆಪೋಶನ?

30 mumbai-Artboard
ವಿಶ್ವದ ಹಲವು ದೊಡ್ಡ ಕರಾವಳಿ ನಗರಗಳೂ ಅಪಾಯದಲ್ಲಿ; ಉಪಗ್ರಹ
ಮಾಹಿತಿ ಆಧಾರಿತ ಹೊಸ ಸಂಶೋಧನಾ ವರದಿಯ ಎಚ್ಚರಿಕೆ

ನ್ಯೂಯಾರ್ಕ್:  ಹೊಸ ಸಂಶೋಧನೆಗಳ ಪ್ರಕಾರ, ಏರುತ್ತಿರುವ ಸಮುದ್ರಗಳು ೨೦೫೦ ರ ವೇಳೆಗೆ ಮುಂಬೈ ಸೇರಿದಂತೆ ವಿಶ್ವದ ಕೆಲವು ದೊಡ್ಡ ಕರಾವಳಿ ನಗರಗಳನ್ನು ಆಪೋಶನ ತೆಗೆದುಕೊಂಡು ಹಿಂದೆ ಯೋಚಿಸಿದ್ದುದಕ್ಕಿಂತ ಮೂರು ಪಟ್ಟು ಹೆಚ್ಚು ಜನರ ಮೇಲೆ ಪರಿಣಾಮ ಬೀರುವ ಅಪಾಯವಿದೆ ಎಂದು ಹೊಸ ಸಂಶೋಧನಾ ವರದಿಯೊಂದು ಎಚ್ಚರಿಕೆ ನೀಡಿತು.

ನಿಯತಕಾಲಿಕ ಒಂದರಲ್ಲಿ 2019 ಅಕ್ಟೋಬರ್ 29ರ ಮಂಗಳವಾರ ಪ್ರಕಟವಾದ ಸಂಶೋಧನಾ ಪ್ರಬಂಧದ ಲೇಖಕರು ಹಿಂದಿನ ಕಲ್ಪಿತ ಅಂಕಿಸಂಖ್ಯೆಗಳ ಬದಲಿಗೆ ಉಪಗ್ರಹ ಮಾಹಿತಿಯನ್ನು ಆಧರಿಸಿ ಭೂ ಎತ್ತರವನ್ನು ಲೆಕ್ಕಾಚಾರ ಮಾಡುವ ಹೆಚ್ಚು ನಿಖರವಾದ ಮಾರ್ಗವನ್ನು ಅಭಿವೃದ್ಧಿಪಡಿಸಿದ್ದು, ವಿಶಾಲ ಪ್ರದೇಶಗಳಲ್ಲಿ ಸಮುದ್ರ ಮಟ್ಟಏರಿಕೆಯ ಪರಿಣಾಮಗಳನ್ನು ಅಂದಾಜು ಮಾಡುವ ಪ್ರಮಾಣಿತ ಮಾರ್ಗವನ್ನು ಅನುಸರಿಸಿದ್ದಾರೆ ಎಂದು ವರದಿ ಹೇಳಿತು.

ಹೊಸ ಸಂಶೋಧನೆಯ ಪ್ರಕಾರ ಸುಮಾರು ೧೫೦ ಮಿಲಿಯನ್ (೧೫ ಕೋಟಿ) ಜನರು ಈಗ ವಾಸಿಸುತ್ತಿರುವ ಭೂಪ್ರದೇಶವು ಪ್ರಸ್ತುತ ಶತಮಾನದ ಮಧ್ಯಾವಧಿಯ ವೇಳೆಗೆ ಹೆಚ್ಚಿನ ಉಬ್ಬರವಿಳಿತದ ರೇಖೆಗಿಂತ ಕೆಳಗಿರುತ್ತದೆ. ಅಂದರೆ ಅಷ್ಟೂ ಮಂದಿ ನೀರಿನಡಿ ಮುಳುಗಡೆಯಾಗುವ ಪ್ರದೇಶದಲ್ಲಿ ವಾಸವಾಗಿದ್ದಾರೆ ಎಂದು ವರದಿ ಹೇಳಿತು.

ದಕ್ಷಿಣ ವಿಯೆಟ್ನಾಂ ಸಂಪೂರ್ಣ ಕಣ್ಮರೆ: ವಿಯೆಟ್ನಾಂನಲ್ಲಿ ಸುಮಾರು ೨೦ ದಶಲಕ್ಷಕ್ಕೂ (೨ ಕೋಟಿ) ಹೆಚ್ಚು ಜನರು, ಅಂದರೆ ಜನಸಂಖ್ಯೆಯ ಸುಮಾರು ಕಾಲು ಭಾಗದಷ್ಟು ಜನರು ಮುಳುಗಡೆ ವ್ಯಾಪ್ತಿಯಲ್ಲಿರುವ ಭೂಮಿಯಲ್ಲಿ ವಾಸಿಸುತ್ತಿದ್ದಾರೆ.

ನ್ಯೂಜೆರ್ಸಿ ಮೂಲದ ’ಕ್ಲೈಮೇಟ್ ಸೆಂಟ್ರಲ್’ ಎಂಬ ವಿಜ್ಞಾನ ಸಂಸ್ಥೆಯ ‘ನೇಚರ್ ಕಮ್ಯುನಿಕೇಷನ್ಸ್ ಜರ್ನಲ್’ ಪ್ರಕಟಿಸಿರುವ ಈ ಸಂಶೋಧನೆಯ ಪ್ರಕಾರ, ವಿಯೆಟ್ನಾಮಿನ ಆರ್ಥಿಕ ಕೇಂದ್ರವಾದ ಹೋ ಚಿ ಮಿನ್ಹ್ ನಗರ ಬಹುಪಾಲು ಕಣ್ಮರೆಯಾಗುತ್ತದೆ. ಭವಿಷ್ಯದ ಜನಸಂಖ್ಯೆಯ ಬೆಳವಣಿಗೆ ಅಥವಾ ಕರಾವಳಿ ಸವೆತಕ್ಕೆ ಕಳೆದುಹೋಗುವ ಭೂಮಿಯ ವಿವರಗಳನ್ನು ಈ ವರದಿ ನೀಡಿಲ್ಲ.

ಉಪಗ್ರಹಗಳನ್ನು ಬಳಸುವ ಪ್ರಮಾಣಿತ ಎತ್ತರದ ಮಾಪನಗಳು ನಿಜವಾದ ನೆಲದ ಮಟ್ಟವನ್ನು ಮರಗಳು ಅಥವಾ ಕಟ್ಟಡಗಳ ಮೇಲ್ಭಾಗದಿಂದ ಪ್ರತ್ಯೇಕಿಸಲು ಹೆಣಗಾಡುತ್ತವೆ ಈ ಕಾರಣಕ್ಕಾಗಿ ತಾವು ಮತ್ತು ಕ್ಲೈಮೇಟ್ ಸೆಂಟ್ರಲ್‌ನ  ಮುಖ್ಯಕಾರ್ಯನಿರ್ವಾಹಕ ಬೆಂಜಮಿನ್ ಸ್ಟ್ರಾಸ್‌ಕೃತಕ ಲೆಕ್ಕಾಚಾರದ ತಪ್ಪಿನ ಪ್ರಮಾಣವನ್ನು ನಿರ್ಧರಿಸಲು ಮತ್ತು ಅದನ್ನು ಸರಿಪಡಿಸಲು  ಬುದ್ಧಿಮತ್ತೆಯನ್ನು ಬಳಸಿರುವುದಾಗಿ ಎಂದು ಹವಾಮಾನ ಕೇಂದ್ರದ ಸಂಶೋಧಕ ಮತ್ತು ಸಂಶೋಧನಾ ಪ್ರಬಂಧದ ಲೇಖಕರಲ್ಲಿ ಒಬ್ಬರಾದ ಸ್ಕಾಟ್ ಎ. ಕುಲ್ಪ್ ಹೇಳಿದರು.

ಥೈಲ್ಯಾಂಡಿನಲ್ಲಿ  ಶೇಕಡಾ ೧೦ ಕ್ಕಿಂತ ಹೆಚ್ಚು ಜನರು  ೨೦೫೦ ರ ಹೊತ್ತಿಗೆ ಮುಳುಗಡೆಯಾಗುವ  ಭೂಮಿಯಲ್ಲಿ ಪ್ರಸ್ತುತ ವಾಸಿಸುತ್ತಿದ್ದಾರೆ, ಹಿಂದಿನ ಅಂದಾಜಿನ  ಪ್ರಕಾರ ಕೇವಲ ಶೇಕಡಾ ೧ರಷ್ಟು ಜನರು ಮಾತ್ರ ಮುಳುಗಡೆ ಪ್ರದೇಶದಲ್ಲಿ ಇದ್ದಾರೆ ಎಂದು ಭಾವಿಸಲಾಗಿತ್ತು. ದೇಶದ ರಾಜಕೀಯ ಮತ್ತು ವಾಣಿಜ್ಯ ರಾಜಧಾನಿ ಬ್ಯಾಂಕಾಕ್ ವಿಶೇಷವಾಗಿ ಈ ಅಪಾಯದ ವ್ಯಾಪ್ತಿಯಲ್ಲಿದೆ.

ಹವಾಮಾನ ಬದಲಾವಣೆಯು ನಗರಗಳ ಮೇಲೆ ಅನೇಕ ವಿಧಗಳಲ್ಲಿ ಒತ್ತಡವನ್ನುಂಟು ಮಾಡುತ್ತದೆ ಎಂದು ಬ್ಯಾಂಕಾಕ್ ನಿವಾಸಿ ಮತ್ತು ವಿಶ್ವಸಂಸ್ಥೆಯ ವಿಪತ್ತು ಅಪಾಯ ಇಳಿಕೆ ಅಧಿಕಾರಿ ಲೊರೆಟ್ಟಾ ಹೈಬರ್ ಗಿರಾರ್ಡೆಟ್ ಹೇಳಿದರು.  ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹೆಚ್ಚಿನ ಸ್ಥಳಗಳು ಪ್ರವಾಹಗಳಿಗೆ ಬಲಿಯಾಗುತ್ತಿವೆ. ಇದು ಬಡರೈತರನ್ನು ಅವರ ನೆಲದಿಂದ ಹೊರದಬ್ಬಿ ಅವರು ನಗರಗಳಲ್ಲಿ ಕೆಲಸ ಅರಸುವಂತೆ ಮಾಡುತ್ತದೆ.

‘ಇದೊಂದು  ಭೀಕರ ಸೂತ್ರವಾಗಿದೆ’ ಎಂದು ಲೊರೆಟ್ಟಾ ನುಡಿದರು.

ಏಷ್ಯಾದ ಪ್ರಮುಖ ಆರ್ಥಿಕ ಯಂತ್ರಗಳಲ್ಲಿ ಒಂದಾದ ಶಾಂಘೈಯಲ್ಲಿ, ನಗರದ ಹೃದಯಭಾಗ ಮತ್ತು ಅದರ ಸುತ್ತುಮತ್ತಲಿನ ಇತರ  ಅನೇಕ ನಗರಗಳನ್ನು ನೀರು ಆಪೋಶನ ತೆಗೆದುಕೊಳ್ಳುವ ಅಪಾಯವಿದೆ.

ಅಧ್ಯಯನದ  ಅಂಕಿಸಂಖ್ಯೆಗಳು  ಆ ಪ್ರದೇಶಗಳ ಅಂತ್ಯವನ್ನು ಉಚ್ಚರಿಸಬೇಕಾಗಿಲ್ಲ.  ಹೊಸ ದತ್ತಾಂಶವು ೧೧೦ ದಶಲಕ್ಷ ಜನರು ಈಗಾಗಲೇ ಹೆಚ್ಚಿನ ಉಬ್ಬರವಿಳಿತದ ರೇಖೆಯ ಕೆಳಗಿರುವ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಎಂದು ತೋರಿಸುತ್ತಿದೆ,  ಇದು ಸಮುದ್ರ ತಡೆಗೋಡೆಯಂತ ರಕ್ಷಣಾತ್ಮಕ ಕ್ರಮಗಳ ಅಗತ್ಯವನ್ನು ಸೂಚಿಸುತ್ತದೆ. ಅಂತಹ ರಕ್ಷಣಾತ್ಮಕ ಕ್ರಮಗಳಿಗಾಗಿ ಈ  ನಗರಗಳು ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಬೇಕು, ಮತು ಅವರು ಅದನ್ನು ಅತ್ಯಂತ ತ್ವರಿತವಾಗಿ ಮಾಡಬೇಕು ಎಂದು ಸ್ಟ್ರಾಸ್ ಸಲಹೆ ಮಾಡಿದರು.

ಆದರೆ ಆ ಹೂಡಿಕೆಗಳು ಕೂಡಾ ಎಷ್ಟರ ಮಟ್ಟಿಗೆ ಉಪಯುಕ್ತವಾಗಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ನುಡಿದ ಅವರು ೨೦೦೫ ರಲಿ ಕತ್ರಿನಾ ಚಂಡಮಾರುತ ಬೀಸಿದಾಗ ಸಮುದ್ರ ಮಟ್ಟಕ್ಕಿಂತ ಕೆಳಗಿದ್ದ  ನ್ಯೂಓರ್ಲಿಯನ್ಸ್ ನಗರವು  ನಾಶವಾದುದನ್ನು ಸ್ಟ್ರಾಸ್ ಉದಾಹರಿಸಿದರು. ಅಲ್ಲಿ ಸಾಕಷ್ಟು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಂಡಿದ್ದರೂ ವಿನಾಶ ತಪ್ಪಿಸಲಾಗಲಿಲ್ಲ ಎಂದು ಅವರು ನುಡಿದರು .

ಮುಂಬೈ ಮುಳುಗಡೆ ಭೀತಿ:  ಹೊಸ ಅಧ್ಯಯನದ ಪ್ರಕಾರ ಭಾರತದ ವಾಣಿಜ್ಯ ರಾಜಧಾನಿ ಮತ್ತು ವಿಶ್ವದ ಅತಿದೊಡ್ಡ ನಗರಗಳಲ್ಲಿ ಒಂದಾದ ಮುಂಬೈಯ ಹೆಚ್ಚಿನ ಭಾಗವು ನಾಶವಾಗುವ ಅಪಾಯದಲ್ಲಿದೆ.  ಒಂದು ಕಾಲದಲ್ಲಿ ದ್ವೀಪಗಳ ಸರಣಿಯಾಗಿದ್ದ ನಗರದ ಐತಿಹಾಸಿಕ  ಕೆಳಪಟ್ಟಣ ವಿಶೇಷವಾಗಿ ದುರ್ಬಲ ಸ್ಥಳವಾಗಿದೆ.

ಒಟ್ಟಾರೆಯಾಗಿ, ಹೆಚ್ಚಿನ ನಾಗರಿಕರು ಆಂತರಿಕವಾಗಿ ಸ್ಥಳಾಂತರಗೊಳ್ಳಲು ದೇಶಗಳು ಈಗ ತಯಾರಿ ಪ್ರಾರಂಭಿಸಬೇಕು ಎಂದು ಸಂಶೋಧನೆ ತೋರಿಸುತ್ತದೆ  ಎಂದು ವಲಸೆ ಮತ್ತು ಅಭಿವೃದ್ಧಿಯ ಬಗ್ಗೆ ಕ್ರಮಗಳನ್ನು ಸಂಘಟಿಸುವ ಅಂತರ ಸರ್ಕಾರೀ  ಗುಂಪಿನ ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಶನ್‌ನ ಡೀನಾ ಅಯೋನೆಸ್ಕೊ ಹೇಳಿದ್ದಾರೆ.

‘ನಾವು ಎಚ್ಚರಿಕೆಯ ಗಂಟೆಗಳನ್ನು ರಿಂಗಣಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅಯೋನೆಸ್ಕೊ ಹೇಳಿದರು. ’ಅದು ಬರುತ್ತಿದೆ ಎಂದು ನಮಗೆ ತಿಳಿದಿದೆ. ಈ ಪ್ರಮಾಣದಲ್ಲಿ ಜನರು ಸ್ಥಳಾಂತರ ಮಾಡಬೇಕಾಗಿ ಬಂದಿರುವ ಆಧುನಿಕ ಪೂರ್ವನಿದರ್ಶನಗಳಿಲ್ಲ’  ಎಂದು ಅವರು ಹೇಳಿದರು.

ಸಾಂಸ್ಕೃತಿಕ ಪರಂಪರೆಯ ಕಣ್ಮರೆಯು ತನ್ನದೇ ಆದ ಮಾದರಿಯ ವಿನಾಶವನ್ನು ತರಬಹುದು. ಕ್ರಿ.ಪೂ ೩೩೦ ರ ಸುಮಾರಿಗೆ ಅಲೆಕ್ಸಾಂಡರ್ ದಿ ಗ್ರೇಟ್ ಸ್ಥಾಪಿಸಿದ ಈಜಿಪ್ಟಿನ ಅಲೆಕ್ಸಾಂಡ್ರಿಯಾ ಏರುತ್ತಿರುವ ಕಡಲ ನೀರಿನಲ್ಲಿ ಕಳೆದುಹೋಗಬಹುದು.

ಇತರ ಸ್ಥಳಗಳಲ್ಲಿ, ಏರುತ್ತಿರುವ ಸಮುದ್ರಗಳಿಂದ ಉಂಟಾಗುವ ವಲಸೆ ಪ್ರಾದೇಶಿಕ ಘರ್ಷಣೆಯನ್ನು ಪ್ರಚೋದಿಸಬಹುದು ಅಥವಾ ವಲಸೆ ಘರ್ಷಣೆಗಳನ್ನು ಉಲ್ಬಣಗೊಳಿಸಬಹುದು.

ಇರಾಕಿನ ಎರಡನೇ ಅತಿದೊಡ್ಡ ನಗರವಾದ ಬಸ್ರಾ ೨೦೫೦ ರ ಹೊತ್ತಿಗೆ ಬಹುತೇಕ ನೀರೊಳಗಿರಬಹುದು. ಅದು ಸಂಭವಿಸಿದಲ್ಲಿ, ಪರಿಣಾಮಗಳು ಇರಾಕಿನ ಗಡಿಯಾಚೆಯಲ್ಲೂ ಪ್ರತಿಫಲಿಸಬಹುದು ಎಂದು ಇರಾಕ್ ಸಮರಕಾಲದಲ್ಲಿ ಅಮೆರಿಕದ ಕೇಂದ್ರ ಕಮಾಂಡ್ ಮುಖ್ಯಸ್ಥರಾಗಿದ್ದ ಮೆರೈನ್ ಕಾರ್ಪ್ಸ್‌ನ ನಿವೃತ್ತ ಲೆಫ್ಟಿನೆಂಟ್ ಜನರಲ್ ಜಾನ್ ಕ್ಯಾಸ್ಟೆಲ್ಲಾವ್ ಹೇಳಿದರು.

ಏರುತ್ತಿರುವ ಸಮುದ್ರದ ನೀರಿಗೆ ನಷ್ಟವಾಗುವ ಭೂಮಿಯ ಪ್ರಮಾಣ ಇನ್ನಷ್ಟು ಹೆಚ್ಚಿದರೆ ಈ ಪ್ರದೇಶದಲ್ಲಿ ಮತ್ತಷ್ಟು ಸಾಮಾಜಿಕ ಮತು ರಾಜಕೀಯ ಅಸ್ಥಿರತೆ ಉಂಟಾಗಬಹುದು. ಸಶಸ್ತ್ರ ಸಂಘರ್ಷ ಮತ್ತು ಭಯೋತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಈಗ ಹವಾಮಾನ ಮತ್ತು ಭದ್ರತಾ ಕೇಂದ್ರದ ಸಲಹಾ ಮಂಡಳಿಯಲ್ಲಿರುವ ಕ್ಯಾಸ್ಟೆಲ್ಲಾವ್ ನುಡಿದರು.

‘ಆದ್ದರಿಂದ ಇದು ಪರಿಸರ ಸಮಸ್ಯೆಗಿಂತ ಹೆಚ್ಚು ಆತಂಕಕಾರಿಯಾದ ವಿಷಯ ಮತ್ತು ಮಾನವೀಯ ಭದ್ರತೆ ಹಾಗೂ ಸಂಭವನೀಯ ಸೇನಾ ಸಮಸ್ಯೆ ಕೂಡಾ’ ಎಂದು ಎಂದು ಅವರು ಹೇಳಿದರು.

October 30, 2019 Posted by | ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, Flash News, General Knowledge, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha, World | , | Leave a comment

ಪೆಹ್ಲುಖಾನ್ ವಿರುದ್ಧದ ಪ್ರಕರಣ ರದ್ದು ಪಡಿಸಿದ ರಾಜಸ್ಥಾನ ಹೈಕೋರ್ಟ್

30 court order
ಹತ್ಯೆಗಾಗಿ ಜಾನುವಾರು ಕಳ್ಳಸಾಗಣೆ ಆರೋಪದ ಪ್ರಕರಣ

ಜೈಪುರ: ೨೦೧೭ರಲ್ಲಿ ಹತ್ಯೆಯ ಸಲುವಾಗಿ ಗೋವುಗಳನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಗುಂಪು ಹಲ್ಲೆಗೆ ಗುರಿಯಾಗಿ ಗಾಯಗೊಂಡು ಬಳಿಕ ಸಾವನ್ನಪ್ಪಿದ್ದ ಪೆಹ್ಲುಖಾನ್, ಅವರ ಇಬ್ಬರು ಪುತ್ರರು ಮತ್ತು ಟ್ರಕ್ ಚಾಲಕನ ವಿರುದ್ಧ ದಾಖಲಿಸಲಾಗಿದ್ದ ಜಾನುವಾರು ಕಳ್ಳಸಾಗಣೆ ಪ್ರಕರಣವನ್ನು ರಾಜಸ್ಥಾನ ಹೈಕೋರ್ಟ್  2019 ಅಕ್ಟೋಬರ್ 30ರ  ಬುಧವಾರ ರದ್ದು ಪಡಿಸಿತು.

ನ್ಯಾಯಮೂರ್ತಿ ಪಂಕಜ್ ಭಂಡಾರಿ ಅವರ ಏಕಸದಸ್ಯ ಪೀಠವು ಹತ್ಯೆಯ ಸಲುವಾಗಿ ಜಾನುವಾರುಗಳನ್ನು ಸಾಗಣೆ ಮಾಡಲಾಗುತ್ತಿತ್ತು ಎಂಬುದನ್ನು ತೋರಿಸುವ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂಬುದಾಗಿ ಹೇಳಿ ರಾಜಸ್ಥಾನ ಗೋಜಾತಿಯ ಪ್ರಾಣಿಗಳ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ನಾಲ್ವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣ ಮತ್ತು ದೋಷಾರೋಪ ಪಟ್ಟಿಯನ್ನು ರದ್ದು ಪಡಿಸಿತು.

ಟ್ರಕ್ ಚಾಲಕ ಖಾನ್ ಮೊಹಮ್ಮದ್ ಮತ್ತು ಪೆಹ್ಲುಖಾನ್ ಅವರ ಇಬ್ಬರು ಪುತ್ರರು ರಾಜಸ್ಥಾನ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಗೋವುಗಳನ್ನು ಅಕ್ರಮ ಉದ್ದೇಶಗಳಿಗಾಗಿ ಸಾಗಿಸಲಾಗುತ್ತಿತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರವೂ ಇಲ್ಲವಾದ್ದರಿಂದ ಈ ಕ್ರಿಮಿನಲ್ ಪ್ರಕರಣವು ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಆರೋಪಿಗಳ ಪರವಾಗಿ ಹಾಜರಾಗಿದ್ದ ವಕೀಲ ಕಪಿಲ್ ಗುಪ್ತ ಅವರು ವಾದಿಸಿದ್ದರು.

ಅವರು ಒಯ್ಯುತ್ತಿದ್ದ ಹಸುಗಳು ಹಾಲು ನೀಡುತ್ತಿದ್ದ ಹಸುಗಳು ಮತ್ತು ಅವುಗಳ ಕರುಗಳು ಕೇವಲ ಒಂದು ತಿಂಗಳು ಪ್ರಾಯದ ಕರುಗಳಾಗಿದ್ದವು ಎಂಬುದನ್ನು ವೈದ್ಯಕೀಯ ತಜ್ಞರ ವರದಿಗಳು ಸಾಬೀತು ಪಡಿಸಿವೆ ಎಂದೂ ಗುಪ್ತ ವಾದಿಸಿದ್ದರು.

ಸ್ಥಳೀಯ ಜಾನುವಾರು ಮಾರುಕಟ್ಟೆಯಿಂದ ಹಸುಗಳನ್ನು ಖರೀದಿಸಿದ್ದಕ್ಕೆ ಸಂಬಂಧಿಸಿದ ರಸೀತಿಗಳು ಇದ್ದು, ಇವುಗಳು ಅವರು ಪಶುಸಂಗೋಪನೆ ಸಲುವಾಗಿ ಜಾನುವಾರುಗಳನ್ನು ಖರೀದಿಸಿದ್ದರು ಎಂಬ ವಾಸ್ತವಾಂಶವನ್ನು ಸಾಬೀತು ಪಡಿಸಿವೆ ಎಂದು ವಕೀಲರು ಪ್ರತಿಪಾದಿಸಿದ್ದರು.

ತೀರ್ಪಿನ ಬಳಿಕ ದೂರವಾಣಿ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ ಪೆಹ್ಲು ಖಾನ್ ಅವರ ಪುತ್ರ ಇರ್ಷಾದ್ ಅವರು ’ನನ್ನ ಹಾಗೂ ನನ್ನ ಸಹೋದರನ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ಮತ್ತು ದೋಷಾರೋಪ ಪಟ್ಟಿಯನ್ನು ರದ್ದು ಪಡಿಸಿ ಹೈಕೋರ್ಟ್ ನೀಡಿರುವ ತೀರ್ಪಿನಿಂದ ನಮಗೆ ಅತ್ಯಂತ ಸಂತಸವಾಗಿದೆ. ನಾವು ದನಗಳನ್ನು ಕೊಲ್ಲುವ ಸಲುವಾಗಿ ಒಯ್ಯುತ್ತಿರಲಿಲ್ಲ, ಆದರೆ ನಮ್ಮ ಮೇಲೆ ಹಲ್ಲೆ ನಡೆಯಿತು. ಈದಿನ ನಮಗೆ ನ್ಯಾಯ ಲಭಿಸಿದೆ’ ಎಂದು ಹೇಳಿದರು.

೫೫ರ ಹರೆಯದ ಪೆಹ್ಲುಖಾನ್ ಮತ್ತು ಅವರ ಇಬ್ಬರು ಪುತ್ರರು ಹಾಗೂ ಇತರ ಕೆಲವು ೨೦೧೭ರ ಏಪ್ರಿಲ್ ೧ರಂದು ದನಗಳನ್ನು ಸಾಗಿಸುತ್ತಿದ್ದಾಗ ಆಳ್ವಾರ್ ಜಿಲ್ಲೆಯ ಬಹ್ರೋರಿನಲ್ಲಿ ತಡೆದಿದ್ದ ಗುಂಪು ತೀವ್ರ ಹಲ್ಲೆ ನಡೆಸಿತ್ತು ಎಂದು ಆಪಾದಿಸಲಾಗಿತ್ತು.

ಗೋರಕ್ಷಕರೆಂದು ಹೇಳಿಕೊಂಡ ಗುಂಪಿನ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಪೆಹ್ಲುಖಾನ್ ಏಪ್ರಿಲ್ ೩ರಂದು ತೀವ್ರಗಾಯಗಳ ಪರಿಣಾಮವಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

October 30, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , , | Leave a comment

ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ದೇವೇಂದ್ರ ಫಡ್ನವಿಸ್ ಆಯ್ಕೆ

30 devendra fadnavis
ಸರ್ಕಾರ ರಚನೆಯತ್ತ ಮೊದಲ ಹೆಜ್ಜೆ, ಶಿವಸೇನೆ ಜೊತೆ ಮಾತುಕತೆಗೆ ಗಡುವು

ಮುಂಬೈ: ಮಹಾರಾಷ್ಟ್ರದ ಪಕ್ಷ ಶಾಸಕಾಗ ನಾಯಕರಾಗಿ ದೇವೇಂದ್ರ ಫಡ್ನವಿಸ್ ಅವರನ್ನು ಪುನರಾಯ್ಕೆ ಮಾಡುವುದರೊಂದಿಗೆ 2019 ಅಕ್ಟೊಬರ್ 30ರ ಬುಧವಾರ ಭಾರತೀಯ ಜನತಾ ಪಕ್ಷವು ಸರ್ಕಾರ ರಚನೆಯ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿತು. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಫಡ್ನವಿಸ್ ಅವರು ಶಿವಸೇನೆ ಜೊತೆಗೆ ೨-೩ ದಿನಗಳಲ್ಲಿ ಮಾತುಕತೆ ಪೂರ್ಣಗೊಳಿಸುವುದಾಗಿ ಪ್ರಕಟಿಸಿದರು.

ಬಿಜೆಪಿಯ ಎಲ್ಲ ೧೦೫ ಮಂದಿ ಶಾಸಕರೂ ದಕ್ಷಿಣ ಮುಂಬೈಯ ವಿಧಾನಭವನದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಹಾಜರಿದ್ದರು. ಕೇಂದ್ರ ಸಚಿವ ನರೇಂದ್ರ ತೋಮರ್ ಮತ್ತು ಪಕ್ಷದ ಉಪಾಧ್ಯಕ್ಷ ಅವಿನಾಶ ರೈ ಖನ್ನಾ ಅವರು ಕೇಂದ್ರ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಮ್ಮ ಮೇಲೆ ವಿಶ್ವಾಸ ಇಟ್ಟದ್ದಕ್ಕಾಗಿ ಮತ್ತು ರಾಜ್ಯದ ಸೇವೆ ಸಲ್ಲಿಸಲು ಇನ್ನೊಂದು ಅವಕಾಶ ನೀಡಿದ್ದಕ್ಕಾಗಿ ಫಡ್ನವಿಸ್ ಅವರು ಶಾಸಕರಿಗೆ ಧನ್ಯವಾದ ಅರ್ಪಿಸಿದರು. ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರಿಗೂ ಈ ಸಂದರ್ಭದಲ್ಲಿ ಫಡ್ನವಿಸ್ ಧನ್ಯವಾದ ಸಲ್ಲಿಸಿದರು. ಮಹಾರಾಷ್ಟ್ರದಲ್ಲಿ ಜನಾದೇಶ ಲಭಿಸಿರುವುದು ’ಮಹಾ ಮೈತ್ರಿ’ಗೆ, ಆದ್ದರಿಂದ ಎರಡು-ಮೂರು ದಿನಗಳಲ್ಲಿ ಶಿವಸೇನೆಯ ಜೊತೆಗೆ ಮಾತುಕತೆ ಪೂರ್ಣಗೊಳಿಸಲಾಗುವುದು ಎಂದು ಅವರು ನುಡಿದರು.

ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಅವರು ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಫಡ್ನವಿಸ್ ಹೆಸರನ್ನು ಸೂಚಿಸಿದರು. ಪಕ್ಷದ ಹಿರಿಯ ನಾಯಕ ಸುಧೀರ್ ಮುಗಂತಿವಾರ್, ಹರಿಬಾಬು ಬಗಡೆ, ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಮಂಗಲೋರಾಭಟ್  ಲೋಧಾ ಅವರು ಅದನ್ನು ಅನುಮೋದಿಸಿದರು.

ಚುನಾವಣಾ ಫಲಿತಾಂಶ ಬಂದ ದಿನದಿಂದಲೇ ಶಿವಸೇನೆಯು ಬಿಜೆಪಿಯ ಜೊತೆಗೆ ೫೦-೫೦ ಅಧಿಕಾರ ಹಂಚಿಕೆ ಸೂತ್ರದ ಅನುಷ್ಠಾನಕ್ಕಾಗಿ ಪಟ್ಟು ಹಿಡಿದಿದ್ದು  ಉಭಯ ಪಕ್ಷಗಳೂ ಮುಖ್ಯಮಂತ್ರಿ ಸ್ಥಾನವನ್ನೂ ತಲಾ ಎರಡೂವರೆ ವರ್ಷಗಳಂತೆ ಹಂಚಿಕೊಳ್ಳಬೇಕು ಎಂದು ಆಗ್ರಹಿಸುತ್ತಿದೆ.

‘ಬಿಜೆಪಿಯು ಎಂದೂ ೫೦-೫೦ ಸೂತ್ರವನ್ನು ಒಪ್ಪಿಲ್ಲ ಮತ್ತು ತಾವು ಐದು ವರ್ಷಗಳ ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿರುವುದಾಗಿ’ ಹೇಳುವ ಮೂಲಕ ಫಡ್ನವಿಸ್ ಅವರು ಮಂಗಳವಾರ ತಮ್ಮ ನಿಲುವನ್ನು ಬಿಗಿಗೊಳಿಸಿದ್ದರು.

ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭಾ ಚುನಾವಣಾ ಸಮರದ ಕಾಲದಲ್ಲಿ ಬಿಜೆಪಿ ಮತ್ತು ಶಿವಸೇನೆ ಜಂಟಿ ಹೋರಾಟಕ್ಕಾಗಿ ಮೈತ್ರಿ ಮಾಡಿಕೊಳ್ಳುವಾಗ ಸ್ಥಾನ ಹಂಚಿಕೆ ಸೂತ್ರವನ್ನು ಒಪ್ಪಿಕೊಳ್ಳಲಾಗಿತ್ತು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಪ್ರತಿಪಾದಿಸಿದ್ದರು.

ಫಡ್ನವಿಸ್ ಹೇಳಿಕೆಯ ಬಳಿಕ ಮಂಗಳವಾರ ಸಂಜೆ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಬಿಜೆಪಿ ಜೊತೆಗೆ ನಡೆಸಲು ಉದ್ದೇಶಿಸಲಾಗಿದ್ದ ಸಭೆಯನ್ನು ಠಾಕ್ರೆ ರದ್ದು ಪಡಿಸಿದ್ದರು. ಫಡ್ನವಿಸ್ ಅವರ ಹೇಳಿಕೆಯ ಬಳಿಕ ಮಾತುಕತೆಯಾಡಲು ಯಾವ ವಿಚಾರವೂ ಉಳಿದಿಲ್ಲ ಎಂದು ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಹೇಳಿದ್ದರು.

ಮಿತ್ರ ಪಕ್ಷ ಬಿಜೆಪಿಯ ವಿರುದ್ಧ ನಿರಂತರ ದಾಳಿ ನಡೆಸುತ್ತಿದ್ದ ರಾವತ್ ಅವರು ’ಏನಾಗುತ್ತದೋ ಅದು ಆಗುತ್ತದೆ, ಅದು ಮಹಾರಾಷ್ಟ್ರದ ಹಣೆಬರಹ’  ಎಂದು ಬುಧವಾರ ಹೇಳಿಕೆ ನೀಡಿದ್ದರು.

‘ಬುಧವಾರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಭೆ ನಡೆಯಲಿದೆ. ನನಗೆ ಬಿಜೆಪಿ ಸಭೆಯ ಬಗ್ಗೆ ಗೊತ್ತಿಲ್ಲ. ಆದರೆ ಈದಿನ ಶಿವಸೇನೆಯು ತನ್ನ ಶಾಸಕರ ಜೊತೆಗೆ ಯಾವುದೇ ಸಭೆಯನ್ನೂ ಇಟ್ಟುಕೊಂಡಿಲ್ಲ.  ಪಕ್ಷದ ಸಭೆ ಮತ್ತು ಅದರ ಶಾಸಕಾಂಗ ಪಕ್ಷ ನಾಯಕನ ಆಯ್ಕೆಗೆ ಎಲ್ಲರೂ ಕರೆ ನೀಡಬೇಕು’ ಎಂದು ರಾವತ್ ಅವರನ್ನು ಉಲ್ಲೇಖಿಸಿ ಬುಧವಾರ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.

ಈ ಮಧ್ಯೆ, ಸಚಿವರ ಸಂಖ್ಯೆ ಬಗ್ಗೆ ಉಭಯ ಪಕ್ಷಗಳ ಮಧ್ಯೆ ಅನೌಪಚಾರಿಕ ಮಾತುಕತೆ ಆರಂಭವಾಗಿದೆ ಎಂದು ಬಿಜೆಪಿ ಮತ್ತು ಶಿವಸೇನಾ ಶಿಬಿರಗಳ ಒಳಗಿನ ಮೂಲಗಳು ಮಾಹಿತಿ ನೀಡಿದವು.

ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ಬಿಜೆಪಿಯ ದೃಢವಾಗಿ ನಿಂತಿದೆ. ಆದ್ದರಿಂದ ಈಗ ಶಿವಸೇನೆಯು ಸರ್ಕಾರದಲ್ಲಿ ಸಮಾನ ಸಂಖ್ಯೆಯ ಸಚಿವ ಹುದ್ದೆಗಳು ಮತ್ತು ಪ್ರಮುಖ ಖಾತೆಗಳಿಗಾಗಿ ಪಟ್ಟು ಹಿಡಿದಿದೆ ಎಂದು ವಿದ್ಯಮಾನಗಳ ಬಗ್ಗೆ ಅರಿವು ಹೊಂದಿರುವ ಸೇನಾ ನಾಯಕರೊಬ್ಬರು ಹೇಳಿದರು.

ಬಿಜೆಪಿ ಮತ್ತು ಶಿವಸೇನೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವಾಗಿ ಹೋರಾಡಿವೆ. ೨೮೮ ಸದಸ್ಯಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯು ೧೦೫ ಸ್ಥಾನಗಳನ್ನು ಗೆದರೆ, ಶಿವಸೇನೆಯು ೫೬ ಸ್ಥಾನಗಳನ್ನು ಗೆದ್ದಿತ್ತು.

October 30, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , | Leave a comment

ಶಿವಸೇನೆಗೆ ‘ ’ಪಕ್ಷೇತರ ಬಲ, ೬ ಸದಸ್ಯರ ಬೆಂಬಲ

30 shiv sena ind mla gavit
ಮುಂಬೈ
: ಮಹಾರಾಷ್ಟ್ರದಲ್ಲಿ ಬಿಜೆಪಿಯ ಜೊತೆಗೆ  ‘ಕದನಕ್ಕೆ’ ಇಳಿದಿರುವ ಶಿವಸೇನೆಗೆ 2019 ಅಕ್ಟೋಬರ್ 30ರ ಬುಧವಾರ ಇನ್ನೊಬ್ಬ ಪಕ್ಷೇತರ ಸದಸ್ಯ ಬೆಂಬಲನೀಡಿದ್ದು, ಶಿವಸೇನೆಗೆ ಬೆಂಬಲ ನೀಡಿರುವ ಪಕ್ಷೇತರರ ಬಲ ೬ಕ್ಕೆ ಏರಿತು. ಇದರಿಂದಾಗಿ ೫೬ ಸದಸ್ಯರನ್ನು ಹೊಂದಿರುವ ಶಿವಸೇನೆಯ ಬಲ ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ೬೨ಕ್ಕೇ ಏರಿತು.

ಬಿಜೆಪಿ ಶಾಸಕಾಂಗ ಪಕ್ಷವು ದೇವೇಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ ಕೆಲವೇ ಗಂಟೆಗಳಲ್ಲಿ ಸೇನೆಯನ್ನು ಬೆಂಬಲಿಸಿದ ಪಕ್ಷೇತರರ ಸಂಖ್ಯೆ ೬ಕ್ಕೆ ಏರಿತು ಎಂದು ಮೂಲಗಳು ಹೇಳಿದವು.

ಧುಲೆ ಜಿಲ್ಲೆಯ ಸಕ್ರಿ ಕ್ಷೇತ್ರದಿಂದ ಗೆದ್ದಿರುವ ಪಕ್ಷೇತರ ಶಾಸಕಿ ಮಂಜುಳಾ ಗವಿಟ್ ಅವರು ಶಿವಸೇನೆಗೆ ಬೆಂಬಲ ನೀಡಿರುವ ೬ನೇ ಪಕ್ಷೇತರ ಶಾಸಕರಾಗಿದ್ದಾರೆ. ಇದಕ್ಕೆ ಮುನ್ನ ಅವರು ಬಿಜೆಪಿಯಲ್ಲಿ ಇದ್ದರು. ೧೩ಮಂದಿ ಪಕ್ಷೇತರರ ಪೈಕಿ ೫ ಮಂದಿ ಪಕ್ಷೇತರ ಶಾಸಕರು ಈ ಮುನ್ನ ಶಿವಸೇನೆಗೆ ಬೆಂಬಲ ಘೋಷಿಸಿದ್ದರು.

ಎನ್‌ಸಿಪಿ ಬೆಂಬಲಿತ ಪಕ್ಷೇತರ ಶಾಸಕ ಶಂಕರರಾವ್ ಗಡಾಖ್ ಅಕ್ಟೋಬರ್ 28ರ ಸೋಮವಾರ  ಉದ್ಧವ್ ಠಾಕ್ರೆ ಜೊತೆ ಮಾತುಕತೆ ಬಳಿಕ ಸೇನೆಗೆ ಬೆಂಬಲ ಘೋಷಿಸಿದ್ದರು.

October 30, 2019 Posted by | ಭಾರತ, ರಾಷ್ಟ್ರೀಯ, Flash News, India, Nation, News, Politics, Spardha | | Leave a comment

ಭ್ರಷ್ಟರನ್ನು ಮಟ್ಟಹಾಕಿದ್ದ ನ್ಯಾಯಮೂರ್ತಿ ಎನ್.ವೆಂಕಟಾಚಲ ನಿಧನ

30 justice n venkatachala
ಬೆಂಗಳೂರು
: ಭ್ರಷ್ಟರನ್ನು ಮಟ್ಟ ಹಾಕುವಲ್ಲಿ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಜನಪರವಾಗಿ ಬಳಸಿ, ‘ಲೋಕಾಯುಕ್ತರು ಹೀಗೂ ಕೆಲಸ ಮಾಡಬಹುದು’ ಎಂದು ಸಾಧಿಸಿ ತೋರಿಸಿದ್ದ ನ್ಯಾಯಮೂರ್ತಿ ಎನ್.ವೆಂಕಟಾಚಲ (90) ಅವರು 2019 ಅಕ್ಟೋಬರ್ 30ರ (90) ಬುಧವಾರ ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅವರು ಅಗಲಿದರು..

ನ್ಯಾಯಮೂರ್ತಿ ವೆಂಕಟಾಚಲ ಅವರು ಲೋಕಾಯುಕ್ತರಾಗಿ ನೇಮಕಗೊಂಡ ನಂತರವೇ ಸರ್ಕಾರಿ ಅಧಿಕಾರಿಗಳಲ್ಲಿ ಲೋಕಾಯುಕ್ತ ಭಯವನ್ನು ಉಂಟು ಮಾಡಿತು. ಲೋಕಾಯುಕ್ತ ಸಂಸ್ಥೆಯಿಂದ ತಮ್ಮ ನೋವುಗಳಿಗೆ ಪರಿಹಾರ ಸಿಗುತ್ತದೆ ಎಂಬ ಭಾವನೆ ಜನರಲ್ಲಿಯೂ ಬಂದಿತ್ತು.

‘ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರ ಹಿಂಭಾಗದ  ಲಕ್ಷ್ಮಿ ದೇವಾಲಯದ ಬಳಿಯ ತಮ್ಮ ನಿವಾಸದಲ್ಲಿದ್ದ ಅವರಿಗೆ ಬೆಳಿಗ್ಗೆ 5.45ಕ್ಕೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಒಬ್ಬ ಪುತ್ರ ಮತ್ತು ಪುತ್ರಿ ಸದ್ಯ ಅಮೆರಿಕದಲ್ಲಿದ್ದು ಅವರು ಬಂದ ನಂತರ 2019 ಅಕ್ಟೋಬರ್ 31ರ ಗುರುವಾರ ಅಂತ್ಯಕ್ರಿಯೆ ‌ನಡೆಯಲಿದೆ’ ಎಂದು ಕುಟುಂಬದ ಮೂಲಗಳು ತಿಳಿಸಿದವು.

ಹೆಂಡತಿ ಅನುಶ್ರೀಯಾ, ಪುತ್ರರಾದ ಶೇಷಾಚಲ, ವೇದಾಚಲ (ಇಬ್ಬರೂ ವಕೀಲರು) ಮತ್ತು ಅರ್ಜುನಾಚಲ (ಸಾಫ್ಟ್‌ವೇರ್ ಡೆವಲಪರ್) ಮತ್ತು ಮಗಳು ಅರುಣಾಚಲ (ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರು) ಇದ್ದಾರೆ. ಮನೆಯಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೊಮ್ಮಗ ವರುಣ್ ತಿಳಿಸಿದರು.

ಪರಿಚಯ: ನಂಜೇಗೌಡ ವೆಂಕಟಾಚಲ ಅವರು ಜುಲೈ 3, 1930ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ಮಿಟ್ಟೂರಿನ ಕೃಷಿ ಕುಟುಂಬದಲ್ಲಿ ಜನಿಸಿದರು‌.

ಮುಳಬಾಗಿಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪೂರೈಸಿದರು. ಕೋಲಾರದಲ್ಲಿ ಪ್ರೌಢಶಾಲೆ ಮತ್ತು ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಮತ್ತು ಕಾನೂನು ಪದವಿ ಪಡೆದರು.

ಸನ್ನದು: ಮೈಸೂರು (ಈಗ ಕರ್ನಾಟಕ) ಹೈಕೋರ್ಟಿನಲ್ಲಿ ನವೆಂಬರ್ 16, 1965ರಂದು ವಕೀಲರಾಗಿ ಸನ್ನದು ನೋಂದಣಿ ಮಾಡಿಸಿದರು.

ವೃತ್ತಿ ಜೀವನ: ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ಅವರು, ಸಿವಿಲ್, ಕ್ರಿಮಿನಲ್ ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ಹೆಚ್ಚಿನ ಪರಿಣತಿ ಪಡೆದುಕೊಂಡರು. 1963ರಿಂದ 1973ರವರೆಗೆ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದ ಕಾನೂನು ಸಲಹೆಗಾರರಾಗಿದ್ದರು‌. 1973ರಿಂದ 1977ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಸಲಹೆಗಾರರೂ ಆಗಿದ್ದರು.

ಹೈಕೋರ್ಟ್ ನ್ಯಾಯಮೂರ್ತಿ: ನವೆಂಬರ್ 28, 1977ರಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 1992ರ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಸುಪ್ರೀಂಕೋರ್ಟ್‌ಗೆ ಪದೋನ್ನತಿ: ಜುಲೈ 1, 1992ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿ, ಜುಲೈ 2, 1995ರಂದು ನಿವೃತ್ತರಾದರು.

ಕರ್ನಾಟಕ ಲೋಕಾಯುಕ್ತ: ಜುಲೈ 2, 2001ರಂದು ಕರ್ನಾಟಕ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಅವರು ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನರಾಗಿದ್ದರು. ಈ ಕಾರಣಕ್ಕಾಗಿಯೇ ಜನಮಾನಸದಲ್ಲಿ ಅಪಾರ ಜನಪ್ರಿಯತೆ ಹೊಂದಿದ್ದರು. ಇವರ ಕಾರ್ಯಶೈಲಿಯ ಕುರಿತಂತೆ ‘ಲಂಚ ಸಾಮ್ರಾಜ್ಯ’ ಎಂಬ ಚಲನಚಿತ್ರವನ್ನೂ ನಿರ್ಮಿಸಲಾಗಿತ್ತು.

‘ಬ್ರಿಟನ್‌ನಲ್ಲಿ ಅನುಸರಿಸುತ್ತಿರುವ ಭ್ರಷ್ಟಾಚಾರ ತಡೆ ಕಾನೂನನ್ನು ಭಾರತದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರಿಂದ ಮಾತ್ರ ಪ್ರಧಾನಿ ಕಚೇರಿಯಿಂದ ಹಿಡಿದು ಕೆಳಹಂತದವರೆಗಿನ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಸಾಧ್ಯ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ವೆಂಕಟಾಚಲ ಆಗಾಗ ಹೇಳುತ್ತಿದ್ದರು.

`ಬ್ರಿಟನ್‌ನಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗುವ ಪ್ರಧಾನಿಯನ್ನೂ ಸ್ವತಂತ್ರ ತನಿಖಾ ಸಂಸ್ಥೆಗಳು ತನಿಖೆಗೊಳಪಡಿಸಲು ಅವಕಾಶವಿದೆ. ಅಲ್ಲದೆ, ಪ್ರತ್ಯೇಕ ನ್ಯಾಯಾಲಯಗಳು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸುತ್ತವೆ. ಇದರಿಂದ ಯಾರ ವಿರುದ್ಧವೇ ಆಗಲಿ ವಿಚಾರಣೆ ನಡೆಸಲು ಸರ್ಕಾರದ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಈ ಕಾನೂನಿನ ಪ್ರಕಾರ ಲಂಚ ಸ್ವೀಕಾರಕ್ಕೆ ಪ್ರಚೋದಿಸುವುದು, ಆಹ್ವಾನಿಸುವುದು ಹಾಗೂ ಲಂಚ ಸ್ವೀಕರಿಸುವುದು ಕೂಡ ಅಪರಾಧ. ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭ್ರಷ್ಟಾಚಾರ ತಡೆಗೆ ಇಂತಹ ಕಾನೂನು ಸಹಕಾರಿಯಾಗಲಿದೆ’ ಎಂಬುದು ಅವರ ನಿಲುವಾಗಿತ್ತು.

October 30, 2019 Posted by | ಕರ್ನಾಟಕ, ಬೆಂಗಳೂರು, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, Spardha | | Leave a comment

ಭಯೋತ್ಪಾದನೆ ವಿರುದ್ಧ ಹೋರಾಟ:  ಭಾರತಕ್ಕೆ ಯುರೋಪ್ ಸಂಸದರ ಬೆಂಬಲ

30 eu law makers at kashmir
ಶ್ರೀನಗರ
: ಜಾಗತಿಕ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಐರೋಪ್ಯ ಒಕ್ಕೂಟದ ಸಂಸದರ ತಂಡ  2019 ಅಕ್ಟೋಬರ್ 30ರ ಬುಧವಾರ ಹೇಳಿತು.

ಜಮ್ಮು–ಕಾಶ್ಮೀರಕ್ಕೆ ಈದಿನ ಭೇಟಿ ನೀಡಿದ ಬಳಿಕ ಆಯ್ದ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ತಂಡದ ಸದಸ್ಯರು, ‘ನಾವು ಸುದೀರ್ಘ ವರ್ಷಗಳ ಹೋರಾಟದ ಬಳಿಕ ಶಾಂತಿ ನೆಲೆಸಿದ ಯುರೋಪ್‌ಗೆ ಸೇರಿದವರು. ಭಾರತವು ವಿಶ್ವದಲ್ಲೇ ಅತ್ಯಂತ ಶಾಂತಿಯುತ ರಾಷ್ಟ್ರವಾಗುವುದನ್ನು ಕಾಣಲು ನಾವು ಬಯಸುತ್ತೇವೆ. ಇದಕ್ಕಾಗಿ ನಾವು ಜಾಗತಿಕ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದ ಪರ ನಿಲ್ಲಲಿದ್ದೇವೆ. ಈ ಭೇಟಿಯು ಇಲ್ಲಿನ ವಾಸ್ತವದ ಅರಿವು ಮೂಡಿಸಿದೆ’ ಎಂದು ಹೇಳಿದರು.

‘ನಾವು ಭಾರತದ ನಾಗರಿಕರು ದೇಶದ ಇತರ ಎಲ್ಲ ನಾಗರಿಕರಂತೆ ಇರಲು ಬಯಸುತ್ತೇವೆ. ದೇಶದ ಇತರ ಪ್ರದೇಶಗಳಂತೆಯೇ ನಮ್ಮಲ್ಲೂ ಅಭಿವೃದ್ಧಿಯಾಗುವುದನ್ನು ಆಶಿಸುತ್ತೇವೆ ಎಂಬುದಾಗಿ ಸ್ಥಳೀಯರು ನಮ್ಮ ಬಳಿ ಹೇಳಿದ್ದಾರೆ’ ಎಂದು ಸಂಸದರೊಬ್ಬರು ತಿಳಿಸಿದರು.

ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯ ರದ್ದತಿಯು ಭಾರತದ ಆಂತರಿಕ ವಿಚಾರ ಎಂದೂ ತಂಡ ಹೇಳಿತು.

ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದ ಸಂಸದರ ನಿಯೋಗವನ್ನು ಬಿಗಿ ಭದ್ರತೆಯಲ್ಲಿ ದಾಲ್‌ ಸರೋವರ ಸೇರಿದಂತೆ ಹಲವು ಪ್ರದೇಶಗಳಿಗೆ ಕರೆದೊಯ್ಯಲಾಯಿತು.

October 30, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha, Terror | | Leave a comment

ಜಮ್ಮು-ಕಾಶ್ಮೀರದ ಕುಲಗಮ್​ ಜಿಲ್ಲೆಯಲ್ಲಿ ಉಗ್ರರ ದಾಳಿ: 5 ಕಾಶ್ಮೀರೇತರ ಕಾರ್ಮಿಕರ ಹತ್ಯೆ

29 Kashmir labourers killed
ಜಮ್ಮು
: ಕಣಿವೆ ರಾಜ್ಯದಲ್ಲಿ ಉಗ್ರರ ಅಟ್ಟಹಾಸ ಅತಿಯಾಗಿದ್ದು, 2019 ಅಕ್ಟೋಬರ್ 29ರ ಮಂಗಳವಾರ ಸಂಜೆ ಜಮ್ಮು ಕಾಶ್ಮೀರದ ಕುಲಗಮ್  ಜಿಲ್ಲೆಯಲ್ಲಿ ಉಗ್ರರ ದಾಳಿಗೆ 5 ಮಂದಿ ಕಾಶ್ಮೀರೇತರ ಕಾರ್ಮಿಕರು ಸಾವನ್ನಪ್ಪಿದರು.  ದಾಳಿಯಲ್ಲಿ ಓರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ಧಾನೆ ಎಂದು ಪೊಲೀಸರು ತಿಳಿಸಿದರು.

ಗಾಯಾಳುವನ್ನು ಪಶ್ಚಿಮ ಬಂಗಾಳ ಮೂಲದ ದಿನಗೂಲಿ ಕಾರ್ಮಿಕ ಜಹುರುದ್ದೀನ್​ ಎಂದು ಗುರುತಿಸಲಾಗಿದ್ದು, ದಾಳಿ ನಡೆದಾಗ ಈತ ಕತ್ರಾಸು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಯಿತು.

ಐರೋಪ್ಯ  ಒಕ್ಕೂಟದ ಶಾಸನಕರ್ತರ ತಂಡವು ಜಮ್ಮು ಕಾಶ್ಮೀರಕ್ಕೆ ಆಗಮಿಸಿದ ದಿನವೇ ಉಗ್ರರ ದಾಳಿಗಳು ನಡೆದವು. ಈದಿನ ಸಂಜೆ ಪುಲ್ವಾಮಾದಲ್ಲಿ ಪರೀಕ್ಷಾ ಕೇಂದ್ರದ ಹೊರಗೆ ಉಗ್ರರು ಭದ್ರತಾ ಪಡೆ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದರು. ಯಾವುದೇ ಸಾವು-ನೋವು ಸಂಭವಿಸಿರಲಿಲ್ಲ.

ಜಮ್ಮು ಕಾಶ್ಮೀರದಲ್ಲಿ ಆಗಸ್ಟ್​  5ರಂದು 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿತ್ತು. ಅಂದಿನಿಂದ ಉಗ್ರರು ಲಾರಿ ಚಾಲಕರು, ಕಾರ್ಮಿಕರು ಮತ್ತು ವ್ಯಾಪಾರಿಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದಾರೆ. ಅದರಲ್ಲೂ ಹೊರರಾಜ್ಯಗಳಿಂದ ಕಣಿವೆಗೆ ಬಂದಿರುವ ಕಾಶ್ಮೀರೇತರರ ಮೇಲೆ ದಾಳಿ ನಡೆಸುತ್ತಿದ್ಧಾರೆ.

ಹಿಂದಿನ ದಿನ  ಉಗ್ರರು ಉಧಮ್​ಪುರ ಜಿಲ್ಲೆ ಮೂಲದ ಟ್ರಕ್​ ಚಾಲಕನನ್ನು ಅನಂತ​ನಾಗ್​ ಜಿಲ್ಲೆಯಲ್ಲಿ ಹತ್ಯೆ ಮಾಡಿದ್ದರು. ಅ.24ರಂದು ಉಗ್ರರು ಶೋಪಿಯಾನ್​ ಜಿಲ್ಲೆಯಲ್ಲಿ ಇಬ್ಬರು ಕಾಶ್ಮೀರೇತರ ಟ್ರಕ್​ ಚಾಲಕರನ್ನು ಕೊಂದಿದ್ದರು.

October 29, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha, Terror | , , , | Leave a comment

ಜಮ್ಮುವಿನಲ್ಲಿ ಟ್ರಕ್​ ಚಾಲಕನ ಹತ್ಯೆ:  ಉಗ್ರನ ಸದೆಬಡಿದ ಸೇನೆ

29 terrorist-killed
ಜಮ್ಮು
:  ದಕ್ಷಿಣ ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಬಿಜ್​​ಬಿಹರಾ ಪ್ರದೇಶದಲ್ಲಿ 2019 ಅಕ್ಟೋಬರ್ 28ರ ಸೋಮವಾರ ಸಂಜೆ ಟ್ರಕ್​ ಚಾಲಕನನ್ನು ಹತ್ಯೆ ಮಾಡಿದ್ದ ಉಗ್ರನನ್ನು 2019 ಅಕ್ಟೋಬರ್ 29ರ ಮಂಗಳವಾರ  ನಡೆದ ಗುಂಡಿನ ಘರ್ಷಣೆಯಲ್ಲಿ ಸದೆಬಡಿಯಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದರು.

ಹತ್ಯೆಯಾದ ಉಗ್ರನ ಬಗ್ಗೆ ಈವರೆಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಬಂದೂಕುಧಾರಿಯಾಗಿದ್ದ ಉಗ್ರರು ಇಬ್ಬರು ಟ್ರಕ್ ಚಾಲಕರನ್ನು ಗುರಿಯಾಗಿಸಿದ್ದರು. ಅವರಲ್ಲಿ ಉಧಮ್​ಪುರದ ನಾರಾಯಣ್​ ದತ್​ ಉಗ್ರರ ದಾಳಿಗೆ ಬಲಿಯಾಗಿದ್ದು, ಮತ್ತೊಬ್ಬ ಟ್ರಕ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದ.

ಕಾಶ್ಮೀರೇತರರನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದು, ಕಳೆದೆರಡು ವಾರದಲ್ಲಿ ಉಗ್ರರ ದಾಳಿಗೆ ಒಟ್ಟು 6 ಟ್ರಕ್​ ಚಾಲಕರು ಬಲಿಯಾಗಿದ್ದಾರೆ. ಹಿಂದಿನ ದಿನ ಘಟನೆ ನಡೆದ ಬಳಿಕ ಸ್ಥಳದಲ್ಲಿ ಪೊಲೀಸರು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಹಲವು ಗಂಟೆಗಳ ಕಾರ್ಯಾಚರಣೆ ಬಳಿಕ ಓರ್ವ ಉಗ್ರನನ್ನು ಹೊಡೆದುರುಳಿಸಲಾಯಿತು.

ನಾರಾಯಣ್​ ಸೋಮವಾರ ಸ್ಥಳೀಯ ಮಾರ್ಕೆಟ್​ನಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಹಣ್ಣಿನ ಮಾರ್ಕೆಟ್ಟಿಗೆ  ಸೇಬು ಹಣ್ಣುಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಉಗ್ರರು ಆತನನ್ನು ಹತ್ಯೆ ಮಾಡಿದ್ದರು.

ಹತ್ಯೆಯಾದ ಟ್ರಕ್​ ಚಾಲಕ ನಾರಾಯಣ್ ದತ್​ ಇಬ್ಬರು ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಚಾಲಕನ ಮೃತದೇಹವನ್ನು ಅವರ ಮನೆಗೆ ಕಳುಹಿಸಲಾಗಿತ್ತು.

October 29, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha, Terror | , | Leave a comment

ಚಿಕ್ಕಮಗಳೂರಿನ ಇಬ್ಬರು ಸೇರಿ ಒಟ್ಟು ಮೂವರು ನಕ್ಸಲರ ಹತ್ಯೆ

29 maoist-encounter kerala
ಪಾಲಕ್ಕಾಡ್
: ಓರ್ವ ಮಹಿಳೆ ಸೇರಿದಂತೆ ಒಟ್ಟು ಮೂವರು ನಕ್ಸಲರನ್ನು ಗುಂಡಿನ ಘರ್ಷಣೆಯಲ್ಲಿ  ಕೊಂದ ಘಟನೆ ಕೇರಳದ ಪಾಲಕ್ಕಡ್ ಜಿಲ್ಲೆಯ ಮಂಜಕಟ್ಟಿ ಬೆಟ್ಟದಲ್ಲಿ ಘಟಿಸಿತು. ಗುಂಡಿನ ದಾಳಿಯಲ್ಲಿ ಹತರಾದ ನಕ್ಸಲರನ್ನು ಕೇರಳದಲ್ಲಿ ಸಿಪಿಐ (ಮಾಕ್ರ್ಸಿಸ್ಟ್) ಪಕ್ಷದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಾನಿದಳಂ ತಂಡದ ಸದಸ್ಯರಾದ ಶ್ರೀಮತಿ, ಎ.ಎಸ್.ಸುರೇಶ್ ಹಾಗೂ ಕಾರ್ತಿ ಎಂದು ಗುರುತಿಸಲಾಗಿದೆ..

ನಕ್ಸಲ್ ನಿಗ್ರಹ ಪಡೆ ಮತ್ತು ಥಂಡರ್ ಬೋಲ್ಟ್ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಈ ಗುಂಡಿನ ಘರ್ಷಣೆ ನಡೆಸಲಾಯಿತು. ನಾಲ್ವರು ನಕ್ಸಲರು ಪರಾರಿಯಾಗಿದ್ದಾರೆಂದು ತಿಳಿದುಬಂದಿತು.

ಘಟನೆಯಲ್ಲಿ ಮೃತರಾದವರಲ್ಲಿ ಇಬ್ಬರು ರಾಜ್ಯದ ಚಿಕ್ಕಮಗಳೂರಿನವರು ಎಂದು ಹೇಳಲಾಯಿತು. ಶ್ರೀಮತಿ ಮತ್ತು ಸುರೇಶ್ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದು ಹಲವಾರು ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಮತ್ತೋರ್ವ ನಕ್ಸಲ್ ಕಾರ್ತಿ ತಮಿಳುನಾಡು ಮೂಲದವನು ಎಂದು ಹೇಳಲಾಯಿತು. ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದ ಶ್ರೀಮತಿ 2008ರಿಂದ ನಕ್ಸಲ್ ಚಟುವಟಿಕೆಯಲ್ಲಿದ್ದು, ಆಕೆಯ ಮೇಲೆ 12 ಪ್ರಕರಣಗಳು ದಾಖಲಾಗಿದ್ದವು. ಸುರೇಶ್ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನಾಗಿದ್ದು, 2004ರಲ್ಲಿ ನಕ್ಸಲ್ ಗುಂಪಿಗೆ ಸೇರಿದ್ದ.

ಪಾಲಕ್ಕಾಡಿನಲ್ಲಿ 2019 ಅಕ್ಟೋಬರ್ 28ರ ಸೋಮವಾರ ಗುಂಡೇಟಿಗೆ ಬಲಿಯಾದ ಸುರೇಶ್ ಮೇಲೆ 21 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ವರದಿಯಾಯಿತು. ಮಲೆನಾಡಿನಲ್ಲಿ ನಕ್ಸಲ್ ಚಳವಳಿ ವಿರುದ್ಧ ಪೊಲೀಸರ ಕಾರ್ಯಾಚರಣೆ ಹೆಚ್ಚಾಗಿ, ನಕ್ಸಲ್ ಚಳವಳಿಯಲ್ಲಿದ್ದ ಸದಸ್ಯರು ಪೊಲೀಸರ ಗುಂಡಿಗೆ ಬಲಿಯಾಗಿದ್ದರಿಂದ ಹಾಗೂ ಕೆಲವು ನಕ್ಸಲರು ಸರ್ಕಾರದ ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಮುಖ್ಯವಾಹಿನಿಗೆ ಬಂದಿದ್ದರಿಂದ ಅಳಿದುಳಿದ ನಕ್ಸಲರು ಮಲೆನಾಡಿನಿಂದ ಹೊರ ರಾಜ್ಯಗಳ ನಕ್ಸಲ್ ಗುಂಪು ಸೇರಲಾರಂಭಿಸಿದ್ದರು.

ಈ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುರೇಶ್ ಹಾಗೂ ಶೃಂಗೇರಿ ತಾಲೂಕಿ ಶ್ರೀಮತಿ ಕೂಡ ಕೇರಳ ರಾಜ್ಯದಲ್ಲಿನ ನಕ್ಸಲ್ ಗುಂಪು ಸೇರಿದ್ದರೆಂದು ಹೇಳಲಾಗಿದ್ದು, ಕಳೆದ ಎರಡು ವರ್ಷಗಳಿಂದ ಇವರು ಕೇರಳದಲ್ಲಿ ನಕ್ಸಲ್ ಚಳವಳಿಯಲ್ಲಿ ಸಕ್ರಿಯರಾಗಿದ್ದರೆಂದು ಹೇಳಲಾಗಿದೆ.

October 29, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha, Terror | | Leave a comment

ತಮಿಳು ನಟ, ಮಿಮಿಕ್ರಿ ಕಲಾವಿದ ಮಾನೋ ಅಪಘಾತದಿಂದ ನಿಧನ

29 Mano-Actor
ಚೆನ್ನೈ
: ತಮಿಳು ನಟ, ಹೆಸರಾಂತ ಮಿಮಿಕ್ರಿ ಕಲಾವಿದ ಮತ್ತು ಟಿವಿ ನಿರೂಪಕ ಮಾನೋ  2019 ಅಕ್ಟೋಬರ್ 29ರ ಮಂಗಳವಾರ ರಸ್ತೆ ಅಪಘಾತಕ್ಕೆ ಬಲಿಯಾದರು.

ಮಾನೋ ಮತ್ತು ಅವರ ಪತ್ನಿ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ ಅಪ್ಪಳಿಸಿದ ಪರಿಣಾಮ ಮಾನೋ ಅವರು ಸ್ಥಳದಲ್ಲೇ ಮೃತರಾದರು. ಮಾನೋ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ರಾಮಚಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಯ ಸ್ಥಿತಿ ಗಂಭೀರವಾಗಿದೆ.

2010ರಲ್ಲಿ ತೆರೆಕಂಡಿದ್ದ ತಮಿಳು ಚಿತ್ರ ಪುಝಲ್ ನಲ್ಲಿ ಗಮನಾರ್ಹ ನಟನೆಯನ್ನು ಮಾಡಿದ್ದರು. ಬಳಿಕ ಅವರು ಟಿವಿ ನಿರೂಪಕರಾಗಿ, ರಿಯಾಲಿಟಿ ಶೋಗಳ ಸ್ಪರ್ಧಿಯಾಗಿ, ಡ್ಯಾನ್ಸರ್ ಮತ್ತು ಮಿಮಿಕ್ರಿ ಕಲಾವಿದರಾಗಿಯೂ ಗಮನ ಸೆಳೆದಿದ್ದರು.

October 29, 2019 Posted by | Accidents, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha | | Leave a comment

ನಿಮಗೆ ಗೊತ್ತಾ? ಇದು ಸಾಮಾನ್ಯ ನಾಯಿಯಲ್ಲ..!

29 dog that helped to kill bagdadi 1
ವಾಷಿಂಗ್ಟನ್:
ನಿಮಗೆ ಗೊತ್ತಾ ? ಈ ಚಿತ್ರದಲ್ಲಿಇರುವುದು ಸಾಮಾನ್ಯ ನಾಯಿಯಲ್ಲ. ಈ ನಾಯಿಯ ಚಿತ್ರ ಟ್ವಿಟ್ಟರಿನಲ್ಲಿ ಲಕ್ಷಾಂತರ ಮಂದಿಯ ಗಮನ ಸೆಳೆದಿದೆ.  ಈ ನಾಯಿಯ ಚಿತ್ರವಿದ್ದ ಟ್ವೀಟ್‌ಗೆ 37 ಸಾವಿರ ಮಂದಿ ಕಾಮೆಂಟ್ ಬರೆದಿದ್ದಾರೆ, 91 ಸಾವಿರ ಮಂದಿ ಇದನ್ನು ರಿಟ್ವೀಟ್ ಮಾಡಿದ್ದಾರೆ, 3.8 ಲಕ್ಷ ಮಂದಿ ‘ಲೈಕ್’ ಕೊಟ್ಟಿದ್ದಾರೆ. ವಿಶ್ವದ ಹಲವು ದೇಶಗಳಲ್ಲಿ ಈ  ಟ್ವೀಟ್ ಜನರ ಗಮನ ಸೆಳೆದಿದೆ.

ಈ ನಾಯಿಯ ಚಿತ್ರ ಟ್ವಿಟ್ಟರಿನಲ್ಲಿ ‘ವೈರಲ್’ ಆಗುತ್ತಿದ್ದಂತೆಯೇ ಹಲವು ತಮ್ಮ ಮನೆಗಳಲ್ಲಿನ ನಾಯಿಗಳ ಚಿತ್ರವನ್ನೂ ಇದೇ ರೀತಿಯಾಗಿ ಬರೆದು ಟ್ವೀಟ್ ಮಾಡುತ್ತಿದ್ದಾರೆ.

ಈ ನಾಯಿಯ ಚಿತ್ರವನ್ನು ಮೊತ್ತ ಮೊದಲಿಗೆ ಟ್ವೀಟ್ ಮಾಡಿದವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

‘ಈ ನಾಯಿಯ ಹೆಸರನ್ನು ಹೇಳಲು ಸಾಧ್ಯವಿಲ್ಲ. ಆದರೆ ಇದು ಅತ್ಯದ್ಭುತ ಶ್ವಾನ. ವಿಶ್ವಕ್ಕೆ ಇದು ಕೊಟ್ಟಿರುವ ಕೊಡುಗೆ ಮಹತ್ತರವಾದದ್ದು’ ಎಂದು ಟ್ರಂಪ್ ಅವರು ಟ್ವೀಟ್ ಮಾಡಿದ ಬೆನ್ನಲ್ಲೇ  ಟ್ವೀಟಿಗರು ಇದನ್ನು ರಿಟ್ವೀಟ್, ಲೈಕ್ ಮಾಡುವ ಮೂಲಕ ಮತ್ತು ಅದರ ಬಗ್ಗೆ ಕಾಮೆಂಟ್ ಬರೆಯುವ ಮೂಲಕ ಅದನ್ನು ವೈರಲ್ ಮಾಡಿದರು.

ಹೌದು, ಟ್ರಂಪ್ ಹೇಳಿರುವಂತೆ ಇದು ಸಾಮಾನ್ಯ ನಾಯಿಯಲ್ಲ. ಅಕ್ಟೋಬರ್ 26ರ ಶನಿವಾರ ಅಮೆರಿಕದ ಸಿರಿಯಾದಲ್ಲಿ ಕುಖ್ಯಾತ ಐಸಿಸ್ ಉಗ್ರ ಸಂಘಟನೆಯ ಸ್ಥಾಪಕ ಅಬುಬಕರ್‌ ಅಲ್ ಬಾಗ್ದಾದಿ ಹತ್ಯೆ ಕಾರ್ಯಾಚರಣೆ ನಡೆಸಿದರಲ್ಲ,  ಆ ಕಾರ್ಯಾಚರಣೆಯಲ್ಲಿ ಈ ನಾಯಿ ಪಾಲ್ಗೊಂಡಿತ್ತು. ಪಾಲ್ಗೊಂಡಿತ್ತು ಎನ್ನುವುದಕ್ಕಿಂತಲೂ ಹೆಚ್ಚಾಗಿ ಅಮೆರಿಕದ ಯೋಧರ ಕೈಯಿಂದ ತಪ್ಪಿಸಿಕೊಳ್ಳಲು ಸುರಂಗದೊಳಕ್ಕೆ ನುಗ್ಗಿದ್ದ ಬಗ್ದಾದಿಯನ್ನು ಬೆನ್ನಟ್ಟಿ ಸುರಂಗದ ಇನ್ನೊಂದು ಬದಿಯಿಂದ ತಪ್ಪಿಸಿಕೊಂಡು ಪರಾರಿಯಾಗದಂತೆ ತಡೆದಿತ್ತು.

ಒಂದೆಡೆ ನಾಯಿಯ ಆರ್ಭಟ, ಮತ್ತೊಂದೆಡೆ ಮುನ್ನುಗ್ಗಿ ಬರುತ್ತಿದ್ದ ಅಮೆರಿಕದ ಯೋಧರು ಮಧ್ಯೆ ಸಿಕ್ಕಿಹಾಕಿಕೊಂಡ ಬಾಗ್ದಾದಿ  ತಾನು ಧರಿಸಿದ ಉಡುಪಿಗೇ ಕಟ್ಟಿಕೊಂಡಿದ್ದ ಬಾಂಬ್ ಸ್ಫೋಟಿಸಿ ತಾನು ಸಾಯುವುದರ ಜೊತೆಗೆ ತನ್ನ ಮೂವರು ಮಕ್ಕಳನ್ನೂ ಬಲಿತೆಗೆದುಕೊಂಡಿದ್ದ.

ಸ್ಫೋಟದಲ್ಲಿ ಈ ನಾಯಿ ಕೂಡಾ ಗಾಯಗೊಂಡಿತ್ತು. ಆದರೆ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದು ಪುನಃ ಸೇನೆಯ ಸೇವೆಗೆ ಸಜ್ಜಾಗಿದೆ. ಪ್ರತಿಷ್ಠಿತ ಡೆಲ್ಟಾ ತುಕಡಿಯ ಈ ಶ್ವಾನದ ಹೆಸರನ್ನು ಭದ್ರತೆಯ ದೃಷ್ಟಿಯಿಂದ ಹೇಳಲು ಸಾಧ್ಯವಿಲ್ಲ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.

ಕೆಲವೇ ಗಂಟೆಗಳಲ್ಲಿ ಈ ಟ್ವೀಟ್ ವಿಶ್ವಾದ್ಯಂತ ವೈರಲ್ ಆಯಿತು.

ಕಾಯ್ಲಾ ಮುಲ್ಲರ್’ ಹೆಸರಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಈ  ನಾಯಿಯ  ಚಿತ್ರ ಮತ್ತು ವಿವರವನ್ನು ಸೇನಾ ಕಚೇರಿ ಗೌಪ್ಯವಾಗಿ ಇರಿಸಿತ್ತು. ಆದರೆ ಜನರು ನಾಯಿಯ ಕುರಿತು ತಿಳಿದುಕೊಳ್ಳಲು ಹೆಚ್ಚು ಆಸಕ್ತರಾಗಿದ್ದರಿಂದ ಅಮೇರಿಕಾದ ಅಧ್ಯಕ್ಷ ಟ್ರಂಪ್ ವಿವರವನ್ನು ಬಹಿರಂಗಪಡಿಸಿದರು.

ಇದು ಬೆಲ್ಜಿಯನ್ ಮಾಲಿನೊಯ್ಸ್ ತಳಿಯ ಶ್ವಾನವಾಗಿದ್ದುಇದರ ಹೆಸರನ್ನು ಬಹಿರಂಗಪಡಿಸಿದರೆ ಸೇನಾ ತುಕುಡಿಯ ಇತರ ಸದಸ್ಯರು ಗುರುತು ಕೂಡ ಪತ್ತೆಯಾಗುವ ಹಿನ್ನೆಲೆಯಲ್ಲಿ ಇದರ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.

ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ನಾಯಕ ಅಬುಬಕರ್‌ ಅಲ್ ಬಾಗ್ದಾದಿಯನ್ನು ಬೆನ್ನಟ್ಟಿ, ಸುರಂಗವೊಂದರಲ್ಲಿ ಅವನು ಹಿಂದೆ ಬರದಂತೆ ಧೈರ್ಯದಿಂದ ಅಡ್ಡಗಟ್ಟಿದ್ದ ಅಮೆರಿಕ ಸೇನೆಯ ಈ ಪ್ರತಿಷ್ಠಿತ ಡೆಲ್ಟಾ ತುಕಡಿಯ ನಾಯಿ ಇದೀಗ ವಿಶ್ವದ ಕಣ್ಮಣಿಯಾಗಿದೆ.

ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾಯಿಯ ಚಿತ್ರ ಟ್ವೀಟ್ ಮಾಡಿ, ‘ಶಹಬ್ಬಾಸ್’ ಎಂದು ಬೆನ್ನುತಟ್ಟಿದ್ದಾರೆ. ‘ದಾಳಿ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದ ನಾಯಿಯ ಚಿತ್ರ ಪತ್ತೆಹಚ್ಚಿದ್ದೇವೆ (ಅದರ ಹೆಸರು ತಿಳಿಸಲು ಆಗದು)’ ಎಂದು ಟ್ರಂಪ್‌ ಒಕ್ಕಣೆ ಬರೆದರು.

ಟ್ರಂಪ್ ಅವರ ಈ ಟ್ವೀಟ್‌ಗೆ 37 ಸಾವಿರ ಮಂದಿ ಕಾಮೆಂಟ್, 91 ಸಾವಿರ ಮಂದಿ ರಿಟ್ವೀಟ್ ಮಾಡಿದ್ದಾರೆ, 3.8 ಲಕ್ಷ ಮಂದಿ ಲೈಕ್ ಕೊಟ್ಟಿದ್ದಾರೆ. ವಿಶ್ವದ ಹಲವು ದೇಶಗಳಲ್ಲಿ ಟ್ರಂಪ್ ಅವರ ಟ್ವೀಟ್ ಜನರ ಗಮನ ಸೆಳೆಯಿತು.

‘ಅಮೆರಿಕ ಸೇನೆಯ 75ನೇ ರೇಂಜರ್‌ ರೆಜಿಮೆಂಟ್‌ನ ಡೆಲ್ಟಾ ಫೋರ್ಸ್‌ನ ಆಯ್ದ ಕೆಲ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದ ನಮ್ಮ ನಾಯಿ, ಸುಂದರ ನಾಯಿ, ಬುದ್ಧಿವಂತ ನಾಯಿ ಗಾಯಗೊಂಡಿತ್ತು. ಅದನ್ನು ವಾಪಸ್ ಕರೆತರಲಾಗಿದೆ’ ಎಂಬ ಟ್ರಂಪ್ ಹೇಳಿಕೆಯನ್ನು ‘ವಾಷಿಂಗ್ಟನ್‌ ಪೋಸ್ಟ್‌’ ವರದಿ ಮಾಡಿತ್ತು.

ಕಾರ್ಯಾಚರಣೆಯ ನಂತರ ದಾಳಿ ನಡೆಸಿದ್ದ ನಾಯಿಯ ಚಿತ್ರ ಮತ್ತು ವಿವರವನ್ನು ಅಮೆರಿಕದ ಸೇನಾ ಕಚೇರಿ ಗೌಪ್ಯವಾಗಿ ಇರಿಸಿತ್ತು. ಆದರೆ ದೇಶದ ಅರ್ಧದಷ್ಟು ಮನೆಗಳಲ್ಲಿ ನಾಯಿ ಸಾಕಿರುವ ಶ್ವಾನಪ್ರಿಯ ದೇಶ ಅಮೆರಿಕ. ಜನರ ಆಸಕ್ತಿ ಎದುರು ಈ ಗೌಪ್ಯತೆ ಹೆಚ್ಚು ಕಾಲ ಉಳಿಯಲಿಲ್ಲ. ಟ್ರಂಪ್ ಅವರು ಬೆಲ್ಜಿಯನ್ ಮಾಲಿನೊಯ್ಸ್‌ ತಳಿಯ ನಾಯಿಯ ಚಿತ್ರ ಟ್ವೀಟ್ ಮಾಡುವುದರೊಂದಿಗೆ ಜನರ ನಿರೀಕ್ಷೆ ತಣಿಸಿದರು.

ಈ ಟ್ವೀಟ್‌ ಸಹ ಟ್ರಂಪ್ ಅವರ ವಿರುದ್ಧ ಮಂಡಿಸಲಾಗಿರುವ ಆರೋಪಗಳ ಹಿನ್ನೆಲೆಯಲ್ಲಿ ವ್ಯಾಪಕ ಚರ್ಚೆಗೆ, ಟೀಕೆ, ಸಮರ್ಥನೆ, ವಾದ ಮತ್ತು ಪ್ರತಿವಾದಗಳಿಗೆ ಗುರಿಯಾಯಿತು. ಕೆಲವರಂತೂ ‘ಟ್ರಂಪ್ ಎಂದೂ ನಾಯಿ ಸಾಕಿಲ್ಲ. ಏಕೆಂದರೆ ಅವರಿಗೆ ತನ್ನನ್ನು ಹೊರತುಪಡಿಸಿ ಬೇರೆ ಯಾವುದನ್ನೂ, ಯಾರನ್ನೂ ಪ್ರೀತಿಸಲು ಬರಲ್ಲ’ ಎಂದು ವ್ಯಂಗ್ಯವಾಡಿದರು.

ನಾಯಿಯ ಹೆಸರನ್ನೇಕೆ ಟ್ರಂಪ್ ಉಲ್ಲೇಖಿಸಿಲ್ಲ ಎಂಬ ಬಗ್ಗೆಯೂ ವಾಷಿಂಗ್ಟನ್‌ ಪೋಸ್ಟ್‌ ಬೆಳಕು ಚೆಲ್ಲಿತು. ‘ನಾಯಿಯ ಹೆಸರು ಬಹಿರಂಗಪಡಿಸಿದರೆ ಅದರಿಂದ ಸೇನಾ ತುಕಡಿಯ ಇತರ ಸದಸ್ಯರ ಗುರುತು ಪತ್ತೆಯಾಗುವ ಅಪಾಯವಿದೆ’ ಎಂದು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿದ ಪೋಸ್ಟ್ ವರದಿ ತಿಳಿಸಿತು.

ಬಾಗ್ದಾದಿಯ ಬೇಟೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಈ ನಾಯಿಯು ಅಮೆರಿಕದ ಸೇನಾ ಇತಿಹಾಸದ ಪುಟಗಳಲ್ಲಿ ದಾಖಲಾಗುವುದು ಖಚಿತ. 2011ರಲ್ಲಿ ಅಮೆರಿಕ ನೌಕಾಪಡೆಯ ಸೀಲ್ ಕಮಾಂಡೊಗಳು ಒಸಾಮಾ ಬಿನ್‌ ಲಾಡೆನ್‌ನನ್ನು ಪತ್ತೆಹಚ್ಚಿ ಕೊಲ್ಲಲು ನೆರವಾಗಿದ್ದು ಸಹ ಇದೇ ತಳಿಯ ಕೈರೊ. ಅಮೆರಿಕ ಸೇನೆಯಲ್ಲಿ ನಾಯಿಯ ತಳಿಗಳು ಹಲವು ವರ್ಷಗಳಿಂದ ಸೇವೆಯಲ್ಲಿವೆ.

ಈ ಕಾರ್ಯಾಚರಣೆಯಲ್ಲಿ ಧೈರ್ಯದಿಂದ ಪಾಲ್ಗೊಂಡು ಗಾಯಗೊಂಡಿರುವ ನಾಯಿಗೆ ‘ಪರ್ಪಲ್ ಹಾರ್ಟ್‌’ ಅಥವಾ ‘ವೇಲೊರ್ ಮೆಡಲ್’ (ಅಮೆರಿಕ ಸೇನೆಯ ಶೌರ್ಯ ಪ್ರಶಸ್ತಿ) ಸಿಗುವುದಿಲ್ಲ. ನಾಯಿಗಳಿಗೆ ಶೌರ್ಯ ಪುರಸ್ಕಾರ ನೀಡಿದರೆ ಮನುಷ್ಯರ ಸೇವೆಯನ್ನು ಅವಗಣಿಸಿದಂತೆ ಆಗುತ್ತದೆ ಎಂಬ  ಆಕ್ಷೇಪದ  ಹಿನ್ನೆಲೆಯಲ್ಲಿ ಅಮೆರಿಕವು ನಾಯಿಗಳನ್ನು ಪುರಸ್ಕರಿಸುವುದರಿಂದ ಹಿಂದೆ ಸರಿದಿದೆ.

October 29, 2019 Posted by | ಭಯೋತ್ಪಾದಕ, ವಿಶ್ವ/ ಜಗತ್ತು, Flash News, General Knowledge, News, Spardha, Terror, World | | Leave a comment

ಕುಸಿದ ಪೇದೆಯ ನೆರವಿಗೆ ಧಾವಿಸಿದ ರಾಷ್ಟ್ರಪತಿ ಕೋವಿಂದ್, ಸಚಿವೆ ನಿರ್ಮಲಾ

29 kovind with woman police constatble
ನವದೆಹಲಿ:
ರಾಷ್ಟ್ರೀಯ ಸಿಎಸ್‌ಆರ್  ಚೊಚ್ಚಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿ  ರಾಮನಾಥ ಕೋವಿಂದ್  ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಮಾರಂಭದ ವೇಳೆಯಲ್ಲಿ ಕುಸಿದು ಬಿದ್ದ ಮಹಿಳಾ ಪೊಲೀಸ್ ಪೇದೆ ಒಬ್ಬರ ನೆರವಿಗೆ ಧಾವಿಸಿದ ಘಟನೆ 2019 ಅಕ್ಟೋಬರ್ 29ರ ಮಂಗಳವಾರ ಘಟಿಸಿತು.

ಸಮಾರಂಭದಲ್ಲಿ ದೆಹಲಿ ಪೊಲೀಸ್  ಮಹಿಳಾ ಪೇದೆ ವಿಜ್ಞಾನ ಭವನದಲ್ಲಿ ವೇದಿಕೆ  ಮುಂದೆ ನಿಂತಿದ್ದರು.

ರಾಷ್ಟ್ರಗೀತೆ ನುಡಿಸುವಾಗ, ಹಠಾತ್ತನೆ ಮಹಿಳಾ ಪೇದೆಯ  ಪಾದ ತಿರುಚಿ ಆಕೆ ಕುಸಿದು ಬಿದ್ದರು.ಮತ್ತು ಕಾರ್ಪೆಟ್ ಮೇಲೆ ಕುಳಿತುಕೊಂಡರು.

ರಾಷ್ಟ್ರಗೀತೆ ಮುಗಿದ ಕೂಡಲೇ ಕೋವಿಂದ್ ಅವರು ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂತು  ಮತ್ತು  ಬಳಿಕ ಭದ್ರತಾ ಸಿಬ್ಬಂದಿಯೊಂದಿಗೆ ವೇದಿಕೆಯಿಂದ ಕೆಳಗಿಳಿದು ಕುಸಿದು ಕುಳಿತಿದ್ದ ಮಹಿಳಾ ಪೇದೆಯತ್ತ ನೆರವಿಗಾಗಿ ಧಾವಿಸಿದರು.  ಅವರೊಂದಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಪೇದೆಯ ಬಳಿಗೆ ಬಂದರು.

ಮಹಿಳಾ ಪೇದೆಯೊಂದಿಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದ  ಕೋವಿಂದ್  ಆಕೆಗೆ  ಕುಡಿಯಲು ನೀರಿನ ಬಾಟಲ್ ನೀಡಿದರು.

ರಾಷ್ಟ್ರಗೀತೆಯ ನಂತರ ರಾಷ್ಟ್ರಪತಿಯವರು  ಸ್ಥಳದಿಂದ ನಿರ್ಗಮಿಸುವುದು ವಾಡಿಕೆ.

ಕೋವಿಂದ್  ಅವರು ವೇದಿಕೆಯಿಂದ ಕೆಳಗಿಳಿದು ಮಹಿಳಾ ಪೊಲೀಸ್ ಪೇದೆಯ ಸ್ವಾಸ್ಥ್ಯ ವಿಚಾರಿಸಿ ನೀರು ಕೊಟ್ಟು ಅಲ್ಲಿಂದ ತೆರಳುತ್ತಿದ್ದಂತೆಯೇ  ಅವರ ಸೌಜನ್ಯಕ್ಕಾಗಿ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಿದರು.

ರಾಷ್ಟ್ರಪತಿಯವರ ಜೊತೆಗೆ ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ನಿರ್ಮಲಾ ಸೀತಾರಾಮನ್,  ಉಪಸಚಿವ ಠಾಕೂರ್ ಮತ್ತು ಕಾರ್ಪೊರೇಟ್ ವ್ಯವಹಾರಗಳ ಕಾರ್ಯದರ್ಶಿ ಇಂಜೆಟಿ ಶ್ರೀನಿವಾಸ್ ಅವರೂ ವೇದಿಕೆಯಲ್ಲಿ ಇದ್ದರು.

October 29, 2019 Posted by | ರಾಷ್ಟ್ರೀಯ, Flash News, General Knowledge, India, Nation, News, Spardha | | Leave a comment

ಶರದ್ ಅರವಿಂದ ಬೋಬ್ಡೆ ಮುಂದಿನ ಭಾರತದ ಮುಖ್ಯ ನ್ಯಾಯಮೂರ್ತಿ

29 SA-bobde Supreme-Court
ನವದೆಹಲಿ
: ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶರದ್  ಅರವಿಂದ ಬೋಬ್ಡೆ ಅವರನ್ನು 2019 ಅಕ್ಟೋಬರ್ 29ರ ಮಂಗಳವಾರ ನೇಮಕ ಮಾಡಲಾಗಿದ್ದು, 2019 ನವೆಂಬರ್ 18 ರಂದು ಮುಖ್ಯ ನ್ಯಾಯಮೂರ್ತಿಯಾಗಿ ಬೋಬ್ಡೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ನ್ಯಾಯಮೂರ್ತಿ ಅರವಿಂದ ಬೋಬ್ಡೆ ಅವರ ಹೆಸರನ್ನು ಉನ್ನತ ಹುದ್ದೆಗೆ ಶಿಫಾರಸು ಮಾಡಿದ್ದು, ನೇಮಕಾತಿ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.

ನವೆಂಬರ್ 17ರಂದು ಹಾಲಿ ಸಿಜೆಐ ರಂಜನ್ ಗೊಗೋಯಿ ನಿವೃತ್ತರಾಗುತ್ತಿದ್ದಾರೆ. ನ್ಯಾಯಮೂರ್ತಿ ಬೋಬ್ಡೆ ಅವರು 47ನೇ  ಸಿಜೆಐ ಆಗಲಿದ್ದಾರೆ. ನ್ಯಾಯಮೂರ್ತಿ ಬೋಬ್ಡೆ ಅವರು 2021 ಏಪ್ರಿಲ್ 23ರಂದು ನಿವೃತ್ತರಾಗಲಿದ್ದಾರೆ.

ಶರದ್ ಅರವಿಂದ್ ಬೋಬ್ಡೆ: ಶರದ್ ಅರವಿಂದ ಬೋಬ್ಡೆ ಅವರು ಮಹಾರಾಷ್ಟ್ರದ ನಾಗಪುರದಲ್ಲಿ 1956 ಏಪ್ರಿಲ್ 24ರಂದು ಜನಿಸಿದ್ದರು ನಾಗಪುರ  ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದ ಅವರು, ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. 2000 ಮಾರ್ಚ್ 29ರಂದು ಬಾಂಬೆ ಹೈಕೋರ್ಟಿನಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡರು. 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದರು2013 ಏಪ್ರಿಲ್  ತಿಂಗಳಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.

ಅಯೋಧ್ಯಾ ಪ್ರಕರಣ, ಬಿಸಿಸಿಐ ಪ್ರಕರಣ, ಪಟಾಕಿ ನಿಷೇಧ ಪ್ರಕರಣ ಮುಂತಾದ ಪ್ರಕರಣಗಳನ್ನು ಬೋಬ್ಡೆ ಅವರಿದ್ದ ನ್ಯಾಯಪೀಠವು ವಿಚಾರಣೆ ನಡೆಸಿತ್ತು.

ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ತಮ್ಮ ಉತ್ತರಾಧಿಕಾರಿಯಾಗಿ ಬೋಬ್ಡೆ ಅವರ ಹೆಸರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

October 29, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, News, Spardha, supreme court | , , , | Leave a comment

ಅ.29ರ ಮಂಗಳವಾರ ಜಮ್ಮು- ಕಾಶ್ಮೀರಕ್ಕೆ ಐರೋಪ್ಯ ಸಂಸದರ ತಂಡದ ಭೇಟಿ

28 modi-euಸರ್ಕಾರದ ಆದ್ಯತೆಗಳ ಸ್ಪಷ್ಟ ಚಿತ್ರಣ ಸಿಗಲಿದೆ: ಪ್ರಧಾನಿ ಮೋದಿ

ನವದೆಹಲಿ: ಐರೋಪ್ಯ ಸಂಸತ್ತಿನ ಸಂಸತ್ ಸದಸ್ಯರ ತಂಡವೊಂದಕ್ಕೆ  2019 ಅಕ್ಟೋಬರ್ 29ರ ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, 2019 ಅಕ್ಟೋಬರ್ 28ರ ಸೋಮವಾರ ತಂಡದ ಸದಸ್ಯರ ಜೊತೆ ಸಂವಹನ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ಈ ಭೇಟಿಯು ಸರ್ಕಾರದ ಆದ್ಯತೆಗಳ ಸ್ಪಷ್ಟ ಚಿತ್ರಣವನ್ನು ತಂಡಕ್ಕೆ ನೀಡಲಿದೆ’ ಎಂದು ಹೇಳಿದರು.

‘ಭಯೋತ್ಪಾದನೆಗೆ ಬೆಂಬಲ ನೀಡುವವರು ಅಥವಾ ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯನ್ನಾಗಿ ಮಾಡಿಕೊಂಡಿರುವವರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ’ ಪ್ರಧಾನಿ ಈ ಸಂದರ್ಭದಲ್ಲಿ ಕರೆ ನೀಡಿದರು.

‘ಭಯೋತ್ಪಾದನೆ ಬಗ್ಗೆ ಶೂನ್ಯ ಸಹನೆ ಇರಬೇಕು’ ಎಂದು ಪ್ರಧಾನಿ ಭಾರತಕ್ಕೆ ಪ್ರವಾಸ ಬಂದಿರುವ ಐರೋಪ್ಯ ಒಕ್ಕೂಟದ ಶಾಸನಕರ್ತರ ಜೊತೆ ಮಾತನಾಡುತ್ತಾ ಹೇಳಿದರು.

ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಲಿರುವ ಐರೋಪ್ಯ ಸಂಸತ್ತಿನ ಸದಸ್ಯರ ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ಮಂಗಳವಾರ ಭೇಟಿ ನೀಡಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ  ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಮೊತ್ತ ಮೊದಲ ಶಾಸನಕರ್ತರ ತಂಡ ಇದಾಗಿದೆ.

‘ಈ ಭೇಟಿಯು ನಿಮಗೆ ರಾಜ್ಯದ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಈ ಮೂರು ಪ್ರದೇಶಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯವನ್ನು ಚೆನ್ನಾಗಿ ಅರ್ಥ ಮಾಡಿಸಲಿದೆ ಮತ್ತು ಈ ಪ್ರದೇಶದಲ್ಲಿನ ಅಭಿವೃದ್ಧಿ ಮತ್ತು ಆಡಳಿತದ ಆದ್ಯತೆಗಳ ಬಗ್ಗೆ ಸ್ಪಷ್ಟ ಚಿತ್ರವನ್ನು ನೀಡಲಿದೆ’ ಎಂದು ಪ್ರಧಾನಿ ಮೋದಿ ತಂಡಕ್ಕೆ ತಿಳಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿಂತೆ ಸರ್ಕಾರ ಇತ್ತೀಚೆಗೆ ಕೈಗೊಂಡ ಕ್ರಮದ ಸಂದರ್ಭವನ್ನು ಕೂಡಾ ಪ್ರಧಾನಿ ಮೋದಿ ಐರೋಪ್ಯ ಸಂಸದರ ತಂಡಕ್ಕೆ ತಿಳಿಸಿದರು ಎಂದು ಹೇಳಲಾಗಿದೆ.  ಐರೋಪ್ಯ ಒಕ್ಕೂಟದ ಶಾಸನಕರ್ತರ ತಂಡವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸೂಚ್ಯವಾಗಿ ಹೇಳಿದ ವಿಚಾರವನ್ನು ದೋವಲ್ ಅವರು ವಿಷದವಾಗಿ ತಿಳಿಸಿದರು ಎಂದು ಸುದ್ದಿ ಮೂಲಗಳು ತಿಳಿಸಿದವು.

ಐರೋಪ್ಯ ಸಂಸತ್ತಿನಲ್ಲಿ ಈಸ್ಟ್ ಮಿಡ್‌ಲ್ಯಾಂಡನ್ನು  ಪ್ರತಿನಿಧಿಸುವ ಬಿಲ್ ನ್ಯೂಟನ್ ಡನ್ ಅವರು ’ತಂಡವು ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದೆ’ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದರು.

‘ಪ್ರಧಾನಿಯವರು ನಮಗೆ ಅಲ್ಲಿನ ವಿಷಯದ ಬಗ್ಗೆ (೩೭೦ನೇ ವಿಧಿ ರದ್ದು) ವಿವರಿಸಿದರು. ಆದರೆ ಆ ನೆಲ ನಿಜವಾಗಿ  ಹೇಗಿದೆ ಎಂಬುದಾಗಿ ನೋಡಲು ಮತ್ತು ಕೆಲವು ಜನರ ಜೊತೆಗೆ ಮಾತನಾಡಲು ನಾನು ಬಯಸಿದ್ದೇನೆ. ನಾವೆಲ್ಲರೂ ಬಯಸಿರುವುದು ಸಹಜ ಸ್ಥಿತಿ ಮತ್ತು ಪ್ರತಿಯೊಬ್ಬರಿಗೂ ಶಾಂತಿ’ ಎಂದು ಅವರು ನುಡಿದರು.

ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಿರುವ ಭೇಟಿಯನ್ನು ಉಲ್ಲೇಖಿಸಿರುವ ಪ್ರಧಾನ ಮಂತ್ರಿಯವರ ಕಚೇರಿಯ ಹೇಳಿಕೆಯು, ತಮ್ಮ ಅವಧಿಯ ಆರಂಭದಲ್ಲೇ ಭಾರತಕ್ಕೆ ಭೇಟಿ ನೀಡುವ ಮೂಲಕ ಭಾರತದ ಜೊತೆಗಿನ ಬಾಂಧವ್ಯಕ್ಕೆ ಸಂಬಂಧಿಸಿದಂತೆ ಮಹತ್ವ ನೀಡಿರುವ ತಂಡದ ಕ್ರಮವನ್ನು ಶ್ಲಾಘಿಸಿದೆ.

‘ಐರೋಪ್ಯ ಒಕ್ಕೂಟದ ಜೊತೆಗಿನ ಭಾರತದ ಬಾಂಧವ್ಯವು ಪ್ರಜಾತಾಂತ್ರಿಕ ಮೌಲ್ಯಗಳ ಬಗೆಗೆ ಹಂಚಿಕೊಳ್ಳಲಾಗಿರುವ ಹಿತಾಸಕ್ತಿಗಳು ಮತ್ತು ಸಮಾನ ಬದ್ಧತೆಯನ್ನು  ಆಧರಿಸಿರುವಂತಹುದು’ ಎಂದು ಪ್ರಧಾನಿ ಮೋದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ವಾಸ್ತವ ಸ್ಥಿತಿ ಅರಿಯಲು ಅಲ್ಲಿಗೆ ಭೇಟಿ ನೀಡಲಿರುವ ೨೮ ಮಂದಿ ಸದಸ್ಯರನ್ನು ಒಳಗೊಂಡ ಯೂರೋಪ್ ಒಕ್ಕೂಟದ ತಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಿ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ರದ್ದಾದ ನಂತರ ಉದ್ಭವಿಸಿರುವ ಬೆಳವಣಿಗೆಗಳ ಕುರಿತು ಚರ್ಚಿಸಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದವು.

ಇತ್ತೀಚೆಗೆ ಅಮೆರಿಕದ ವಾಷಿಂಗ್ಟನ್‌ನಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ತಜ್ಞರ ಒಂದು ಗುಂಪು ಜಮ್ಮು-ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನ ರದ್ದಾದ ನಂತರ ಉದ್ಭವಿಸಿರುವ ಸಮಸ್ಯೆಗಳ ಕುರಿತು ಕಾಳಜಿ ವ್ಯಕ್ತಪಡಿಸಿತ್ತು. ಈ ಬೆಳವಣಿಗೆ ನಂತರ ಯೂರೋಪಿಯನ್ ರಾಷ್ಟ್ರಗಳ ಈ ತಂಡ ಭೇಟಿ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಈ ಸಂಬಂಧ ಅಮೆರಿಕಾದ ರಾಜ್ಯ ಸಹಾಯಕ ಕಾರ್ಯದರ್ಶಿ ಅಲೈಸ್ ವೆಲ್ಸ್ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಮಾನವ ಹಕ್ಕುಗಳಿಗೆ ರಕ್ಷಣೆ ಹಾಗೂ ಗೌರವ ನೀಡಬೇಕು, ಇಂಟರ್ ನೆಟ್ ಮತ್ತು ಮೊಬೈಲ್ ನೆಟ್ ವರ್ಕ್ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಭಾರತ ಸರ್ಕಾರವನ್ನು ಒತ್ತಾಯಿಸಿ ಎಂದು ಹೇಳಿದ್ದರು.

ಅಲ್ಲದೆ, ಜಮ್ಮು ಕಾಶ್ಮೀರದಲ್ಲಿ ವಿಶೇಷ ಸ್ಥಾನ ಮಾನ ರದ್ದಾದ ಸಂದರ್ಭದಿಂದ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಗೃಹ ಬಂಧನದಲ್ಲಿ ಇರಿಸಿದ್ದು, ರಾಜಕೀಯ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳನ್ನು ವಶಕ್ಕೆ ತೆಗೆದುಕೊಂಡಿರುವುದರ ಕುರಿತು ಕಾಳಜಿ ವ್ಯಕ್ತಪಡಿಸುವುದು ನಮ್ಮ ಕರ್ತವ್ಯ ಎಂದೂ ಅವರು ಹೇಳಿದ್ದರು.

ಸುಬ್ರಮಣಿಯನ್ ಸ್ವಾಮಿ ವಿರೋಧ: ಈ ಮಧ್ಯೆ, ಜಮ್ಮು ಮತ್ತು ಕಾಶ್ಮೀರಕ್ಕೆ ಐರೋಪ್ಯ ಸಂಸದರ ತಂಡದ ಭೇಟಿಯನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಸೋಮವಾರ ’ಇದು ಅನೈತಿಕ’ ಎಂಬುದಾಗಿ ಖಂಡಿಸಿ, ತತ್ ಕ್ಷಣ ಅದನ್ನು ರದ್ದು ಪಡಿಸುವಂತೆ ಆಗ್ರಹಿಸಿದರು.

‘ಈ ಕ್ರಮವು ರಾಷ್ಟ್ರದ ನೀತಿಯ ವಿಕೃತಿಯಾಗಿದೆ. ಐರೋಪ್ಯ ಒಕ್ಕೂಟದ ಸಂಸದರಿಗೆ ಖಾಸಗಿಯಾಗಿ (ಐರೋಪ್ಯ ಒಕ್ಕೂಟದ ಅಧಿಕೃತ ನಿಯೋಗವಲ್ಲ) ಭೇಟಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವ್ಯವಸ್ಥೆ ಮಾಡಿದ್ದು ನನಗೆ ಅಚ್ಚರಿ ಉಂಟು ಮಾಡಿದೆ. ಇದು ರಾಷ್ಟ್ರೀಯ ನೀತಿಯ ವಿಕೃತಿ. ಇದು ಅನೈತಿಕವಾದ್ದರಿಂದ ಸರ್ಕಾರ ತತ್ ಕ್ಷಣ ಇದನ್ನು ರದ್ದು ಪಡಿಸಬೇಕು’ ಎಂದು ಸ್ವಾಮಿ ಟ್ವೀಟ್ ಮಾಡಿದರು.

October 28, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Prime Minister, Spardha, Terror, World | | Leave a comment

ಕಾಶ್ಮೀರ: ಮುಂದುವರೆದ ಉಗ್ರರ ಅಟ್ಟಹಾಸ,  ದಾಳಿಗೆ ಮತ್ತೊಬ್ಬ ಟ್ರಕ್​ ಚಾಲಕ ಬಲಿ

28 kashmir truck driver killed
ಜಮ್ಮು:
 ಕಣಿವೆ ರಾಜ್ಯದಲ್ಲಿ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದ್ದು, ಭಯೋತ್ಪಾದಕರ ದಾಳಿಗೆ ಮತ್ತೊಬ್ಬ ಲಾರಿ ಚಾಲಕ 2019 ಅಕ್ಟೋಬರ್ 28ರ ಸೋಮವಾರ ಬಲಿಯಾದ. ದಕ್ಷಿಣ ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಬಿಜ್​ಬೆಹರಾದಲ್ಲಿ ಉಗ್ರರು ಚಾಲಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿದರು.

ಚಾಲಕನನ್ನು ಉಧಮ್​ಪುರ ಜಿಲ್ಲೆಯ ಕಾತ್ರಾ ಪ್ರದೇಶದ ನಾರಾಯಣ್ ದತ್ ಎಂದು ಗುರುತಿಸಲಾಯಿತು. ಈದಿನ ಸಂಜೆ ಈ ಘಟನೆ ಘಟಿಸಿದ್ದು, ಟ್ರಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಎಂದು ವರದಿಗಳು ತಿಳಿಸಿದವು.

ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸ್​ ಅಧಿಕಾರಿ ಸ್ಥಳಕ್ಕೆ ಧಾವಿಸಿದರು. ಸುತ್ತಮುತ್ತಲ ಪ್ರದೇಶದಲ್ಲಿ ಇದ್ದ ಇನ್ನಿಬ್ಬರು ಟ್ರಕ್​ ಚಾಲಕರನ್ನು ಪೊಲೀಸರು ರಕ್ಷಿಸಿದರು. ಬಳಿಕ ದಾಳಿಕೋರರನ್ನು ಸೆದೆ ಬಡೆಯಲು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು.

ಈ ದಾಳಿ ಸೇರಿ ದಕ್ಷಿಣ ಕಾಶ್ಮೀರದಲ್ಲಿ ಕಳೆದ 2 ವಾರಗಳಿಂದೀಚೆಗೆ ನಡೆದ ಉಗ್ರರ ದಾಳಿಗೆ 6 ಮಂದಿ ಟ್ರಕ್ ಚಾಲಕರು ಬಲಿಯಾಗಿದ್ದಾರೆ. ಬಲಿಯಾದವರೆಲ್ಲರೂ ಕಾಶ್ಮೀರೇತರರು ಎಂದು ತಿಳಿದು ಬಂದಿದೆ.

ದಕ್ಷಿಣ ಕಾಶ್ಮೀರದಲ್ಲಿ ಕಳೆದೆರಡು ವಾರಗಳಿಂದ ಕಾಶ್ಮೀರೇತರರನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹಿಂದಿನ ದಿನ ಹೊರ ರಾಜ್ಯಗಳ ಟ್ರಕ್ ಚಾಲಕರನ್ನು ಶೋಫಿಯಾನ್ ನಗರದಿಂದ ಹೊರ ಕಳಿಸಲು ಮುಂದಾಗಿದ್ದರು. ಮರುದಿನವೇ ಮತ್ತೊಂದು ದಾಳಿ ನಡೆಯಿತು.

ಕಾಶ್ಮೀರದ ಸೊಪೋರ್‌ನಲ್ಲಿ ಗ್ರೆನೇಡ್ ದಾಳಿ: ೧೯ ಜನರಿಗೆ ಗಾಯ

ಈ ಮಧ್ಯೆ,  ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೊಪೋರ್ ಪಟ್ಟಣದ ಬಸ್ಸು ನಿಲ್ದಾಣದಲ್ಲಿ ಉಗ್ರಗಾಮಿಗಳು ಗ್ರೆನೇಡ್ ಎಸೆದ ಪರಿಣಾಮವಾಗಿ 2019 ಅಕ್ಟೋಬರ್ 28ರ ಸೋಮವಾರ ೧೯ ಮಂದಿ ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು.

ಹೊಟೇಲ್ ಪ್ಲಾಜಾ ಸಮೀಪ ಸಂಜೆ ೪.೧೫ರ ವೇಳೆಗೆ ಸಂಭವಿಸಿದ ಗ್ರೆನೇಡ್ ದಾಳಿಯ ಗಾಯಾಳುಗಳ ಪೈಕಿ ಮೂವರಿಗೆ ಗಂಭೀರ ಗಾಯಗಳಾದವು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮೇಲೆ ಎರಡು ದಿನಗಳ ಹಿಂದೆ 2019 ಅಕ್ಟೋಬರ್ 26ರ ಶನಿವಾರ ಸಂಜೆ ಶ್ರೀನಗರದಲ್ಲಿ ನಡೆದ ಇಂತಹುದೇ ದಾಳಿಯಲ್ಲಿ ೬ ಮಂದಿ ಸಿಆರ್‌ಪಿಎಫ್ ಯೋಧರು ಗಾಯಗೊಂಡಿದ್ದರು.

ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ೧೭೯ನೇ ಬೆಟಾಲಿಯನ್ ಪಡೆಗಳು ತತ್ ಕ್ಷಣವೇ ಸ್ಥಳಕ್ಕೆ ಧಾವಿಸಿ ಘಟನಾ ಸ್ಥಳವನ್ನು ಸುತ್ತುವರಿದವು ಎಂದು ಪೊಲೀಸರು ಹೇಳಿದರು.

ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ, ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರವು ನಿರ್ಧರಿಸಿದಂದಿನಿಂದ ಇಲ್ಲಿಯವರೆಗೆ ನಡೆದಿರುವ ಐದನೇ ದಾಳಿ ಇದು.  ರಾಜ್ಯವು ಅಕ್ಟೋಬರ್ ೩೧ರಂದು ಅಧಿಕೃತವಾಗಿ ವಿಭಜನಗೊಳ್ಳಲಿದೆ.

October 28, 2019 Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Pakistan, Spardha, Terror, World | | Leave a comment

ಐಸಿಸ್ ಮುಖ್ಯಸ್ಥ ಬಾಗ್ದಾದಿ ಸಾವು:  ಆಪ್ತನಿಂದಲೇ ಲಭಿಸಿತ್ತು ಸುಳಿವು

Islamic State Leader
ವಾಷಿಂಗ್ಟನ್:
ಸಿರಿಯಾದಲ್ಲಿ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್-ಬಾಗ್ದಾದಿ ಹೆದರಿ ಮಕ್ಕಳೊಂದಿಗೆ ಓಡಿ ಸುರಂಗ ಸೇರಿಕೊಂಡು ಅಳುತ್ತಾ ರಣಹೇಡಿಯಂತೆ ಸ್ವತಃ ಸ್ಫೋಟಿಸಿಕೊಂಡು ನಾಯಿಯಂತೆ ಸಾವನ್ನಪ್ಪಿದ್ದಾನೆ ಎಂದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದರು.

ಶ್ವೇತಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, “ನಾವು ದಾಳಿಗೆ ಮುಂದಾದಾಗ ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬೆದರಿ ಮೂವರು ಮಕ್ಕಳೊಂದಿಗೆ ಓಡುತ್ತಾ ಸುರಂಗದೊಳಗೆ ನುಸುಳಿದ್ದ ಆತ ಜೋರಾಗಿ ಅಳುತ್ತಾ ಕಿರಿಚಾಡುತ್ತಿದ್ದ.  ಆತನ ಆರೋಗ್ಯ ತುಂಬಾ ಹದಗೆಟ್ಟಿತ್ತು. ಈಗ ಆತ ಮೃತನಾಗಿದ್ದಾನೆ. ನಮ್ಮ ದಾಳಿಯಲ್ಲಿ ಸಾಕಷ್ಟು ಐಸಿಸ್ ಉಗ್ರರು ಸಾವನ್ನಪಿದ್ದು, ವಿಶ್ವ ಈಗ ಮತ್ತಷ್ಟು ಸುರಕ್ಷಿತವಾಗಿದೆ,” ಎಂದು ಹೇಳಿದರು.

‘ದೊಡ್ಡ ಬೆಳವಣಿಗೆಯೊಂದು ಈಗಷ್ಟೇ ನಡೆದಿದೆ’  ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಟೋಬರ್ ೨೬ರ ಶನಿವಾರ ರಾತಿ ಟ್ವೀಟ್ ಮಾಡಿದ್ದರು. ಇದು ಭಾರೀ ಕುತೂಹಲ ಮೂಡಿಸಿತ್ತು. ಬಾಗ್ದಾದಿ ಮೃತನಾದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು ಎಂದು ಭಾವಿಸಲಾಗಿತ್ತು.

ಬಾಗ್ದಾದಿ ಐಸಿಸ್ ಉಗ್ರ ಸಂಘಟನೆಯ ನಾಯಕ. ೨೦೧೪ರಿಂದ ಬಾಗ್ದಾದಿ ಭೂಗತನಾಗಿದ್ದ. ಏಪ್ರಿಲ್ ತಿಂಗಳಲ್ಲಿ ಐಸಿಸ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿತ್ತು. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ಬಾಗ್ದಾದಿ ಎಂದು ಹೇಳಲಾಗಿತ್ತು.

ಮೇ ೨೦೧೭ರಲ್ಲಿ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಬಾಗ್ದಾದಿ ಗಾಯಗೊಂಡಿದ್ದ ಎಂದು ೨೦೧೮ರ ಫೆಬ್ರವರಿಯಲ್ಲಿ ಅಮೆರಿಕ ಸೇನೆ ಹೇಳಿತ್ತು. ಈತ ೨೦೧೦ರಲ್ಲಿ ಐಸಿಸ್ ನೇತೃತ್ವವನ್ನು ವಹಿಸಿಕೊಂಡಿದ್ದ. ಈಗ ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾನೆ ಹೇಳಲಾಗಿದೆ.

ಇರಾಕ್ ಮತ್ತು ಸಿರಿಯಾದಲ್ಲಿ ನೂರಾರು ವ್ಯಕ್ತಿಗಳನ್ನು ಶಿರಚ್ಛೇದದ ಮೂಲಕ ಕೊಲ್ಲಿಸಿ, ಇರಾಕಿನ ಬಹುಭಾಗದ ಮೇಲೆ ಸ್ವಾಮ್ಯ ಹೊಂದಿದ್ದ ಬಾಗ್ದಾದಿ ವಿಶ್ವದ ’ಮೋಸ್ಟ್ ವಾಂಟೆಡ್’ ಉಗ್ರನಾಗಿದ್ದ. ಆತನ ವಿರುದ್ಧ ಅಮೆರಿಕ ಇದೀಗ ಅಲ್‌ಖೈದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ವಿರುದ್ಧ ನಡೆಸಿದ ಮಾದರಿಯಲ್ಲೇ ಕಾರ್ಯಾಚರಣೆ ನಡೆಸಿ ಆತನನ್ನು ಬಲಿ ಪಡೆಯಿತು.

ಬಾಗ್ದಾದಿಯನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲು ಅಮೆರಿಕ ಸೇನೆ ಹಲವು ತಿಂಗಳುಗಳಿಂದ ಸಿದ್ಧತೆಗಳನ್ನು ನಡೆಸಿತ್ತು ಎನ್ನಲಾಗಿದ್ದು, ಸೆರೆ ಸಿಕ್ಕಿದ್ದ ಆತನ ಆಪ್ತನಿಂದನೇ ಆತನ ಆತನ ಅಡಗುದಾಣವನ್ನು ಪತ್ತೆ ಹಚ್ಚಲಾಗಿತ್ತು.

ಗುಪ್ತಚರ ಮಾಹಿತಿಯ ಮೇರೆಗೆ ಅಮೆರಿಕವು ಸಿರಿಯಾದ ಇಬ್ಲಿಬ್ ಪ್ರಾಂತ್ಯದಲ್ಲಿರುವ ಬಾಗ್ದಾದಿಯ ಅಡಗುದಾಣವನ್ನು ಎರಡು ವಾರಗಳ ಹಿಂದೆಯೇ ಪತ್ತೆ ಮಾಡಿತ್ತು. ಆತನ ವಿರುದ್ಧ ಕಾರ್ಯಾಚರಣೆಗೆ ಹಲವು ವರ್ಷಗಳಿಂದಲೇ ತಯಾರಿ ನಡೆಸುತ್ತಿದ್ದ ಅಮೆರಿಕ ಶನಿವಾರ ಸಿರಿಯಾದ ನಿಗದಿತ ಪ್ರದೇಶಕ್ಕೆ ಸೇನೆಯ ವಿಶೇಷ ಪಡೆಗಳನ್ನು ೮ ಹೆಲಿಕಾಪ್ಟರುಗಳ ಮೂಲಕ ರವಾನಿಸಿತ್ತು.

ಬಾಗ್ದಾದಿ ಇರುವ ಜಾಗದ ಕಾಂಪೌಂಡ್ ಬಳಿ ಇಳಿದ ಸೇನಾ ಪಡೆಗಳು ಕ್ಷಣ ಮಾತ್ರದಲ್ಲಿ ಅದನ್ನು ಸ್ಫೋಟಿಸಿ ಆತನಿರುವಲ್ಲಿಗೆ ಪ್ರವೇಶಿಸಿದ್ದವು. ಅಮೆರಿಕದ ಸೇನಾ ಪಡೆಗಳನ್ನು ನೋಡುತ್ತಲೇ ಬಾಗ್ದಾದಿ ಭಯ ಭೀತಗೊಂಡು ತನ್ನ ಮೂವರು ಮಕ್ಕಳೊಂದಿಗೆ ಓಡಲಾರಂಭಿಸಿದ್ದ. ನಂತರ ಸುರಂಗವೊಂದನ್ನು ಪ್ರವೇಶಿಸಿ ಅದರ ಕೊನೆಯಲ್ಲಿ ಅಲ್ಲಿ ತನ್ನನ್ನು ತಾನೇ ಸ್ಫೋಟಿಸಿಕೊಂಡು ಸಾವಿಗೀಡಾಗಿದ್ದ. ಘಟನೆಯಲ್ಲಿ ಆತನ ದೇಹ ಛಿದ್ರಗೊಂಡಿತ್ತು ಎಂದು ಅಮೆರಿಕ ಸೇನೆ ನೀಡಿದ ಮಾಹಿತಿ ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ಆಪ್ತನೇ ನೀಡಿದ್ದ ಮಾಹಿತಿ:

ಜಗತ್ತಿನಾದ್ಯಂತ ಭಯ ಬಿತ್ತಿದ್ದ, ಇಸ್ಲಾಮ್ ಹೆಸರಲ್ಲಿ ಸ್ವಂತ ಸಾಮ್ರಾಜ್ಯ ಕಟ್ಟಿದ ಬಾಗ್ದಾದಿ ಇತ್ತೀಚಿನ ಎರಡು ವರ್ಷಗಳಲ್ಲಿ ಅಮೆರಿಕ, ರಶ್ಯಾದಂತಹ ದೇಶಗಳ ನಿರಂತರ ದಾಳಿಗೆ ಸಿಕ್ಕು ಹೈರಾಣಾಗಿದ್ದ. ನಂತರ ಸಿರಿಯಾಕ್ಕೆ ಪಲಾಯನ ಮಾಡಿದ್ದ.

ಬಾಗ್ದಾದಿ ಅಮೆರಿಕ ಕೈಗೆ ಸಿಕ್ಕಿಬೀಳುವ ಆತಂಕದಲ್ಲೇ ದಿನದೂಡುತ್ತಿದ್ದ. ತನ್ನ ಚಲನವಲನದಲ್ಲಿ ಗೌಪ್ಯತೆ ಕಾಯ್ದುಕೊಂಡಿದ್ದ. ತನ್ನ ಯೋಜನೆ, ಕಾರ್ಯತಂತ್ರಗಳನ್ನು ನಿರಂತರವಾಗಿ ಬದಲಿಸುತ್ತಿದ್ದ ಎಂದು ಟರ್ಕಿ ಪಡೆಗಳ ವಶಕ್ಕೆ ಸಿಕ್ಕಿ ಬಳಿಕ ಇರಾಕಿಗೆ ಒಪ್ಪಿಸಲ್ಪಟ್ಟಿದ್ದ ಆತನ ಆಪ್ತ ಇಸ್ಮಾಯಿಲ್ ಅಲ್ ಎತ್ವಾಯಿ ಬಾಯಿ ಬಿಟ್ಟಿದ್ದ. ಆತ ನೀಡಿದ್ದ ಮಾಹಿತಿಯನ್ನು ಅಮೆರಿಕದ ಸಿಬಿಐ ಜೊತೆಗೆ ಇರಾಕ್ ಹಂಚಿಕೊಂಡಿತ್ತು.

‘ಅಮೆರಿಕದ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹಲವಾರು ಬಾರಿ ಬಾಗ್ದಾದಿ ತರಕಾರಿ ವಾಹನದಲ್ಲೂ ಓಡಾಡುತ್ತಿದ್ದ. ಅಲ್ಲಿಯೇ ಕೆಲವೇ ಕೆಲವು ಆಪ್ತರ ಜೊತೆಗೆ ಚರ್ಚಿಸಿ ತಂತ್ರಗಾರಿಕೆ ರೂಪಿಸುತ್ತಿದ್ದ’ ಎಂದೂ ಇಸ್ಮಾಯಿಲ್ ಮಾಹಿತಿ ನೀಡಿದ್ದ.

ಶನಿವಾರವೇ ಆಪರೇಶನ್ ಆರಂಭ:

ಅಕ್ಟೋಬರ್ ೨೬ರ ಶನಿವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಹಿರಿಯ ಸಲಹೆಗಾರರು ನಿಯಂತ್ರಣ ಕೊಠಡಿಯಲ್ಲಿ ಬಾಗ್ದಾದಿ ವಿರುದ್ಧದ ಕಾರ್ಯಾಚರಣೆಯ ನೇರ ಪ್ರಸಾರ ವೀಕ್ಷಿಸಲು ಸಜ್ಜಾಗಿ ಕುಳಿತಿದ್ದರು. ಅಮೆರಿಕದ ವಿಶೇಷ ಪಡೆಗಳು ೬೦೦೦ ಮೈಲು ದೂರದಲ್ಲಿದ್ದ ಸಿರಿಯಾದ ಇದ್ಲಿಬ್ ಬಾರಿಶ ಹಳ್ಳಿಯ ಅಡಗುತಾಣದಲಿ ಅಡಗಿದ್ದ ಬಾಗ್ದಾದಿ ವಿರುದ್ಧ ರಹಸ್ಯಕಾರ್ಯಾಚರಣೆಗೆ ಸಜ್ಜಾಗಿತ್ತು.

ಸಿರಿಯಾದ ಇದ್ಲಿಬ್ ಬಾರಿಶ ಹಳ್ಳಿಯಲ್ಲಿ ಬಾಗ್ದಾದಿ ಅಡಗುತಾಣದ ಬಗ್ಗೆ ಸಿಐಎ ೪೮ ಗಂಟೆಗಳ ಕಾಲ ಮಾಹಿತಿಯನ್ನು ಕಲೆ ಹಾಕಿತ್ತು. ಸಿಐಎ ಮಾಹಿತಿ ಮೇರೆಗೆ ಎಂಟು ಸಿಎಚ್ ೪೭ ಹೆಲಿಕಾಪ್ಟರುಗಳು ರಾತ್ರಿ ಉತ್ತರ ಇರಾಕ್ ಕಡೆ ಹೊರಟಿದ್ದವು. ಕ್ರೂರಿ ಅಬು ಬಕರ್ ಬಾಗ್ದಾದಿಯನ್ನು ಗುರಿಯಾಗಿರಿಸಿಕೊಂಡು ಹೊರಟ ಅಮೆರಿಕದ ವಿಶೇಷ ಡೆಲ್ಟಾ ಪಡೆಗಳು ಸಿರಿಯಾದತ್ತ ದಾಂಗುಡಿ ಇಟ್ಟಿದ್ದವು. ಬಾಗ್ದಾದಿ ವಿರುದ್ಧದ ಕಾರ್ಯಾಚರಣೆಗೆ ಇಡಲಾಗಿದ್ದ ಹೆಸರು “ಕೇಯ್ಲಾ ಮುಲ್ಲೆರ್ (ಈಕೆ ಅಮೆರಿಕದ ಸಮಾಜಸೇವಾ ಕಾರ್ಯಕರ್ತೆ, ಈಕೆಯನ್ನು ಬಾಗ್ದಾದಿ ಹತ್ಯೆಗೈದಿದ್ದ).

ಅಮೆರಿಕದ ಪಡೆಗಳು ಬಾಗ್ದಾದಿಯ ಅಡಗುತಾಣದತ್ತ ಧಾವಿಸುತ್ತಲೇ ಅಪಾಯದ ಮುನ್ಸೂಚನೆ ಅರಿತ ಬಾಗ್ದಾದಿ ಓಡಿಹೋಗಿ ಸುರಂಗದಲ್ಲಿ ಅಡಗಿಕೊಂಡಿದ್ದ. ಸ್ವಯಂಚಾಲಿತ ಗನ್ನುಗಳು ಗುಂಡಿನ ದಾಳಿ ಆರಂಭಿಸಿದ್ದನ್ನು ಸ್ಥಳೀಯ ಜನರು ಗಮನಿಸಿರುವುದಾಗಿ ವರದಿ ವಿವರಿಸಿತು.

ಇಡೀ ಕಟ್ಟಡವನ್ನೇ ಸ್ಫೋಟಿಸಲು ಟ್ರಂಪ್ ಆದೇಶ ಕೊಟ್ಟಿದ್ದರು. ಅದರಂತೆ ಅಮೆರಿಕದ ಪಡೆಗಳು ಇಡೀಕಟ್ಟಡವನ್ನೇ ಬಾಂಬ್ ದಾಳಿಯಿಂದ ಧ್ವಂಸ ಮಾಡಿಬಿಟ್ಟಿದ್ದವು!

ಅಷ್ಟರಲ್ಲಿ ಬಾಗ್ದಾದಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಾಹುತಿ ಮಾಡಿಕೊಂಡು ಬಿಟ್ಟಿದ್ದ. ಐಸಿಸ್ ಸ್ಥಾಪಕ ಧೀಮಂತ ನಾಯಕನಂತೆ ಸಾವನ್ನಪ್ಪಿಲ್ಲ. ಬದಲಿಗೆ  ಹೇಡಿಯಂತೆ ಅತ್ತು, ಗೋಗರೆದು ಮಕ್ಕಳ ಜತೆಯೆ ಆತ್ಮಾಹುತಿ ಮಾಡಿಕೊಂಡಿದ್ದಾನೆ ಎಂದು ಟ್ರಂಪ್ ವಿವರಿಸಿದರು.

ಸುರಂಗದೊಳಗಿನ ಬಂಕರಿನೊಳಗೆ ಬಾಗ್ದಾದಿ ಸಾವನ್ನಪ್ಪಿದ್ದ. ಅಷ್ಟೇ ಅಲ್ಲ ಬಾಂಬ್ ಸ್ಫೋಟದಿಂದ ಬಾಗ್ದಾದಿ ದೇಹಛಿದ್ರ, ಛಿದ್ರವಾಗಿ ಹೋಗಿತ್ತು. ಅಮೆರಿಕ ಪಡೆಗಳು ಅವಶೇಷಗಳಡಿ ಬಿದ್ದಿದ್ದ ಶವದ ತುಂಡುಗಳನ್ನು ಸಂಗ್ರಹಿಸಿದ್ದವು. ಕಾರ್ಯಾಚರಣೆ ಪಡೆ ಜತೆಗಿದ್ದ ವಿಧಿವಿಜ್ಞಾನ ತಜ್ಞರು ಬಾಗ್ದಾದಿಯ ಡಿಎನ್‌ಎ ಮಾದರಿಯನ್ನು  ಒಯ್ದು, ಅಲ್ಲಿಯೇ ಪರೀಕ್ಷೆಗೊಳಪಡಿಸಿದ್ದವು. ಯಾಕೆಂದರೆ ಈ ಹಿಂದೆ ನಡೆದ ಕೆಲವು ದಾಳಿಯಲ್ಲಿ ಬಾಗ್ದಾದಿ ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತು, ಆದರೆ ಆತ ತಪ್ಪಿಸಿಕೊಳ್ಳುತ್ತಿದ್ದುದು ಬಳಿಕ ಗೊತ್ತಾಗುತ್ತಿತ್ತು. ಆದರೆ ಈ ಬಾರಿಅಮೆರಿಕ ಪಡೆಯ ದಾಳಿ ಯಶಸ್ವಿಯಾಗಿತ್ತು.

ಪ್ರಯೋಗಾಲಯ ತಜ್ಞರು ಕಾರ್ಯಾಚರಣೆ ನಡೆದ ಸ್ಥಳದಲ್ಲಿಯೇ ಡಿಎನ್‌ಎ ಪರೀಕ್ಷೆ ನಡೆಸಿ, ೧೫ ನಿಮಿಷಗಳಲ್ಲಿಯೇ ಸಾವನ್ನಪ್ಪಿದ್ದು ಬಾಗ್ದಾದಿ ಎಂಬ ಅಧಿಕೃತ ಸಂದೇಶವನ್ನು ಡೊನಾಲ್ಡ್ ಟ್ರಂಪ್‌ಗೆ ರವಾನಿಸಿದ್ದರು.

ಬಾಗ್ದಾದಿ ಸಾವನ್ನಪ್ಪಿದ್ದ ನಂತರವೂ ಅಮೆರಿಕ ಪಡೆಗಳು ಸುಮಾರು ಎರಡು ಗಂಟೆಗಳ ಕಾಲ ಆವರಣದಲ್ಲಿ ಕಾರ್ಯಾಚರಣೆ ನಡೆಸಿ, ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆಗೆ ಸೇರಿದ್ದ ಸೂಕ್ಷ್ಮ ವಸ್ತುಗಳನ್ನು (ಮಹತ್ವದ ಮಾಹಿತಿ, ಮುಂದಿನ ದಾಳಿ ಕುರಿತ ಸ್ಕೆಚ್) ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿತು.

ಆ ಬಳಿಕ ಅಮೆರಿಕದ ಯುದ್ಧ ವಿಮಾನಗಳು ಆರು ರಾಕೆಟ್‌ಗಳ ಮೂಲಕ ಬಾಗ್ದಾದಿ ವಾಸವಾಗಿದ್ದ ಇಡೀ ಕಟ್ಟಡವನ್ನು ನೆಲಸಮ ಮಾಡಿರುವುದಾಗಿ ವರದಿ ತಿಳಿಸಿತು. ಈ ವಿಷಯ ಖಚಿತವಾಗುತ್ತಿದ್ದಂತೆಯೇ ಶನಿವಾರ ಡೊನಾಲ್ಡ್ ಟ್ರಂಪ್  ಮಹತ್ತರ ಘಟನೆಯೊಂದು ಘಟಿಸಿದೆ ಟ್ವೀಟ್ ಮಾಡುವ ಮೂಲಕ ಕುತೂಹಲ ಮೂಡಿಸಿದ್ದರು.

ಶ್ವೇತ ಭವನದ ವಕ್ತಾರ ಹೋಗಾನ್ ಗಿಡ್ಲೈ, ಡೊನಾಲ್ಡ್ ಟ್ರಂಪ್ ಅವರು ಭಾನುವಾರ  (ಭಾರತದಲ್ಲಿ ಸೋಮವಾರ ಬೆಳಗ್ಗೆ) ಬೆಳಗ್ಗೆ ಮಹತ್ತರ ಪ್ರಕಟಣೆಯನ್ನು ಮಾಡಲಿದ್ದಾರೆ ಎಂದು ಹೇಳಿದ್ದರು. ಅದರಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐಸಿಸ್ ಸ್ಥಾಪಕ ಬಗ್ದಾದಿಯನ್ನು ಅಮೆರಿಕ ಪಡೆಗಳು ಹತ್ಯೆಗೈದಿರುವುದನ್ನು ಘೋಷಿಸಿದರು.

ಆದರೆ  ಈ ಬಗ್ಗೆ ರಶ್ಯಾ ಅನುಮಾನ ವ್ಯಕ್ತಪಡಿಸಿದೆ. “ಸಿರಿಯಾದ ಇದ್ಲಿಬ್ ಭಾಗದಲ್ಲಿ ಅಮೆರಿಕ ಸೇನೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ ಎನ್ನುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇತ್ತೀಚಿಗೆ ಈ ಭಾಗದಲ್ಲಿ ಯಾವುದೇ ವಾಯುದಾಳಿ ನಡೆದ ಬಗ್ಗೆ ವರದಿಯಾಗಿಲ್ಲ,” ಎಂದು ರಶ್ಯಾ ಹೇಳಿದೆ.

October 28, 2019 Posted by | ಭಯೋತ್ಪಾದಕ, ವಿಶ್ವ/ ಜಗತ್ತು, Flash News, General Knowledge, News, Spardha, Terror, World | , | 1 Comment

ಐಸಿಸ್ ಮುಖ್ಯಸ್ಥ ಬಾಗ್ದಾದಿ ನಾಯಿಯಂತೆ ಸತ್ತ: ಟ್ರಂಪ್ ಘೋಷಣೆ

This slideshow requires JavaScript.

ಸಹಸ್ರಾರು ಮಂದಿಯನ್ನು ಕೊಲ್ಲಿಸಿದಾತ ರಣಹೇಡಿಯಂತೆ ಸತ್ತ..
ಕೇಯ್ಲಾ ಮುಲ್ಲೆರ್ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ವಾಷಿಂಗ್ಟನ್​: ಸಿರಿಯಾದಲ್ಲಿ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಐಸಿಸ್​ ಮುಖ್ಯಸ್ಥ ಅಬು ಬಕರ್​ ಅಲ್​-ಬಾಗ್ದಾದಿ ನಾಯಿಯಂತೆ ಸತ್ತಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ 2019 ಅಕ್ಟೋಬರ್ 27ರ ಭಾನುವಾರ (ಭಾರತೀಯ ಕಾಲಮಾನ 2019 ಅಕ್ಟೋಬರ್ 28ರ ಸೋಮವಾರ) ಪ್ರಕಟಿಸಿದರು. ಆದರೆ  ಈ ಬಗ್ಗೆ ರಶ್ಯಾ ಅನುಮಾನ ವ್ಯಕ್ತಪಡಿಸಿದೆ.

ಶ್ವೇತಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್​, “ನಾವು ದಾಳಿಗೆ ಮುಂದಾದಾಗ ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಸುರಂಗದೊಳಗೆ ನುಸುಳಿದ್ದ ಆತ ಜೋರಾಗಿ ಅಳುತ್ತಿದ್ದ. ಬಾಗ್ದಾದಿ ಆರೋಗ್ಯ ತುಂಬಾ ಹದಗೆಟ್ಟಿತ್ತು. ಈಗ ಆತ ಮೃತನಾಗಿದ್ದಾನೆ. ನಮ್ಮ ದಾಳಿ ವೇಳೆ ಸಾಕಷ್ಟು ಐಸಿಸ್​ ಉಗ್ರರು ಸಾವನ್ನಪ್ಪಿದ್ದಾರೆ. ವಿಶ್ವ ಈಗ ಮತ್ತಷ್ಟು ಸುರಕ್ಷಿತವಾಗಿದೆ,” ಎಂದು ಹೇಳಿದರು.

ಆದರೆ, “ಸಿರಿಯಾದ ಇಡ್ಲಿಬ್​ ಭಾಗದಲ್ಲಿ ಅಮೆರಿಕ ಸೇನೆ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ ಎನ್ನುವ ಬಗ್ಗೆ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಇತ್ತೀಚಿಗೆ ಈ ಭಾಗದಲ್ಲಿ ಯಾವುದೇ ವಾಯುದಾಳಿ ನಡೆದ ಬಗ್ಗೆ ವರದಿಯಾಗಿಲ್ಲ,” ಎಂದು ರಶ್ಯಾ ಹೇಳಿದೆ.

ದೊಡ್ಡ ಬೆಳವಣಿಗೆಯೊಂದು ಈಗಷ್ಟೇ ನಡೆದಿದೆ’  ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಶನಿವಾರ ರಾತ್ರಿ  ಟ್ವೀಟ್ ಮಾಡಿದ್ದು, ಕುತೂಹಲ ಮೂಡಿಸಿತ್ತು. ಬಾಗ್ದಾದಿ ಮೃತನಾದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು ಎಂದು ಭಾವಿಸಲಾಗಿತ್ತು

ಬಾಗ್ದಾದಿ ಐಸಿಸ್​ ಉಗ್ರ ಸಂಘಟನೆಯ ನಾಯಕ. 2014ರಿಂದಬಾಗ್ದಾದಿ ಭೂಗತ ಆಗಿದ್ದ. ಕಳೆದ ಏಪ್ರಿಲ್​ನಲ್ಲಿ ಐಸಿಸ್​ ವಿಡಿಯೋ ಒಂದನ್ನು ಹರಿಬಿಟ್ಟಿತ್ತು. ಆ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ಬಾಗ್ದಾದಿ ಎಂದು ಹೇಳಲಾಗಿತ್ತು.

ಮೇ 2017ರಲ್ಲಿ ಅಮೆರಿಕ ನಡೆಸಿದ ವಾಯು ದಾಳಿಯಲ್ಲಿ ಬಾಗ್ದಾದಿ ಗಾಯಗೊಂಡಿದ್ದ ಎಂದು 2018ರ ಫೆಬ್ರವರಿಯಲ್ಲಿ ಅಮೆರಿಕ ಸೇನೆ ಹೇಳಿತ್ತು. ಈತ 2010ರಲ್ಲಿ ಐಸಿಸ್​ ನೇತೃತ್ವವನ್ನು ಪಡೆದುಕೊಂಡಿದ್ದ. ಈಗ ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಈತ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ

ಬಾಗ್ದಾದಿ ವಿರುದ್ಧ ಕಾರ್ಯಾಚರಣೆ ನಡೆದಿದ್ದು ಹೇಗೆ?

ಅಮೆರಿಕದ ವಿಶೇಷ ಪಡೆಗಳು ವಾಯುವ್ಯ ಸಿರಿಯಾದಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಮುಖ್ಯಸ್ಥ ಅಬು ಬಕರ್ ಬಾಗ್ದಾದಿ ಹತನಾಗಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಭಾನುವಾರ ಘೋಷಿಸಿದ್ದರು. ವಿಶ್ವದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದ ಬಾಗ್ದಾದಿ ವಿರುದ್ಧ ಅಮೆರಿಕ ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ವಿರುದ್ಧ ನಡೆಸಿದ ಮಾದರಿಯಲ್ಲೇ ಕಾರ್ಯಾಚರಣೆ ನಡೆಸಿದ್ದವು. ಇದೀಗ ಬಾಗ್ದಾದಿ ವಿರುದ್ಧ ಅಮೆರಿಕ ವಿಶೇಷ ಪಡೆ ಕಾರ್ಯಾಚರಣೆ ನಡೆಸಿದ್ದು ಹೇಗೆ ಎಂಬುದು ಬಹಿರಂಗಗೊಂಡಿದೆ.

ಶನಿವಾರವೇ ಆಪರೇಶನ್ ಬಾಗ್ದಾದಿ ಆರಂಭ:

2019 ಅಕ್ಟೋಬರ್ 26ರ ಶನಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಹಿರಿಯ ಸಲಹೆಗಾರರು ಕಂಟ್ರೋಲ್ ರೂಂನಲ್ಲಿ ಬಾಗ್ದಾದಿ ವಿರುದ್ಧದ ಕಾರ್ಯಾಚರಣೆಯ ನೇರ ಪ್ರಸಾರ ವೀಕ್ಷಿಸಲು ಸಜ್ಜಾಗಿ ಕುಳಿತಿದ್ದರು. ಅಮೆರಿಕ ವಿಶೇಷ ಪಡೆಗಳು ಬರೋಬ್ಬರಿ ಆರು ಸಾವಿರ ಮೈಲಿ ದೂರದಲ್ಲಿರುವ ಸಿರಿಯಾದ ಇದ್ಲಿಬ್ ಬಾರಿಶ ಹಳ್ಳಿಯ ಅಡಗುತಾಣದಲ್ಲಿ ಅಡಗಿದ್ದ ಬಾಗ್ದಾದಿ ವಿರುದ್ಧ ರಹಸ್ಯ ಕಾರ್ಯಾಚರಣೆಗೆ ಸಜ್ಜಾಗಿತ್ತು.

ಸಿರಿಯಾದ ಬಾರಿಶ ಹಳ್ಳಿಯಲ್ಲಿ ಬಾಗ್ದಾದಿ ಅಡಗುತಾಣದ ಬಗ್ಗೆ ಸಿಐಎ 48 ಗಂಟೆಗಳ ಕಾಲ ಮಾಹಿತಿಯನ್ನು ಕಲೆ ಹಾಕಿತ್ತು. ಸಿಐಎ ಮಾಹಿತಿ ಮೇರೆಗೆ ಎಂಟು ಸಿಎಚ್ 47 ಹೆಲಿಕಾಪ್ಟರುಗಳು ರಾತ್ರಿ ಉತ್ತರ ಇರಾಕ್ ಕಡೆ ಹೊರಟಿದ್ದವು. ಕ್ರೂರಿ ಅಬು ಬಕರ್ ಬಾಗ್ದಾದಿಯನ್ನು ಗುರಿಯಾಗಿರಿಸಿಕೊಂಡು ಹೊರಟ ಅಮೆರಿಕದ ವಿಶೇಷ ಡೆಲ್ಟಾ ಪಡೆಗಳು ಸಿರಿಯಾದತ್ತ ದಾಂಗುಡಿ ಇಟ್ಟಿದ್ದವು. ಬಾಗ್ದಾದಿ ವಿರುದ್ಧದ ಕಾರ್ಯಾಚರಣೆಗೆ ಇಟ್ಟ ಹೆಸರು “ಕೇಯ್ಲಾ ಮುಲ್ಲೆರ್ (ಈಕೆ ಅಮೆರಿಕದ ಸಮಾಜಸೇವಾ ಕಾರ್ಯಕರ್ತೆ, ಈಕೆಯನ್ನು ಬಾಗ್ದಾದಿ ಹತ್ಯೆಗೈದಿದ್ದ).

ಅಮೆರಿಕದ ಪಡೆಗಳು ಬಾಗ್ದಾದಿಯ ಅಡಗುತಾಣದತ್ತ ಧಾವಿಸುತ್ತಲೇ ಅಪಾಯದ ಮುನ್ಸೂಚನೆ ಅರಿತ ಬಾಗ್ದಾದಿ ಓಡಿಹೋಗಿ ಸುರಂಗದಲ್ಲಿ ಅಡಗಿಕೊಂಡಿದ್ದ. ಸ್ವಯಂ ಚಾಲಿತ ಗನ್ನುಗಳುಗುಂಡಿನ ದಾಳಿ ಆರಂಭಿಸಿದ್ದನ್ನು ಸ್ಥಳೀಯ ಜನರು ಗಮನಿಸಿರುವುದಾಗಿ ವರದಿ ವಿವರಿಸಿತು.

ಇಡೀ ಕಟ್ಟಡವನ್ನೇ ಸ್ಫೋಟಿಸಲು ಟ್ರಂಪ್ ಆದೇಶ ಕೊಟ್ಟಿದ್ದರು. ಅದರಂತೆ ಅಮೆರಿಕದ ಪಡೆಗಳು ಇಡೀ ಕಟ್ಟಡವನ್ನೇ ಬಾಂಬ್ ದಾಳಿಯಿಂದ ಧ್ವಂಸ ಮಾಡಿಬಿಟ್ಟಿದ್ದವು!

ಅಷ್ಟರೊಳಗೆ ಬಾಗ್ದಾದಿ ತನ್ನ ಮೂವರು ಮಕ್ಕಳೊಂದಿಗೆ ಆತ್ಮಾಹುತಿ ಮಾಡಿಕೊಂಡು ಬಿಟ್ಟಿದ್ದ. ಐಸಿಸ್ ಸ್ಥಾಪಕ ಹೀರೋ ರೀತಿ ಸಾವನ್ನಪ್ಪಿಲ್ಲ. ಬದಲಿಗೆ ಬಾಗ್ದಾದಿ ಹೇಡಿಯಂತೆ ಅತ್ತು, ಗೋಗರೆದು ಮಕ್ಕಳ ಜತೆಯೇ ಆತ್ಮಾಹುತಿ ಮಾಡಿಕೊಂಡಿದ್ದಾನೆ ಎಂದು ಟ್ರಂಪ್ ವಿವರಿಸಿದರು.

ಸುರಂಗದೊಳಗಿನ ಬಂಕರಿನೊಳಗೆ ಬಾಗ್ದಾದಿ ಸಾವನ್ನಪ್ಪಿದ್ದ. ಅಷ್ಟೇ ಅಲ್ಲ ಬಾಂಬ್ ಸ್ಫೋಟದಿಂದ ಬಾಗ್ದಾದಿ ದೇಹ ಛಿದ್ರ, ಛಿದ್ರವಾಗಿ ಹೋಗಿತ್ತು. ಅಮೆರಿಕ ಪಡೆಗಳು ಅವಶೇಷಗಳಡಿ ಬಿದ್ದಿದ್ದ ಶವದ ತುಂಡುಗಳನ್ನು ಸಂಗ್ರಹಿಸಿದ್ದವು. ಕಾರ್ಯಾಚರಣೆ ಪಡೆ ಜತೆಗಿದ್ದ ವಿಧಿವಿಜ್ಞಾನ ತಜ್ಞರು ಬಾಗ್ದಾದಿಯ ಡಿಎನ್ಎ ಮಾದರಿಯನನು ಕೊಂಡೊಯ್ದಿದ್ದು, ಅಲ್ಲಿಯೇ ಪರೀಕ್ಷೆಗೊಳಪಡಿಸಿದ್ದವು. ಯಾಕೆಂದರೆ ಈ ಹಿಂದೆ ನಡೆದ ಕೆಲವು ದಾಳಿಯಲ್ಲಿ ಬಾಗ್ದಾದಿ ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತು. ಆದರೆ ಈ ಬಾರಿ ಅಮೆರಿಕ ಪಡೆಯ ದಾಳಿ ಯಶಸ್ವಿ ಕಂಡಿತ್ತು.

ಪ್ರಯೋಗಾಲಯ ತಜ್ಞರು  ಕಾರ್ಯಾಚರಣೆ ನಡೆದ ಸ್ಥಳದಲ್ಲಿಯೇ ಡಿಎನ್ಎ ಪರೀಕ್ಷೆ ನಡೆಸಿ, 15 ನಿಮಿಷಗಳಲ್ಲಿಯೇ ಸಾವನ್ನಪ್ಪಿದ್ದು ಬಾಗ್ದಾದಿ ಎಂಬ ಅಧಿಕೃತ ಸಂದೇಶವನ್ನು ಡೊನಾಲ್ಡ್ ಟ್ರಂಪ್ ಗೆ ರವಾನಿಸಿದ್ದರು.

ಬಾಗ್ದಾದಿ ಸಾವನ್ನಪ್ಪಿದ್ದ ನಂತರವೂ ಅಮೆರಿಕ ಪಡೆಗಳು ಸುಮಾರು ಎರಡು ಗಂಟೆಗಳ ಕಾಲ ಆವರಣದಲ್ಲಿ ಕಾರ್ಯಾಚರಣೆ ನಡೆಸಿ, ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆಗೆ ಸೇರಿದ್ದ ಸೂಕ್ಷ್ಮ ವಸ್ತುಗಳನ್ನು (ಮಹತ್ವದ ಮಾಹಿತಿ, ಮುಂದಿನ ದಾಳಿ ಕುರಿತ ಸ್ಕೆಚ್) ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿತು.

ನಂತರ ಅಮೆರಿಕದ ಯುದ್ಧ ವಿಮಾನಗಳು ಆರು ರಾಕೆಟ್ ಗಳ ಮೂಲಕ ಇಡೀ ಬಾಗ್ದಾದಿ ಕಟ್ಟಡವನ್ನು ನೆಲಸಮ ಮಾಡಿರುವುದಾಗಿ ವರದಿ ವಿವರಿಸಿತು. ಈ ವಿಷಯ ಖಚಿತವಾಗುತ್ತಿದ್ದಂತೆಯೇ ಶನಿವಾರ ಡೊನಾಲ್ಡ್ ಟ್ರಂಪ್ (ಭಾರತದಲ್ಲಿ ಭಾನುವಾರ ಸಂಜೆ) ಮಹತ್ತರ ಘಟನೆಯೊಂದ ನಡೆದಿದೆ ಎಂದು ಟ್ವೀಟ್ ಮಾಡುವ ಮೂಲಕ ಕುತೂಹಲ ಮೂಡಿಸಿದ್ದರು.

ಶ್ವೇತ ಭವನದ ವಕ್ತಾರ ಹೋಗಾನ್ ಗಿಡ್ಲೈ, ಡೊನಾಲ್ಡ್ ಟ್ರಂಪ್ ಅವರು ಭಾನುವಾರ  (ಭಾರತದಲ್ಲಿ ಸೋಮವಾರ ಬೆಳಗ್ಗೆ) ಬೆಳಗ್ಗೆ ಮಹತ್ತರ ಪ್ರಕಟಣೆಯನ್ನು ತಿಳಿಸಲಿದ್ದಾರೆ ಎಂದು ಹೇಳಿದ್ದರು. ಅದರಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಐಸಿಸ್ ಸ್ಥಾಪಕ ಬಗ್ದಾದಿಯನ್ನು ಅಮೆರಿಕ ಪಡೆಗಳು ಹತ್ಯೆಗೈದಿರುವುದನ್ನು ಘೋಷಿಸಿದರು.

 

October 28, 2019 Posted by | ಭಯೋತ್ಪಾದಕ, ವಿಶ್ವ/ ಜಗತ್ತು, Flash News, General Knowledge, News, Spardha, Terror, World | , | 1 Comment

ಸಿರಿಯಾದಲ್ಲಿ ಅಮೆರಿಕದ ಸೇನಾ ದಾಳಿ: ಐಸಿಸ್ ಮುಖ್ಯಸ್ಥ ಬಾಗ್ದಾದಿ ಸಾವು

27 abu bakar al bagdadi
ವಾಷಿಂಗ್ಟನ್:
ವಾಯುವ್ಯ ಸಿರಿಯಾದಲ್ಲಿ ಅಮೆರಿಕ ಸೇನೆ 2019 ಅಕ್ಟೋಬರ್ 26ರ ಶನಿವಾರ ಶನಿವಾರ ನಡೆಸಿದ ದಾಳಿಯಲ್ಲಿ ಐಸಿಸ್ ನಾಯಕ ಅಬೂಬಕರ್ ಅಲ್-ಬಾಗ್ದಾದಿ ಸಾವನ್ನಪ್ಪಿದ್ದಾನೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು 2019 ಅಕ್ಟೋಬರ್ 27ರ ಭಾನುವಾರ ತಿಳಿಸಿದರು

ಡಿಎನ್‌ಎ ಮತ್ತು ಬಯೋಮೆಟ್ರಿಕ್ ಪರೀಕ್ಷೆಯಿಂದ ಬಾಗ್ದಾದಿ ಸಾವಿನ ಬಗ್ಗೆ ಅಂತಿಮ ದೃಢೀಕರಣ ಲಭಿಸಲಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಅಮೆರಿಕ ಸೇನಾ ದಾಳಿಯ ಸಮಯದಲ್ಲಿ ಬಾಗ್ದಾದಿ ತಾನು ಧರಿಸಿಕೊಂಡಿದ್ದ ಸ್ಫೋಟಕ ಕಟ್ಟಿಕೊಂಡ ಆತ್ಮಹತ್ಯೆ ಉಡುಪನ್ನು ಸ್ಫೋಟಿಸಿಕೊಂಡಿದ್ದಾನೆ ಎಂದು  ಎಂದು ರಕ್ಷಣಾ ಅಧಿಕಾರಿ ತಿಳಿಸಿದರು.

ಐಸಿಸ್ ನಾಯಕನ ಗುರುತು ಪತ್ತೆ ಹಚ್ಚಲು ಸಿಐಎ ಸಹಕರಿಸಿದೆ ಎಂದು ರಕ್ಷಣಾ ಅಧಿಕಾರಿ ಹೇಳಿದರು.

ಬಾಗ್ದಾದಿಯನ್ನು ಕೊಲ್ಲಲಾಗಿದೆ ಎಂದು ನಂಬಲಾಗಿದೆ ಎಂದು ನ್ಯೂಸ್ವೀಕ್ ಮೊದಲು ವರದಿ ಮಾಡಿತು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಬೆಳಿಗ್ಗೆ ೯ ಗಂಟೆಗೆ (ಸಂಜೆ ೦೬:೩೦ ಕ್ಕೆ) ಪ್ರಮುಖ ಘೋಷಣೆ ಮಾಡಲಿದ್ದಾರೆ ಎಂದು ಶ್ವೇತಭವನದ ಉಪ ಪತ್ರಿಕಾ ಕಾರ್ಯದರ್ಶಿ ಹೊಗನ್ ಗಿಡ್ಲಿ ಪ್ರಕಟಿಸಿದ್ದರು.

ಆಡಳಿತ ಅಧಿಕಾರಿಯೊಬ್ಬರು ಸಿಎನ್‌ಎನ್‌ಗೆ ಪ್ರಕಟಣೆ ವಿದೇಶಿ ನೀತಿಗೆ ಸಂಬಂಧಿಸಿದೆ ಎಂದು ಹೇಳಿದರು. ಪ್ರತಿಕ್ರಿಯೆ ಕೋರಿ ಮಾಡಿದ  ಪೆಂಟಗನ್  ತತ್ ಕ್ಷಣ ಸ್ಪಂದಿಸಲಿಲ್ಲ.

ಭಯೋತ್ಪಾದಕ ಗುಂಪಿನ ಮುಖಂಡ ಬಾಗ್ದಾದಿ ಕಳೆದ ಐದು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ.  ಏಪ್ರಿಲ್ ತಿಂಗಳಲ್ಲಿ  ಐಸಿಸ್ ಮಾಧ್ಯಮ ವಿಭಾಗದ ಅಲ್-ಫರ್ಖಾನ್ ವೀಡಿಯೊವನ್ನು ಪ್ರಕಟಿಸಿತ್ತು. ವಿಡಿಯೋ ಒಬ್ಬ ವ್ಯಕ್ತಿಯನ್ನು ಬಾಗ್ದಾದಿ ಎಂದು ತೋರಿಸಿತ್ತು. ಮೊಸುಲ್‌ನ ಗ್ರೇಟ್ ಮಸೀದಿಯಲ್ಲಿ ಮಾತನಾಡಿದ್ದ ಬಾಗ್ದಾದಿಯನ್ನು ಜುಲೈ ೨೦೧೪ ರ ಇದೇ ಮೊದಲು ಆಗಿತ್ತು.

ಫೆಬ್ರವರಿ ೨೦೧೭ ರಲ್ಲಿ, ಹಲವಾರು ಅಮೆರಿಕನ್  ಅಧಿಕಾರಿಗಳು ಬಾಗ್ದಾದಿ ಮೇ ೨೦೧೭ ರಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಗಾಯಗೊಂಡಿದ್ದುದಾಗಿಯೂ, ಈ ಗಾಯಗಳ ಪರಿಣಾಮವಾಗಿ ಆತ  ಐದು ತಿಂಗಳವರೆಗೆ ಭಯೋತ್ಪಾದಕ ಗುಂಪಿನ ನಿಯಂತ್ರಣವನ್ನು ತ್ಯಜಿಸಬೇಕಾಯಿತು ಎಂದೂ ಹೇಳಿದ್ದರು.

ಬಾಗ್ದಾದಿ ೨೦೧೦ ರಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ (ಐಎಸ್‌ಐ) ಉಗ್ರ ಸಂಘಟನೆಯ ನಾಯಕನಾಗಿದ್ದ.  ೨೦೧೩ ರಲ್ಲಿ, ಸಿರಿಯಾದಲ್ಲಿ ಅಲ್ ಖೈದಾ ಬೆಂಬಲಿತ ಉಗ್ರಗಾಮಿ ಗುಂಪನ್ನು ಸೇರ್ಪಡೆ ಮಾಡಿಕೊಳ್ಳುವುದಾಗಿ  ಐಎಸ್‌ಐ ಘೋಷಿಸಿತು ಮತ್ತು ಬಾಗ್ದಾದಿ ತನ್ನ ಗುಂಪನ್ನು ಈಗ ಇರಾಕಿನಲ್ಲಿ  ಇಸ್ಲಾಮಿಕ್ ಸ್ಟೇಟ್ ಮತ್ತು ಲೆವಂಟ್. (ಐಎಸ್‌ಐಎಲ್ ಅಥವಾ ಐಸಿಸ್) ಎಂದು ಕರೆಯಲಾಗುವುದು ಎಂದು ಪ್ರಕಟಿಸಿದ್ದ.

ಶ್ವೇತಭವನದ ಅಧಿಕಾರಿಗಳು ಶನಿವಾರ ತಡರಾತ್ರಿಯವರೆಗೂ  ಶ್ವೇತಭವನದಲ್ಲಿದ್ದರು.

ಶನಿವಾರ ರಾತ್ರಿ ಡೊನಾಲ್ಡ್ ಟ್ರಂಪ್ ಅವರು  “ತುಂಬಾ ದೊಡ್ಡದಾದದ್ದು ಸಂಭವಿಸಿದೆ” ಎಂದು ಟ್ವೀಟ್ ಮಾಡಿ, ಎಲ್ಲೆಡೆ ಊಹಾಪೋಹ ಹುಟ್ಟು ಹಾಕಿದ್ದರು.

October 28, 2019 Posted by | ಭಯೋತ್ಪಾದಕ, ವಿಶ್ವ/ ಜಗತ್ತು, Flash News, General Knowledge, News, Spardha, Terror, World | | Leave a comment

೫.೪ ಲಕ್ಷ ಹಣತೆಗಳ ಬೆಳಕಿನಲ್ಲಿ ಅಯೋಧ್ಯೆ ಝಗಮಗ, ಹೊಸ ವಿಶ್ವದಾಖಲೆ ಸೃಷ್ಟಿ

This slideshow requires JavaScript.

ದೀಪೋತ್ಸವಕ್ಕೆ ಸಾಕ್ಷಿಯಾದ ಸಿಎಂ ಯೋಗಿ ಆದಿತ್ಯನಾಥ್

ನವದೆಹಲಿ/ ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿ ದಂಡೆಯಲ್ಲಿನ ’ರಾಮ್ ಕಿ ಪೈದಿ’2019 ಅಕ್ಟೋಬರ್ 26ರ  ಶನಿವಾರ ಬೆಳಕಿನ ಹಬ್ಬವಾದ ’ದೀಪೋತ್ಸವ’ದಲ್ಲಿ ೫ ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳ ದೀಪಗಳ ಬೆಳಕಿನಲ್ಲಿ ಝಗಮಗಿಸಿತು. ಇದರೊಂದಿಗೆ ಹೊಸ ವಿಶ್ವದಾಖಲೆಯೂ ಸೃಷ್ಟಿಯಾಯಿತು.

ರಾಜ್ಯದ ಬಿಜೆಪಿ ಸರ್ಕಾರವು ಆಯೋಜಿಸಿದ ದೀಪೋತ್ಸವದ ಅಂಗವಾಗಿ ಅಯೋಧ್ಯೆಯನ್ನು ಝಗಮಗಿಸುವಂತೆ ಮಾಡಿದ ಈ ಸಂಭ್ರಮಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಕ್ಷಿಯಾದರು.

ಈ ವರ್ಷದ ದೀಪೋತ್ಸವದಲ್ಲಿ ಫಿಜಿಯ ಸಚಿವೆ ವೀಣಾ ಭಟ್ನಾಗರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮೊದಲ ಹಣತೆಯನ್ನು ಬೆಳಗಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಮತ್ತು ರಾಜ್ಯ ಸರ್ಕಾರದ ಹಲವಾರು ಸಚಿವರು ಈ ಸಂದರ್ಭದಲ್ಲಿ ಹಾಜರಿದ್ದರು.

‘ಲಕ್ಷ ದೀಪೋತ್ಸವ’ವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಮಂದಿ ರಾಮ್ ಕಿ ಪೈದಿಯಲ್ಲಿ ಜಮಾಯಿಸಿದ್ದರು.

ಭಾರತೀಯ ಮೂಲದವರಾದ ಫಿಜಿಯ ಮಹಿಳೆಯರು, ಮಕ್ಕಳು ಮತ್ತು ದಾರಿದ್ರ್ಯ ನಿವಾರಣಾ ಸಹಾಯಕ ಸಚಿವೆ ವೀಣಾ ಭಟ್ನಾಗರ್ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶುಕ್ರವಾರ ಸಂಜೆಯೇ ಲಕ್ನೋ ತಲುಪಿದ್ದರು. ಈ ಸಂದರ್ಭದಲ್ಲಿ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತೆಗೆ ಸಂಕ್ಷಿಪ್ತ ಸಂಭಾಷಣೆ ನಡೆಸಿದರು.

೨೦೧೭ರ ಮಾರ್ಚ್ ತಿಂಗಳಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದ ೭ ತಿಂಗಳ ಬಳಿಕ, ಯೋಗಿ ಆದಿತ್ಯನಾಥ್ ಸರ್ಕಾರವು ೨೦೧೭ರ ಅಕ್ಟೋಬರಿನಲ್ಲಿ ಮೊತ್ತ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಆಚರಿಸಿತ್ತು. ಕಳೆದ ವರ್ಷವೂ ದೀಪೋತ್ಸವ ನಡೆದಿತ್ತು. ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜುಂಗ್-ಸೂಕ್ ಅವರು ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಕಳೆದ ವರ್ಷ ೩೦೦,೧೫೨ ಹಣತೆಗಳನ್ನು ಬೆಳಗುವ ಮೂಲಕ ವಿಶ್ವದಾಖಲೆ ಸ್ಥಾಪಿಸಲಾಗಿತ್ತು. ಈ ವರ್ಷ ಈ ದಾಖಲೆಯನ್ನು ಮುರಿದು ಹೊಸ ಗಿನ್ನೆಸ್ ವಿಶ್ವದಾಖಲೆ ಸ್ಥಾಪಿಸುವ ಸಲುವಾಗಿ ಜಿಲ್ಲಾ ಆಡಳಿತವು ೫,೫೧,೦೦೦ ಮಣ್ಣಿನ ಹಣತೆಗಳನ್ನು ಬೆಳಗುವ ಕಾರ್‍ಯಕ್ರಮ ಹಮ್ಮಿಕೊಂಡಿತ್ತು.

ಯೋಜನೆಯ ಪ್ರಕಾರ ರಾಮ್ ಕಿ ಪೈದಿಯಲ್ಲಿ ಸುಮಾರು ೪ ಲಕ್ಷ ಮತ್ತು ದೇಗುಲ ನಗರಿಯ ಇತರ ಕಡೆಗಳಲ್ಲಿ ಉಳಿದ ಹಣತೆಗಳನ್ನು ಬೆಳಗಲಾಯಿತು.

ದೀಪೋತ್ಸವವನ್ನು ದಾಖಲಿಸಿಕೊಳ್ಳಲು ಗಿನ್ನೆಸ್ ವಿಶ್ವದಾಖಲೆಯ ತಂಡವೊಂದು ಕೂಡಾ ಅಯೋಧ್ಯೆಗೆ ಆಗಮಿಸಿತ್ತು.

ಹಣತೆಗಳನ್ನು ಬೆಳಗುವುದಕ್ಕೆ ಮುನ್ನ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಶ್ರೀರಾಮನ ಟ್ಯಾಬ್ಲೋ ಮೆರವಣಿಗೆಯನ್ನೂ ನಡೆಸಲಾಯಿತು.

ಮಧ್ಯಪ್ರದೇಶ, ಜಾರ್ಖಂಡ್ ಮತ್ತು ರಾಜಸ್ಥಾನದಂತಹ ವಿವಿಧ ರಾಜ್ಯಗಳ ಕಲಾವಿದರು ದೀಪೋತ್ಸವಕ್ಕಾಗಿ ಶ್ರೀರಾಮ, ಶ್ರೀಕೃಷ್ಣ ಮತ್ತು ಹನುಮಾನ್ ವೇಷಗಳನ್ನು ಧರಿಸಿ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳ ಮೂಲಕ ಸಂಭ್ರಮಕ್ಕೆ ಕಳೆಗಟ್ಟಿದರು.

‘ಇಲ್ಲಿಗೆ ಬಂದಿರುವುದಕ್ಕೆ ಅತ್ಯಂತ ಖುಷಿಯಾಗುತ್ತಿದೆ. ಇದೊಂದು ಮಹಾನ್ ಅನುಭವ. ನಮಗೆ ಇಲ್ಲಿ ಹಲವಾರು ಮಂದಿಯನ್ನು ವಿವಿಧ ರಾಜ್ಯಗಳ ಕಲಾವಿದರನ್ನು ಭೇಟಿ ಮಾಡಲು ಸಾಧ್ಯವಾಯಿತು’ ಎಂದು ಕಲಾವಿದರೊಬ್ಬರು ಸುದ್ದಿ ಸಂಸ್ಥೆಯ ಬಳಿ ಮಾತನಾಡುತ್ತಾ ಹೇಳಿದರು.

ಅಮೋಘ ದೀಪೋತ್ಸವ ಸಂಭ್ರಮಕ್ಕಾಗಿ ಪ್ರದೇಶದ ನಿವಾಸಿಗಳಲ್ಲದೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರೂ ಆಗಮಿಸಿದ್ದರು.

‘ನಾವು ಇಲ್ಲಿಗೆ ಮಧ್ಯಪ್ರದೇಶದ ನೇಪಾನಗರದಿಂದ ಬಂದಿದ್ದೇವೆ. ದೀಪೋತ್ಸವದಲ್ಲಿ ಪಾಲ್ಗೊಂಡಿರುವುದು ನಮ್ಮಗೆ ಗೌರವದ ಸಂಗತಿಯಾಗಿದೆ. ನಾವು ಇಲ್ಲಿ ಭಗೋರಿಯಾ ಜಾನಪದ ನೃತ್ಯವನ್ನು ಪ್ರದರ್ಶಿಸುತ್ತಿದ್ದೇವೆ’ ಎಂದು ನೇಪಾನಗರ ಮೂಲಕ ನೃತ್ಯ ತಂಡದ ಅಧ್ಯಕ್ಷ ಮುಖೇಶ ದರ್ಬಾರ್ ಹೇಳಿದರು.

ಅಯೋಧ್ಯೆಯಲ್ಲಿ ಮೂರು ದಿನಗಳ ದೀಪೋತ್ಸವ ಸಂಭ್ರಮ ಗುರುವಾರ ಆರಂಭವಾಗಿತ್ತು. ಎರಡನೇ ದಿನ ಗುಪ್ತರ ಘಾಟ್ ಮತ್ತು ಭಜನಾಸ್ಥಳದಲ್ಲಿ ಹಲವಾರು ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂಡೋನೇಷ್ಯ ಮತ್ತು ನೇಪಾಳದ ಕಲಾವಿದರು ರಾಮಲೀಲಾ ಪ್ರದರ್ಶಿಸಿದರು.

ಬಿಹಾರದ ಜಾನಪದ ಗೀತೆಗಳೂ ಮತ್ತು ಛತ್ತಿಸ್ ಗಢದ ಜಾನಪದ ನೃತ್ಯ ಎರಡನೇ ದಿನದ ಪ್ರಮುಖ ಆಕರ್ಷಣೆಗಳಾಗಿದ್ದವು.

ದೀಪಾವಳಿಯ ದಿನವಾದ ಭಾನುವಾರ ರಾಮಕೋಟ್ ಪ್ರದೇಶದಲ್ಲಿನ ಎಲ್ಲ ದೇವಾಲಯಗಳು ಮತ್ತು ರಾಮಜನ್ಮಭೂಮಿ-ಬಾಬರಿ ಮಸೀದಿ ಆವರಣದ ಸುತ್ತಮುತ್ತಣ ಮನೆಗಳಲ್ಲಿ ಸಂತರು ೧,೫೦,೦೦ ಹಣತೆಗಳನ್ನು ಬೆಳಗಲಿದ್ದಾರೆ.

ರಾಮ ಜನ್ಮಭೂಮಿ ನ್ಯಾಸವು ವಿವಾದಿತ ನಿವೇಶನ ಮತ್ತು ಸುತ್ತಮುತ್ತಣ ಜಾಗದಲ್ಲಿ ದೀಪಾವಳಿಯಂದು ಹಣತೆ ಬೆಳಗಲು ಅನುಮತಿ ನೀಡುವಂತೆ ಫೈಜಾಬಾದ್ ವಿಭಾಗದ ಡಿವಿಷನಲ್ ಕಮೀಷನರ್ ಅವರ ಬಳಿ ಅನುಮತಿ ಕೋರಿತ್ತು. ಆದರೆ ಅದಕ್ಕೆ ಅನುಮತಿ ನಿರಾಕರಿಸಲಾಗಿತ್ತು.

October 26, 2019 Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, culture, Festival, Flash News, General Knowledge, India, Nation, News, Spardha, Temples, Temples, ದೇವಾಲಯಗಳು | , , , , , , , | Leave a comment

ಸಿಎಂ ಹುದ್ದೆ: ಲಿಖಿತ ಭರವಸೆ ಶಿವಸೇನೆ ಪಟ್ಟು, ‘ಮಹಾ’ಸರ್ಕಾರ ರಚನೆ ಇನ್ನೂ ಕಗ್ಗಂಟು

26 uddhav with mlasಬಿಜೆಪಿ ಶಾಸಕಾಂಗ ಪಕ್ಷದ ಸಭೆ ಅಕ್ಟೋಬರ್ ೩೦ಕ್ಕೆ

ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸರಳ ಬಹುಮತ ಪಡೆದಿದ್ದರೂ, ಶಿವಸೇನೆಯು ೫೦:೫೦ ಸೂತ್ರದಂತೆ ಅಧಿಕಾರ ಹಂಚಿಕೆಗೆ ಬಿಗಿಪಟ್ಟು ಹಿಡಿದ ಪರಿಣಾಮವಾಗಿ ಸರ್ಕಾರ ರಚನೆ 2019 ಅಕ್ಟೋಬರ್ 26ರ  ಶನಿವಾರವೂ ಕಗ್ಗಂಟಾಗಿಯೇ ಮುಂದುವರೆಯಿತು. ಈ ಮಧ್ಯೆ ಬಿಜೆಪಿಯು ಶಾಸಕಾಂಗ ಪಕ್ಷದ ಸಭೆಯನ್ನು ದೀಪಾವಳಿ ಹಬ್ಬ ಮುಗಿದ ಬಳಿಕ ಅಕ್ಟೋಬರ್ ೩೦ರಂದು ನಡೆಸಲು ತೀರ್ಮಾನಿಸಿತು. ಹೀಗಾಗಿ ’ಮಹಾಸರ್ಕಾರ ರಚನೆ’ಯ ಕಗ್ಗಂಟು ಇನ್ನೂ ೪ ದಿನ ವಿಸ್ತರಿಸಿದಂತಾಯಿತು.

೫೦:೫೦ ಸೂತ್ರದ ಪ್ರಕಾರ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ಬಗ್ಗೆ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯಬೇಕು ಎಂದು ಶಿವಸೇನಾ ಶಾಸಕರು 2019 ಅಕ್ಟೋಬರ್ 26ರ  ಶನಿವಾರ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಗ್ರಹಿಸಿದರು. ಆದರೆ ಅಂತಿಮ ನಿರ್ಧಾರವನ್ನು ಠಾಕ್ರೆ ಅವರಿಗೆ ವಹಿಸಿದರು.

ಶಿವಸೇನೆಯ ಕೆಲವು ಶಾಸಕರು ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ಏರಬೇಕು ಎಂಬ ಪ್ರಸ್ತಾಪವನ್ನು ಬೆಂಬಲಿಸಿದರು, ಆದಾಗ್ಯೂ ಸರ್ಕಾರ ರಚನೆ ಕುರಿತ ಅಂತಿಮ ನಿರ್ಧಾರವನ್ನು ಉದ್ಧವ್ ಠಾಕ್ರೆಯವರಿಗೆ ಬಿಟ್ಟರು ಎಂದು ವರದಿಗಳು ತಿಳಿಸಿದವು.

ಚುನಾವಣೆಯಲ್ಲಿ ಗೆದ್ದಿರುವ ೫೬ ಮಂದಿ ಶಿವಸೇನಾ ಶಾಸಕರು ಶನಿವಾರ ಮುಂಬೈಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಅವರ ಮಾತೋಶ್ರೀ ನಿವಾಸದಲ್ಲಿ ಭೇಟಿ ಮಾಡಿದರು ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರದ ಸಮಾನ ಹಂಚಿಕೆ  ಒಪ್ಪಂದವನ್ನು ಗೌರವಿಸುವ ನಿಟ್ಟಿನಲ್ಲಿ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯುವಂತೆ ಆಗ್ರಹಿಸಿದರು. ಈ ವರ್ಷ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಕಾಲದಲ್ಲಿ ಮೈತ್ರಿಕೂಟವು ಒಪ್ಪಿಕೊಳ್ಳಲಾಗಿತ್ತು ಎನ್ನಲಾಗಿರುವ ’ಮಹಾರಾಷ್ಟ್ರದಲ್ಲಿ ಅಧಿಕಾರದ ಸಮಾನ ಹಂಚಿಕೆ ಒಪ್ಪಂದ’ಕ್ಕೆ ಬದ್ಧವಾಗುವಂತೆ ಬಿಜೆಪಿಯನ್ನು ಆಗ್ರಹಿಸಬೇಕು ಎಂದು ಅವರು ಹೇಳಿದರು.

ಬಿಜೆಪಿಯು ಒಪ್ಪಂದವನ್ನು ಗೌರವಿಸದೆ, ಅಕ್ಟೋಬರ್ ೨೧ರಂದು ನಡೆದ ಚುನಾವಣೆಯಲ್ಲಿ ವಿಧಾನಸಭೆಯ ೨೮೮ ಸ್ಥಾನಗಳ ಪೈಕಿ ಹೆಚ್ಚಿನ ಸ್ಥಾನಗಳಿಗೆ ಸ್ಪರ್ಧಿಸಿ, ಶಿವಸೇನೆಗೆ ಕೇವಲ ೧೨೪ ಸ್ಥಾನಗಳನ್ನು ಹೋರಾಟಕ್ಕಾಗಿ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಲಿಖಿತ ಭರವಸೆ ಪಡೆಯಬೇಕಾದ ಅಗತ್ಯ ಬಂದಿದೆ ಎಂದು ಸೇನಾ ಸಂಸತ್ ಸದಸ್ಯರು ಹೇಳಿದರು.

ಸಭೆಯಲ್ಲಿ ಹಾಜರಿದ್ದ ಥಾಣೆಯ ಓವಾಲ-ಮಜಿವಾಡದ ಪಕ್ಷದ ಶಾಸಕ ಪ್ರತಾಪ್ ಸರ್ನಾಯಕ್ ಅವರು ಮುಖ್ಯಮಂತ್ರಿ ಸ್ಥಾನವನ್ನು ಸಮಾನವಾಗಿ ಹಂಚಿಕೊಳ್ಳುವ ಬಗ್ಗೆ ಬಿಜೆಪಿ ಲಿಖಿತ ಭರವಸೆ ನೀಡದ ಹೊರತು ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗುವುದಿಲ್ಲ ಎಂದು ನುಡಿದರು.

‘ಅಂತಿಮ ನಿರ್ಧಾರ ಕೈಗೊಳ್ಳಲು ಉದ್ಧವ್ ಜಿ ಅವರಿಗೆ ಪೂರ್ಣ ಅಧಿಕಾರ ನೀಡಲು ಎಲ್ಲ ಶಾಸಕರು ನಿರ್ಧರಿಸಿದರು. ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವುದು ಸೇರಿದಂತೆ ೫೦:೫೦ ಅಧಿಕಾರ ಹಂಚಿಕೆ ಒಪ್ಪಂದವನ್ನು ಬಿಜೆಪಿಯ ವರಿಷ್ಠ ನಾಯಕತ್ವವು ಗೌರವಿಸಬೇಕು ಎಂದು ಸಭೆ ನಿರ್ಧರಿಸಿತು. ನಾವು ಬಿಜೆಪಿಯಿಂದ ಲಿಖಿತ ಭರವಸೆಯನ್ನು ಬಯಸುತ್ತೇವೆ’ ಎಂದು ಸರ್ನಾಯಕ್ ಹೇಳಿದರು.

ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳಬೇಕು ಎಂಬುದಾಗಿ ನಾವು ಬಯಸಿದ್ದರೂ, ಉನ್ನತ ಸ್ಥಾನಕ್ಕೆ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ಗುಹಗರ್ ಶಾಸಕ ಭಾಸ್ಕರ ಜಾಧವ್ ಹೇಳಿದರು.

ಶಿವಸೇನೆಯು ತಾನು ಸ್ಪರ್ಧಿಸಿದ್ದ ೧೨೪ ಸ್ಥಾನಗಳ ಪೈಕಿ ೫೬ ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯು ತಾನು ಸ್ಪರ್ಧಿಸಿದ್ದ ೧೬೪ ಸ್ಥಾನಗಳ ಪೈಕಿ ೧೦೫ ಸ್ಥಾನಗಳನ್ನು ಜಯಿಸಿದೆ.

ಸುದ್ದಿ ಸಂಸ್ಥೆಯ ವರದಿ ಪ್ರಕಾರ ಪಕ್ಷದ ಕೆಲವು ಶಾಸಕರು ಉದ್ಧವ್ ಠಾಕ್ರೆಯ ಅವರ ಪುತ್ರ ಆದಿತ್ಯ ಠಾಕ್ರೆಯವರು ಮುಖ್ಯಮಂತ್ರಿಯಾಗುವುದನ್ನು ತಾವು ಬಯಸಿರುವುದಾಗಿ ಹೇಳಿದರು.

‘ಆದಿತ್ಯ ಠಾಕ್ರೆ ಅವರು ಮುಂದಿನ ಮುಖ್ಯಮಂತ್ರಿಯಾಗುವುದನ್ನು ನಾವು ನೋಡಬಯಸಿದ್ದೇವೆ. ಆದರೆ ಉದ್ಧವ್ ಜಿ ಅವರು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ಪ್ರತಾಪ್ ಸರ್ನಾಯಕ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯು ವರದಿ ಮಾಡಿತು.

ಆದಿತ್ಯ ಠಾಕ್ರೆ ಅವರು ಠಾಕ್ರೆ ಕುಟುಂಬದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಮೊತ್ತ ಮೊದಲ ವ್ಯಕ್ತಿಯಾಗಿದ್ದು, ಚುನಾವಣೆಗೆ ಮುಂಚೆ ಉಪ ಮುಖ್ಯಮಂತ್ರಿ ಸ್ಥಾನದ ಸಂಭಾವ್ಯ ಅಭ್ಯರ್ಥಿ ಎಂಬುದಾಗಿ ಚುನಾವಣೆಗೆ ಮುನ್ನ ವ್ಯಾಪಕವಾಗಿ ಭಾವಿಸಲಾಗಿತ್ತು.

ಶಿವಸೇನೆಯು ತಮ್ಮನ್ನು ಸಂಪರ್ಕಿಸಿದರೆ ಮುಖ್ಯಮಂತ್ರಿ ಹುದ್ದೆಗೆ ಅವರ ಹಕ್ಕು ಪ್ರತಿಪಾದನೆಯನ್ನು  ಪಕ್ಷದ ವರಿಷ್ಠ ಮಂಡಳಿಯು ಪರಿಗಣಿಸುವುದು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರೊಬ್ಬರು ಶನಿವಾರ ಹೇಳುವ ಮೂಲಕ ಚುನಾವಣಾ ನಂತರದ ಬೆಳವಣಿಗೆಗಳಿಗೆ ಹೊಸ ಆಯಾಮ ನೀಡಿದ್ದರು.

‘ನಮಗೆ ವಿರೋಧ ಪಕ್ಷದ ಪಾತ್ರವನ್ನು ವಹಿಸಲಾಗಿದೆ ಮತ್ತು ನಾವು ಅದನ್ನು ಮಾಡುತ್ತೇವೆ. ಆದರೆ, ಏನಾದರೂ ಪರ್‍ಯಾಯ ಬಗ್ಗೆ ಚರ್ಚಿಸಬೇಕಾಗಿದ್ದರೆ, ಆಗ ಶಿವಸೇನೆಯು ನಮ್ಮ ಬಳಿಗೆ ಬರಬೇಕು. ಇಲ್ಲಿಯವರೆಗೆ ಅವರು ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ವಿಜಯ್ ವಡೆಟ್ಟಿವಾರ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಮಹಾರಾಷ್ಟ್ರ ಬಿಜೆಪಿಯು ತನ್ನ ಸದನ ನಾಯಕನ ಆಯ್ಕೆಗಾಗಿ, ತನ್ನ ನೂತನ ಚುನಾಯಿತ ಶಾಸಕರ ಸಭೆಯನ್ನು ದೀಪಾವಳಿ ಹಬ್ಬದ ಬಳಿಕ ಅಕ್ಟೋಬರ್ ೩೦ಕ್ಕೆ ಸಮಾವೇಶಗೊಳಿಸಿದೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಚಂದ್ರಕಾಂತ  ಪಾಟೀಲ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.

October 26, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , | Leave a comment

ಹರಿಯಾಣ: ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಆಹ್ವಾನ

26 governor, khatter, choutla othersಇಂದು ಎಂಎಲ್ ಖಟ್ಟರ್, ದುಷ್ಯಂತ ಚೌಟಾಲ ಪ್ರಮಾಣವಚನ

ನವದೆಹಲಿ: ಹರಿಯಾಣ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್‍ಯ ಅವರು ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಶನಿವಾರ ಆಹ್ವಾನ ನೀಡಿದ್ದು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕಾಂಗ ನಾಯಕ ಮನೋಹರ ಲಾಲ್ ಖಟ್ಟರ್ ಮುಖ್ಯಮಂತ್ರಿಯಾಗಿಯೂ ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ದುಷ್ಯಂತ ಚೌಟಾಲ ಅವರು ಉಪಮುಖ್ಯಮಂತ್ರಿಯಾಗಿಯೂ 2019 ಅಕ್ಟೋಬರ್ 27ರ ಭಾನುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ದುಷ್ಯಂತ ಚೌಟಾಲ ನೇತೃತ್ವದ ಜನನಾಯಕ ಜನತಾ ಪಕ್ಷದ (ಜೆಜೆಪಿ) ಬೆಂಬಲದೊಂದಿಗೆ ಬಿಜೆಪಿಯು ರಾಜ್ಯದಲ್ಲಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ ಬಳಿಕ ಈ ಸ್ವತಃ ಖಟ್ಟರ್ ಅವರು 2019 ಅಕ್ಟೋಬರ್ 26ರ  ಶನಿವಾರ ಈ ವಿಚಾರವನ್ನು ಪ್ರಕಟಿಸಿದರು.

‘ಹರಿಯಾಣ ರಾಜ್ಯಪಾಲರು ಭಾನುವಾರ ಸರ್ಕಾರ ರಚಿಸುವಂತೆ ನಮಗೆ ಆಹ್ವಾನ ನೀಡಿದ್ದಾರೆ’ ಎಂದು ಖಟ್ಟರ್ ನುಡಿದರು. ದೀಪಾವಳಿ ಹಬ್ಬದ ದಿನವಾದ ಭಾನುವಾರ ಮಧ್ಯಾಹ್ನ ೨.೧೫ ಗಂಟೆಗೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಅವರು ನುಡಿದರು.

‘ಚೌಟಾಲ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವರು. ಬಿಜೆಪಿಯ ೪೦, ಜೆಜೆಪಿಯ ೧೦ ಮತ್ತು ೭ ಮಂದಿ ಪಕ್ಷೇತರರು ಸೇರಿದಂತೆ ೫೭ ಶಾಸಕರು ಹರಿಯಾಣದಲ್ಲಿ ಸರ್ಕಾರ ರಚನೆಗೆ ರಾಜ್ಯಪಾಲರ ಎದುರು ಹಕ್ಕು ಪ್ರತಿಪಾದನೆ ಮಾಡಿದ್ದಾರೆ’ ಎಂದು ಖಟ್ಟರ್ ಹೇಳಿದರು.

‘ರಾಜ್ಯಪಾಲರು ಇದನ್ನು ಅಂಗೀಕರಿಸಿದ್ದು, ಭಾನುವಾರ ಸರ್ಕಾರ ರಚಿಸುವಂತೆ ನಮ್ಮನ್ನು ಆಹ್ವಾನಿಸಿದರು’ ಎಂದ ಖಟ್ಟರ್ ನುಡಿದರು.

ಇದಕ್ಕೆ ಮುನ್ನ ಖಟ್ಟರ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ರಾಜ್ಯಪಾಲರಿಗೆ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದರು.   ರಾಜ್ಯಪಾಲ ಆರ್‍ಯ ಅವರು ರಾಜೀನಾಮೆಗಳನ್ನು ಅಂಗೀಕರಿಸಿದರು ಮತ್ತು ನೂತನ ಸರ್ಕಾರವು ಅಧಿಕಾರ ವಹಿಸಿಕೊಳ್ಳುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಖಟ್ಟರ್ ಅವರಿಗೆ ಸೂಚಿಸಿದರು.

ಕೆಲವು ಸಚಿವರು ಭಾನುವಾರ ಪ್ರಮಾಣ ವಚನ ಸ್ವೀಕರಿಸುವರು ಎಂದು ಖಟ್ಟರ್ ಹೇಳಿದರು. ಆದರೆ ಪ್ರಮಾಣ ವಚನ ಸ್ವೀಕರಿಸುವವರ ಸಂಖ್ಯೆಯನ್ನು ಅವರು ತಿಳಿಸಲಿಲ್ಲ.

೯೦ ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ ಕನಿಷ್ಠ ೪೬ ಶಾಸಕರ ಬೆಂಬಲ ಬೇಕಾಗುತ್ತದೆ.

ಇದಕ್ಕೆ ಮುನ್ನ ಶನಿವಾರ ಬೆಳಗ್ಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮನೋಹರಲಾಲ್ ಖಟ್ಟರ್ ಅವರನ್ನು ಪಕ್ಷದ ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಲಾಯಿತು.

ಇತ್ತೀಚೆಗೆ ನಡೆದಿದ್ದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೪೦ ಸ್ಥಾನಗಳನ್ನು ಗೆದ್ದು ಸರಳ ಬಹುಮತಕ್ಕೆ ೬ ಸ್ಥಾನಗಳ ಕೊರತೆ ಅನುಭವಿಸಿತ್ತು. ೨೦೧೪ರ ಚುನಾವಣೆಯಲ್ಲಿ ಬಿಜೆಪಿ ೪೭ ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಅದಕ್ಕೆ ೭ ಸ್ಥಾನಗಳು ನಷ್ಟವಾಗಿದ್ದವು.

೧೦ ಸ್ಥಾನಗಳನ್ನು ಗೆದ್ದಿರುವ ಜೆಜೆಪಿಯು ಬೆಂಬಲ ನೀಡುವ ಮೂಲಕ ಈ ಕೊರತೆಯನ್ನು ನೀಗಿಸಿ ಖಟ್ಟರ್ ಅವರಿಗೆ ಮುಖ್ಯಮಂತ್ರಿಯಾಗಿ ಮರಳಿ ಬರಲು ನೆರವಾಯಿತು. ದಿವಂಗತ ಉಪ ಪ್ರಧಾನಿ ಚೌಧರಿ ದೇವಿಲಾಲ್ ಅವರ ಮರಿಮೊಮ್ಮಗ ದುಷ್ಯಂತ ಚೌಟಾಲ ಅವರು ಹರಿಯಾಣದಲ್ಲಿ ಸ್ಥಿರ ಸರ್ಕಾರ ನೀಡುವ ದೃಷ್ಟಿಯಿಂದ ಮೈತ್ರಿಕೂಟ ಅನಿವಾರ್‍ಯವಾಗಿದೆ ಎಂದು ತಮ್ಮ ಪಕ್ಷವು ನಂಬಿದೆ ಎಂದು ಹೇಳಿದ್ದರು.

ಶನಿವಾರ ಬೆಳಗ್ಗೆ ಮನೋಹರ ಲಾಲ್ ಖಟ್ಟರ್ ಅವರನ್ನು ಹರಿಯಾಣ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಇದರೊಂದಿಗೆ ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಅವಕಾಶ ಖಟ್ಟರ್ ಅವರಿಗೆ ಒದಗಿ ಬಂದಿತು. ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಖಟ್ಟರ್ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸುವ  ಸಲುವಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರು.

ಇದಕ್ಕೂ ಮುನ್ನ ಶುಕ್ರವಾರ ಜನನಾಯಕ ಜನತಾ ಪಕ್ಷದ (ಜೆಜೆಪಿ) ಬೆಂಬಲ ಪಡೆಯುವ ನಿಟ್ಟಿನಲ್ಲಿ ದುಷ್ಯಂತ ಚೌಟಾಲ ಜೊತೆಗೆ ಮಾತುಕತೆ ನಡೆಸಿ ಯಶಸ್ವಿಯಾಗಿರುವ ಬಗ್ಗೆ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಖಟ್ಟರ್ ಹಾಗೂ ಚೌಟಾಲ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ರಾತ್ರಿ ಪ್ರಕಟಿಸಿದ್ದರು.

ಈ ಮಧ್ಯೆ ವಿವಾದಾತ್ಮಕ ಶಾಸಕ ಗೋಪಾಲ್ ಕಂಡಾ ಅವರ ಬೆಂಬಲವನ್ನು ಹರಿಯಾಣ ಬಿಜೆಪಿ ಸರ್ಕಾರ ಪಡೆಯುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್ ಶನಿವಾರ ಸ್ಪಪ್ಟ ಪಡಿಸಿದ್ದರು.

October 26, 2019 Posted by | ಭಾರತ, ರಾಷ್ಟ್ರೀಯ, BBMP, Flash News, General Knowledge, India, Nation, News, Spardha | , , | Leave a comment

ಶ್ರೀನಗರ:  ಕೇಂದ್ರೀಯ ಮೀಸಲು ಭದ್ರತಾ ಪಡೆಯ ಮೇಲೆ ಗ್ರೆನೇಡ್,  6 ಸೈನಿಕರಿಗೆ ಗಾಯ

26 kashmir grenade attack
ನವದೆಹಲಿ
: ಜಮ್ಮು-ಕಾಶ್ಮೀರದ ಶ್ರೀನಗರದ ಕರಣ್ ನಗರದಲ್ಲಿ 2019 ಅಕ್ಟೋಬರ್ 26ರ  ಶನಿವಾರ ಸಂಜೆ ಉಗ್ರರು ಕೇಂದ್ರೀಯಮೀಸಲು ಪಡೆಯ (ಸಿಆರ್​ಪಿಎಫ್​) ಮೇಲೆ ಗ್ರೆನೇಡ್ ಮತ್ತು ಗುಂಡಿನ ದಾಳಿ ನಡೆಸಿದ ಪರಿಣಾಮ ಆರು ಸೈನಿಕರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು.

ಸಿಆರ್​ಪಿಎಫ್​ನ 144ನೇ ಬೆಟಾಲಿಯನ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಸಂಜೆ 6.50ರ ಸಮಯದಲ್ಲಿ ಚೆಕ್​ಪಾಯಿಂಟ್​ ಬಳಿ ಸಿಆರ್​ಪಿಎಫ್​ ತಂಡದ ಮೇಲೆ ಈ ದಾಳಿ ನಡೆಯಿತು. ಗ್ರೆನೇಡ್ ಸ್ಫೋಟದಿಂದ ಸುತ್ತಮುತ್ತಲ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಉಗ್ರರ ದಾಳಿಗೆ ಭದ್ರತಾ ಪಡೆಯ ಸೈನಿಕರು ಪ್ರತಿದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

October 26, 2019 Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, Nation, News, Pakistan, Spardha | , | Leave a comment

ಜೆಜೆಪಿ+ ಪಕ್ಷೇತರರ ಬೆಂಬಲ: ಮರಳಿ ಅಧಿಕಾರಕ್ಕೆ ಏರಲು ಖಟ್ಟರ್ ಸಜ್ಜು

25 amith shah khattar dushyant choutala
ಬಿಜೆಪಿಯಿಂದ ಮುಖ್ಯಮಂತ್ರಿ, ಜೆಜೆಪಿಯಿಂದ ಉಪಮುಖ್ಯಮಂತ್ರಿ: ಅಮಿತ್ ಶಾ ಘೋಷಣೆ

ನವದೆಹಲಿ: 90 ಸದಸ್ಯಬಲದ ಹರಿಯಾಣ ವಿಧಾನಸಭೆಯಲ್ಲಿ 10 ಸದಸ್ಯರನ್ನು ಹೊಂದಿರುವ ಜನನಾಯಕ ಜನತಾ ಪಕ್ಷ (ಜೆಜೆಪಿ)  ಹಾಗೂ 7 ಮಂದಿ ಪಕ್ಷೇತರರ ಬೆಂಬಲದೊಂದಿಗೆ ಎರಡನೇ ಅವಧಿಗೆ ಹರಿಯಾಣದ ಮುಖ್ಯಮಂತ್ರಿಯಾಗಲು ಬಿಜೆಪಿ ನಾಯಕ ಮನೋಹರಲಾಲ್ ಖಟ್ಟರ್  2019 ಅಕ್ಟೋಬರ್ 25ರ ಶುಕ್ರವಾರ ಸಜ್ಜಾದರು.

ಜೆಜೆಪಿ ನಾಯಕ ದುಷ್ಯಂತ ಚೌಟಾಲ ಜೊತೆಗೆ ಮೈತ್ರಿ ಸಾಧಿಸಿರುವ ವಿಷಯವನ್ನು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.ದುಷ್ಯಂತ ಚೌಟಾಲ ಜೊತೆಗೇ ಪತ್ರಿಕಾಗೋಷ್ಠಿ ನಡೆಸಿದ ಶಾ ತಮ್ಮ ಪಕ್ಷದಿಂದ ಮುಖ್ಯಮಂತ್ರಿ ಹಾಗೂ ಪ್ರಾದೇಶಿಕ ಪಕ್ಷದಿಂದ  ಉಪ ಮುಖ್ಯಮಂತ್ರಿ ಇರುತ್ತಾರೆ ಎಂದು ಘೋಷಿಸಿದರು.

ಇದಕ್ಕೆ ಮುನ್ನ ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ) ಶಾಸಕ ಅಭಯ್ ಚೌಟಾಲ, ಹರಿಯಾಣ ಲೋಕಹಿತ ಪಕ್ಷದ (ಎಚ್‌ಎಲ್‌ಪಿ) ಶಾಸಕ ಗೋಪಾಲ್ ಕಾಂಡ ಮತ್ತು ೭ ಮಂದಿ ಪಕ್ಷೇತರರ ಬೆಂಬಲದೊಂದಿಗೆ ಮತ್ತೆ ಹರಿಯಾಣದ ಮುಖ್ಯಮಂತ್ರಿಯಾಗಲು ಬಿಜೆಪಿ ನಾಯಕ ಮನೋಹರ ಲಾಲ್ ಖಟ್ಟರ್ ಸಜ್ಜಾಗಿದ್ದರು.

ಇದೇ ವೇಳೆಗೆ ತಮ್ಮ ಜನನಾಯಕ ಜನತಾ ಪಕ್ಷದ (ಜೆಜೆಪಿ) ನೂತನ ಶಾಸಕರ ಸಭೆ ನಡೆಸಿದ ಬಳಿಕ ’ಈಗಲೂ ಸ್ಥಿರ ಸರ್ಕಾರದ ಕೀಲಿ ಕೈ ಇರುವುದು ನಮ್ಮ ಕೈಯಲ್ಲೇ’ ಎಂಬುದಾಗಿ ಘೋಷಿಸಿರುವ ಜೆಜೆಪಿ ನಾಯಕ ದುಷ್ಯಂತ ಚೌಟಾಲ, ಚುನಾವಣೆಗೆ ಮುನ್ನ ನಾವು ಮುಂದಿಟ್ಟಿರುವ ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಬೇಡಿಕೆ ಒಪ್ಪುವ ಯಾವುದೇ ಪಕ್ಷಕ್ಕೆ ನಮ್ಮ ಬೆಂಬಲ ಇದೆ’ ಎಂದು ಪ್ರಕಟಿಸಿದರು. ಬಳಿಕ ನಡೆದ ಬೆಳವಣಿಗೆಗಳಲ್ಲಿ ದುಷ್ಯಂತ ಚೌಟಾಲ ಬಿಜೆಪಿ ಜೊತೆಗೆ ಕೈಜೋಡಿಸುವ ನಿರ್ಧಾರ ಕೈಗೊಂಡರು.

ದೆಹಲಿಯಲ್ಲಿ ಪಕ್ಷದ ವರಿಷ್ಠ ನಾಯಕರ ಜೊತೆ ಶುಕ್ರವಾರ ಸಮಾಲೋಚನೆ ನಡೆಸಿರುವ ಮನೋಹರ ಲಾಲ್ ಖಟ್ಟರ್ ಅವರು ಬೆಂಬಲ ನೀಡಲು ಮುಂದೆ ಬಂದಿರುವ ೭ ಮಂದಿ ಶಾಸಕರು ಮತ್ತು ಪಕ್ಷದ ನಾಯಕತ್ವದ ಜೊತೆಗೆ ಜಂಟಿ ಮಾತುಕತೆಗಳನ್ನು ನಡೆಸಿ ಚಂಡೀಗಢದಲ್ಲಿ ಶನಿವಾರ ಹಕ್ಕು ಮಂಡನೆಗೆ ಬೇಕಾದ ವಿಧಿ ವಿಧಾನಗಳನ್ನು ಪೂರೈಸಿದರು.

೯೦ ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ೪೦ ಸ್ಥಾನಗಳನ್ನು ಗೆದ್ದಿದ್ದು ಸರಳ ಬಹುಮತಕ್ಕೆ ೬ ಸ್ಥಾನಗಳ ಕೊರತೆ ಅನುಭವಿಸಿತ್ತು.

‘ಶಾಸಕಾಂಗ ಪಕ್ಷದ ಸಭೆ ಶನಿವಾರ ನಡೆಯಲಿದೆ’ ಎಂದು ಖಟ್ಟರ್, ಬಿಜೆಪಿಯ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಮತ್ತು ಏಳು ಮಂದಿ ಪಕ್ಷೇತರ ಶಾಸಕರ ಜಂಟಿ ಸಭೆಯ ಬಳಿಕ ಅನಿಲ್ ಜೈನ್ ಹೇಳಿದರು. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಚಂಡೀಗಢಕ್ಕೆ ಕೇಂದ್ರದ ವೀಕ್ಷಕರಾಗಿ ತೆರಳಲಿದ್ದಾರೆ.

ಚುನಾವಣೆಯಲ್ಲಿ ಗೆದ್ದಿರುವ ಪಕ್ಷೇತರ ಸದಸ್ಯರಾದ ಸೊಂಬೀರ್ ಸಂಗ್ವಾನ್ (ದಾದ್ರಿ), ಬಲರಾಜ್ ಕುಂಡು (ಮೆಹಮ್), ಧರಮ್ ಪಾಲ್ ಗೊಂಡರ್ (ನಿಲೋಖೇರಿ), ನೈನ್ ಪಾಲ್ ರಾವತ್ (ಪ್ರಿಥ್ಲಾ) ಮತ್ತು ರಣಧೀರ ಗೊಲ್ಲೆನ್ (ಪುಂಡ್ರಿ) ಅವರ ಬಿಜೆಪಿ ಬಂಡುಕೋರರಾಗಿದ್ದು ತಮಗೆ ಟಿಕೆಟ್ ಕೊಡದೇ ಇದ್ದುದಕ್ಕಾಗಿ ಮುನಿಸಿಕೊಂಡು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದರು. ಮಾಜಿ ಉಪಪ್ರಧಾನಿ ದೇವಿಲಾಲ್ ಅವರ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಒಪಿ ಚೌಟಾಲ ಅವರ ಕಿರಿಯ ಸಹೋದರ ರಣಜಿತ್ ಸಿಂಗ್ ಮತ್ತು ಬಾದಶಾಪುರದ ರಾಕೇಶ್ ದೌಲತಾಬಾದ್ ಇವರು ಬೆಂಬಲ ನೀಡಿರುವ ಉಳಿದ ಇಬ್ಬರು ಶಾಸಕರು. ಎಲ್ಲ ಏಳೂ ಮಂದಿ ಶಾಸಕರೂ ತಮ್ಮ ಬೆಂಬಲ ಪತ್ರವನ್ನು ಶುಕ್ರವಾರ ನೀಡಿದರು.

ದಾದ್ರಿಯ ಪಕ್ಷೇತರ ಶಾಸಕ ಸೊಂಬೀರ್ ಸಂಗ್ವಾನ್ ಅವರು ತಾವು ಶುಕ್ರವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡುವುದಾಗಿ ಹೇಳಿದ್ದು ’ನಾನು ಬಿಜೆಪಿಗೆ ನನ್ನ ಬೆಂಬಲ ನೀಡುತ್ತೇನೆ’ ಎಂದು ಮಾಧ್ಯಮ ಒಂದರ ಬಳಿ ಇದಕ್ಕೆ ಮುನ್ನ ಹೇಳಿದ್ದರು.

ಬಹುತೇಕ ಎಲ್ಲ ಪಕ್ಷೇತರರೂ ಬಿಜೆಪಿಗೆ ಬೆಂಬಲ ನೀಡುವರು ಎಂದು ಕಾಂಡಾ ಮತ್ತು ಬಿಜೆಪಿ ಕಾರ್‍ಯಾಧ್ಯಕ್ಷ ಜೆಪಿ ನಡ್ಡಾ ಸಭೆಗೆ ವ್ಯವಸ್ಥೆ ಮಾಡಿದ ಸಿರ್ಸಾ ಸಂಸದರಾದ ಸುನೀತಾ ದುಗ್ಗಲ್ ನುಡಿದರು.

‘ಪಕ್ಷೇತರರಲ್ಲಿ ಐವರು ಬಿಜೆಪಿ ಬಂಡುಕೋರರು. ಕಾಂಡಾ ಮತ್ತು ರಣಜಿತ್ ಸಿಂಗ್ ಅವರೂ ಬೆಂಬಲ ನೀಡುತ್ತಿದ್ದಾರೆ. ಅವರೆಲ್ಲರೂ ಭೇಷರತ್ ಬೆಂಬಲಕ್ಕೆ ಬದ್ಧರಾಗಿದ್ದಾರೆ’ ಎಂದು ದುಗ್ಗಲ್ ಹೇಳಿದ್ದರು.

ತಾನು ಮತ್ತು ಇತರ ಕೆಲವು ಪಕ್ಷೇತರರು ಬಿಜೆಪಿಗೆ ಬೆಂಬಲ ವ್ಯಕ್ತ ಪಡಿಸಲು ಒಲವು ಹೊಂದಿರುವುದಾಗಿ ಗೋಪಾಲ್ ಕಾಂಡಾ ತಿಳಿಸಿದ್ದರು. ಐಎನ್‌ಎಲ್‌ಡಿ ಶಾಸಕ ಅಭಯ್ ಚೌಟಾಲ ಅವರೂ ಬಿಜೆಪಿಗೆ ಬೆಂಬಲ ನೀಡುವುದೇ ಅತ್ಯಂತ ಯೋಗ್ಯವಾದ ಮಾರ್ಗ ಎಂದು ಹೇಳಿದರು. ’ತಾತ್ವಿಕವಾಗಿ ನಾನು ಕಾಂಗ್ರೆಸ್ ಜೊತೆ ಸೇರಲಾರೆ’ ಎಂದು ಅವರು ನುಡಿದರು.

ಗೋಪಾಲ್ ಕಾಂಡಾ, ಅಭಯ್ ಚೌಟಾಲಾ ಮತ್ತು ೭ ಮಂದಿ ಪಕ್ಷೇತರರ ಲಭಿಸಿದಲ್ಲಿ ಬಿಜೆಪಿಗೆ ದುಷ್ಯಂತ ಚೌಟಾಲ ನೇತ್ವತ್ವದ ಜೆಜೆಪಿ ಬೆಂಬಲದ ಅಗತ್ಯ ಬೀಳಲಾರದು. ಆದಾಗ್ಯೂ, ಜೆಜೆಪಿಯ ೧೦ ಶಾಸಕರ ಬೆಂಬಲ ಪಡೆಯುವುದು ಬಿಜೆಪಿಗೆ ಅಪ್ರಿಯವೇನೂ ಅಲ್ಲ. ಜೆಜೆಪಿಯ ಬೆಂಬಲ ಲಭಿಸಿದಲ್ಲಿ ಸರ್ಕಾರ ಇನ್ನಷ್ಟು ದೃಢವಾಗಬಲ್ಲುದು. ದುಷ್ಯಂತ ಚೌಟಾಲ ಅವರ ಪಕ್ಷದ ಬೆಂಬಲವನ್ನು ಬಿಜೆಪಿ ಶರತ್ತಿಗೆ ಒಳಪಟ್ಟು ಪಡೆಯಲು ಪಕ್ಷ ಮುಕ್ತವಾಗಿದೆ, ಆದರೆ ಜೆಜೆಪಿ ತನ್ನ ಶರತ್ತುಗಳನ್ನು ಹೇರಲು ಪಕ್ಷವು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ದೆಹಲಿಯಲ್ಲಿ ಮಾಧ್ಯಮ ಒಂದಕ್ಕೆ ತಿಳಿಸಿದ್ದರು.

ಈ ಮಧ್ಯೆ, ಜನನಾಯಕ ಜನತಾ ಪಕ್ಷದ (ಜೆಜೆಪಿ) ೧೦ ಮಂದಿ ಶಾಸಕರ ಜೊತೆ ಸಭೆ ನಡೆಸಿದ ಬಳಿಕ ಪಕ್ಷದ ನಾಯಕ ದುಷ್ಯಂತ ಚೌಟಾಲ ಅವರು ಸಭೆಯ ಬಳಿಕ ’ಯಾವ ಪಕ್ಷವೂ ನಮಗೆ ಅಸ್ಪೃಶ್ಯವಲ್ಲ, ಸ್ಥಿರ ಸರ್ಕಾರ ಕೀಲಿ ಕೈ ನಮ್ಮ ಕೈಯಲ್ಲೇ ಇದೆ. ಚುನಾವಣೆಗೆ ಮುನ್ನ ನಾವು ಬಿಡುಗಡೆ ಮಾಡಿದ ಕನಿಷ್ಠ ಸಾಮಾನ್ಯ ಕಾರ್ಯಕ್ರಮದ ಬೇಡಿಕೆಗಳನ್ನು ಬೆಂಬಲಿಸುವ ಪಕ್ಷಕ್ಕೆ ನಮ್ಮ ಬೆಂಬಲ ಇದೆ’ ಎಂದು ಘೋಷಿಸಿದ್ದರು.

ಜೆಜೆಪಿಯು ರಾಜ್ಯದಲ್ಲಿ ಸ್ಥಳೀಯ ಯುವಕರಿಗೆ ಶೇಕಡಾ ೭೫ರಷ್ಟು ಉದ್ಯೋಗಳನ್ನು ಮೀಸಲು ಇಡುವ ಮತ್ತು ಹಿರಿಯರಿಗೆ ಪಿಂಚಣಿ ಒದಗಿಸುವ ಭರವಸೆಯನ್ನು ನೀಡಿತ್ತು. ಈ ಬೇಡಿಕೆ ಬೆಂಬಲಿಸುವವರಿಗೆ ನಮ್ಮ ಬೆಂಬಲ ಎಂದು ಚೌಟಾಲ ಹೇಳಿದ್ದರು.

‘ಕೆಲವರು ಕಾಂಗ್ರೆಸ್ಸನ್ನು ಬೆಂಬಲಿಸಲು, ಇತರ ಕೆಲವರು ಬಿಜೆಪಿಯನ್ನು ಬೆಂಬಲಿಸಲು ಸಲಹೆ ಮಾಡಿದ್ದಾರೆ. ಆದರೆ ನಮಗೆ ಯಾವ ಪಕ್ಷವೂ ಅಸ್ಪೃಶ್ಯವಲ್ಲ, ನಮ್ಮ ಪ್ರಣಾಳಿಕೆಯ ಬೇಡಿಕೆಗಳನ್ನು ಯಾರು ಬೆಂಬಲಿಸುತ್ತಾರೋ ಅವರಿಗೆ ನಮ್ಮ ಬೆಂಬಲವಿದೆ. ಹೊರಗಿನಿಂದ ಬೆಂಬಲ ನೀಡುವ ಆಸಕ್ತಿ ನಮಗಿಲ್ಲ’ ಎಂದು ದುಷ್ಯಂತ ಚೌಟಾಲ ತಿಳಿಸಿದ್ದರು.

ಈ ಮಧ್ಯೆ ಹರಿಯಾಣ ಲೋಕಹಿತ ಪಕ್ಷದ ಗೋಪಾಲ ಕಾಂಡಾ ಅವರು ಬಿಜೆಪಿಗೆ ಬೆಂಬಲ ನೀಡಿದರೂ ಅದನ್ನು ಪಡೆಯಬಾರದು ಎಂದು ಪಕ್ಷದ ಹಿರಿಯ ನಾಯಕಿ ಉಮಾಭಾರತಿ ಪಕ್ಷದ ನಾಯಕತ್ವವನ್ನು ಆಗ್ರಹಿಸಿದ್ದರು. ಎಂಡಿಎಲ್ ಆರ್ ಏರ್ ಲೈನ್ಸ್‌ನ ಗಗನಸಖಿಯೊಬ್ಬರು ಬರೆದಿಟ್ಟ ಆತ್ಮಹತ್ಯಾ ಟಿಪ್ಪಣಿಯ ಹಿನ್ನೆಲೆಯಲ್ಲಿ ಕಾಂಡಾ ಅವರ ರಾಜಕೀಯ ಅಧಃಪತನವಾಗಿದೆ ಎಂದು ಅವರು ಹೇಳಿದ್ದಾರೆ. ಗೋಪಾಲ್ ಕಾಂಡಾ ವಿರುದ್ಧ ಅತ್ಯಾಚಾರ ಮತ್ತು ಆತ್ಮಹತ್ಯೆಗೆ ಪ್ರಚೋದನೆಯ ಆರೋಪವಿದೆ. ಒಂದು ವರ್ಷದ ಒಳಗಾಗಿ ನಾಟಕೀಯವಾಗಿ ಅತ್ಯಾಚಾರ ಆರೋಪವನ್ನು ಕೈಬಿಡಲಾಗಿತ್ತು ಮತ್ತು ಮಹಿಳೆಯ ತಾಯಿ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಂಡಾ ಬೆಂಬಲ ಪಡೆಯುವುದನ್ನು ಕಾಂಗ್ರೆಸ್ ಪಕ್ಷ ಕೂಡಾ ಲೇವಡಿ ಮಾಡಿತ್ತು.

October 25, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , , | Leave a comment

ಗಿರೀಶ ಚಂದ್ರ ಮುರ್ಮು ಜಮ್ಮು ಮತ್ತು ಕಾಶ್ಮೀರದ ಮೊದಲ ಲೆಫ್ಟಿನೆಂಟ್ ಗವರ್ನರ್

25 satya-pal-malik-GC murmu
ನವದೆಹಲಿ
: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ವೆಚ್ಚ ಇಲಾಖಾ ಕಾರ್ಯದರ್ಶಿ ಗಿರೀಶ ಚಂದ್ರ ಮುರ್ಮು ಅವರನ್ನು ಕೇಂದ್ರ ಸರ್ಕಾರವು 2019 ಅಕ್ಟೋಬರ್ 25ರ ಶುಕ್ರವಾರ ನೇಮಕ ಮಾಡಿತು. ಮಾಜಿ ರಕ್ಷಣಾ ಕಾರ್ಯದರ್ಶಿ ರಾಧಾ ಕೃಷ್ಣ ಮಾಥುರ್ ಅವರನ್ನು ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಯಿತು.

ಜಮ್ಮು ಮತ್ತು ಕಾಶ್ಮೀರದ ಹಾಲಿ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರನ್ನು ಗೋವಾ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಯಿತು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ಎರಡು ತಿಂಗಳುಗಳ ಬಳಿಕ ಈ ಬದಲಾವಣೆಯನ್ನು ಕೇಂದ್ರವು ಮಾಡಿತು.

October 25, 2019 Posted by | ಭಾರತ, Flash News, General Knowledge, India, Nation, News, Politics, Spardha | , , | Leave a comment

ಮಹಾರಾಷ್ಟ್ರ: ಉದ್ಧವ್ ಠಾಕ್ರೆ ಜೊತೆ ಅಮಿತ್ ಶಾ ಸಂಧಾನ

25 amith sha uddhavಬಿಜೆಪಿ ಜೊತೆ ಮೈತ್ರಿ ಮುರಿದರೆ ಸೇನೆಗೆ ಬೆಂಬಲ, ಕಾಂಗ್ರೆಸ್ ಇಂಗಿತ

ನವದೆಹಲಿ/ ಮುಂಬೈ: ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡು ೨೪ ಗಂಟೆಗಳು ಕಳೆದರೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಮುಹೂರ್ತ ಕೂಡಿ ಬಂದಿಲ್ಲ. ಅಧಿಕಾರ ಹಂಚಿಕೆಯಲ್ಲಿ ೫೦:೫೦ ಸೂತ್ರಕ್ಕಾಗಿ ಪಟ್ಟು ಹಿಡಿದಿರುವ ಮಿತ್ರ ಪಕ್ಷ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಜೊತೆಗೆ ಸಂಧಾನ ಮಾತುಕತೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಮುಂದಾಗಿದ್ದು, ಬಿಜೆಪಿಯ ಸಖ್ಯ ಮುರಿದರೆ ಶಿವಸೇನೆಗೆ ಬೆಂಬಲ ನೀಡುವ ಇಂಗಿತವನ್ನು ಕಾಂಗ್ರೆಸ್ ವ್ಯಕ್ತ ಪಡಿಸಿದೆ. ಇದರೊಂದಿಗೆ ಮಹಾರಾಷ್ಟ್ರದ ರಾಜಕೀಯ 2019 ಅಕ್ಟೋಬರ್ 25ರ ಶುಕ್ರವಾರ ಹೊಸ ’ತಿರುವು’ (ಟ್ವಿಸ್ಟ್) ಪಡೆಯಿತು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸರಳ ಬಹುಮತ ಪಡೆದಿದ್ದರೂ, ಬಿಜೆಪಿಯ ಗಮನಾರ್ಹ ಸಂಖ್ಯೆಯಲ್ಲಿ  ಸ್ಥಾನಗಳನ್ನು ಕಳೆದುಕೊಂಡಿರುವುದರ ಲಾಭ ಪಡೆದಿರುವ ಶಿವಸೇನಾ ಮುಖ್ಯಸ್ಥರು ಗುರುವಾರವೇ ’ತರಾತುರಿಯಲ್ಲಿ ಸರ್ಕಾರ ರಚನೆಗೆ ಬಿಜೆಪಿಗೆ ಅವಕಾಶ ನೀಡುವುದಿಲ್ಲ. ಸರ್ಕಾರ ರಚನೆಗೆ ಮುನ್ನ ಬಿಜೆಪಿಯ ದೆಹಲಿ ವರಿಷ್ಠರ ಜೊತೆಗೆ ಮಾತುಕತೆ ನಡೆಸಬೇಕಾಗಿದೆ’ ಎಂದು ಹೇಳುವ ಮೂಲಕ ಮಿತ್ರ ಪಕ್ಷಕ್ಕೆ ಸಂದೇಶ ರವಾನಿಸಿದ್ದರು.

ಈ ಮಧ್ಯೆ, ಬಿಜೆಪಿ ನಾಯಕ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪಕ್ಷವು ಹಲವಾರು ಪಕ್ಷೇತರ ಶಾಸಕರ ಜೊತೆಗೆ ಸಂಪರ್ಕದಲ್ಲಿ ಇರುವುದಾಗಿ ಪ್ರಕಟಿಸಿದ್ದರು.

ಬಿಜೆಪಿ ಸಂಸದೀಯ ಮಂಡಳಿಯು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಿಗೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಜೊತೆಗೆ ಮೈತ್ರಿ ಸರ್ಕಾರದ ರೂಪುರೇಷೆ ಬಗ್ಗೆ ಮಾತುಕತೆ ನಡೆಸಲು ಈದಿನ ಅಧಿಕಾರ ನೀಡಿತು. ಹೀಗಾಗಿ ಉದ್ಧವ್ ಠಾಕ್ರೆ ಜೊತೆಗೆ ಅಮಿತ್ ಶಾ ಸಂಧಾನ ಮಾತುಕತೆ ನಡೆಸಲಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿದವು.

ಈ ಮಧ್ಯೆ, ಹೊಸ ಬೆಳವಣಿಗೆಯೊಂದರಲ್ಲಿ ಆಡಳಿತಾರೂಢ ಬಿಜೆಪಿಯ ಮಿತ್ರಪಕ್ಷವಾಗಿ ಚುನಾವಣೆಯಲ್ಲಿ ಸೆಣಸಿದ ಶಿವಸೇನೆಯ ಜೊತೆಗೆ ಕೈಜೋಡಿಸಲು ತಾನು ಮುಕ್ತ ಎಂಬ ಇಂಗಿತವನ್ನು ಕಾಂಗ್ರೆಸ್ ಪಕ್ಷವು ವ್ಯಕ್ತ ಪಡಿಸಿತು.

ಶಿವಸೇನೆಯು ಬಿಜೆಪಿ ಜೊತೆಗಿನ ಮೈತ್ರಿ ಮುರಿಯುವ ಧೈರ್‍ಯ ತೋರಿದರೆ, ಉದ್ಧವ್ ಠಾಕ್ರೆ ಅವರ ಸಂಘಟನೆಯ ಜೊತೆಗೆ ಕೈಜೋಡಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆಗೆ ತಾನು ಮುಕ್ತ ಎಂಬುದಾಗಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಬಾಳಾಸಾಹೇಬ್ ಥೋರಟ್  ಹೇಳಿಕೆ ನೀಡಿದರು.

‘ನಾನು ಅದಕ್ಕೆ ಮುಕ್ತವಾಗಿದ್ದೇನೆ. ಶಿವಸೇನೆಯು ಪ್ರಸ್ತಾಪ ಕಳುಹಿಸಿದರೆ, ನಾನು ಅದನ್ನು ಪಕ್ಷದ ದೆಹಲಿ ವರಿಷ್ಠರ ಜೊತೆಗೆ ಚರ್ಚಿಸುವೆ’ ಎಂದು ಥೋರಟ್  ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡುತ್ತಾ ಹೇಳಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನೆಯ ಅಭ್ಯರ್ಥಿಯನ್ನು ಅಂಗೀಕರಿಸಲು ಕೂಡಾ ಪಕ್ಷವು ಬಯಸಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದವು.

ಮಿತ್ರ ಪಕ್ಷ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಿಲುವಿನ ಬಗೆಗಿನ ಪ್ರಶ್ನೆಗಳನ್ನು  ಉತ್ತರಿಸಲು ಥೋರಟ್ ನಿರಾಕರಿಸಿದರು. ಥೋರಟ್ ಅವರು ಮುಂದಿನ ತಂತ್ರಗಾರಿಕೆ ಬಗ್ಗೆ ಚರ್ಚಿಸಲು ಶೀಘ್ರದಲ್ಲೇ ಬಾರಾಮತಿಯಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಭೇಟಿಯಾಗಲಿದ್ದಾರೆ.

‘ರಾಜ್ಯದಲ್ಲಿ ಸಂಖ್ಯಾ ಆಟ ಹೇಗಿದೆ ಎಂದರೆ ಎಲ್ಲ ಪಕ್ಷಗಳು ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ನಿರ್ಧರಿಸಿದರೆ, ಅವುಗಳು ಸರ್ಕಾರ ರಚಿಸಲು ಸಾಧ್ಯವಿದೆ, ಆದರೆ ಅವರೆಲ್ಲರೂ ಒಂದಾದರೆ ಮಾತ್ರ’ ಎಂದು ಅಪರಿಚಿತರಾಗಿ ಉಳಿಯಬಯಸಿದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು.

ಪ್ರಸ್ತುತ ೧೦ ಮಂದಿ ಪಕ್ಷೇತರರು ಕಾಂಗ್ರೆಸ್ ಪಕ್ಷದ ಸಂಪರ್ಕದಲ್ಲಿ ಇದ್ದಾರೆ. ಒಂಬತ್ತು ಮಂದಿ ಬಂಡುಕೋರ ವಿಜೇತರು ತನ್ನ ಸಂಪರ್ಕದಲ್ಲಿ ಇದ್ದಾರೆ ಎಂದು ಶಿವಸೇನೆ ಪ್ರತಿಪಾದಿಸಿದೆ.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ೪೪ ಸ್ಥಾನಗಳನ್ನು ಗೆದ್ದಿದೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವು (ಎನ್‌ಸಿಪಿ) ೫೪ ಸ್ಥಾನಗಳನ್ನು ಗೆದ್ದಿದೆ. ಶಿವಸೇನೆಯು ೫೬ ಸ್ಥಾನಗಳನ್ನು ಗೆದ್ದಿದೆ. ೧೦೫ ಸ್ಥಾನಗಳೊಂದಿಗೆ ಬಿಜೆಪಿ ಮುಂಚೂಣಿಯಲ್ಲಿದೆ.

ಈ ಮಧ್ಯೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ೧೫ ಮಂದಿ ಬಂಡುಕೋರ ಶಾಸಕರು ಕೇಸರಿ ಪಕ್ಷದ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶಗಳು ಗುರುವಾರ ಹೊರಬರುತ್ತಿದ್ದಂತೆಯೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷಕ್ಕೆ ಸರ್ಕಾರ ರಚನೆ ಸುಲಭವಲ್ಲ ಎಂಬ ಸಂದೇಶವನ್ನು ರವಾನಿಸಿದ್ದರು.

ಮಹಾರಾಷ್ಟ್ರ ಚುನಾವಣೆಗಳಲ್ಲಿ ಕಿರಿಯ ಪಾಲುದಾರನಾಗಲು ಮನಸ್ಸಿಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದ ಶಿವಸೇನಾ ಮುಖ್ಯಸ್ಥ, ಸರ್ಕಾರ ರಚನೆಯ ವಿಚಾರದಲ್ಲಿ ತನ್ನ ನಡೆಯನ್ನು ಶಿವಸೇನೆ ಒಪ್ಪಿಕೊಳ್ಳುತ್ತದೆ ಎಂದು ಬಿಜೆಪಿ ತೀರ್ಮಾನಿಸಬೇಕಾಗಿಲ್ಲ, ಇದು ಚರ್ಚಿಸಬೇಕಾದ ವಿಷಯ ಎಂದು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದರು.

ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಉದ್ಧವ್, ಫೆಬ್ರುವರಿಯಲ್ಲಿ ಉಭಯ ಪಕ್ಷಗಳೂ ೫೦:೫೦ ಅಧಿಕಾರ ಹಂಚಿಕೆಯನ್ನು ಒಪ್ಪಿಕೊಂಡಿದ್ದವು ಎಂಬ ವಿಚಾರನ್ನು ನಿರ್ದಿಷ್ಟವಾಗಿ ನೆನಪಿಸಿದ್ದರು. ಆದರೆ ಹಲವಾರು ಬಾರಿ ಇದನ್ನೂ ನೆನಪಿಸಿದರೂ ಬಿಜೆಪಿ ತನ್ನ ವಚನವನ್ನು ಪಾಲಿಸದೆ ೧೬೪ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಶಿವಸೇನೆ ೧೨೪ ಅಭ್ಯರ್ಥಿಗಳನ್ನೂ ಮಾತ್ರ ಕಣಕ್ಕೆ ಇಳಿಸಿತ್ತು.

ಬಿಜೆಪಿಯು ೧೦೫ ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಉದಯಿಸಿದ್ದರೂ, ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವಸೇನೆಯನ್ನು ಸರ್ಕಾರ ರಚನೆಗಾಗಿ ನೆಚ್ಚಿಕೊಳ್ಳಲೇಬೇಕಾಗಿದೆ. ಈ ಅವಕಾಶವನ್ನು ಠಾಕ್ರೆ ಅತ್ಯಂತ ಕ್ಷಿಪ್ರವಾಗಿ ಬಳಸಿಕೊಂಡಿದ್ದರು.

‘ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಅತ್ಯಂತ ಮಹತ್ವದ ಪ್ರಶ್ನೆ’ ಎಂದು ಉದ್ಧವ್ ಠಾಕ್ರೆ ಹೇಳಿದ್ದರು.

ಲೋಕಸಭಾ ಚುನಾವಣೆಗೆ ಮುನ್ನ ೫೦:೫೦ ಸೂತ್ರವನ್ನು ಒಪ್ಪಿಕೊಳ್ಳಲಾಗಿತ್ತು ಎಂಬುದು ನೆನಪಿಟ್ಟುಕೊಳ್ಳಬೇಕು. ಇದರ ಪ್ರಕಾರ ಸ್ಥಾನ ಹಂಚಿಕೆ ಸೂತ್ರ ೧೪೪:೧೪೪. ಬಿಜೆಪಿಯ ಚಂದ್ರಕಾಂತ ಪಾಟೀಲ್ ಅವರು ಶಿವಸೇನೆಯ ತನ್ನ ಸ್ಥಾನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ನಾನು ಕೆಲವು ಸ್ಥಾನಗಳಿಗೆ ಒಪ್ಪಿಕೊಂಡಿದ್ದೆ. ಆದರೆ ಈಗ ಅವರು ಅಡಚಣೆಗಳನ್ನು ಎದುರಿಸಲು ಹೋಗುವುದಾದಲ್ಲಿ ನಾನು ಅವರನ್ನು ಅರ್ಥ ಮಾಡಿಕೊಂಡು ಕೂರಲು ಸಾಧ್ಯವಿಲ್ಲ. ಏಕೆಂದರೆ ನನಗೆ ನನ್ನ ಪಕ್ಷವನ್ನು ಮುನ್ನಡೆಸಬೇಕಾಗಿದೆ ಎಂದು ಠಾಕ್ರೆ ಹೇಳಿದ್ದರು.

October 25, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , , | Leave a comment

ಗೋಪಾಲ್ ಕಾಂಡಾಗೆ ವಿರೋಧ: ದುಷ್ಯಂತ ಚೌಟಾಲ ಕಡೆಗೆ ಬಿಜೆಪಿ ಒಲವು?

25 dushyantchuatalaandgopalkanda
ನವದೆಹಲಿ:
ಹರಿಯಾಣದಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿಗೆ ಭೇಷರತ್ ಬೆಂಬಲ ಘೋಷಿಸಿದ್ದ ವಿವಾದಾತ್ಮಕ ಶಾಸಕ ಗೋಪಾಲ್ ಕಾಂಡಾ ಬೆಂಬಲ ಪಡೆಯಲು ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾಂಡಾ ಅವರನ್ನು ಬದಿಗಿಟ್ಟು ೧೦ ಶಾಸಕರನ್ನು ಹೊಂದಿರುವ ದುಷ್ಯಂತ ಚೌಟಾಲ ನೇತೃತ್ವದ ಜನನಾಯಕ ಜನತಾ ಪಕ್ಷದ (ಜೆಪಿಪಿ) ಜೊತೆಗೆ ಮೈತ್ರಿಯನ್ನು ಪ್ರಕಟಿಸಬಹುದು ಎಂದು ಸುದ್ದಿ ಮೂಲಗಳು ತಿಳಿಸಿದವು.

ಹರಿಯಾಣದಲ್ಲಿ ಅತಂತ್ರ ಸ್ಥಿತಿ ನಿರ್ಮಾಣದ ಸೂಚನೆ ಸಿಗುತ್ತಿದ್ದಂತೆಯೇ ಗೋಪಾಲ್ ಕಾಂಡಾ ಮತ್ತು ಇನ್ನೊಬ್ಬ ಪಕ್ಷೇತರ ಶಾಸಕ  ಜೊತೆಗೆ ಬಿಜೆಪಿ ಸಂಸದರೊಬ್ಬರ ಜೊತೆಗೆ ದೆಹಲಿಗೆ ವಿಮಾನದಲ್ಲಿ ತೆರಳಿ ಬಿಜೆಪಿ ವರಿಷ್ಠರ ಜೊತೆಗೆ ಮಾತುಕತೆ ನಡೆಸಿದ್ದರು. ಉನ್ನತ ನಾಯಕರ ಜೊತೆಗಿನ ಮಾತುಕತೆಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಳ್ಳುತ್ತಿದ್ದಂತೆಯೇ, ಗೋಪಾಲ್ ಕಾಂಡಾ ಬೆಂಬಲ ಪಡೆಯುವ ಬಗ್ಗೆ ವಿರೋಧಿ ಕಾಂಗ್ರೆಸ್ ಮಾತ್ರವಲ್ಲದೆ ಪಕ್ಷದ ಒಳಗೂ ವಿರೋಧ ವ್ಯಕ್ತವಾಗತೊಡಗಿತ್ತು.

2019 ಅಕ್ಟೋಬರ್ 25ರ ಶುಕ್ರವಾರ ಬೆಳಗ್ಗೆ ಕಾಂಡಾ ಅವರು ತಮ್ಮ ಕುಟುಂಬವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜೊತೆಗೆ ಆಳವಾದ ಸಂಪರ್ಕವನ್ನು ಹೊಂದಿದೆ ಎಂದು ಹೇಳಿದ್ದಲ್ಲದೆ, ಇತರ ಏಳು ಪಕ್ಷೇತರ ಶಾಸಕರೂ ಬಿಜೆಪಿಗೆ ಭೇಷರತ್ ಬೆಂಬಲ ನೀಡುವರು ಎಂದು ಪ್ರಕಟಿಸಿದ್ದರು.

ಏನಿದ್ದರೂ, ಅವರ ಹೇಳಿಕೆಗಳ ಬಗ್ಗೆ ಬಿಜೆಪಿ ಮೌನ ತಾಳಿತ್ತು. ಬಿಜೆಪಿ ಎಂದಿಗೂ ಅವರ ಬೆಂಬಲ ಕೋರಿರಲಿಲ್ಲ ಮತ್ತು ಮುಖ್ಯಮಂತ್ರಿ ಎಂಎಲ್ ಖಟ್ಟರ್ ಅವರೂ ಈ ವಿಚಾರದಲ್ಲಿ ಒಲವು ಹೊಂದಿಲ್ಲ ಎಂದು ಪಕ್ಷದ ಮೂಲಗಳು ಹೇಳಿವೆ. ಕಾಂಡಾ ಬೆಂಬಲದ ಅಗತ್ಯವಿಲ್ಲ, ಅವರ ಹೊರತಾಗಿಯೂ ಪಕ್ಷಕ್ಕೆ ಇತರ ೭ ಮಂದಿ ಪಕ್ಷೇತರ ಶಾಸಕರ ಬೆಂಬಲ ಇದೆ ಎಂದು ಮೂಲಗಳು ಹೇಳಿದವು.

ಭೂಪೀಂದರ್ ಹೂಡಾ ಸರ್ಕಾರದಲ್ಲಿ ಸಚಿವರಾಗಿದ್ದ ಗೋಪಾಲ್ ಕಾಂಡಾ ಅವರು ತಮಗೆ ಕಿರುಕುಳ ನೀಡಿರುವುದಾಗಿ ಗಗನಸಖಿ ಗೀತಿಕಾ ಶರ್ಮಾ ಅವರು ತಮ್ಮ ಆತ್ಮಹತ್ಯಾ ಟಿಪ್ಪಣಿಯಲ್ಲಿ ಬರೆದಿಟ್ಟಿದ್ದ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಅಲ್ಲದೆ ಒಂದು ವರ್ಷ ಕಾಲ ಬಂಧನಕ್ಕೂ ಒಳಗಾಗಿದ್ದರು. ಕಾಂಡಾ ವಿರುದ್ಧ ಬಿಜೆಪಿ ದೊಡ್ಡ ಪ್ರಮಾಣದ ಚಳವಳಿಯನ್ನೇ ಹೂಡಿತ್ತು.

ಇದೀಗ ಕಾಂಡಾ ಬೆಂಬಲದ ಸುದ್ದಿಗಳು ಹರಡುತ್ತಿದ್ದಂತೆಯೇ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಟ್ವೀಟ್ ಮೂಲಕ ಕಾಂಡಾ ಬೆಂಬಲ ಪಡೆಯುವುದನ್ನು ವಿರೋಧಿಸಿದ್ದರು. ಕಾಂಗ್ರೆಸ್ ಕೂಡಾ ಟ್ವೀಟ್ ಮಾಡಿ ಬಿಜೆಪಿಯನ್ನು ಟೀಕಿಸಿತು. ’ಕಾಂಡಾ ಅವರು ಅತ್ಯಾಚಾರ ಮತ್ತು ಕೊಲೆ ಆರೋಪಿಯಾಗಿದ್ದಾರೆ. ಬೇಟಿ ಬಚಾವೋ ಬೇಟಿ ಪಡಾವೋ ಈಗ ಎಲ್ಲಿಗೆ ಹೋಯಿತು? ಇದು ನಾಚಿಕೆಗೇಡು. ಬಿಜೆಪಿಯನ್ನು ಬೆಂಬಲಿಸಿದ್ದರಿಂದ ಅವರು ಪರಿಶುದ್ಧಿ ಹೊಂದಿದರೇ?’ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ ಮಾಡಿತ್ತು.

ಈ ಮಧ್ಯೆ, ಜೆಜೆಪಿ ನಾಯಕ ದುಷ್ಯಂತ ಚೌಟಾಲ ಅವರು ’ಬಿಜೆಪಿ, ಕಾಂಗ್ರೆಸ್ ಸೇರಿ ಯಾವ ಪಕ್ಷವೂ ತನಗೆ ಅಸ್ಪೃಶ್ಯವಲ್ಲ, ನಮ್ಮ ಪ್ರಣಾಳಿಕೆಯ ಕಾರ್ಯಕ್ರಮ ಬೆಂಬಲಿಸುವವರಿಗೆ ನಮ್ಮ ಬೆಂಬಲವಿದೆ’ ಎಂದು ಹೇಳಿದ್ದರು.

October 25, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , | Leave a comment

ಇನ್ನು ಬ್ರೆಜಿಲ್ ಭೇಟಿಗೆ ತೆರಳಲು ವೀಸಾ ಬೇಡ

25 bolsanaro brazil
ಬ್ರೆಜಿಲ್
: ಬ್ರೆಜಿಲ್ ಗೆ ಭೇಟಿ ನೀಡುವ ಚೀನಾ ಮತ್ತು ಭಾರತೀಯ ಪ್ರವಾಸಿಗರನ್ನು ಒಳಗೊಂಡಂತೆ ಉದ್ಯಮಿಗಳಿಗೆ ವೀಸಾ ಕಡ್ಡಾಯ ಇಲ್ಲ.

ಕಳೆದ 10 ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿರುವ ಬೋಲ್ಸನಾರೊ 2019 ಅಕ್ಟೋಬರ್ 25ರ ಶುಕ್ರವಾರ ಈ ಕುರಿತಾಗಿ ಅಧಿಕೃತ ಘೋಷಣೆ ಮಾಡಿದ್ದು, ಅಭಿವೃದ್ಧಿ ಹೊಂದಿದ ದೇಶಗಳ ಪ್ರವಾಸಿಗರಿಗೆ ಹಾಗೂ ವ್ಯವಹಾರ  ನಿಮಿತ್ತ ಪ್ರಯಾಣ ಮಾಡುವವರಿಗೆ ವೀಸಾ ಇಲ್ಲದೇ ದೇಶಕ್ಕೆ ಪ್ರವೇಶಾತಿಯನ್ನು ಕಲ್ಪಿಸಿಕೊಡಲಾಗಿದೆ ಎಂದು ತಿಳಿಸಿದರು.

ಈ ವರ್ಷದ ಆರಂಭದಲ್ಲಿ ಅಮೆರಿಕ, ಕೆನಡಾ, ಜಪಾನ್ ಮತ್ತು ಆಸ್ಟ್ರೇಲಿಯಾದ ಪ್ರವಾಸಿಗರಿಗೆ ಹಾಗೂ ಉದ್ಯಮಿಗಳಿಗೆ ವೀಸಾ ಕಡ್ಡಾಯ ಪದ್ದತಿಯನ್ನು ಬ್ರೆಜಿಲ್ ಸರಕಾರ ಕೊನೆಗೊಳಿಸಿತ್ತು.

October 25, 2019 Posted by | ಆರ್ಥಿಕ, ಭಾರತ, ವಿಶ್ವ/ ಜಗತ್ತು, Commerce, Finance, Flash News, General Knowledge, News, Spardha | | Leave a comment

ಮಹಾಭಾರತದ ‘ದ್ರೌಪದಿ’ ಆಗಲಿದ್ದಾರೆ ದೀಪಿಕಾ ಪಡುಕೋಣೆ..!

25 deepika-padukone spardha web1ಇದು ದ್ರೌಪದಿ ದೃಷ್ಟಿಕೋನದ ‘ಮಹಾಭಾರತ’

ಮುಂಬೈ: ದ್ರೌಪದಿಯ ದೃಷ್ಟಿಕೋನದಿಂದ ‘ಮಹಾಭಾರತ’ ನಿರ್ಮಾಣವಾಗಲಿದ್ದು, ನಟಿ ದೀಪಿಕಾ ಪಡುಕೋಣೆ ಕೇಂದ್ರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅವರು ನಿರ್ಮಾಪಕ ಮಧು ಮಂತೇನಾ ಅವರೊಂದಿಗೆ ಕೈಜೋಡಿಸಿದ್ದಾರೆ ಮತ್ತು ಚಿತ್ರವನ್ನು ಸಹ ನಿರ್ಮಿಸಲಿದ್ದಾರೆ.

ಆಸಿಡ್ ದಾಳಿಯಿಂದ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಅವರ ಜೀವನದಿಂದ ಪ್ರೇರಿತವಾದ “ಛಪಾಕ್” ಚಿತ್ರದೊಂದಿಗೆ ದೀಪಿಕಾ ನಿರ್ಮಾಪಕರಾಗಿದ್ದಾರೆ. ಅವರ ಎರಡನೆಯ ನಿರ್ಮಾಣವಾದ “ಮಹಾಭಾರತ” ದ್ರೌಪದಿಯ ಕಣ್ಣುಗಳ ಮೂಲಕ ಕಾಣಿಸಲಿದ್ದು, ಇದು ಪೌರಾಣಿಕ ಕಥೆಯನ್ನು ಹೊಸದಾಗಿ ತೆರೆಯಲಿದೆ.

“ದ್ರೌಪದಿಯ ಪಾತ್ರವನ್ನು ವಹಿಸುವುದಕ್ಕಾಗಿ ನಾನು ರೋಮಾಂಚನಗೊಂಡಿದ್ದೇನೆ ಮತ್ತು ಗೌರವಿಸಲ್ಪಟ್ಟಿದ್ದೇನೆ. ನಿಜವಾಗಿಯೂ  ಇದು ಜೀವಮಾನದ ಪಾತ್ರ ಎಂದು ನಾನು ನಂಬುತ್ತೇನೆ. ‘ಮಹಾಭಾರತ’ ಪೌರಾಣಿಕ ಕಥೆಗಳು ಮತ್ತು ಸಾಂಸ್ಕೃತಿಕ ಪ್ರಭಾವದ ಹಿನ್ನೆಲೆಯಲ್ಲಿ  ಜನಪ್ರಿಯವಾಗಿದೆ, ಜೀವನದ ಅನೇಕ ಪಾಠಗಳು ಸಹ ‘ಮಹಾಭಾರತ’ದಿಂದ ಹುಟ್ಟಿಕೊಂಡಿವೆ, ಆದರೆ ಅವೆಲ್ಲವೂ ಹೆಚ್ಚಾಗಿ ಅದರ ಪುರುಷರಿಂದ ಹುಟ್ಟಿಕೊಂಡವುಗಳು. ಈ ಪಾತ್ರವನ್ನು ಹೊಸ ದೃಷ್ಟಿಕೋನದಿಂದ ಹೇಳುವುದು ಆಸಕ್ತಿದಾಯಕವಷ್ಟೇ ಅಲ್ಲ ಮಹತ್ವ ಪೂರ್ಣ ಕೂಡಾ”ಎಂದು ದೀಪಿಕಾ ಹೇಳಿದ್ದಾರೆ.

‘ಮಹಾಭಾರತ’ವನ್ನು ಸರಣಿಗಳಾಗಿ ನಿರ್ಮಿಸಲಾಗುವುದು.  ಮೊದಲನೆಯದು 2021ರ ದೀಪಾವಳಿ ವೇಳೆಗೆ  ಬಿಡುಗಡೆಯಾಗಲಿದೆ.

‘ಮಹಾಭಾರತ ನಮಗೆಲ್ಲರಿಗೂ ಗೊತ್ತು. ಆದರೆ ನಮ್ಮ ದೇಶದ ಸಾಂಸ್ಕೃತಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ನಾಯಕಿಯರಲ್ಲಿ ಒಬ್ಬರಾದ ದ್ರೌಪದಿಯ ದೃಷ್ಟಿಕೋನದಿಂದ ‘ಮಹಾಭಾರತ’ವನ್ನು ನಿರೂಪಿಸುವುದು  ನಮ್ಮ ಚಿತ್ರದ ಅನನ್ಯತೆಯಾಗಿದೆ’ ಎಂದು ಮಾಂಟೆನಾ ಹೇಳುತ್ತಾರೆ.

‘ಜೊತೆಗೆ ದೀಪಿಕಾ ಅವರು ಇಂದು ಅತಿದೊಡ್ಡ ಭಾರತೀಯ ನಟಿ ಮಾತ್ರವಲ್ಲ, ಆದರೆ ಈ ನಿರೂಪಣೆಯನ್ನು ಗಡಿಯಾಚೆಗೂ ಒಯ್ಯಬಲ್ಲವರು. ಅವರು ಅಲ್ಲದೇ ಇದ್ದಿದ್ದರೆ,  ನಾವು ಈ ಚಿತ್ರವನ್ನು ಅಂತಹ ಮಹತ್ವಾಕಾಂಕ್ಷೆಯ ಪ್ರಮಾಣದಲ್ಲಿ ನಿರ್ಮಿಸುತ್ತಿರಲಿಲ್ಲ’ ಎಂದೂ ಮಾಂಟೆನಾ  ಹೇಳಿದರು.

October 25, 2019 Posted by | ಕರ್ನಾಟಕ, ಭಾರತ, ಮನರಂಜನೆ, ರಾಜ್ಯ, ಸಿನಿಮಾ, culture, Entertrainment, Flash News, General Knowledge, India, Nation, News, Spardha | , , | Leave a comment

ಬಿಜೆಪಿಗೆ ‘ಮಹಾ’  ಆಘಾತ: ಸಿಗಲಿಲ್ಲ ನಿರೀಕ್ಷಿತ ‘ಪ್ರಚಂಡ’ ಬಹುಮತ

24 modi amith shah
ಮಹಾರಾಷ್ಟ್ರದಲ್ಲಿ ಸರಳ ಬಹುಮತ, ಅತಂತ್ರ ಹರಿಯಾಣದಲ್ಲಿ ಸರ್ಕಾರ ರಚನೆಗೆ ತಂತ್ರ

ನವದೆಹಲಿ: ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ-೨ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ ಬಳಿಕ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಉದಯಿಸಿ, ಸರ್ಕಾರ ರಚನೆಯ ಘೋಷಣೆ ಮಾಡಿದ್ದರೂ, ನಿರೀಕ್ಷೆಗಳಿಗೆ ವಿರುದ್ಧವಾಗಿ ಸ್ಥಾನಗಳ ನಷ್ಟದ ಭಾರೀ ಆಘಾತವನ್ನು 2019 ಅಕ್ಟೋಬರ್ 24ರ ಗುರುವಾರ ಅನುಭವಿಸಿತು.

ಮಹಾರಾಷ್ಟ್ರದಲ್ಲಿ ೨೮೮ ಸ್ಥಾನಗಳ ಪೈಕಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟ ೧೬೨ ಸ್ಥಾನಗಳೊಂದಿಗೆ ಬಹುಮತ ಪಡೆದರೂ, ೨೦೧೪ಕ್ಕೆ ಹೋಲಿಸಿದರೆ ಮೈತ್ರಿಕೂಟ ೨೩ ಸ್ಥಾನಗಳ ನಷ್ಟ ಅನುಭವಿಸಿತು. ೯೦ ಸದಸ್ಯಬಲದ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ರೂಪುಗೊಂಡಿದ್ದು, ೪೦ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ ಬಿಜೆಪಿ ೭ ಸ್ಥಾನಗಳ ನಷ್ಟ ಅನುಭವಿಸಿತು.

ಉಭಯ ರಾಜ್ಯಗಳಲ್ಲೂ ವಿರೋಧಿ ಕಾಂಗ್ರೆಸ್ ಚೇತರಿಸಿಕೊಂಡಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟ ೧೨ ಸ್ಥಾನಗಳ ಹೆಚ್ಚುವರಿ ಗಳಿಕೆಯೊಂದಿಗೆ 104  ಸ್ಥಾನಗಳನ್ನು ಗೆದ್ದಿವೆ. ಹರಿಯಾಣದಲ್ಲಿ ೧೬ ಹೆಚ್ಚುವರಿ ಸ್ಥಾನಗಳಿಕೆಯೊಂದಿಗೆ ೩೧ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಮಹಾರಾಷ್ಟ್ರದಲ್ಲಿ ಇತರರು ೩೧ ಸ್ಥಾನಗಳನ್ನು ಗೆದ್ದರೆ, ಹರಿಯಾಣದಲ್ಲಿ ೧೯ ಮಂದಿ ಇತರರು ಗೆದ್ದಿದ್ದು ಈ ಪೈಕಿ ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ದುಶ್ಯಂತ್ ’ಕಿಂಗ್ ಮೇಕರ್’ ಸ್ಥಾನಕ್ಕೆ ಏರಿದರು.

ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಹಣಾಹಣಿಗೆ ಇಳಿದಿದ್ದು, ಬೆಂಬಲಕ್ಕಾಗಿ ದುಶ್ಯಂತ್ ಕಡೆಗೆ ನೋಡುವಂತಾಗಿದೆ. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಸರ್ಕಾರ ರಚನೆಗೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಬಳಿ ಹಕ್ಕು ಮಂಡಿಸಿ, ಏಕೈಕ ದೊಡ್ಡ ಪಕ್ಷವಾಗಿರುವ ನೆಲೆಯಲ್ಲಿ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಕೋರಿದರು.

ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಸಾಧನೆಗಾಗಿ ಮಹಾರಾಷ್ಟ್ರ ಮತ್ತು ಹರಿಯಣದ ಮುಖ್ಯಮಂತ್ರಿಗಳನ್ನು ಅಭಿನಂದಿಸಿ ಪಕ್ಷಕ್ಕೆ ಮತ್ತೊಮ್ಮೆ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.

ಮಹಾರಾಷ್ಟ್ರದಲ್ಲಿ ೨೨೦ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ಮಹತ್ವಾಕಾಂಕ್ಷೆಯ ಗುರಿ ಇಟ್ಟುಕೊಂಡಿದ್ದ ಬಿಜೆಪಿ-ಶಿವಸೇನಾ ಮೈತ್ರಿಕೂಟ ತನ್ನ ಗುರಿ ತಲುಪುವಲ್ಲಿ ಮುಗ್ಗರಿಸಿತು. ಆದರೆ ಸರ್ಕಾರ ರಚನೆಗೆ ಬೇಕಾದ ಸರಳ ಬಹುಮತವನ್ನು ಪಡೆಯಿತು. ಆದರೆ ಬಿಜೆಪಿಯ ಸ್ಥಾನ ನಷ್ಟದ ಲಾಭ ಪಡೆಯಲು ಹೆಜ್ಜೆ ಮುಂದಿಟ್ಟಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ  ಅಧಿಕಾರ ಹಂಚಿಕೆಯಲ್ಲಿ  ೫೦:೫೦ ಸೂತ್ರದ ಪಾಲನೆಯಾಗಬೇಕು’ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಿದರು. ಸರ್ಕಾರ ರಚನೆಗೆ ತಮಗೆ ಅವಸರವಿಲ್ಲ ಎಂಬುದಾಗಿ ಹೇಳುವ ಮೂಲಕ ಬಿಜೆಪಿಯು ತರಾತುರಿಯಲ್ಲಿ ಸರ್ಕಾರ ರಚಿಸದಂತೆ ತಡೆಯುವ ನಿಟ್ಟಿನಲ್ಲಿ ಅವರು ಕಾಲಿಟ್ಟರು.

ಇತ್ತ ೯೦ ಸ್ಥಾನಗಳಿಗೂ ಸ್ಪರ್ಧಿಸಿದ್ದ ಹರಿಯಾಣದಲ್ಲಿ ಕೇವಲ ೪೦ ಸ್ಥಾನ ಗೆಲ್ಲಲು ಸಮರ್ಥವಾಗಿರುವ ಬಿಜೆಪಿಗೆ ಬಹುಮತದ ಅಂಚಿಗೆ ಬರಲು ಅಸಾಧ್ಯವಾದ್ದರಿಂದ ಸರ್ಕಾರ ರಚನೆ ಅಷ್ಟೊಂದು ಸುಲಭವಲ್ಲ. ೯೦ ಸದಸ್ಯಬಲದ ವಿಧಾನಸಭೆಯಲ್ಲಿ ಬಹುಮತಕ್ಕೆ ೪೬ ಸ್ಥಾನಗಳು ಬೇಕಾಗಿವೆ.

ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗುತ್ತಿದ್ದಂತೆಯೇ  ಮ್ಯಾಜಿಕ್ ಸಂಖ್ಯೆ ೪೬ ತಲುಪಲು ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಶುರುವಾಯಿತು. ರಾಜ್ಯದಲ್ಲಿ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ವಿರುದ್ಧ ಪ್ರಚಾರ ಸಮರದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕ ಭೂಪೀಂದರ್ ಹೂಡಾ ಅವರು ಬಿಜೆಪಿಯು ಅಧಿಕಾರಕ್ಕೆ ಮರಳದಂತೆ ತಡೆಯಲು ಕೈಜೋಡಿಸುವಂತೆ ಇತರ ಪಕ್ಷಗಳು ಮತ್ತು ಪಕ್ಷೇತರರಿಗೆ ಕ್ಷಿಪ್ರ ಮನವಿ ಮಾಡಿದರು.

ಬಿಜೆಪಿಯು ಸರ್ಕಾರ ರಚನೆಯ ಹಕ್ಕು ಮಂಡನೆಯ ಸುಳಿವನ್ನು ನೀಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಅವರು ತಮ್ಮ ಟ್ವೀಟ್‌ಗಳಲ್ಲಿ ಈ ಇಂಗಿತ ವ್ಯಕ್ತ ಪಡಿಸುವುದರ ಜೊತೆಗೆ ಮನೋಹರಲಾಲ್ ಖಟ್ಟರ್ ಮೊದಲಿಗರಾಗಿ ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡಿಸಿದರು.

‘ಹರಿಯಾಣದಲ್ಲಿ ಮನೋಹರಲಾಲ್ ಖಟ್ಟರ್ ಅವರ ಸರ್ಕಾರವು ಜನರ ಕಲ್ಯಾಣಕ್ಕಾಗಿ ಕೇಂದ್ರದಲ್ಲಿನ (ನರೇಂದ್ರ) ಮೋದಿ ನಾಯಕತ್ವದ ಅಡಿಯಲ್ಲಿ ಸರ್ವ ಪ್ರಯತ್ನ ಮಾಡಿದೆ. ಬಿಜೆಪಿಯನ್ನು ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆ ಮಾಡಿರುವುದಕ್ಕಾಗಿ ಮತ್ತು ಇನ್ನೊಮ್ಮೆ ಅವರ ಸೇವೆ ಸಲ್ಲಿಸಲು ಅವಕಾಶ ನೀಡಿರುವುದಕ್ಕಾಗಿ ನಾನು ಜನತೆಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದು ಶಾ ತಮ್ಮ ಟ್ವೀಟಿನಲ್ಲಿ  ತಿಳಿಸಿದರು.

ಕೆಲವೇ ನಿಮಿಷಗಳಲ್ಲಿ ಇದಕ್ಕೆ ಬೆಂಬಲವಾಗಿ ಟ್ವೀಟ್ ಮಾಡಿದ ಪ್ರಧಾನಿ ಮೋದಿ, ’ನಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ಹರಿಯಾಣದ ಜನತೆಗೆ ಧನ್ಯವಾದ ಅರ್ಪಿಸುವೆ. ಇದೇ ಉತ್ಸಾಹ ಮತ್ತು ಸಮರ್ಪಣಾ ಭಾವದೊಂದಿಗೆ ನಾವು ಕೆಲಸ ಮುಂದುವರೆಸುತ್ತೇವೆ. ನಮ್ಮ ಅಭಿವೃದ್ಧಿ ಕಾರ್‍ಯಸೂಚಿಯನ್ನು ಜನತೆಯ ಬಳಿಗೆ ಒಯ್ಯಲು ವಿಶೇಷವಾಗಿ ಶ್ರಮಿಸಿದ ಹರಿಯಾಣದ ಬಿಜೆಪಿ ಕಾರ್‍ಯಕರ್ತರಿಗೂ ನನ್ನ ವಂದನೆಗಳು ಸಲ್ಲುತ್ತವೆ’ ಎಂದು ಬರೆದರು.

ಮಹಾರಾಷ್ಟ್ರ ಮತ್ತು ಹರಿಯಾಣ ಎರಡೂ ಕಡೆ ಗೆದ್ದಿರುವ ಕೆಲವು ಬಂಡಾಯ ಶಾಸಕರ ಜೊತೆಗೆ ಬಿಜೆಪಿಯ ಸಂಪರ್ಕ ಸಾಧಿಸಿದೆ ಎನ್ನಲಾಯಿತು. ಹರಿಯಾಣದಲ್ಲಿ ಬಂಡಾಯ ಶಾಸಕರು ಮತ್ತು ಸಣ್ಣ ಪಕ್ಷಗಳ ಬೆಂಬಲದೊಂದಿಗೆ ಮುಂದಿನ  ಸರ್ಕಾರ ರಚಿಸಲು  ಬಿಜೆಪಿ ಮುಂದಾಗಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಮಾಧ್ಯಮ ಒಂದಕ್ಕೆ ತಿಳಿಸಿದರು.

ಪಕ್ಷದ ತಂತ್ರದ ಬಗ್ಗೆ ಬಿಜೆಪಿ ನಾಯಕ ವಿವರಿಸಲಿಲ್ಲ. ಆದರೆ ಇಂಡಿಯನ್ ನ್ಯಾಷನಲ್ ಲೋಕದಳದ ಅಭಯ್ ಸಿಂಗ್ ಚೌಟಾಲರಂತಹ ಕೆಲವರು ಜನನಾಯಕ ಜನತಾ ಪಕ್ಷದ ಪ್ರತಿಸ್ಪರ್ಧಿ ದುಶ್ಯಂತ ಚೌಟಾಲ ’ಕಿಂಗ್ ಮೇಕರ್’ ಆಗದಂತೆ ತಡೆಯಲು ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ಹರಿಯಾಣ ಸಮೀಕ್ಷೆ ಲೆಕ್ಕಾಚಾರ ತಪ್ಪಾಗಿದ್ದು ಹೇಗೆ?

ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಮತಎಣಿಕೆಯ ಅಂತಿಮ ಘಟ್ಟ ತಲುಪುತ್ತಿದ್ದಂತೆಯೇ ಫಲಿತಾಂಶ ಎಲ್ಲರಿಗೂ ಅಚ್ಚರಿ ತಂದಿತು. ೨೦೧೯ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹರಿಯಾಣದ ಹತ್ತೂ ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅಲ್ಲದೇ ಇಂಡಿಯಾ ಟುಡೇ, ಆಕ್ಸಿಸ್ ಹೊರತು ಪಡಿಸಿ ಇತರ ಎಲ್ಲಾ ಮತದಾನೋತ್ತರ ಸಮೀಕ್ಷೆಗಳೂ ೯೦ ಸದಸ್ಯಬಲದ ಹರಿಯಾಣದಲ್ಲಿ ಬಿಜೆಪಿ ೭೦ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಮಹಾರಾಷ್ಟ್ರದಲ್ಲೂ ಬಿಜೆಪಿ-ಶಿವಸೇನಾ ಮೈತ್ರಿಕೂಟದ ಬಲ ೨೦೦ರ ಗಡಿ ದಾಟಬಹುದು ಎಂದು ಹೇಳಿದ್ದವು.

ಆದರೆ ಇದೀಗ ಹರಿಯಾಣ ಅತಂತ್ರ ವಿಧಾನಸಭೆಯಾದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟದಕ್ಕೆ ಸರಳ ಬಹುಮತವಷ್ಟೇ ಲಭಿಸಿದೆ.

ಬಿಜೆಪಿ ೪೦ ಸ್ಥಾನಗಳಲ್ಲಿ, ಕಾಂಗ್ರೆಸ್ ೩೧ ಹಾಗೂ ಜೆಜೆಪಿ ೧೨ ಸ್ಥಾನಗಳಲ್ಲಿ ಜಯ ಸಾಧಿಸುವತ್ತ ಹೆಜ್ಜೆ ಇಟ್ಟವು. ಶೇ.೪೦ರಷ್ಟು ಮತಎಣಿಕೆ ಮುಕ್ತಾಯಗೊಂಡಾಗ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಎಲ್ಲಾ ಸಮೀಕ್ಷೆಗಳ ಲೆಕ್ಕಚಾರ ತಲೆಕೆಳಗಾಗಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿತು. ಅದಕ್ಕೆ ಮುಖ್ಯ ಕಾರಣ ಬಹುತೇಕ ಸಮೀಕ್ಷೆಗಳು ೨೦೧೯ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನೇ ನೂತನ ಮಾನದಂಡವಾಗಿ ಪರಿಗಣಿಸಿದ್ದು ಎಂದು ಇದೀಗ ವಿಶ್ಲೇಷಿಸಲಾಗಿದೆ.

೨೦೧೯ರ ಲೋಕಸಭಾ ಚುನಾವಣೆಯಲ್ಲಿ ಹರಿಯಾಣದಲ್ಲಿ ಬಿಜೆಪಿ ಶೇ.೫೮ರಷ್ಟು ಮತ ಪಡೆದಿತ್ತು. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಶೇ.೩೬ಕ್ಕೆ ಕುಸಿತ ಕಂಡಿದೆ. ೨೦೧೪ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಕೇವಲ ಶೇ.೨-೩ರಷ್ಟು ಮತಗಳನ್ನಷ್ಟೇ ಹೆಚ್ಚು ಪಡೆದಿದೆ. ಆದರೆ ೨೦೧೯ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಶೇ.೨೦ರಷ್ಟು ಭಾರೀ ನಷ್ಟ ಅನುಭವಿಸಿದೆ.

ಮಹಾರಾಷ್ಟ್ರದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಬಿಜೆಪಿಗೆ ಸೋಲು:

ಮಹಾರಾಷ್ಟ್ರದ ಕೊಲ್ಹಾಪುರದ ಹತ್ತು ಕ್ಷೇತ್ರಗಳಲ್ಲಿ ಬಿಜೆಪಿಗೆ ಹೀನಾಯ ಸೋಲು ಅನುಭವಿಸಿದೆ. ಅಲ್ಲದೇ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಪ್ರವಾಹ ಪೀಡಿತ ಕ್ಷೇತ್ರಗಳಲ್ಲಿ ಬಿಜೆಪಿ ಪರಾಜಯಗೊಂಡಿದೆ. ೨೦೧೪ರ ಚುನಾವಣೆಯಲ್ಲಿ ಬಿಜೆಪಿ ೧೨೨ ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ನೂರು ಸ್ಥಾನಗಳಲ್ಲಷ್ಟೇ ಗೆಲುವು ಪಡೆಯಲು ಯಶಸ್ವಿಯಾಗಿದೆ. ಚುನಾವಣೋತ್ತರ ಮತ್ತು ಮತದಾನೋತ್ತರ ಸಮೀಕ್ಷೆಗಳೆಲ್ಲವೂ ಮಹಾರಾಷ್ಟ್ರದಲ್ಲಿ ಬಿಜೆಪಿಯೇ ೧೫೦ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು.

ಆದರೆ ಈ ಬಾರಿ ಬಿಜೆಪಿ 105 ಸ್ಥಾನಗಳಲ್ಲಿ ಶಿವಸೇನಾ 56, ಕಾಂಗ್ರೆಸ್ 44, ಎನ್ ಸಿಪಿ 54 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದವು. ಈ ಮೂಲಕ ಕೇವಲ ಬಿಜೆಪಿ ಏಕಾಂಗಿಯಾಗಿಯೇ ಸ್ಪಷ್ಟ ಬಹುಮತ ಪಡೆಯಲಿದೆ ಎಂಬ ಭವಿಷ್ಯ ಹುಸಿಯಾಯಿತು.

ಯಾರಿಗೆ ಎಷ್ಟು ಸ್ಥಾನ

ಮಹಾರಾಷ್ಟ್ರ    ಒಟ್ಟು ಸ್ಥಾನ 288  ಮ್ಯಾಜಿಕ್ ಸಂಖ್ಯೆ 145

ಪಕ್ಷ                           ಗೆಲುವು                                                        2014ರ ಸ್ಥಾನ

ಬಿಜೆಪಿ+                     162 (ಬಿಜೆಪಿ 103+ ಶಿವಸೇನಾ 54)                     185

ಕಾಂಗ್ರೆಸ್ +                  98  (ಕಾಂಗ್ರೆಸ್ 44+ ಎನ್‌ಸಿಪಿ 54)                      83

ಇತರರು                       22                                                                    20

 

ಹರಿಯಾಣ  ಒಟ್ಟು ಸ್ಥಾನ 90  ಮ್ಯಾಜಿಕ್ ಸಂಖ್ಯೆ  46

ಪಕ್ಷ                     ಗೆಲುವು                                                              2014ರ ಸ್ಥಾನ

ಬಿಜೆಪಿ                      40                                                                         47

ಕಾಂಗ್ರೆಸ್                   31                                                                        15

ಜೆಜೆಪಿ                       10                                                                         –

ಇತರರು                     9                                                                        28

October 24, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Prime Minister, Spardha | , | Leave a comment

ಶಿವಸೇನೆಗೆ ಸರ್ಕಾರದಲ್ಲಿ ೫೦:೫೦ ಪಾಲು: ಬಿಜೆಪಿಗೆ ಉದ್ಧವ್ ಠಾಕ್ರೆ ಸಂದೇಶ

24 Uddhav-Thackeray
ಮುಂಬೈ:
ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿದ್ದಂತೆಯೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷಕ್ಕೆ ಸರ್ಕಾರ ರಚನೆ ಸುಲಭವಲ್ಲ ಎಂಬ ಸಂದೇಶವನ್ನು 2019 ಅಕ್ಟೋಬರ್ 24ರ ಗುರುವಾರ ರವಾನಿಸಿದರು.

ಮಹಾರಾಷ್ಟ್ರ ಚುನಾವಣೆಗಳಲ್ಲಿ ಕಿರಿಯ ಪಾಲುದಾರನಾಗಲು ಮನಸ್ಸಿಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದ ಶಿವಸೇನಾ ಮುಖ್ಯಸ್ಥ, ಸರ್ಕಾರ ರಚನೆಯ ವಿಚಾರದಲ್ಲಿ ತನ್ನ ನಡೆಯನ್ನು ಶಿವಸೇನೆ ಒಪ್ಪಿಕೊಳ್ಳುತ್ತದೆ ಎಂದು ಬಿಜೆಪಿ ತೀರ್ಮಾನಿಸಬೇಕಾಗಿಲ್ಲ, ಇದು ಚರ್ಚಿಸಬೇಕಾದ ವಿಷಯ ಎಂದು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.

ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಉದ್ಧವ್, ಫೆಬ್ರುವರಿಯಲ್ಲಿ ಉಭಯ ಪಕ್ಷಗಳೂ ೫೦:೫೦ ಅಧಿಕಾರ ಹಂಚಿಕೆಯನ್ನು ಒಪ್ಪಿಕೊಂಡಿದ್ದವು ಎಂಬ ವಿಚಾರನ್ನು ನಿರ್ದಿಷ್ಟವಾಗಿ ನೆನಪಿಸಿದರು. ಆದರೆ ಹಲವಾರು ಬಾರಿ ಇದನ್ನೂ ನೆನಪಿಸಿದರೂ ಬಿಜೆಪಿ ತನ್ನ ವಚನವನ್ನು ಪಾಲಿಸದೆ ೧೬೪ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಶಿವಸೇನೆ ೧೨೪ ಅಭ್ಯರ್ಥಿಗಳನ್ನೂ ಮಾತ್ರ ಕಣಕ್ಕೆ ಇಳಿಸಿತ್ತು.

ಬಿಜೆಪಿಯು ೧೦೩ ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಉದಯಿಸಿದ್ದರೂ, ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವಸೇನೆಯನ್ನು ಸರ್ಕಾರ ರಚನೆಗಾಗಿ ನೆಚ್ಚಿಕೊಳ್ಳಲೇಬೇಕಾಗಿದೆ. ಈ ಅವಕಾಶವನ್ನು ಠಾಕ್ರೆ ಅತ್ಯಂತ ಕ್ಷಿಪ್ರವಾಗಿ ಬಳಸಿಕೊಂಡಿದ್ದಾರೆ.

‘ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಅತ್ಯಂತ ಮಹತ್ವದ ಪ್ರಶ್ನೆ’ ಎಂದು ಉದ್ಧವ್ ಠಾಕ್ರೆ ಹೇಳಿದರು.

ಲೋಕಸಭಾ ಚುನಾವಣೆಗೆ ಮುನ್ನ ೫೦:೫೦ ಸೂತ್ರವನ್ನು ಒಪ್ಪಿಕೊಳ್ಳಲಾಗಿತ್ತು ಎಂಬುದು ನೆನಪಿರಲಿ. ಇದರ ಪ್ರಕಾರ ಸ್ಥಾನ ಹಂಚಿಕೆ ಸೂತ್ರ ೧೪೪:೧೪೪. ಬಿಜೆಪಿಯ ಚಂದ್ರಕಾಂತ ಪಾಟೀಲ್ ಅವರು ಶಿವಸೇನೆಯ ತನ್ನ ಸ್ಥಾನವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ನಾನು ಕೆಲವು ಸ್ಥಾನಗಳಿಗೆ ಒಪ್ಪಿಕೊಂಡಿದ್ದೆ. ಆದರೆ ಈಗ ಅವರು ಅಡಚಣೆಗಳನ್ನು ಎದುರಿಸಲು ಹೋಗುವುದಾದಲ್ಲಿ ನಾನು ಅವರನ್ನು ಅರ್ಥ ಮಾಡಿಕೊಂಡು ಕೂರಲು ಸಾಧ್ಯವಿಲ್ಲ. ಏಕೆಂದರೆ ನನಗೆ ನನ್ನ ಪಕ್ಷವನ್ನು ಮುನ್ನಡೆಸಬೇಕಾಗಿದೆ ಎಂದು ಠಾಕ್ರೆ ನುಡಿದರು.

ಬಿಜೆಪಿಯ ಸ್ಥಾನ ಹಂಚಿಕೆಯ ಹೊಸ ಸೂತ್ರ ಮುಂದಿಟ್ಟ ಸೂತ್ರವನ್ನು ಪಕ್ಷವು ಒಪ್ಪಿಕೊಳ್ಳಬೇಕಾಗಿ ಬಂದ ಬಳಿಕ ೫೦:೫೦ ಸೂತ್ರದ ಬಗ್ಗೆ ಮಾತನಾಡುವುದನ್ನು ಸ್ಥಗಿತಗೊಳಿಸಿದ್ದ ಠಾಕ್ರೆ, ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮತ್ತೆ ಮತ್ತೆ ಫೆಬ್ರುವರಿಯಲ್ಲಿ ಮಾತುಕತೆ ನಡೆಸಲಾಗಿದ್ದ ’ವ್ಯವಸ್ಥೆ’ ಬಗ್ಗೆ ಮಾತನಾಡಿದರು. ಮತ್ತು ತಮ್ಮ ಪಕ್ಷಕ್ಕೆ ಅಧಿಕ ಲಾಭ ಗಳಿಸಬೇಕೆಂಬುದು ತಮ್ಮ ಉದ್ದೇಶ ಎಂದು ಹೇಳಿದರು.

ಸರ್ಕಾರ ರಚನೆಗೆ ನನಗೆ ಅವಸರವಿಲ್ಲ ಎಂದೂ ಅವರು ಒತ್ತಿ ಹೇಳಿದರು.

‘ಈಗ ಫಲಿತಾಂಶಗಳು ಬಂದಿವೆ. ಶೀಘ್ರವೇ ನಾವು ಬಿಜೆಪಿಯ ದೆಹಲಿ ನಾಯಕರ ಜೊತೆ ಚರ್ಚೆಗೆ ಕೂರುತ್ತೇವೆ. ಅಮಿತ್ ಭಾಯಿ ಬರುತ್ತಾರೆ. ನಿರ್ಧರಿಸಲಾಗಿದ್ದ ಸೂತ್ರವನ್ನು ಆಧರಿಸಿ ನಾವು ಜನರ ಮುಂದೆ ಪಾರದರ್ಶಕವಾಗಿ ಹೋಗುತ್ತೇವೆ’ ಎಂಬುದಾಗಿ ಹೇಳುವ ಮೂಲಕ ಮಾತುಕತೆಗಳಿಗೆ ನಿಯಮಗಳ ಅಡಿಗಟ್ಟನ್ನು ಅವರು ಸಿದ್ಧ ಪಡಿಸಿದರು. ’ಯಾವುದನ್ನು ಒಪ್ಪಿದ್ದೇವೋ ಅದಕ್ಕೆ ಅಂಟಿಕೊಳ್ಳಬೇಕು’ ಎಂದೂ ಉದ್ಧವ್ ನುಡಿದರು.

ಸೇನಾ ನಾಯಕ ಈ ತಿಂಗಳ ಆದಿಯಲ್ಲಿ ಮಾಧ್ಯಮದ ಜೊತೆ ಮಾತನಾಡುತ್ತಾ ’ಸೇನೆಯು ಮಹಾರಾಷ್ಟ್ರಕ್ಕಾಗಿ ಮೈತ್ರಿಯಲ್ಲಿ ರಾಜಿ ಮಾಡಿಕೊಂಡಿದೆ’ ಎಂದು ಹೇಳಿದ್ದರು.

‘ನಾವು ಕಡಿಮೆ ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದೇವೆ, ಏಕೆಂದರೆ (ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ) ಫಡ್ನಿವಿಸ್ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅವರು ತಮ್ಮ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಕೋರಿದ್ದರು. ನಾನು ಅದನ್ನು ಪರಿಗಣಿಸಿದ್ದೆ’ ಎಂದು ಉದ್ಧವ್ ಸಂದರ್ಶನ ಒಂದರಲ್ಲಿ ತಿಳಿಸಿದ್ದರು.

ಮುಖ್ಯಮಂತ್ರಿ ಸ್ಥಾನವು ಚರ್ಚಾರ್ಹ ಅಲ್ಲ ಎಂಬುದಾಗಿ ಬಿಜೆಪಿ ನಾಯಕರು ಸೂಚಿಸಿದ್ದಾರೆ ಮತ್ತು ಸೇನಾ ಮುಖ್ಯಸ್ಥರು ಫೆಬ್ರುವರಿ ಸೂತ್ರದ ಪ್ರಕಾರ ಉಪಮುಖ್ಯಮಂತ್ರಿ ಸ್ಥಾನ ಪಡೆಯುವ ಗುರಿ ಹೊಂದಿದ್ದಾರೆ.

ಶಿವಸೇನೆಯಲ್ಲಿ ಯಾರು ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದಾಗಿ ಉದ್ಧವ್ ಠಾಕ್ರೆ ಸ್ಪಷ್ಟ ಪಡಿಸಿಲ್ಲ. ಹೊಸದಾಗಿ ಚುನಾಯಿತರಾದ ಶಾಸಕರು ವಿಷಯವನ್ನು ಇತ್ಯರ್ಥ ಪಡಿಸುವರು ಎಂದು ಠಾಕ್ರೆ ಹೇಳಿದರು.

October 24, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , , , , | Leave a comment

ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ ಭಾರತ- ಪಾಕ್ ಸಹಿ

24 kartarpur corridar agreement signed
ನವದೆಹಲಿ:
ಸಿಖ್ ಪಂಥದ ಸಂಸ್ಥಾಪಕ ಗುರುನಾನಕ್ ದೇವ್ ಅವರು ತಮ್ಮ ಜೀವನದ ಅಂತಿಮ ವರ್ಷಗಳನ್ನು ಕಳೆದ ಸ್ಥಳದಲ್ಲಿ ನಿರ್ಮಿಸಲಾದ ಗುರುದ್ವಾರವನ್ನು ಸಂದರ್ಶನಕ್ಕೆ  ಭಾರತೀಯ ಯಾತ್ರಾರ್ಥಿಗಳಿಗೆ ಅವಕಾಶ ನೀಡುವ ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ  ಭಾರತ ಮತ್ತು ಪಾಕಿಸ್ತಾನ 2019 ಅಕ್ಟೋಬರ್ 24ರ ಗುರುವಾರ ಗಡಿಯಲ್ಲಿನ ‘ಶೂನ್ಯ ರೇಖೆ’ ಯಲ್ಲಿ ಸಹಿ ಮಾಡಿದವು. ಉಭಯ ರಾಷ್ಟ್ರಗಳ  ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದಕ್ಕೆ ಸಹಿ ಹಾಕಲು ಅಕ್ಟೋಬರ್ ೨೩ ರ ದಿನಾಂಕವನ್ನು ಭಾರತವು ಸೋಮವಾರ ಪ್ರಸ್ತಾಪಿಸಿತ್ತು. ಆದರೆ ಪಾಕಿಸ್ತಾನದ ಕಡೆಯ “ಆಡಳಿತಾತ್ಮಕ ಸಮಸ್ಯೆಗಳ’ ಕಾರಣ ಈ ದಿನಾಂಕವನ್ನು ಒಂದು ದಿನ ಮುಂದೂಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಪಾಕಿಸ್ತಾನ ನಿಯೋಗದ ನೇತೃತ್ವವನ್ನು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ವಹಿಸಿದ್ದರು.

“ಕರ್ತಾರಪುರ ಸಾಹಿಬ್  ತಲುಪಲು ಕರ್ತಾರಪುರ ಕಾರಿಡಾರ್ ತೆರೆಯುವ ಬಗೆಗಿನ ಐತಿಹಾಸಿಕ ಪಾಕಿಸ್ತಾನ- ಭಾರತ ಒಪ್ಪಂದಕ್ಕೆ ಸಹಿ ಹಾಕಲು  ತೆರಳುತ್ತಿರುವೆ.  ನವೆಂಬರ್ ೯ ರಂದು ಪಾಕಿಸ್ತಾನದ ನರೋವಾಲದಲ್ಲಿ  ಕರ್ತಾರಪುರ ಸಾಹಿಬ್ ಕಾರಿಡಾರನ್ನು ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ ”ಎಂದು ಶೂನ್ಯ ರೇಖೆಯತ್ತ ಹೊರಡುವ ಮುನ್ನ ಫೈಸಲ್ ಟ್ವೀಟ್ ಮಾಡಿದ್ದರು.

ಗುರುನಾನಕ್ ದೇವ್‌ಅವರ ೫೫೦ ನೇ ಜನ್ಮದಿನಾಚರಣೆಗೆ ಮುನ್ನ ಮುನ್ನ ಕಾರಿಡಾರ್ ಕಾರ್ಯಗತಕ್ಕಾಗಿ ಭಾರತ ಮತ್ತು ಪಾಕಿಸ್ತಾನ  ಉನ್ನತ ಮಟ್ಟದ ಮಾತುಕತೆ ನಡೆಸಿವೆ. ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಕಾರಿಡಾರ್ ಅನುಕೂಲಕರವಾಗಲಿದೆ. ೧೫೨೨ ರಲ್ಲಿ ಸಿಖ್ ಪಂಥದ  ಸಂಸ್ಥಾಪಕ ಗುರುನಾನಕ್ ದೇವ್‌ಅವರು ಸ್ಥಾಪಿಸಿದ ಕರ್ತಾರಪುರ ಸಾಹಿಬ್‌ಗೆ ಭೇಟಿ ನೀಡಲು ಭಾರತೀಯ ಯಾತ್ರಿಕರು ಅನುಮತಿ ಪಡೆದರೆ ಸಾಕಾಗುತ್ತದೆ. ವೀಸಾದ ಅಗತ್ಯ ಬೀಳುವುದಿಲ್ಲ.

ಏನಿದು ಕಾರಿಡಾರ್?

ಪಂಜಾಬಿನ ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ತಲುಪಲು ಸಿದ್ಧ ಪಡಿಸಲಾಗಿರುವ ನೂತನ ಪ್ರವೇಶ ಮಾರ್ಗವಾಗಿದೆ ಈ ಕರ್ತಾರಪುರ ಕಾರಿಡಾರ್.

ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ಧತೆಯ ಪರಿಣಾಮವಾಗಿ ಭಾರತೀಯ ಯಾತ್ರಾರ್ಥಿಗಳಿಗೆ ಈ ದರ್ಬಾರ್ ಸಾಹಿಬ್‌ಗೆ ಪ್ರವೇಶ ಪಡೆಯುವುದು ಈವರೆಗೆ ದುಸ್ತರವಾಗಿತ್ತು.

೧೯೪೭ರಲ್ಲಿ ಭಾರತವನ್ನು ಬಿಟಿಷರಿಂದ ವಿಭಜಿಸಲ್ಪಟ್ಟ ಪಂಜಾಬಿನಲ್ಲಿ ಸಿಖ್ ಪಂಥವು ಶತಕಗಳಷ್ಟು ಹಿಂದೆಯೇ ಜನ್ಮತಾಳಿತ್ತು. ೧೬ನೇ ಶತಮಾನದಲ್ಲಿ ಸಿಖ್ ಪಂಥದ ಸಂಸ್ಥಾಪಕ ಗುರು ನಾನಕ್ ದೇವ್ ಅವರು ನಿರ್ಮಿಸಿದ್ದು ಎಂಬುದಾಗಿ ನಂಬಲಾದ ಕರ್ತಾರಪುರದ ಈ ಗುರುದ್ವಾರವು ಭಾರತದ ಗಡಿಯಿಂದ ಸುಮಾರು ೪ ಕಿಮೀ ದೂರದಲ್ಲಿ (೨.೫ ಮೈಲು) ಪಾಕಿಸ್ತಾನದ ಭೂಪ್ರದೇಶದಲ್ಲಿದೆ.

ಈ ವಾರಾರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕರ್ತಾರಪುರ ಗುರುದ್ವಾರವು ವಿಶ್ವದಲ್ಲೇ ಅತ್ಯಂತ ವಿಶಾಲವಾದ ಗುರುದ್ವಾರವಾಗಿದ್ದು, ತಮ್ಮ ರಾಷ್ಟ್ರವು ವಿಶ್ವಾದ್ಯಂತದ ಸಿಕ್ಖರಿಗೆ ಈ ಗುರುದ್ವಾರ ದರ್ಶನಕ್ಕೆ ತನ್ನ ದ್ವಾರಗಳನ್ನು ತೆರೆಯುತ್ತಿದೆ ಎಂದು ಹೇಳಿದ್ದರು.

ನವೆಂಬರ್ ೧೦ರಂದು ಸಾರ್ವಜನಿಕರಿಗೆ ಮುಕ್ತವಾಗಲಿರುವ ಕಾರಿಡಾರ್ ಭಾರತ-ಪಾಕ್ ಗಡಿಯಿಂದ ನೇರವಾಗಿ ಗುರುದ್ವಾರವನ್ನು ಸಂಪರ್ಕಿಸುತ್ತದೆ.

ಕಾರಿಡಾರ್‌ಗೆ ಸಂಬಂಧಿಸಿದ ವಿವರಗಳನ್ನು ಅಂತಿಮಗೊಳಿಸುವುದೇನೂ ಸುಲಭವಾದ ವಿಷಯವಾಗಿರಲಿಲ್ಲ. ಒಂದು ವರ್ಷದ ಹಿಂದೆ ಪ್ರಕಟಿಸಿದ ಬಳಿಕ ಈ ಪ್ರಕ್ರಿಯೆ ಹಲವಾರು ಕಾರಣಗಳಿಂದಾಗಿ ಉದ್ದಕ್ಕೆ ಎಳೆಯಲ್ಪಟ್ಟಿತ್ತು.

ಕಾರಿಡಾರ್ ಬಗ್ಗೆ ನಮಗೇನು ಗೊತ್ತಿದೆ?

ಕಾರಿಡಾರ್ ಪ್ರಸ್ತುತ ನಿರ್ಮಾಣದ ಕೊನೆಯ ಹಂತದಲ್ಲಿದ್ದು ನವೆಂಬರ್ ಆರಂಭದಲ್ಲಿ ಬಳಕೆಗೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.

ನೂರಾರು ಮಂದಿ ಕಾರ್ಮಿಕರು ಈಗಲೂ  ೪೨ ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಗುರುದ್ವಾರ ಮತ್ತು ಅದರ ವಿಸ್ತರಣಾ ಕಾರ್‍ಯಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್‍ಯದಲ್ಲಿ ಮಗ್ನರಾಗಿದ್ದಾರೆ.

ಸಂದರ್ಶಕರ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಗಡಿ ಮತ್ತು ಗುರುದ್ವಾರದ ಮಧ್ಯೆ ಹರಿಯುವ ರಾವಿ ನದಿಗೆ ಅಡ್ಡಲಾಗಿ ಒಂದು ಸೇತುವೆ ನಿರ್ಮಾಣ ಕೂಡಾ ಈ ಕಾರಿಡಾರ್ ಯೋಜನೆಯಲ್ಲಿ ಸೇರಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಧಿಕೃತವಾಗಿ ಯೋಜನೆಯನ್ನು ಘೋಷಿಸಿದ ಬಳಿಕ ಗುರುದ್ವಾರದ ಸುತ್ತ ಮುತ್ತ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಕಾಮಗಾರಿಗಳೂ ಆರಂಭಗೊಂಡಿದ್ದವು.

ಗುರುದ್ವಾರದ ವಿಸ್ತರಣೆ, ನೂತನ ಸವಲತ್ತುಗಳ ಪಟ್ಟಿಯಲ್ಲಿ ನೂತನ ಪ್ರಾಂಗಣ, ವಸ್ತುಸಂಗ್ರಹಾಲಯ, ಗ್ರಂಥಾಲಯ, ವಸತಿ ನಿಲಯಗಳು (ಡಾರ್ಮೆಟ್ರಿಗಳು), ಲಾಕರ್ ಕೊಠಡಿಗಳು, ವಲಸೆ ಕೇಂದ್ರ ಮತ್ತು ಪ್ರವಾಹದ ಸಂದರ್ಭದಲ್ಲಿ ಗುರುದ್ವಾರ ರಕ್ಷಣೆಗಾಗಿ ಒಂದು ಒಡ್ಡು ನಿರ್ಮಾಣ ಕೂಡಾ ಸೇರಿವೆ.

ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಕಾರಿಡಾರ್ ಮೂಲಕ ತೆರಳಲು ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಅಥವಾ ವೀಸಾದ ಅಗತ್ಯವಿಲ್ಲ, ಆದರೆ ಅಲ್ಲಿಗೆ ಹೋಗುವುದಕ್ಕೆ ಮುನ್ನ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ಪ್ರಕ್ರಿಯೆಯ ಪೂರ್ಣ ಮಾಹಿತಿಗಳನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ, ಆದರೆ ಪ್ರವಾಸಿಗರು ಅನುಮತಿಗಾಗಿ ಅಂತರ್ಜಾಲದ (ಆನ್ ಲೈನ್) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ, ಮತ್ತು ಅದಕ್ಕೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಸರ್ಕಾರಗಳು ಮಂಜೂರಾತಿ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.

೧೯೯೮ರಿಂದಲೇ ಮಾತುಕತೆ

ಭಾರತದಲ್ಲಿನ ಸಿಖ್ ಸಮುದಾಯವು ಕಾರಿಡಾರ್ ಮೂಲಕ ಗುರುದ್ವಾರ ಸಂದರ್ಶನಕ್ಕೆ ವ್ಯವಸ್ಥೆ ಬೇಕು ಎಂದು ದೀರ್ಘ ಕಾಲದ ಹಿಂದೆಯೇ ಬೇಡಿಕೆ ಇಟ್ಟಿತ್ತು. ಗುರುದ್ವಾರಕ್ಕೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಭಾರತದ ಹಿಂದಿನ ಸರ್ಕಾರಗಳು ಪ್ರಾಥಮಿಕ ಮಾತುಕತೆಗಳನ್ನೂ ಆರಂಭಿಸಿದ್ದವು.

೧೯೯೮ರಲ್ಲಿ ಈ ನಿಟ್ಟಿನ ಮೊದಲ ಮಾತುಕತೆ ನಡೆದಿತ್ತು. ಬಳಿಕ ೨೦೦೪ರಲ್ಲಿ ಮತ್ತು ೨೦೦೮ರಲ್ಲಿ ಮಾತುಕತೆಗಳು ನಡೆದಿದ್ದವು. ಆದರೆ ಈ ಮಾತುಕತೆಗಳಿಂದ ಸ್ಪಷ್ಟವಾದ ತೀರ್ಮಾನ ಸಾಧ್ಯವಾಗಿರಲಿಲ್ಲ.

ವಿಭಜನೆಯ ಬಳಿಕ ಭಾರತೀಯರಿಗೆ ಗುರುದ್ವಾರಕ್ಕೆ ಸೀಮಿತ ಪ್ರವೇಶದ ಅವಕಾಶವಿತ್ತು. ಭೇಟಿಗೆ ವೀಸಾ ಪಡೆಯುವುದೇ ದೊಡ್ಡ ಹೋರಾಟವಾಗುತ್ತಿತ್ತು.

ಕರ್ತಾರಪುರದಲ್ಲಿ ಪ್ರಸ್ತುತ ಇರುವ ಗುರುದ್ವಾರವನ್ನು ಮೂಲ ಗುರುದ್ವಾರವು ಪ್ರವಾಹದಲ್ಲಿ ನಾಶವಾದ ಬಳಿಕ ೧೯೨೫ರಲ್ಲಿ ನಿರ್ಮಿಸಲಾಗಿತ್ತು. ಬಳಿಕ ಪಾಕಿಸ್ತಾನಿ ಸರ್ಕಾರವು ೨೦೦೪ರಲ್ಲಿ ಅದನ್ನು ಪುನರ್ ನಿರ್ಮಿಸಿತ್ತು.

ಗುರುನಾನಕ್ ಅವರು ತಮ್ಮ ಜೀವನದ ಕೊನೆಯ ೧೮ ವರ್ಷಗಳನ್ನು ಕಳೆದುದರ ನೆನಪಿಗಾಗಿ ಇಲ್ಲಿ ಗುರುದ್ವಾರವನ್ನು ನಿರ್ಮಿಸಲಾಗಿತ್ತು.

ಗುರು ನಾನಕ್ ದೇವ್ ಅವರ ಜನ್ಮಸ್ಥಾನದ ಬಳಿಕ ಪಾಕಿಸ್ತಾನದಲ್ಲಿನ ಈ ಗುರುದ್ವಾರವು ಸಿಕ್ಖರ ಪಾಲಿನ ಎರಡನೇ ಪವಿತ್ರ ಸ್ಥಳ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.

October 24, 2019 Posted by | ಪಾಕಿಸ್ತಾನ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Festival, Flash News, General Knowledge, India, Nation, News, Spardha, Temples, Temples, ದೇವಾಲಯಗಳು, World | , , , , , , , , | Leave a comment

ದೆಹಲಿ ಅನಧಿಕೃತ ಕಾಲೋನಿಗಳ ೪೦ ಲಕ್ಷ ಮಂದಿಗೆ ಮಾಲೀಕತ್ವ ಹಕ್ಕು: ಕೇಂದ್ರ ನಿರ್ಧಾರ

23 modi deli sites
ನವದೆಹಲಿ:
ರಾಷ್ಟ್ರದ ರಾಜಧಾನಿ ದೆಹಲಿಯ ಅನಧಿಕೃತ ಕಾಲೋನಿಗಳಲ್ಲಿ ವಾಸವಾಗಿರುವ ೪೦ ಲಕ್ಷ ಮಂದಿಗೆ ಈ ಕಾಲೋನಿಗಳ ತಮ್ಮ ಮನೆಗಳ ಮೇಲಿನ ಮಾಲೀಕತ್ವ ಹಕ್ಕು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ  2019 ಅಕ್ಟೋಬರ್ 23ರ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ನಿರ್ಧರಿಸಿತು.

ಈ ಅನಧಿಕೃತ ಕಾಲೋನಿಗಳಲ್ಲಿನ ಮನೆಗಳು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿರಲಿ ಅಥವಾ ಖಾಸಗಿ ಭೂಮಿಯಲ್ಲಿ ನಿರ್ಮಿಸಲ್ಪಟ್ಟಿರಲಿ ಅವುಗಳ ಮೇಲಿನ ಮಾಲೀಕತ್ವ ಹಕ್ಕು ಅಂತಹ ಮನೆಗಳಲ್ಲಿ ವಾಸವಾಗಿರುವವರಿಗೆ ಲಭಿಸಲಿದೆ ಎಂದು ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದರು.

ಸೈನಿಕ್ ಫಾಮ್ಸ್, ಮಹೇಂದ್ರು ಎನ್ ಕ್ಲೇವ್ ಮತ್ತು ಅನಂತರಾಮ್ ಡೈರಿಗಳಂತಹ ೬೭ ಶ್ರೀಮಂತ ಆದರೆ ಅನಧಿಕೃತ ಕಾಲೋನಿಗಳು ಮಾತ್ರ ಸರ್ಕಾರದ ನಿರ್ಣಯಕ್ಕೆ ಅಪವಾದವಾಗಿವೆ. ಅಂದರೆ ಈ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವ ಹಕ್ಕು ಲಭಿಸುವುದಿಲ್ಲ.

‘ಬುಧವಾರದ ಸಚಿವ ಸಂಪುಟ ಸಭೆಗೆ ಅತ್ಯಂತ ದೊಡ್ಡ ನಿರ್ಣಯ ಇದು. ಈ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವದ ಹಕ್ಕು ನೀಡುವ ಈ ನಿರ್ಣಯ ಚಾರಿತ್ರಿಕ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಬಣ್ಣಿಸಿದರು. ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಅವರು ನಿರ್ಣಯವನ್ನು ’ದೂರ ದೃಷ್ಟಿಯ ಕ್ರಾಂತಿಕಾರಿ ನಿರ್ಣಯ’ ಎಂದು ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೂಡಾ ಈ ವರ್ಷ ಜುಲೈ ತಿಂಗಳಲ್ಲಿ ಈ ಕಾಲೋನಿಗಳಲ್ಲಿ  ವಾಸವಾಗಿರುವ ಜನರಿಗೆ ಮಾಲೀಕತ್ವ ಹಕ್ಕು ನೀಡುವ ಪ್ರಸ್ತಾವವನ್ನು ಪ್ರಕಟಿಸಿದ್ದರು. ಆಮ್ ಆದ್ಮಿ ಪಕ್ಷಕ್ಕೆ ಈ ವಿಚಾರದಲ್ಲಿ  ಕೇಂದ್ರ ಸರ್ಕಾರದ ಸಮ್ಮತಿ ಲಭಿಸಿದೆ ಎಂದು ಕೇಜ್ರಿವಾಲ್ ಅವರು ಆಗ ಪ್ರಕಟಿಸಿದ್ದರು.

ಮುಂದಿನ ವರ್ಷ ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗೆ ಕೆಲವು ತಿಂಗಳುಗಳಷ್ಟು ಮುಂಚಿತವಾಗಿ ದೆಹಲಿಯಲ್ಲಿನ ಈ ೧,೭೯೭ ಕಾಲೋನಿಗಳಲ್ಲಿ ವಾಸವಾಗಿರುವವರಿಗೆ ಮಾಲೀಕತ್ವ ಹಕ್ಕು ನೀಡುವ ವಿಚಾರದ ಮೇಲೆ ಬೆಳಕು ಬಿದ್ದಿದೆ.

ಆಮ್ ಆದ್ಮಿ ಪಕ್ಷ ಅಥವಾ ಆಪ್ (ಎಎಪಿ) ಸರ್ಕಾರ ತನ್ನ ಕಾಲೆಳೆಯುತ್ತಿದೆ ಎಂಬುದಾಗಿ ಹೇಳುವ ಮೂಲಕ ಹರದೀಪ್ ಪುರಿ ಅವರು ಅರವಿಂದ ಕೇಜ್ರಿವಾಲ್ ಸರ್ಕಾರದ ವಿರುದ್ಧ ಬುಧವಾರ ಹರಿಹಾಯ್ದರು.

‘ಈ ಕಾಲೋನಿಗಳನ್ನು ಗುರುತಿಸುವ ವಿಚಾರವನ್ನು ಮುಂದಕ್ಕೆ ಒಯ್ಯಬೇಕಾದ್ದು ನಿಮ್ಮ ಜವಾಬ್ದಾರಿಯಾಗಿದೆ ಎಂಬುದಾಗಿ ಸೂಚಿಸುವ ಮೂಲಕ ದೆಹಲಿ ಮುಖ್ಯಮಂತ್ರಿಯನ್ನು ಪ್ರೋತ್ಸಾಹಿಸಲು ನಾನು ಹಲವಾರು ಪ್ರಯತ್ನಗಳನ್ನು ಮಾಡಿದೆ. ಆದರೆ ನಗರದ ಸರ್ಕಾರವು ಈ ಕಾಲೋನಿಗಳ ಗಡಿ ಗುರುತಿಸುವ ಕೆಲಸ ನಿರ್ವಹಿಸಲು ಸಂಸ್ಥೆಯೊಂದನ್ನು ಕೂಡಾ ಆಯ್ಕೆ ಮಾಡಲಿಲ್ಲ’ ಎಂದು ಪುರಿ ದೂರಿದರು.

‘೨೦೦೮ರಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ರೂಪಿಸಿದ್ದ ನಿಯಮಾವಳಿಗಳ ಪ್ರಕಾರ ಸಕ್ರಮೀಕರಣಕ್ಕೆ ಈ ಕಾಲೋನಿಗಳ ಗಡಿ ಗುರುತಿಸುವ ಪ್ರಕಿಯೆಯೇ ಆರಂಭಿಕ ಹಂತ’ ಎಂದು ಕೇಂದ್ರ ಸಚಿವ ಹೇಳಿದರು.

‘ದೆಹಲಿ ಸರ್ಕಾರವು ನಿಯಮಾವಳಿಗಳನ್ನು ಪ್ರಕಟಿಸಿದ ೧೧ ವರ್ಷಗಳ ಬಳಿಕ ಕೂಡಾ ಈ ಕಾಲೋನಿಗಳ ಗಡಿ ಗುರುತಿಸುವ ಪ್ರಕ್ರಿಯೆ ಆರಂಭಿಸಿಲ್ಲ, ಬದಲಿಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲು ೨೦೨೧ರವರೆಗೆ ಕಾಲಾವಕಾಶ ಕೋರಿದೆ’ ಎಂದು ಅವರು ನುಡಿದರು.

ಹೀಗಾಗಿ ಈ ಹಂತದಲ್ಲಿ ಮಧ್ಯಪ್ರವೇಶಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿತು ಎಂದು ಪುರಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಕೇಂದ್ರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ನಾಯಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ವಾಗತಿಸಿದರು.

ಅನಧಿಕೃತ ಕಾಲೋನಿಗಳ ಸಕ್ರಮೀಕರಣ ಮತ್ತು ಮಾಲೀಕತ್ವ ಹಕ್ಕು ನೀಡುವ ವಿಚಾರವು ನಗರದ ರಾಜಕಾರಣದಲ್ಲಿ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ ವಿಷಯವಾಗಿದೆ. ಈ ಕಾಲೋನಿಗಳಲ್ಲಿ ದೆಹಲಿಯ ಜನಸಂಖ್ಯೆಯ ಮೂರನೇ ಒಂದರಷ್ಟು  ಜನರು ವಾಸವಾಗಿದ್ದು, ಅಷ್ಟೂ ಮಂದಿಗೆ ಮತದಾನದ ಹಕ್ಕಿದೆ.

‘ಪ್ಲಾಟಿನ ಗಾತ್ರ ಮತ್ತು ವಾಸಿಸುವಷ್ಟು ಸ್ಥಳದ (ಕಾರ್ಪೆಟ್ ಏರಿಯಾ) ಆಧಾರದಲ್ಲಿ ಸಾಂಕೇತಿಕ ಶುಲ್ಕವನ್ನು ಪಡೆದು ಮಾಲೀಕತ್ವ ಹಕ್ಕು ನೀಡಲಾಗುವುದು’ ಎಂದು ಸಚಿವರು ಹೇಳಿದರು.

ಸರ್ಕಾರಿ ಭೂಮಿಯಲ್ಲಿನ ಕಾಲೋನಿಗಳಿಗೆ ಅನಧಿಕೃತ ಕಾಲೋನಿಗಳನ್ನು ಸುತ್ತುವರಿದಿರುವ ವಸತಿ ಪ್ರದೇಶದ  ಸ್ಥಳಗಳಲ್ಲಿನ ಗರಿಷ್ಠ ವರ್ಗದ ದರದ ಶೇಕಡಾ ೦.೫ (೧೦೦ ಚದರ ಮೀಟರುಗಳಿಗಿಂತ ಕಡಿಮೆ ಸ್ಥಳಕ್ಕೆ), ಶೇಕಡಾ ೧ (೧೦೦-೨೫೦ ಚದರ ಮೀಟರುಗಳು), ಶೇಕಡಾ ೨.೫ (೨೫೦ ಚದರ ಮೀಟರುಗಳಿಗಿಂತ ಹೆಚ್ಚಿನ ಸ್ಥಳ) ಶುಲ್ಕ ಪಡೆಯಲಾಗುವುದು. ಖಾಸಗಿ ಭೂಮಿಯಲ್ಲಿನ ಕಾಲೋನಿಗಳಿಗೆ ಸರ್ಕಾರಿ ಭೂಮಿಯಲ್ಲಿ ವಿಧಿಸಲಾಗುವ ದರದ ಅರ್ಧದಷ್ಟು ಶುಲ್ಕ ವಿಧಿಸಲಾಗುವುದು.

ಕೊಳಚೆಗೇರಿಗಳನ್ನು ಹೊರತು ಪಡಿಸಿ, ಬೆಳವಣಿಗೆ ಹೊಂದಿರುವ ಈ ಅನಧಿಕೃತ ಕಾಲೋನಿಗಳು ಶುಲ್ಕಪಾವತಿಗೆ ಸಿದ್ಧರಿರುವ ಜನರಿಗೆ ವಸತಿ ವ್ಯವಸ್ಥೆ ಒದಗಿಸುವಲ್ಲಿನ ವೈಫಲ್ಯದ ಪರಿಣಾಮವಾಗಿದೆ. ಈ ಹಿಂದೆಯೂ ಬಹುತೇಕ ಚುನಾವಣೆಗಳು ಹತ್ತಿರ ಬಂದಾಗ ಅನಧಿಕೃತ ಕಾಲೋನಿಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಕಟಣೆಗಳು, ನಿರ್ಣಯಗಳು ಹೊರಬಿದ್ದಿದ್ದವು.

October 23, 2019 Posted by | ಆರ್ಥಿಕ, ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Prime Minister, Spardha | , , , , , | Leave a comment

ತಪ್ಪು ಸಂದೇಶಕ್ಕಾಗಿ ಮಾಧ್ಯಮಗಳಿಗೆ ಮದ್ರಾಸ್ ಹೈಕೋರ್ಟ್ ತರಾಟೆ

23 madras high court
ಮಹಾಬಲಿಪುರಂ: ಮೋದಿ-ಕ್ಸಿ ಭೇಟಿಯ ಫ್ಲೆಕ್ಸ್ ಬೋರ್ಡ್

ಚೆನ್ನೈ: ಮಹಾಬಲಿಪುರಂನಲ್ಲಿ ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅನೌಪಚಾರಿಕ ಶೃಂಗಕ್ಕೆ ಸಂಬಂಧಿಸಿದಂತೆ ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕಲು ತಾನು ಅನುಮತಿ ನೀಡಿದ್ದುದಾಗಿ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಮದ್ರಾಸ್ ಹೈಕೋರ್ಟ್ 2019 ಅಕ್ಟೋಬರ್ 23ರ ಬುಧವಾರ ನಿರಾಕರಿಸಿತು ಮತ್ತು ತಪ್ಪು ವರದಿಗಳಿಗಾಗಿ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿತು.

‘ನಾವು ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕಲು ಅನುಮತಿ ಕೊಟ್ಟಿರಲಿಲ್ಲ. ನಿಯಮಾವಳಿಗಳನ್ನು ಪಾಲಿಸಿ ಎಂದಷ್ಟೇ ನಾವು ಹೇಳಿದ್ದೆವು. ಮಾಧ್ಯಮವು ಆದೇಶವನ್ನು ಸಮರ್ಪಕವಾಗಿ ಓದದೇ ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ರವಾನಿಸಿತು. ಮುಂದಿನಬಾರಿ, ಕೋರ್ಟ್ ಆದೇಶಗಳನ್ನು ತಪ್ಪಾಗಿ ವರದಿ ಮಾಡಿದ್ದು ನಮ್ಮ ಗಮನಕ್ಕೆ ಬಂದಲ್ಲಿ ನ್ಯಾಯಾಂಗ ನಿಂದನೆಯ ಕಷ್ಟಕ್ಕೆ ಗುರಿಯಾಗಬೇಕಾದೀತು’ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

೬೦ಕಿಮೀ ವ್ಯಾಪ್ತಿಯಲ್ಲಿ ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕಲು ಈ ತಿಂಗಳ ಆದಿಯಲ್ಲಿ ಹಸಿರು ನಿಶಾನೆ ತೋರಿದ್ದ ನ್ಯಾಯಮೂರ್ತಿ ಎಂ. ಸತ್ಯನಾರಾಯಣನ್ ಮತ್ತು ನ್ಯಾಯಮೂರ್ತಿ ಎನ್ ಶೇಷಸಾಯಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕದಂತೆ ತಾನು ನಿರ್ಬಧಿಸಿರುವುದು ಸರ್ಕಾರವನ್ನಲ್ಲ, ಕೇವಲ ರಾಜಕೀಯ ಪಕ್ಷಗಳನ್ನಾದ್ದರಿಂದ ನಿಜವಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೇಳಿತ್ತು.

ಸರ್ಕಾರದ ಮನವಿಯನ್ನು ವಿರೋಧಿಸಿದ್ದ ಡಿಎಂಕೆಯು ಆಡಳಿತಾರೂಢ ಎಐಎಡಿಎಂಕೆಯು ’ಹಲವಾರು ಬ್ಯಾನರುಗಳನ್ನು ಹಾಕುವ’ ರಹಸ್ಯ ಕಾರ್‍ಯಸೂಚಿ ಇಟ್ಟುಕೊಂಡಿರುವಂತಿದೆ ಎಂದು ಆಪಾದಿಸಿತ್ತು.

‘ಬ್ಯಾನರ್ ಸಂಸ್ಕೃತಿ’ಯನ್ನು ನ್ಯಾಯಾಲಯವು ನಿಷೇಧಿಸಿದ ಬಳಿಕ, ರಾಜ್ಯಾದ್ಯಂತ ಬ್ಯಾನರುಗಳನ್ನು ಹಾಕಲು ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಸರ್ಕಾರದ ಪರವಾಗಿ ಮುನಿಸಿಪಲ್ ಆಡಳಿತದ ಕಮೀಷನರ್  ಸಲ್ಲಿಸಿದ್ದ ಅರ್ಜಿಯು ಹೇಳಿತ್ತು.  ಕಳೆದ ತಿಂಗಳು ೨೩ರ ಹರೆಯದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಸಾವನ್ನಪ್ಪಿದ ಬಳಿಕ ನ್ಯಾಯಾಲಯವು ಬ್ಯಾನರ್ ಸಂಸ್ಕೃತಿ ವಿರುದ್ಧ ಹರಿಹಾಯ್ದಿತ್ತು.

ಇದಕ್ಕೆ ಮುನ್ನ ರಸ್ತೆ ಬದಿಗಳಲ್ಲಿ ಬ್ಯಾನರ್ ಅಳವಡಿಸುವುದನ್ನು ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್, ಮಹಿಳಾ ಟೆಕ್ಕಿಯ ಸಾವಿನ  ಹಿನ್ನೆಲೆಯಲ್ಲಿ ತಾನು ನೀಡಿದ್ದ ಆದೇಶವನ್ನು ಸರ್ಕಾರವು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

೨೩ರ ಹರೆಯದ ಮಹಿಳೆ ದ್ವಿಚ್ರಕ್ರವಾಹನದಲ್ಲಿ ಸವಾರಿ ಮಾಡುತ್ತಿದ್ದಾಗ ಅಕ್ರಮವಾಗಿ ಹಾಕಲಾಗಿದ್ದ ಬ್ಯಾನರ್ ಒಂದು ಆಕೆಯ ಮೇಲೆ ಬಿದ್ದು ಆಕೆ ಕೆಳಕ್ಕೆ ಬಿದ್ದಿದ್ದಳು. ಆಗ ಹಿಂದಿನಿಂದ ಬಂದ ಟ್ಯಾಂಕರ್ ಆಕೆಯ ಮೇಲೆಯೇ ಚಲಿಸಿತ್ತು. ಈ ಸಾವು ಚೆನ್ನೆಯಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು. ಅದನ್ನು ಅನುಸರಿಸಿ ರಾಜಕೀಯ ಪಕ್ಷಗಳು ಭಿತ್ತಿ ಫಲಕ ಮತ್ತು ಬ್ಯಾನರ್ ಅಳವಡಿಸುವುದನ್ನು ನಿಲ್ಲಿಸುವಂತೆ ತಮ್ಮ ಕಾರ್‍ಯಕರ್ತರಿಗೆ ಸೂಚಿಸಿದ್ದವು.

ಘಟನೆಯ ಬಳಿಕ ತಮಿಳುನಾಡು ಸರ್ಕಾರ, ಚೆನ್ನೈ ಮುನಿಸಿಪಲ್ ಕಾರ್ಪೋರೇಷನ್ ಗೆ ಮಹಿಳೆಯ ಸಾವಿಗೆ ಕಾರಣವಾದ ಫ್ಲೆಕ್ಸ್ ಬೋರ್ಡ್‌ನ್ನು ಅಕ್ರಮವಾಗಿ ಹಾಕಿದ್ದನ್ನು ತಡೆಗಟ್ಟುವಲ್ಲಿ ವಿಫಲರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮದ್ರಾಸ್ ಹೈಕೋರ್ಟ್ ಆಜ್ಞಾಪಿಸಿತ್ತು.

ಬ್ಯಾನರ್ ಸಂಸ್ಕೃತಿಯ ಹಾವಳಿಯನ್ನು ಕಿತ್ತು ಹಾಕಲು ಕ್ರಮಗಳನ್ನು ಸೂಚಿಸಿ ವರದಿಯೊಂದನ್ನು ಸಲ್ಲಿಸಬೇಕು ಮತ್ತು ಮಹಿಳೆ ಸಾವನ್ನಪ್ಪಿದ ನಿರ್ದಿಷ್ಟ ಪ್ರಕರಣದಲ್ಲಿ ಕೈಗೊಳ್ಳಲಾದ ಕ್ರಮಗಳ ಬಗೆ ತಿಳಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.

October 23, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Prime Minister, Spardha | | Leave a comment

ಡಿಕೆ ಶಿವಕುಮಾರ್‌ಗೆ ದೆಹಲಿ ಹೈಕೋರ್ಟ್ ಶರತ್ತಿನ ಜಾಮೀನು

23 dk shivakumar೪೮ ದಿನಗಳ ಸೆರೆವಾಸದ ಬಳಿಕ ಲಭಿಸಿದ ನಿರಾಳತೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇಡಿ) ಒಂದೂವರೆ ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿ ತಿಹಾರ್ ಸೆರೆಮನೆ ಸೇರಿದ್ದ ಕರ್ನಾಟಕದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ  ದೆಹಲಿ ಹೈಕೋರ್ಟ್ 2019 ಅಕ್ಟೋಬರ್ 23ರ ಬುಧವಾರ ಶರತ್ತಿನ ಜಾಮೀನು ಮಂಜೂರು ಮಾಡಿತು. ಇದರೊಂದಿಗೆ ಬಂಧನಕ್ಕೆ ಒಳಗಾದ ೪೮ ದಿನಗಳ ಬಳಿಕ ೫೭ರ ಹರೆಯದ ಕಾಂಗ್ರೆಸ್ ನಾಯಕನಿಗೆ ನಿರಾಳತೆ ಲಭಿಸಿತು.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರು ಐಪಿಸಿ ಸೆಕ್ಷನ್ ೧೨೦ ಬಿ ಬಗ್ಗೆ ವಿವರಣೆ ನೀಡಿ ತೀರ್ಪನ್ನು ಪ್ರಕಟಿಸಿದರು. ಡಿಕೆ ಶಿವಕುಮಾರ್ ಜಾಮೀನು ಅರ್ಜಿ ಕುರಿತು ವಾದ, ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ತಮ್ಮ ತೀರ್ಪನ್ನು 2019 ಅಕ್ಟೋಬರ್ 23ರ ಬುಧವಾರಕ್ಕೆ ಕಾಯ್ದಿರಿಸಿದ್ದರು.

ತಿಹಾರ್ ಜೈಲು ವಾಸ ಅನುಭವಿಸುತ್ತಿದ್ದ ಶಿವಕುಮಾರ್ ಅವರ ಆರೋಗ್ಯ ಸ್ಥಿತಿ ಗಮನಿಸಿ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರ ಏಕಸದಸ್ಯ ಪೀಠ  ಜಾಮೀನು ಮಂಜೂರು ಮಾಡಿತು. ಇದರ ಜೊತೆಗೆ ೨೫ ಲಕ್ಷ  ರೂಪಾಯಿ ಮೌಲ್ಯದ ಎರಡು ಬಾಂಡುಗಳನ್ನು ಒದಗಿಸಬೇಕು, ಪಾಸ್ ಪೋರ್ಟ್‌ನ್ನು ಒಪ್ಪಿಸಬೇಕು ಮತ್ತು ವಿಚಾರಣೆಗೆ ಸಹರಿಸಬೇಕು ಎಂಬ ಶರತ್ತುಗಳನ್ನು ವಿಧಿಸಿತು.

ಕಾಂಗ್ರೆಸ್ ನಾಯಕ ವಿದೇಶಕ್ಕೆ ಪರಾರಿಯಾಗಬಹುದು ಎಂಬುದನ್ನು ತೋರಿಸುವಂತಹ ಯಾವುದೇ ಸಾಕ್ಷ್ಯಧಾರವೂ ಇಲ್ಲವಾದ್ದರಿಂದ ಅವರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಜಾಮೀನು ಮಂಜೂರು ಮಾಡುತ್ತಾ ನ್ಯಾಯಮೂರ್ತಿ ಸುರೇಶ್ ಕೈಟ್ ಹೇಳಿದರು.

ದಾಖಲೆಗಳು ತನಿಖಾ ಸಂಸ್ಥೆಯ ಬಳಿ ಇರುವುದರಿಂದ ಶಿವಕುಮಾರ್ ಅವರು ಸಾಕ್ಷ್ಯಾಧಾರ ನಾಶಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಹೇಳಿದರು.

ಶಿವಕುಮಾರ್ ಅವರು ಅಧಿಕಾರದಲ್ಲಿ ಇಲ್ಲ ಮತ್ತು ಅವರು ಅಥವಾ ಅವರ ಕುಟುಂಬ ಸದಸ್ಯರು  ಅಥವಾ ನಿಕಟವರ್ತಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂಬುದನ್ನು ತೋರಿಸುವಂತಹ ಯಾವುದೇ ಪುರಾವೆ ಇಲ್ಲ ಎಂದೂ ಪೀಠ ಹೇಳಿತು.

ಆದಾಗ್ಯೂ, ಶಿವಕುಮಾರ್ ಅವರನ್ನು ೨೫ಲಕ್ಷ ರೂಪಾಯಿಗಳ ಬಾಂಡ್ ಮತ್ತು ಎರಡು ಖಾತರಿಗಳನ್ನು ಹಾಜರು ಪಡಿಸಿದ ಬಳಿಕ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.

ಶಿವಕುಮಾರ್ ಅವರು ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ದೇಶದಿಂದ ಹೊರ ಹೋಗುವಂತಿಲ್ಲ, ತನಿಖೆಗೆ ಲಭ್ಯರಿರಬೇಕು/ ಸಹಕರಿಸಬೇಕು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂದೂ ಹೈಕೋರ್ಟ್ ಜಾಮೀನು ಮಂಜೂರು ಮಾಡುತ್ತಾ ಶರತ್ತುಗಳನ್ನು ವಿಧಿಸಿತು.

ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯವು ತನಿಖೆಗಾಗಿ ದೆಹಲಿಗೆ ಕರೆಸಿಕೊಂಡು ನಾಲ್ಕು ದಿನಗಳ ಬಳಿಕ ಸೆಪ್ಟೆಂಬರ್ ೩ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಬಂಧಿಸಿತ್ತು. ಜಾರಿ ನಿರ್ದೇಶನಾಲಯ ತನಿಖೆಯ ಬಳಿಕ ಅವರನ್ನು ತಿಹಾರ್ ಸೆರೆಮನೆಯಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

ತಮಗೆ ಜಾರಿ ನಿರ್ದೇಶನಾಲಯದ (ಇಡಿ) ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಅವರು ದೆಹಲಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಶಿವಕುಮಾರ್ ಅವರು ಪ್ರಭಾವಶಾಲಿ ವ್ಯಕ್ತಿಯಾಗಿದ್ದು, ಬಿಡುಗಡೆಯಾದರೆ ಸಾಕ್ಷ್ಯದಲ್ಲಿ ಕೈಯಾಡಿಸುವ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬುದಾಗಿ ವಾದಿಸುವ ಮೂಲಕ ಜಾರಿ ನಿರ್ದೇಶನಾಲಯವು ಅವರಿಗೆ ಜಾಮೀನು ಮಂಜೂರು ಮಾಡಲು ತೀವ್ರ ವಿರೋಧ ವ್ಯಕ್ತ ಪಡಿಸಿತ್ತು.

ಕರ್ನಾಟಕದಲ್ಲಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಿವಕುಮಾರ್ ಅವರ ವಿರುದ್ಧ ನವದೆಹಲಿಯ ಕರ್ನಾಟಕ ಭವನದ ನೌಕರ ಹನುಮಂತಯ್ಯ ಮತ್ತು ಇತರರ ಜೊತೆಗೆ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್ ಎ) ಕಾಯ್ದೆಯ ಅಡಿಯಲ್ಲಿ ವಿವಿಧ ಅಪರಾಧ ಎಸಗಿದ ಆರೋಪಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು.

ಜಾರಿ ನಿರ್ದೇಶನಾಲಯದಿಂದ ಸೆಪ್ಟೆಂಬರ್ ೩ರಂದು ಬಂಧಿತರಾದ ಒಂದೂವರೆ ತಿಂಗಳ ಸೆರೆ ವಾಸದ ಬಳಿಕೆ ಡಿಕೆ ಶಿವಕುಮಾರ್ ಬಂಧಮುಕ್ತಿಯ ಆದೇಶವನ್ನು ಪಡೆದರು.

ಪ್ರಕರಣದ ಹಿನ್ನೆಲೆ:

ಆದಾಯ ತೆರಿಗೆ ಇಲಖೆಯು ಕಳೆದ ವರ್ಷ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಿದ್ದ ಕೋಟ್ಯಂತರ ರೂಪಾಯಿಗಳ ಹವಾಲಾ ವಹಿವಾಟು ಮತ್ತು ತೆರಿಗೆ ವಂಚನೆ ಆರೋಪದ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ಆಧರಿಸಿ ಜಾರಿ ನಿರ್ದೇಶನಾಲಯವು ಹಣ ವಗಾವಣೆ ಪ್ರಕರಣವನ್ನು ದಾಖಲಿಸಿತ್ತು.

ಶಿವಕುಮಾರ್ ಮತ್ತು ಅವರ ನಿಕಟವರ್ತಿ ಎಸ್‌ಕೆ ಶರ್ಮ ಅವರು ಭಾರೀ ಮೊತ್ತದ ಲೆಕ್ಕರಹಿತ ಹಣವನ್ನು ಇತರ ಮೂವರು ಆರೋಪಿಗಳ ನೆರವಿನೊಂದಿಗೆ ನಿಯಮಿತವಾಗಿ ಹವಾಲಾ ಜಾಲದ ಮೂಲ ಕಳುಹಿಸುತ್ತಿದ್ದರು ಎಂದು ಆದಾಯ ತೆರಿಗೆ ಇಲಾಖೆ ತನ್ನ ದೋಷಾರೋಪ ಪಟ್ಟಿಯಲ್ಲಿ ಆಪಾದಿಸಿತ್ತು.

೨೦೧೭ರ ನಿರ್ಣಾಯಕ ರಾಜ್ಯಸಭಾ ಚುನಾವಣೆಗೆ ಮುನ್ನ ಗುಜರಾತಿನ ಶಾಸಕರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಆಶ್ರಯ ಒದಗಿಸುವಲ್ಲಿ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಇದೇ ವೇಳೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶಿವಕುಮಾರ್ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆದಾಳಿ ನಡೆಸಿದ್ದರು.

ಈ ದಾಳಿಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶಿವಕುಮಾರ್ ಅವರ ದೆಹಲಿ ಮನೆಯಲ್ಲಿ ೮.೮೨ ಕೋಟಿ ರೂಪಾಯಿಗಳ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡಿದ್ದರು.

 

ಮುಖ್ಯಾಂಶಗಳು:

* ಡಿಕೆ ಶಿವಕುಮಾರ್‌ಗೆ ಶರತ್ತಿನ ಜಾಮೀನು ನೀಡಿದ ದೆಹಲಿ ಹೈಕೋರ್ಟ್

* ಅನಾರೋಗ್ಯದ ಕಾರಣ ನೀಡಿ ಜಾಮೀನು ಮಂಜೂರು

* ವಿದೇಶಕ್ಕೆ ಪಲಾಯನ ಮಾಡುವ ಸಾಧ್ಯತೆ ಇಲ್ಲ

* ವಿದೇಶಕ್ಕೆ ಹೋಗಲು ಕೋರ್ಟ್ ಅನುಮತಿ ಪಡೆಯಬೇಕು

* ೨೫ ಲಕ್ಷ ರೂಪಾಯಿ ಬಾಂಡ್ ನೀಡಬೇಕು

* ಸಾಕ್ಷ್ಯ ನಾಶಕ್ಕೆ ಪುರಾವೆ ಇಲ್ಲ

* ಡಿ.ಕೆ. ಶಿವಕುಮಾರ್ ಪಾಸ್ ಪೋರ್ಟ್‌ನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು.

 

ತಿಹಾರ್ ಜೈಲಿನಲ್ಲಿ ಭೇಟಿಯಾಗಿದ್ದ ಸೋನಿಯಾ, ಎಚ್ಡಿಕೆ

ಈ ಮಧ್ಯೆ, ತಿಹಾರ್ ಸೆರೆಮನೆಯಲ್ಲಿದ್ದ ಕರ್ನಾಟಕ ಮೈತ್ರಿಸರ್ಕಾರದ ಪ್ರಮುಖ ’ಸಂಕಷ್ಟ ನಿವಾರಕ’ರಾಗಿದ್ದ ಡಿಕೆ ಶಿವಕುಮಾರ್ ಅವರನ್ನು ಮಂಗಳವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಬುಧವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿದ್ದರು.

ಈ ಮಧ್ಯೆ, ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಸುಪ್ರೀಂಕೋರ್ಟಿಗೆ ಮನವಿ ತತ್ ಕ್ಷಣವೇ ಮನವಿ ಸಲ್ಲಿಸಿದ್ದು, ಮೇಲ್ಮನವಿಯು 2019 ಅಕ್ಟೋಬರ್ 24ರ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದವು.

October 23, 2019 Posted by | ಆರ್ಥಿಕ, ಭಾರತ, ರಾಜ್ಯ, ರಾಷ್ಟ್ರೀಯ, ಸುಪ್ರೀಂಕೋರ್ಟ್, Finance, Flash News, General Knowledge, India, Nation, News, Politics, Social Media, Spardha | , | Leave a comment

ದೀಪಾವಳಿ ದಿನ ಲಂಡನ್ನಿನಲ್ಲಿ ಭಾರತ ವಿರೋಧಿ ಪ್ರತಿಭಟನೆ

23 johnson-modi
ಬ್ರಿಟಿಷ್ ಸರ್ಕಾರಕ್ಕೆ ಭಾರತದ ಪತ್ರ, ಭದ್ರತೆಗೆ ಆಗ್ರಹ

ನವದೆಹಲಿ: ಅಕ್ಟೋಬರ್ ೨೭ರ ಭಾನುವಾರ ’ದೀಪಾವಳಿ’ ದಿನದಂದು ಲಂಡನ್ನಿನಲ್ಲಿ ಜಮ್ಮ ಮತ್ತು ಕಾಶ್ಮೀರದ ವಿಷಯವಾಗಿ ನಡೆಸಲು ಉದ್ದೇಶಿಸಲಾಗಿರುವ ಭಾರತ ವಿರೋಧಿ ಪ್ರತಿಭಟನೆ ಬಗ್ಗೆ ಬ್ರಿಟಿಷ್ ಸರ್ಕಾರದ ಗಮನ ಸೆಳೆದು 2019 ಅಕ್ಟೋಬರ್ 23ರ ಬುಧವಾರ ಭಾರತವು ಪತ್ರ ಬರೆಯಿತು ಮತ್ತು ಲಂಡನ್ನಿನಲ್ಲಿ ಇರುವ ಭಾರತದ ರಾಯಭಾರಿ ಕಚೇರಿ ಮತ್ತು ಸಿಬ್ಬಂದಿಗೆ ಭದ್ರತೆ ಒದಗಿಸುವಂತೆ ಆಗ್ರಹಿಸಿತು.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡಿನಲ್ಲಿ ಭಾರತ ವಿರೋಧಿ ಭಾವನೆಗಳನ್ನು ಹುಟು ಹಾಕಲು ನಡೆಯುತ್ತಿರುವ ಯತ್ನಗಳ ಬಗ್ಗೆ ಮತ್ತು ಲಂಡನ್ನಿನ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಕಳವಳ ವ್ಯಕ್ತ ಪಡಿಸಿ ಭಾರತವು ಲಂಡನ್ನಿನ ರಾಜತಾಂತ್ರಿಕ ಕಚೇರಿಯ ಮೂಲಕ ಇಂಗ್ಲೆಂಡ್ ಸರ್ಕಾರಕ್ಕೆ ರಾಜತಾಂತ್ರಿಕ ಪತ್ರವನ್ನು ರವಾನಿಸಿತು.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪರ ಗುಂಪುಗಳು ಲಂಡನ್ನಿನ ಭಾರತೀಯ ರಾಯಭಾರ ಕಚೇರಿಯ ಮುಂದೆ ಆಗಸ್ಟ್ ೧೫ ಮತ್ತು ಸೆಪ್ಟೆಂಬರ್ ೩ರಂದು ಪ್ರತಿಭಟನೆಗಳನ್ನು ನಡೆಸಿದ್ದವು. ಆಗಸ್ಟ್ ೧೫ರಂದು ಭಾರತದ ರಾಯಭಾರ ಕಚೇರಿಯಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಹಾಳುಗೆಡಹುವ ಉದ್ದೇಶದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಜೊತೆಗೆ ಆಗಸ್ಟ್ ೨೦ರಂದು ನಡೆಸಿದ ದೂರವಾಣಿ ಮಾತುಕತೆಯಲ್ಲಿ ಪ್ರಸ್ತಾಪಿಸಿದ್ದರು.

ಲಂಡನ್ನಿನ ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿ ಭಾರೀ ಗುಂಪೊಂದರಿಂದ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯದ ಬಗ್ಗೆ ಮೋದಿ ಪ್ರಸ್ತಾಪಿಸಿದ್ದು, ಜಾನ್ಸನ್ ಅವರು ಘಟನೆ ಬಗ್ಗೆ ವಿಷಾದ ವ್ಯಕ್ತ ಪಡಿಸಿದರು ಮತ್ತು ಹೈಕಮೀಷನ್, ಸಿಬ್ಬಂದಿ ಮತ್ತು ಸಂದರ್ಶಕರಿಗೆ ಭದ್ರತೆ ಹಾಗೂ ಸುರಕ್ಷತೆ ಒದಿಗುಸ ಬಗ್ಗೆ ಅಗತ್ಯ ಕ್ರಮದ ಭರವಸೆ ನೀಡಿದ್ದಾರೆ ಎಂದು ಭಾರತದ ಕಡೆಯಿಂದ ಬಿಡುಗಡೆ ಮಾಡಲಾದ ಮಾಹಿತಿ ತಿಳಿಸಿತ್ತು.

ಆದಾಗ್ಯೂ,  ಆ ಬಳಿಕ ಸೆಪ್ಟೆಂಬರ್ ೩ರಂದು ನಡೆದ ಪ್ರತಿಭಟನೆ ಇನ್ನಷ್ಟು  ಅಸಹ್ಯಕರ ತಿರುವು ಪಡೆದಿತ್ತು. ಪ್ರತಿಭಟನಕಾರರು ರಾಯಭಾರ ಕಚೇರಿಯ ಆವರಣದ ಸಮೀಪದವರೆಗೂ ಬಂದದ್ದಲ್ಲದೆ ಟೊಮ್ಯಾಟೋ, ಕೋಳಿ ಮೊಟ್ಟೆ ಎಸೆದು, ಕಿಟಕಿ ಗಾಜುಗಳನ್ನೂ ಪುಡಿ ಮಾಡಿದ್ದರು.

ಘಟನೆ ಬಗ್ಗೆ ಇಂಗ್ಲೆಂಡಿನ ಭಾರತೀಯ ಹೈಕಮೀಷನ್ ಟ್ವೀಟ್ ಮಾಡಿದಾಗ ಲಂಡನ್ ಮೇಯರ್ ಸಾದಿಖ್ ಖಾನ್ ದಾಳಿಯನ್ನು ಖಂಡಿಸಿದರು. ಆದರೆ ಪೊಲೀಸರು ಪ್ರತಿಭಟನಕಾರರನ್ನು  ಹೈಕಮೀಷನ್‌ನಿಂದ ಸಾಕಷ್ಟು ದೂರದಲ್ಲಿಯೇ ತಡೆಯಲು ವಿಫಲರಾದದ್ದು ಹೇಗೆ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಈ ಮಧ್ಯೆ, ವಿಷಯವು ಇಂಗ್ಲೆಂಡಿನ ಸಂಸತ್ತಿನಲ್ಲೂ ಬುಧವಾರ ಪ್ರತಿಧ್ವನಿಸಿದ್ದು ಹ್ಯಾರೋ ಪೂರ್ವದ ಸಂಸತ್ ಸದಸ್ಯರ ಬಾಬ್ ಬ್ಲಾಕ್‌ಮ್ಯಾನ್ ಅವರು ಭಾನುವಾರಕ್ಕೆ ನಿಗದಿಯಾಗಿರುವ ಹಿಂಸಾತ್ಮಕ ಪ್ರತಿಭಟನೆಯನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳು ಏನು ಎಂದು ಪ್ರಶ್ನಿಸಿದರು.

ಹಿಂಸಾಚಾರಕ್ಕೆ ತಿರುಗುವ ಯಾವುದೇ ಪ್ರತಿಭಟನೆಯನ್ನು ಪ್ರಧಾನಿ ಜಾನ್ಸನ್ ಖಂಡಿಸಿ, ’ಇದನ್ನುಅಂಗೀಕರಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ವಿಷಯವನ್ನು ಪೊಲೀಸರ ಬಳಿ ಪ್ರಸ್ತಾಪಿಸುವರು ಎಂದು ಪ್ರಧಾನಿ ಭರವಸೆ ನೀಡಿದರು.

October 23, 2019 Posted by | ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Politics, Prime Minister, Spardha | , , , , | Leave a comment

ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಸುಭಾಶ್ ಛೋಪ್ರಾ ನೇಮಕ

23 subhash chopra
ನವದೆಹಲಿ
: ಕಾಂಗ್ರೆಸ್ ಪಕ್ಷವು ಪಕ್ಷದ ನಾಯಕ ಸುಭಾಶ್ ಛೋಪ್ರಾ ಅವರನ್ನು ಪಕ್ಷದ ದೆಹಲಿ ಘಟಕದ ಅಧ್ಯಕ್ಷರಾಗಿ 2019 ಅಕ್ಟೋಬರ್ 23ರ ಬುಧವಾರ ನೇಮಕ ಮಾಡಿತು. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಜುಲೈ ೨೦ರಂದು ನಿಧನರಾದಂದಿನಿಂದ ಹುದ್ದೆಯು ಖಾಲಿ ಬಿದ್ದಿತ್ತು.

ದೆಹಲಿಯ ಪಕ್ಷದ ನಾಯಕರ ಜೊತೆಗೆ ಮಾತುಕತೆಗಳನ್ನು ನಡೆಸಿದ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸುಭಾಶ್ ಛೋಪ್ರಾ ಅವರನ್ನು ಪಕ್ಷದ ಹುದ್ದೆಗೆ ಆಯ್ಕೆ ಮಾಡಿದರು.

ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಪಕ್ಷವು ರಾಷ್ಟ್ರದ ರಾಜಧಾನಿಯಲ್ಲಿ ಪಕ್ಷದ ವ್ಯವಹಾರಗಳನ್ನು ಹರೂನ್ ಯೂಸುಫ್, ದೇವೇಂದ್ರ ಯಾದವ್ ಮತ್ತು ರಾಜೇಶ್ ಲಿಲೋಥಿಯ ಈ ಮೂವರು ಕಾರ್ಯಾಧ್ಯಕ್ಷರ ಮೂಲಕ ನಿಭಾಯಿಸುತ್ತಿತ್ತು.

October 23, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , | Leave a comment

ಈ ವರ್ಷದ ದೀಪಾವಳಿಗೆ ರಾಕೆಟ್ ಅಥವಾ ಬಾಂಬ್ ಇಲ್ಲ, ೨ ಪಟಾಕಿ ಮಾತ್ರ….!

22 Diwali
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಕಟ್ಟು ನಿಟ್ಟಿನ ನಿಷೇಧ

ನವದೆಹಲಿ: ಎರಡು ಮಾದರಿಯ ಪಟಾಕಿಗಳು ಮಾತ್ರವೇ ಕಾನೂನುಬದ್ಧ ಎಂಬುದಾಗಿ ಸುಪ್ರೀಂಕೋರ್ಟ್ ಘೋಷಿಸುವುದರೊಂದಿಗೆ ಪ್ರಸ್ತುತ ವರ್ಷದ ದೀಪಾವಳಿ ಸದ್ದು ಗದ್ದಲವಿಲ್ಲದೆ ದೀಪಾವಳಿಯಾಗಲಿದೆ. ’ಅನರ್’ ಮತ್ತು ಫುಲ್ಜಾರಿ’ಗಳ ಹಸಿರು ಆವೃತ್ತಿ ಮಾತ್ರವೇ ಕಾನೂನು ಬದ್ಧ ಎಂಬುದಾಗಿ ಸುಪ್ರೀಂಕೋರ್ಟ್ ಘೋಷಿಸಿರುವುದರಿಂದ ಇವೆರಡೂ ಪಟಾಕಿಗಳೂ ಈ ಬಾರಿ ಸದ್ದು ಮಾಡದೆ ’ಮೌನ’ ಆಗಲಿವೆ. ಉಳಿದ ರಾಕೆಟ್‌ಗಳು, ಬಾಂಬುಗಳು ಮತ್ತು ಸದ್ದು ಮಾಡುವ ಇತರ ಎಲ್ಲ  ಪಟಾಕಿಗಳೂ ಈ ಬಾರಿ ನಿಷೇಧಕ್ಕೆ ಒಳಗಾದವು..

ಈ ವಿಚಾರವನ್ನು ದೆಹಲಿಯಲ್ಲಿ 2019 ಅಕ್ಟೋಬರ್ 22ರ ಮಂಗಳವಾರ ಸ್ಪಷ್ಟ ಪಡಿಸಿರುವ ಪೊಲೀಸರು ’ಪಟಾಕಿ ಖರೀದಿಗೆ ಮುನ್ನ ಪ್ರತಿಯೊಬ್ಬರೂ ಅಧಿಕೃತ ಮುದ್ರೆಯನ್ನು ಗಮನಿಸಿಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.

ಅಧಿಕೃತ ಮುದ್ರೆಯು ಕ್ಯೂಆರ್ ಕೋಡ್‌ನ್ನು (ಸ್ಪೆಷಲ್ ಕ್ವಿಕ್ ರೆಸ್ಪಾನ್ಸ್  ಕೋಡ್) ಅಥವಾ ಹಸಿರು ಲಾಂಛನವನ್ನು ಹೊಂದಿರುತ್ತದೆ. ೫೦ ’ಫುಲ್ಜಾರಿಗಳು’ ಅಥವಾ ಐದು ’ಅನರ್’ಗಳು ಇರುವ ಒಂದು ಪೊಟ್ಟಣಕ್ಕೆ ೨೫೦ ರೂಪಾಯಿ ಬೆಲೆ ಇರುತ್ತದೆ. ಇವು ಎರಡು ಬಣ್ಣಗಳಲ್ಲಿ ಬರುತ್ತವೆ.

‘ಹಸಿರು ಪಟಾಕಿಗಳಿಗೆ (ಪರಿಸರ ಮಿತ್ರ ಪಟಾಕಿಗಳು) ಮಾತ್ರವೇ ಅನುಮತಿ ನೀಡಲಾಗಿದೆ. ಇವುಗಳನ್ನು ಮಾರುವ ಮಾರಾಟಗಾರರ ತಪಾಸಣೆಗೆ ನಾವು ತಂಡಗಳನ್ನು ರಚಿಸಿದ್ದೇವೆ. ಯಾರಾದರೂ ಬೇರೆ ಮಾದರಿಯ ಪಟಾಕಿಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ದೆಹಲಿ ಪೊಲೀಸರ ವಕ್ತಾರ ಎಂಎಸ್ ರಾಂಧವ ಹೇಳಿದರು.

ಹಸಿರು ಪಟಾಕಿಗಳು ಎಂಬುದಾಗಿ ಕರೆಯಲಾಗಿರುವ ಈ ಪಟಾಕಿಗಳು ಶೇಕಡಾ ೩೦ರಷ್ಟು ಕಡಿಮೆ ವಾಯುಮಾಲಿನ್ಯ ಉಂಟು ಮಾಡುತ್ತವೆ ಎಂದು ಸರ್ಕಾರವು ಪ್ರತಿಪಾದಿಸಿದೆ. ಚಳಿಗಾಲ ಬರುತ್ತಿರುವಂತೆಯೇ ದೆಹಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ.

ಕಳೆದ ಒಂದು ವಾರದಲ್ಲಿ ದೆಹಲಿಯಲ್ಲಿ ವಾಯು ಗುಣಮಟ್ಟ ಗಮನಾರ್ಹವಾಗಿ ಕ್ಷೀಣಿಸಿತ್ತು. ಗಾಳಿಯ ದಿಕ್ಕು ವಾಯವ್ಯದ ಕಡೆಗೆ ತಿರುಗುವುದರೊಂದಿಗೆ ನೆರೆಯ ರಾಜ್ಯಗಳ ಸುಡುವ ಕಳೆಯ ಹೊಗೆ ರಾಜಧಾನಿಯತ್ತ ಬರಲು ಆರಂಭವಾಗಿತ್ತು..

‘ಹಸಿರು ಪಟಾಕಿಗಳನ್ನು ಕಳೆದ ವರ್ಷವೇ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ದೀಪಾವಳಿಗೆ ಮುನ್ನ ಸಾಕಾಗುವಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗಿರಲಿಲ್ಲ’ ಎಂದು ಸರ್ಕಾರಿ ಮೂಲಗಳು ತಿಳಿಸಿದವು.

ಈ ಪಟಾಕಿಗಳು ಶೇಕಡಾ ೨೫ರಿಂದ ೩೦ರಷ್ಟು ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆ. ಹಾಗೆಯೇ ಶೇಕಡಾ ೫೦ರಷ್ಟು ಕಡಿಮೆ ಸಲ್ಫರ್ ಡೈಯಾಕ್ಸೈಡ್ ಬಿಡುಗಡೆ ಮಾಡುತ್ತವೆ ಎಂದು ಆಗ ಪರಿಸರ ಖಾತೆಯನ್ನು ಹೊಂದಿದ್ದ ಕೇಂದ್ರ ಸಚಿವ ಹರ್ಷವರ್ಧನ್ ಹೇಳಿದ್ದರು.

ಮಾಲಿನ್ಯ ಮಟ್ಟವನ್ನು ಅತ್ಯಂತ ಕಡಿಮೆಗೊಳಿಸುವ ಪಟಾಕಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಟಾಕಿಗಳಿಗೂ ಅವಕಾಶ ನೀಡಲಾಗುವುದಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಕಳೆದ ವರ್ಷ ಕಟ್ಟುನಿಟ್ಟಿನ ಆದೇಶ ನೀಡಿದ ಬಳಿಕ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಈ ಹಸಿರು ಪಟಾಕಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು.

ಪಟಾಕಿಗಳನ್ನು ದೇಶಾದ್ಯಂತ ನಿಷೇಧಿಸುವಂತೆ ಸಲ್ಲಿಕೆಯಾದ ಹಲವಾರು ಅರ್ಜಿಗಳ ವಿಚಾರಣೆಯ ಬಳಿಕ ಸುಪ್ರೀಂಕೋರ್ಟ್ ಪಟಾಕಿ ನಿಷೇಧದ ಈ ಆದೇಶವನ್ನು ಹೊರಡಿಸಿತ್ತು.

೨೦೧೬ರಲ್ಲಿ ಮೂವರು ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಸುಪ್ರೀಂಕೋರ್ಟ್ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸಿತ್ತು.

೨೦೧೭ರ ಸೆಪ್ಟೆಂಬರಿನಲ್ಲಿ ನ್ಯಾಯಾಲಯವು ತಾತ್ಕಾಲಿಕವಾಗಿ ನಿಷೇಧವನ್ನು ಅಮಾನತು ಗೊಳಿಸಿದರೂ, ಒಂದು ತಿಂಗಳ ಬಳಿಕ ಪಟಾಕಿಗಳನ್ನು ನಿಷೇಧಿಸಿ ಕಟ್ಟು ನಿಟ್ಟಿನ ಆದೇಶ ನೀಡಿತ್ತು.

ರಾಜಧಾನಿ ದೆಹಲಿಯಲ್ಲಂತೂ ಸುಪ್ರೀಂಕೋರ್ಟ್ ಆದೇಶ ಈ ಬಾರಿ ಕಟ್ಟು ನಿಟ್ಟಾಗಿ ಜಾರಿಯಾಗಲಿದೆ ಎಂದು ಪೊಲೀಸರು ಸ್ಪಷ್ಟ ಪಡಿಸಿದರು.

October 22, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Entertrainment, Festival, Flash News, General Knowledge, Health, India, Nation, News, Spardha, supreme court | , , , , , , , , , , , | Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ